Uncategorized

ಎಸ್ಸೆಸ್ಸೆಲ್ಸಿ ಪರೀಕ್ಷೆ: 78,772 ವಿದ್ಯಾರ್ಥಿಗಳ ನೋಂದಣಿ

ಬೆಳಗಾವಿ: ಜಿಲ್ಲೆಯಲ್ಲಿ ಮಾರ್ಚ್‌ 31ರಿಂದ ಏಪ್ರಿಲ್‌ 15ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, 78,772 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆ ಪ್ರಕ್ರಿಯೆಗಳ ನಡುವೆಯೂ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 120 ಕೇಂದ್ರಗಳಲ್ಲಿ 33,182 ವಿದ್ಯಾರ್ಥಿಗಳು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 151 ಕೇಂದ್ರಗಳಲ್ಲಿ 45,590 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಈಗ ಕೊರೊನಾ ಹಾವಳಿ ತಗ್ಗಿದೆ. ಆದರೂ, …

Read More »

ಸಧ್ಯದಲ್ಲಿಯೇ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ:B.S.Y.

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಈಗಗಲೇ ದಿನಾಂಕ ಘೋಷಣೆಯಾಗಿದೆ. ಬಿಜೆಪಿ ಚುನಾವಣೆಗೆ ಸಿದ್ಧವಾಗಿದ್ದು, ಈಬಾರಿ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿ.ಎಸ್.ಯಡಿಯೂರಪ್ಪ, ರಾಜ್ಯದಲ್ಲಿ 4 ತಂಡಗಳಾಗಿ ವಿಜಯಸಂಕಲ್ಪ ಯಾತ್ರೆ ಮಾಡಿದ್ದೇವೆ. ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆಯಿದ್ದು, ಬಿಜೆಪಿ ಮತ್ತೆ ಅದಿಕಾರಕ್ಕೆ ಬರುವುದು ಸೂರ್ಯ, ಚಂದ್ರ ಇರುವಷ್ಟೇ ಸತ್ಯ ಎಂದು ಹೇಳಿದರು. …

Read More »

ಮಹಾಲಿಂಗೇಶ್ವರ ಜಟೋತ್ಸವಕ್ಕೆ ಜನ ಸಾಗರ ;ದೇವರ ಮೊರೆ ಹೋದ ರಾಜಕಾರಣಿಗಳು

ಮಹಾಲಿಂಗಪುರ : ಹಿಂದೂಗಳ ಪವಿತ್ರ ಹಬ್ಬ, ವರ್ಷದ ಆರಂಭ ದಿನದವಾದ ಯುಗಾದಿಯ ದಿನ ನಸುಕಿನ ಜಾವ ನಡೆಯುವ ಜಟೋತ್ಸವ ವಿಕ್ಷಣೆಗಾಗಿ ಮುಂಜಾನೆ ಬುಧವಾರ ಪಟ್ಟಣದ ಐತಿಹಾಸಿಕ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭಕ್ತ ಜನಸಾಗರವೇ ಹರಿದು ಬಂದಿತ್ತು. ಜಟೋತ್ಸವ ಪವಾಡ ಪುರುಷ ಮಹಾಲಿಂಗೇಶ್ವರರ ಜಟೆಗಳು ವಿಜ್ಞಾನಕ್ಕೆ ಸವಾಲು ಎಂಬಂತೆ ಪ್ರತಿವರ್ಷ ಒಂದು ಗೋಧಿ ಕಾಳಿನಷ್ಟು ಬೆಳೆಯುತ್ತಿವೆ. ಇಂತಹ ಪವಾಡ ಸದೃಶ್ಯ ಜಟೆಗಳನ್ನು ನೋಡುವದೇ ಭಕ್ತರ ಸೌಭಾಗ್ಯ. ಇಂತಹ ವೈಶಿಷ್ಟ್ಯ ಪೂರ್ಣ ಜಟೆಗಳ ಅಭಿಷೇಕ (ಜಟೋತ್ಸವ)ದ …

Read More »

ಬಿಜೆಪಿ ಉತ್ಸಾಹಕ್ಕೆ ಆಕಾಂಕ್ಷಿಗಳು ಅಡ್ಡಗಾಲು: ರಥಯಾತ್ರೆಗಳಿಗೆ ತಟ್ಟಿದ ಪೈಪೋಟಿಯ ಬಿಸಿ

ಬೆಂಗಳೂರು :ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರ ನಾಯಕರ ನಿರಂತರ ಭೇಟಿ, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆಯಿಂದ ಆಡಳಿತ ಬಿಜೆಪಿಯಲ್ಲಿ ಹೆಚ್ಚಿರುವ ಉತ್ಸಾಹಕ್ಕೆ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಅಡ್ಡಗಾಲಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿ, ಎರಡನೇ ಪಟ್ಟಿಗೆ ಬಿಡುಗಡೆಗೆ ತಯಾರಿ ನಡೆಸಿದೆ. ಪ್ರತಿಪಕ್ಷ ಕಾಂಗ್ರೆಸ್ ಕೂಡ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಿ ಮೊದಲ ಪಟ್ಟಿ ತ್ವರಿತವಾಗಿ ಘೋಷಿಸಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲು ಸನ್ನದ್ಧವಾಗಿದೆ. ಆದರೆ ಬಿಜೆಪಿ ಪಾಳೆಯದಲ್ಲಿ ಮೇಲ್ನೋಟಕ್ಕೆ ಯಾವುದೇ …

