Breaking News

Uncategorized

ಡಿಕೆಶಿ ವಿರುದ್ಧದ ಸಿಬಿಐ ತನಿಖೆ ವಾಪಸ್‌ : ಹೈ ಕೋರ್ಟ್‌ ಮೆಟ್ಟಿಲೇರಿದ ಯತ್ನಾಳ್

ಬೆಂಗಳೂರು : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆಯನ್ನು ವಾಪಸ್‌ ಪಡೆಯಲು ನಿರ್ಧರಿಸಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಬಿಜೆಪಿ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೈ ಕೋರ್ಟ್‌ ಮೆಟ್ಟಿಲೇರಿದ್ದಾರೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ನಡೆಯನ್ನು ಕಂಡಿಸಿರುವ ಯತ್ನಾಳ್‌ ಹೈ ಕೋರ್ಟ್‌ ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ಹೈ ಕೋರ್ಟ್‌ ನ ವಿಚಾರಣೆಯನ್ನು ನಿಷ್ಪಲಗೊಳಿಸಲು ಯತ್ನಿಸಲಾಗುತ್ತಿದೆ. ಸಿಬಿಐ ತನಿಖೆ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಈ …

Read More »

ಗೋಪೂಜೆಯಲ್ಲಿ ಬಂಗಾರದ ಸರ ನುಂಗಿದ್ದ ಹಸು: ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಪಶುವೈದ್ಯರು

ಶಿವಮೊಗ್ಗ: ಗೋಪೂಜೆ ಸಲ್ಲಿಸುವ ಸಮಯದಲ್ಲಿ ಹಸುವೊಂದು‌ ಪೂಜೆಗಿಟ್ಟಿದ್ದ ಬಂಗಾರದ ಸರವನ್ನು ನುಂಗಿದ್ದ ಘಟನೆ ಹೊಸನಗರ ತಾಲೂಕು ಮತ್ತಿಮನೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಪಶುವೈದ್ಯರು ಹಸುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಆ ಚಿನ್ನದ ಸರವನ್ನು ಹೊರತೆಗೆದಿದ್ದಾರೆ. ಮತ್ತಿಮನೆ ಸತ್ಯವತಿ ಶ್ಯಾಮ ಉಡುಪ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಗೋಪೂಜೆಯ ನಂತರ ಇಟ್ಟಿದ್ದ ಸರ ನಾಪತ್ತೆಯಾದಾಗ ಕುಟುಂಬದವರು ದಿಗಿಲುಗೊಂಡಿದ್ದರು. ನಂತರ ಪರಿಶೀಲಿಸಿದಾಗ ಪ್ರಸಾದದ ಜೊತೆ ಬಂಗಾರದ ಸರವನ್ನು ಹಸು …

Read More »

ಸೈಬರ್ ಅಪರಾಧ ವಿಭಾಗಕ್ಕೆ ಎಸಿಪಿ ದರ್ಜೆಯ ಅಧಿಕಾರಿಯ ನಿಯೋಜನೆ ಸೇರಿ ಏಳು ಡಿವೈಎಸ್ಪಿ ಮತ್ತು 14 ಮಂದಿ ಇನ್ಸ್​ಪೆಕ್ಟರ್​ಗಳನ್ನು ಸರ್ಕಾರ ವರ್ಗಾಯಿಸಿದೆ.

ಸೈಬರ್ ಅಪರಾಧ ವಿಭಾಗಕ್ಕೆ ಎಸಿಪಿ ದರ್ಜೆಯ ಅಧಿಕಾರಿಯ ನಿಯೋಜನೆ ಸೇರಿ ಏಳು ಡಿವೈಎಸ್ಪಿ ಮತ್ತು 14 ಮಂದಿ ಇನ್ಸ್​ಪೆಕ್ಟರ್​ಗಳನ್ನು ಸರ್ಕಾರ ವರ್ಗಾಯಿಸಿದೆ.   ಬೆಂಗಳೂರು: ರಾಜಧಾನಿಯಲ್ಲಿ ಹೆಚ್ಚಾಗುತ್ತಿರುವ ಸೈಬರ್ ಅಪರಾಧ ಪ್ರಕರಣಗಳನ್ನು ಹತ್ತಿಕ್ಕಲು ಇದೇ ಮೊದಲ ಬಾರಿಗೆ ಸಿಸಿಬಿಯ ಸೈಬರ್ ವಿಭಾಗಕ್ಕೆ ಸಹಾಯಕ ಪೊಲೀಸ್ ಕಮೀಷನರ್ (ಎಸಿಪಿ) ದರ್ಜೆಯ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಸತ್ಯನಾರಾಯಣ್ ಸಿಂಗ್ ಅವರು ಎಸಿಪಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಕುರಿತು ರಾಜ್ಯ ಪೊಲೀಸ್ ಇಲಾಖೆ ಆದೇಶಿಸಿದೆ. ಇನ್ನುಳಿದಂತೆ …

Read More »

