ಬೆಂಗಳೂರು: ಹೆಚ್ಚಿನ ಆದಾಯ ಸಂಗ್ರಹದ ನಿಟ್ಟಿನಲ್ಲಿ ನಗರ ಪ್ರದೇಶಗಳಲ್ಲಿನ ಅನಧಿಕೃತ ಆಸ್ತಿಗಳಿಗೆ ಬಿ ಖಾತೆ ನೀಡಲು ಸರ್ಕಾರ ಮುಂದಾಗಿದೆ. ಇದರಿಂದ ಸುಮಾರು 2,000 ಕೋಟಿ ರೂ. ಆದಾಯ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ. ಬಿಬಿಎಂಪಿ ಹೊರತುಪಡಿಸಿ ನಗರಪಾಲಿಕೆ, ನಗರಸಭೆ ಮತ್ತು ಪುರಸಭೆಯ ವ್ಯಾಪ್ತಿ ಅಕ್ರಮ ಬಡಾವಣೆಯಲ್ಲಿ ನಕ್ಷೆ ಮಂಜೂರಾತಿ ಇಲ್ಲದೆ ಕಟ್ಟಡ ನಿರ್ಮಿಸಿ ಸೌಲಭ್ಯ ಪಡೆಯುತ್ತಿರುವ ಮಾಲೀಕರಿಗೆ ನಿರ್ವಹಣಾ ಶುಲ್ಕ ವಿಧಿಸುವ ಕುರಿತಂತೆ ಗುರುವಾರ ನಡೆದ ಸಂಪುಟ ಉಪಸಮಿತಿಯಲ್ಲಿ ತೀರ್ಮಾನಿಸಲಾಯಿತು. ಅರಣ್ಯ, ಜೀವಿಶಾಸ್ತ್ರ …
Read More »ಒಂದೂವರೆ ವರ್ಷದ ಮಗನನ್ನು ಕೆರೆಗೆ ಎಸೆದುಕೊಂದ ಪಾಪಿ ತಂದೆ
ಮೈಸೂರು : ಒಂದೂವರೆ ವರ್ಷದ ಮಗನನ್ನು ತಂದೆಯೇ ಕೆರೆಗೆ ಎಸೆದು ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಗ್ರಾಮದಲ್ಲಿ ನಡೆದಿದೆ. ಮಾಕೋಡು ಗ್ರಾಮದ ಗಣೇಶ್ ಎಂಬಾತನೇ ಮಗನನ್ನು ಕೊಂದಿರುವ ಪಾಪಿ ತಂದೆ. ಪ್ರಕರಣ ಸಂಬಂಧ ಪಿರಿಯಾಪಟ್ಟಣ ಪೊಲೀಸರು ಗಣೇಶ್ನನ್ನು ಬಂಧಿಸಿದ್ದಾರೆ. 2014ರಲ್ಲಿ ದೇವನಹಳ್ಳಿ ತಾಲೂಕಿನ ದೊಡ್ಡಸನ್ನೆ ಗ್ರಾಮದ ಲಕ್ಷ್ಮಿ ಎಂಬುವವರನ್ನು ಗಣೇಶ್ ಮದುವೆಯಾಗಿದ್ದ. ಬೆಂಗಳೂರು ಬಳಿಯ ದೇವನಹಳ್ಳಿಯಲ್ಲಿ ದಂಪತಿ ವಾಸವಿದ್ದರು. ಈ ದಂಪತಿಗೆ ಹಾರಿಕಾ ಮತ್ತು …
Read More »ಬೆಂಗಳೂರು ನಗರದಲ್ಲಿ ಪಟಾಕಿ ನಿಷೇಧಕ್ಕೆ ಚಿಂತನೆ: ಗೃಹಸಚಿವ ಡಾ ಜಿ ಪರಮೇಶ್ವರ್
ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತಕ್ಕೆ ನಾಲ್ಕೂ ಇಲಾಖೆಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಹೀಗಾಗಿ ಇರುವ ಕಾಯಿದೆಗಳಿಗೆ ಇನ್ನೂ ಹೆಚ್ಚಿನ ಶಕ್ತಿ ನೀಡಿ ಅಗ್ನಿ ದುರಂತ ಹಾಗೂ ಪಟಾಕಿ ಅವಘಡಗಳಿಗೆ ಅಂತ್ಯ ಹಾಡುವಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ. ಅತ್ತಿಬೆಲೆ ಪಟಾಕಿ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು. ಪಟಾಕಿ ದುರಂತ ರಾಜ್ಯಕ್ಕೊಂದು ಪಾಠ, ಇದರಿಂದ 17 ಮಂದಿ ಈ …
Read More »ಸರ್ಕಾರಿ ಬಸ್ -ಟಾಟಾ ಸುಮೋ ನಡುವೆ ಡಿಕ್ಕಿ: ಐದು ಜನ ಸ್ಥಳದಲ್ಲೇ ಸಾವು
ಗದಗ: ಸಾರಿಗೆ ಸಂಸ್ಥೆಯ ಬಸ್ ಹಾಗೂ ಟಾಟಾ ಸುಮೋ ನಡುವೆ ಡಿಕ್ಕಿಯಾಗಿ ಐದು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೂ ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಗದಗ ಜಿಲ್ಲೆಯ ನರೇಗಲ್ ಪಟ್ಟಣದ ಹೊರವಲಯದಲ್ಲಿ ಸಂಭವಿಸಿದೆ. ಗಂಭೀರ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೂಲಗಳ ಪ್ರಕಾರ, ಕಲಬುರಗಿಯಿಂದ ಗಜೇಂದ್ರಗಡ ಮಾರ್ಗವಾಗಿ ಶಿರಹಟ್ಟಿ ಫಕ್ಕಿರೇಶ್ವರ ಮಠಕ್ಕೆ ಟಾಟಾ ಸುಮೋ ಹೊರಟಿತ್ತು. ಗದಗದಿಂದ ಗಜೇಂದ್ರಗಡಕ್ಕೆ ಬಸ್ ಹೊರಟಿತ್ತು. ಮುಖಾಮುಖಿ ಡಿಕ್ಕಿ ಪರಿಣಾಮ ಬಸ್ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ …
Read More »ಕೋಟಿ ಕೋಟಿ ಹಣ ಪತ್ತೆ ಕೇಸ್ ಇಡಿಗೆ ವಹಿಸಿ: ಯಡಿಯೂರಪ್ಪ ಆಗ್ರಹ
ಬೆಂಗಳೂರು: ಗುತ್ತಿಗೆದಾರರ ನಿವಾಸದಲ್ಲಿ ಪತ್ತೆಯಾದ ಕೋಟಿ ಕೋಟಿ ನಗದು ಹಣ ಪ್ರಕರಣವನ್ನು ಇಡಿ ಮತ್ತು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ. ಡಾಲರ್ಸ್ ಕಾಲೊನಿಯಲ್ಲಿರುವ ಖಾಸಗಿ ನಿವಾಸ ದವಳಗಿರಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐಟಿ ದಾಳಿಯಲ್ಲಿ ಹಣ ಸಿಕ್ಕಿದ್ದ ಪ್ರಕರಣದಲ್ಲಿ ತನಿಖೆ ಬಳಿಕ ಹಣದ ಮೂಲ ಗೊತ್ತಾಗಲಿದೆ. ಚುನಾವಣೆಗೆ ಹಣ ಸಂಗ್ರಹ ಮಾಡಿರೋದು ನಿಜ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ …
Read More »ಉತ್ತರ ಕರ್ನಾಟಕದ ಎರಡು ಪ್ರಮುಖ ಉತ್ಸವಗಳಿಗೆ ಮೈಸೂರು ದಸರಾ ಮಾದರಿಯಲ್ಲಿ ಸಕಾಲಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು.ಕೋರಿಕೆ
ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ವಿಧಾನಸೌಧ ಬೆಂಗಳೂರು. ವಿಷಯ- ಉತ್ತರ ಕರ್ನಾಟಕದ ಎರಡು ಪ್ರಮುಖ ಉತ್ಸವಗಳಿಗೆ ಮೈಸೂರು ದಸರಾ ಮಾದರಿಯಲ್ಲಿ ಸಕಾಲಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು. ನಮ್ಮ ಬೇಡಿಕೆ ಕಿತ್ತೂರು ಉತ್ಸವಕ್ಕೆ ಐದು ಕೋಟಿ,ಬೆಳಗಾವಿ ರಾಜ್ಯೋತ್ಸವಕ್ಕೆ ಎರಡು ಕೋಟಿ ಅನುದಾನ ನೀಡುವ ಕೋರಿಕೆ ಸನ್ಮಾನ್ಯರೇ. ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಇತಿಹಾಸದ ಗತವೈಭವವನ್ನು ಬಿಂಬಿಸುವ ಕಿತ್ತೂರು ಉತ್ಸವಕ್ಕೆ ಐದು ಕೋಟಿ ರೂ ಅನುದಾನ, ಹಾಗೂ ಬೆಳಗಾವಿ ನಗರದಲ್ಲಿ ನಡೆಯುವ …
Read More »ಇಂಗಳಿ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ 29 ಲಕ್ಷ ಅನುದಾನ?:ಶಶಿಕಲಾ ಜೊಲ್ಲೆ
ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮ ದೇವರು ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ದೇವಸ್ಥಾನದ ಅಭಿವೃದ್ಧಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರ ವಿಶೇಷ ಪ್ರಯತ್ನದಿಂದ ರೂ. 29 ಲಕ್ಷ ಅನುದಾನದ ಅಭಿವೃದ್ಧಿ ಕಾಮಗಾರಿಗೆ ಗ್ರಾಮದ ಬಿಜೆಪಿ ಕಾರ್ಯಕರ್ತರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮೊದಲಿಗೆ ಶ್ರೀ ಬೀರೇಶ್ವರ ಸಹಕಾರಿ ಇಂಗಳಿ ಶಾಖೆಯ ನಿರ್ದೇಶಕ ಪ್ರಕಾಶ ಮಿರ್ಜಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಂಕರ ಪವಾರ ಮಾತನಾಡಿ, …