Read More »

ಖಾನಾಪುರದಲ್ಲಿ ಡಾ.ಸೋನಾಲಿ ಸರ್ನೋಬತ್ ಬಿಜೆಪಿಯ ಪ್ರಬಲ ಆಕಾಂಕ್ಷಿ

ಖಾನಾಪುರ: ಕರ್ನಾಟಕ ವಿಧಾನ ಸಭೆ ಚುನಾವಣೆ ಇನ್ನೇನು ಘೋಷಣೆಯಾಗಲಿದೆ. ಇಡೀ ರಾಜ್ಯದಲ್ಲಿ ಚುನಾವಣೆ ವಾತಾವರಣ ನಿರ್ಮಾಣವಾಗಿದೆ. ಅಘೋಷಿತ ನೀತಿ ಸಂಹಿತೆ ಜಾರಿಯಾಗಿದೆ. ರಾಜಕೀಯ ಪಕ್ಷಗಳು ಕಳೆದ 3 ತಿಂಗಳನಿಂದಲೆ ಚುನಾವಣೆ ಮೂಡ್ ಗೆ ಜಾರಿವೆ. ಪ್ರಮುಖ ಮೂರೂ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿವೆ. ಪಕ್ಷಾಂತರ ಪರ್ವವೂ ಜೋರಾಗಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಇನ್ನಷ್ಟು ಘಟಾನುಘಟಿಗಳು ಪಕ್ಷ ಬದಲಾವಣೆ ಮಾಡುವ ಮುನ್ಸೂಚನೆ ಈಗಾಗಲೆ ಕಾಣಿಸಿದೆ. ಪಕ್ಷಾಂತರಿಗಳಿಗಾಗಿ ಮೂರೂ ಪಕ್ಷಗಳು ಕೆಲವು ಸೀಟ್ …

Read More »

ಕರ್ನಾಟಕದ ಇತಿಹಾಸದಲ್ಲಿ 25 ಸಿಎಂಗಳು ಬಂದರೂ ಸಹ, 5 ವರ್ಷ ಪೂರ್ಣಗೊಳಿಸಿದ್ದು ಮೂವರು ಮಾತ್ರ: ಯಾರವರು ಗೊತ್ತಾ?

ರ್ನಾಟಕದ ಇತಿಹಾಸದಲ್ಲಿ 25 ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಅದರಲ್ಲಿ ಸಂಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲು ಸಮರ್ಥರಾಗಿದ್ದು ಕೇವಲ ಮೂವರಿಗೆ ಮಾತ್ರ. ಅವರೆಲ್ಲರೂ ಕಾಂಗ್ರೆಸ್‌’ನಿಂದ ಆಯ್ಕೆಯಾದವರು.   ಎಸ್ ನಿಜಲಿಂಗಪ್ಪ (1962-68), ಡಿ ದೇವರಾಜ ಅರಸು (1972-77) ಮತ್ತು ಸಿದ್ದರಾಮಯ್ಯ (2013-2018) ತಮ್ಮ ಪೂರ್ಣಾವಧಿಯನ್ನು ಪೂರ್ಣಗೊಳಿಸಿದ ಕರ್ನಾಟಕದ ಮುಖ್ಯಮಂತ್ರಿಗಳು. ಬಿಜೆಪಿ ಮತ್ತು ಕುಮಾರಸ್ವಾಮಿಯವರ ಜೆಡಿಎಸ್‌ನಿಂದ ಯಾವುದೇ ಮುಖ್ಯಮಂತ್ರಿ ಕರ್ನಾಟಕದಲ್ಲಿ ಪೂರ್ಣಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಮೈಸೂರು ರಾಜ್ಯದ ಮುಖ್ಯಮಂತ್ರಿಗಳು ಮತ್ತು ಅವಧಿ: …

Read More »