ಮೈಸೂರಿನ ‘ಚಾಮುಂಡೇಶ್ವರಿ’ಗೆ 5 ವರ್ಷಗಳ ‘ಗೃಹಲಕ್ಷ್ಮಿ ಯೋಜನೆ’ಯ ಹಣ ಜಮಾ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಲಕ್ಷ್ಮಿ ಯೋಜನೆಯ ( Gruha Lakshmi Scheme ) ಭರ್ತಿ ಐದು ವರ್ಷಗಳ ಕಂತನ್ನು ಶಾಸಕ ದಿನೇಶ್ ಗೂಳಿಗೌಡ ಅವರು ಇಂದು ತಾಯಿ ಚಾಮುಂಡೇಶ್ವರಿಗೆ ಸಮರ್ಪಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪರವಾಗಿ ಶಾಸಕ ದಿನೇಶ್ ಗೂಳಿಗೌಡ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆ ಚಾಮುಂಡೇಶ್ವರಿ ದೇವಿ ದರ್ಶನ ಪಡೆದು ಹಣವನ್ನು ಅರ್ಪಿಸುವ ಮೂಲಕ …

Read More »

ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ಪತ್ನಿಯನ್ನೇ ಕೊಂದ ಪತಿ

ರಾಯಚೂರು: ಮದ್ಯ ಸೇವಿಸಲು ಹಣ ನೀಡದ ಪತ್ನಿಯನ್ನು ಭೀಕರವಾಗಿ ಪತಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಚಿಕ್ಕ‌ ಉಪ್ಪೇರಿ ಗ್ರಾಮದಲ್ಲಿ ನಡೆದಿದೆ. ಸುನಿತಾ (28) ಪತಿಯ ಕೈಯಿಂದ ಹತ್ಯೆಯಾದ ಗೃಹಿಣಿಯಾಗಿದ್ದು, ಬಸವರಾಜ ಕಂಬಳಿ ಕೊಲೆ ಮಾಡಿರುವ ಪತಿ.   ಬಸವರಾಜ ಹಾಗೂ ಸುನಿತಾ ಮನಸಾರೆ ಪರಸ್ಪರ ಪ್ರೀತಿಸಿ 2014ರಲ್ಲಿ ಸಬ್‌ ರಿಜಿಸ್ಟರ್ ಕಚೇರಿಯಲ್ಲಿ ರಿಜಿಸ್ಟರ್ ವಿವಾಹವಾಗಿದ್ದರು. ಭಾನುವಾರದಂದು ಸಂಜೆ ಸುನಿತಾ ತಮ್ಮ ಹೊಲದಲ್ಲಿ ನೀರು ಕಟ್ಟುತ್ತಿದ್ದರು. ಆಗ ಪತಿ …

Read More »

ಸುಳ್ಳು ಸುದ್ದಿ ತಡೆಗೆ ಸರ್ಕಾರ ಮುಂದು: ಮುಂಬರುವ ಬೆಳಗಾವಿ ಚಳಿಗಾಲದಲ್ಲಿ ಮಸೂದೆ ಮಂಡನೆಗೆ ಸಿದ್ಧತೆ

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ಅವಹೇಳನಕಾರಿ ಪೋಸ್ಟ್ಗಳ ಹಾಕುವುದನ್ನು ತಡೆಯುವ ಸಲುವಾಗಿ ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ. ತುಮಕೂರು: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ಅವಹೇಳನಕಾರಿ ಪೋಸ್ಟ್ಗಳ ಹಾಕುವುದನ್ನು ತಡೆಯುವ ಸಲುವಾಗಿ ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ಕುರಿತು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 4 ರಿಂದ ಪ್ರಾರಂಭವಾಗುವ ವಿಧಾನಮಂಡಲದ ಚಳಿಗಾಲದ ಜಂಟಿ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲು ಸಿದ್ಧತೆ ನಡೆಸುತ್ತಿದೆ …

Read More »

668 ಕೋಟಿ ನಿರ್ಭಯಾ ನಿಧಿಯಲ್ಲಿ ನಿರ್ಮಾಣ; ಸೇಫ್ ಸಿಟಿ ಕಮಾಂಡ್ ಸೆಂಟರ್ ಉದ್ಘಾಟನೆ

ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸ್ಥಾಪಿಸಲಾದ ‘ಸೇಫ್ ಸಿಟಿ ಕಮಾಂಡ್ ಸೆಂಟರ್’ (ಸುರಕ್ಷಾ ನಗರ ಕಮಾಂಡ್ ಕೇಂದ್ರ) ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಇಂತಹ ಸೌಲಭ್ಯಗಳ ಪ್ರಯೋಜನಗಳು ಜನರಿಗೆ ತಲುಪಬೇಕು ಎಂದರು.   ಅಪರಾಧ ಹೆಚ್ಚಳ ಒಪ್ಪಿಕೊಂಡ ಸಿಎಂ: ಬೆಂಗಳೂರಿನಲ್ಲಿ ಸರಗಳ್ಳತನ, ಮಹಿಳೆಯರ ಮೇಲಿನ ಹಿಂಸಾತ್ಮಕ ಅಪರಾಧಗಳು ಮತ್ತು ಕೊಲೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಒಪ್ಪಿಕೊಂಡ ಅವರು, ‘ನಿರ್ಭಯಾ ನಿಧಿ’ ಬಳಸಿ 668 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಕೇಂದ್ರವನ್ನು ಸರಿಯಾಗಿ …