Read More »ನಿಂತಿದ್ದ 2 ಖಾಸಗಿ ಬಸ್ಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲು
ಕಲಬುರಗಿ: ಖಾಸಗಿ ಕಂಪನಿಗೆ ಸೇರಿದ ಎರಡು ಸ್ಲೀಪರ್ ಬಸ್ಗಳಿಗೆ ಬೆಂಕಿ ತಗುಲಿ ಧಗಧಗಿಸಿ ಸುಟ್ಟು ಕರಗಲಾದ ಘಟನೆ ಕಲಬುರಗಿ ನಗರದ ಹಾಗರಗಾ ರಸ್ತೆಯ ಮಹೆಫಿಲ್ ಎ ಖಾಸ್ ಡಾಬಾದ ಬಳಿ ಶನಿವಾರ ನಡೆದಿದೆ. ಅಕ್ಕಪಕ್ಕದಲ್ಲಿ ನಿಂತಿದ್ದ ಎರಡು ಬಸ್ಗಳು ಬೆಂಕಿಯ ಕೆನ್ನಾಲೆಗೆಯಿಂದ ಸಂಪೂರ್ಣ ಸುಟ್ಟು ಕರಕಲಾಗಿವೆ. ಹೀಗಾಗಿ ದಟ್ಟವಾದ ಹೊಗೆ ಆವರಿಸಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಅಗ್ನಿ ಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸುವ …
Read More »ʼನಟಿ ಲೀಲಾವತಿ ಕಟ್ಟಿಸಿರೋ ಆಸ್ಪತ್ರೆಗೆ ಸರ್ಕಾರದಿಂದ ಸಲ್ಲಬೇಕಾದ ಸೂಕ್ತ ನೆರವು ಕೊಡಿಸ್ತೇವೆʼ
ಬೆಂಗಳೂರು: ಹಿರಿಯ ನಟಿ ಲೀಲಾವತಿ ಆಸ್ಪತ್ರೆ ಉದ್ಘಾಟನೆಗೆ ಬನ್ನಿ ಎಂದು ಕರೆದಿದ್ದಾರೆ, ಡೇಟ್ ಕೇಳಿದ್ದಾರೆ, ನಾನೇ ಡೇಟ್ ಕೊಡ್ತೇನೆ ಆಸ್ಪತ್ರೆಗೆ ಸಹಾಯ ಕೂಡ ಮಾಡ್ತೇನೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ. ಹಿರಿಯ ನಟಿ ಲೀಲಾವತಿ ಭೇಟಿ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಹಿರಿಯ ನಟಿ ಅವರಿಗೆ ಸೈಟ್ ಕೊಡ್ತೇವೆ, ಆಸ್ಪತ್ರೆ ಸಿಬ್ಬಂದಿ ಸರ್ಕಾರದಿಂದ ಕೇಳಿದ್ದಾರೆ. ಸೈಟ್ಕೂಡ ಹೋಲ್ಡ್ ಆಗಿದೆ, ಏನು ಅಂತ ನೋಡ್ತೇನೆ. ಸರ್ಕಾರದಿಂದ ಅವರಿಗೆ ಸಲ್ಲಬೇಕಾದ ಸೂಕ್ತ ನೆರವನ್ನು ಕೊಡಿಸುತ್ತೇವೆ …
Read More »ನವೆಂಬರ್ 1 ರಂದು ಕರಾಳ ದಿನಾಚರಣೆಗೆ ಅನುಮತಿ ಇಲ್ಲ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಬೆಳಗಾವಿ : ಮಹಾತ್ಮಾ ಪುಲೆ ಆರೋಗ್ಯ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಲು ನಿರ್ಣಯ ಕೈಗೊಂಡಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈ ಕುರಿತು ಕರ್ನಾಟಕ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗುತ್ತಿದೆ. ಬೆಳಗಾವಿಯ ಜಿ.ಪಂ.ಸಭಾಭವನದಲ್ಲಿ ಇಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಕನ್ನಡಪರ ಸಂಘಟನೆಗಳು ಮಹಾರಾಷ್ಟ್ರ ಸರ್ಕಾರದ ನಿರ್ಣಯ ಖಂಡಿಸಿದರು. ಕರ್ನಾಟಕದಲ್ಲಿ ಮಹಾರಾಷ್ಟ್ರ ಸರ್ಕಾರ ಆರೋಗ್ಯ ಯೋಜನೆ ಜಾರಿಗೊಳಿಸುತ್ತಿದೆ. …
Read More »