Read More »

ಬಾಗಲಕೋಟೆಯಲ್ಲಿ ನಡೆದ ರಾಜ್ಯ ಮಟ್ಟದ ಸೈಕ್ಲಿಂಗ್ ಚಾಂಪಿಯನ್‍ಶಿಪ್‍ನಲ್ಲಿ ವಿಜಯಪುರ ತಂಡ 35 ಅಂಕ ಗಲಿಸುವ ಮೂಲಕ ಮೊದಲ ಸ್ಥಾನ ಪಡೆದರೆ, ಬಾಗಲಕೋಟೆ ಜಿಲ್ಲಾ ತಂಡಕ್ಕೆ ಎರಡನೇ ಸ್ಥಾನ ಲಭಿಸಿತು.

ಬಾಗಲಕೋಟೆ: ಗ್ರಾಮೀಣ ಕ್ರೀಡೆಯಾದ ಸೈಕಲ್ ಸವಾರಿ ಇಂದು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಬಾಗಲಕೋಟೆ ಸಹ ಸೈಕ್ಲಿಸ್ಟ್​ಗಳ ತವರು ಜಿಲ್ಲೆಯಾಗಿ ಪರಿಣಮಿಸಿದೆ. ಇಲ್ಲಿನ ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕಿದೆ ಎಂದು ಬೀಳಗಿ ಶಾಸಕ ಜೆ.ಟಿ.ಪಾಟೀಲ ಹೇಳಿದರು. ಬಾಗಲಕೋಟೆಯಲ್ಲಿ ನಡೆದ ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆನವನಗರದ ಯುನಿಟ್-2ರಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ಸೈಕ್ಲಿಂಗ್ ಚಾಂಪಿಯನ್‍ಶಿಪ್ ಪಂದ್ಯಾವಳಿಯ ಎರಡನೇ ದಿನದ(ಶನಿವಾರ) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಬಾಗಲಕೋಟೆ ಜಿಲ್ಲೆಯು ತನ್ನದೇ ಆದ ವಿವಿಧ …

Read More »

ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ದೆಹಲಿಯ ಸಾಕೇತ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ಆದೇಶ ಪ್ರಕಟಿ

ನವದೆಹಲಿ: ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ದೆಹಲಿಯ ಸಾಕೇತ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ಆದೇಶ ಪ್ರಕಟಿಸಿದೆ. ಅಲ್ಲದೇ, ಅಪರಾಧಿಗಳಿಗೆ 5 ಲಕ್ಷ ರೂಪಾಯಿ ದಂಡವನ್ನೂ ಹಾಕಲಾಗಿದೆ. ಮತ್ತೊಬ್ಬ ಅಪರಾಧಿ ಅಜಯ್ ಸೇಥಿ ಎಂಬಾತನಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.     ದೆಹಲಿಯಲ್ಲಿ 2008ರ ಸೆಪ್ಟೆಂಬರ್ 30ರಂದು ಬೆಳಗಿನ ಜಾವ 3:30ರ ಸುಮಾರಿಗೆ ಕಚೇರಿಯಿಂದ ಮನೆಗೆ ಹಿಂದಿರುಗುವಾಗ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಅವರನ್ನು …

Read More »

ಬೆಳಗಾವಿಯ ದಂಡು ಮಂಡಳಿ ಸಿಇಒ ಕರ್ನಲ್ ಆನಂದ್​ ನಿಗೂಢ ಸಾವು

ಬೆಳಗಾವಿ: ಬೆಳಗಾವಿಯ ದಂಡು ಮಂಡಳಿ ಸಿಇಒ ಕರ್ನಲ್ ಆನಂದ್​ (40) ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ. ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಕೆ.ಆನಂದ್​ ಅವರ ಸರ್ಕಾರಿ ನಿವಾಸದಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ದಂಡು ಮಂಡಳಿ ಸಿಇಒ ಆಗಿ ಸೇವೆ ಸಲ್ಲಿಸುತ್ತಿರುವ ಆನಂದ್​ ಅವರು ಇಂಡಿಯನ್ ಡಿಫೆನ್ಸ್ ಎಸ್ಟೇಟ್ ಸರ್ವಿಸ್​ಗೆ ಸೇರಿದ್ದರು. ಮೃತ ಆನಂದ ತಮಿಳುನಾಡು ಮೂಲದವರಾಗಿದ್ದು, ವಿವಾಹ ಆಗಿಲ್ಲ, ತಂದೆ-ತಾಯಿ ತಮಿಳುನಾಡಿನಲ್ಲಿದ್ದಾರೆ. ಬೆಳಗಾವಿಯ ಸರ್ಕಾರಿ‌ ನಿವಾಸದಲ್ಲಿ …

Read More »