ಕೃಷಿ ಹೊಂಡಕ್ಕೆ ಬಿದ್ದು ಬಾಲಕರಿಬ್ಬರ ಬಲಿ

ಬೆಳಗಾವಿ: ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಬಾಲಕರಿಬ್ಬರು ಬಲಿಯಾಗಿದ್ದಾರೆ. ಯಮನಪ್ಪ ಪ್ರಕಾಶ ರೆಡ್ಡರಟ್ಟಿ (10) ಹಾಗೂ ಯೇಶು ಬಸಪ್ಪ (14) ಮತರಾದ ಬಾಲಕರು. ಭಾನುವಾರ ಸಂಜೆ 4.30ರ ಹೊತ್ತಿಗೆ ಈ ಬಾಲಕರು ಈಸಲೆಂದು ಕೃಷಿ ಹೊಂಡಕ್ಕೆ ಇಳಿದಿದ್ದಾರೆ. ಈ ವೇಳೆ ಯಮನಪ್ಪ ನೀರಿನಲ್ಲಿ ಮುಳುಗುತ್ತಿದ್ದ. ಆತನನ್ನು ರಕ್ಷಿಸಲು ಯೇಶು ಪ್ರಯತ್ನಿಸಿದ್ದಾನೆ. ಆದರೆ ಇಬ್ಬರೂ ಬದುಕುಳಿಯಲಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Read More »

ಕಾಂಗ್ರೆಸ್ ಮೊದಲ 80ಅಭ್ಯರ್ಥಿ ಗಳ ಪಕ್ಕಾ ಲಿಸ್ಟ್ ಬಹುತೇಕ ಖಚಿತ..?

80 ಅಭ್ಯರ್ಥಿಗಳ ಮೊದಲ ಪಟ್ಟಿ : 1. ಚಿಕ್ಕೋಡಿ – ಗಣೇಶ ಹುಕ್ಕೇರಿ 2. ಯಮಕನಮರಡಿ – ಸತೀಶ್‌ ಜಾರಕಿಹೊಳಿ 3. ಬೆಳಗಾವಿ ಗ್ರಾಮೀಣ : ಲಕ್ಷ್ಮೀ ಹೆಬ್ಬಾಳಕರ್‌ 4. ಖಾನಾಪುರ – ಅಂಜಲಿ ನಿಂಬಾಳ್ಕರ್‌ 5. ಬೈಲಹೊಂಗಲ : ಮಹಾಂತೇಶ 6. ಜಮಖಂಡಿ : ಸಿದ್ದು ಆನಂದ ನ್ಯಾಮಗೌಡ 7. ಬಬಲೇಶ್ವರ : ಎಂ. ಬಿ. ಪಾಟೀಲ 8. ಬಸವನಬಾಗೇವಾಡಿ : ಶಿವಾನಂದ ಪಾಟೀಲ್‌ 9. ಇಂಡಿ : …

Read More »

ವಿಧಾನಪರಿಷತ್ ಸದಸ್ಯರಾಗಿ ಒಂದು ವರ್ಷ ಪೂರೈಕೆ- ಸಾಧನೆ ಪಟ್ಟಿ ಬಿಡುಗಡೆ ಮಾಡಿದ ಲಖನ್ ಜಾರಕಿಹೋಳಿ

    ಗೋಕಾಕ್- ಲಖನ್ ಜಾರಕಿಹೋಳಿ ಅವರು ವಿಧಾನಪರಿಷತ್ ಸದಸ್ಯರಾಗಿ ಒಂದು ವರ್ಷದ ಅವಧಿ ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ಅವರು ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿ ಹಾಗೂ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಕೈಗೊಂಡ ಅಭಿವೃದ್ಧಿ ಕಮಗಾರಿಗಳ ವಿವರ ಬಿಡುಗಡೆ ಮಾಡಿದ್ದಾರೆ   ವಿಧಾನಪರಿಷತ್ ಸದಸ್ಯರಾದ ನಂತರ ಬಿಡುಗಡೆಯಾದ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಒಟ್ಟು 2ಕೋಟಿ ರೂಪಾಯಿ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 1ಕೋಟಿ ರೂಪಾಯಿ …

Read More »

ಪ್ರಸ್ತುತ ಮಾರುಕಟ್ಟೆ ಅಪೇಕ್ಷಿಸುವ ವೃತ್ತಿ ಕೌಶಲಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು’: RCU ಕುಲಸಚಿವ ಪ್ರೊ.ಶಿವಾನಂದ ಗೊರನಾಳೆ

ಬೆಳಗಾವಿ: ‘ಪ್ರಸ್ತುತ ಮಾರುಕಟ್ಟೆ ಅಪೇಕ್ಷಿಸುವ ವೃತ್ತಿ ಕೌಶಲಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಶಿವಾನಂದ ಗೊರನಾಳೆ ಹೇಳಿದರು. ಇಲ್ಲಿನ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವೃತ್ತಿ ಮಾರ್ಗದರ್ಶನ, ತರಬೇತಿ ಮತ್ತು ವಿದ್ಯಾರ್ಥಿ ಉದ್ಯೋಗ ಕೋಶ ಹಾಗೂ ಟಿಸಿಎಸ್ ಸಾಫ್ಟವೇರ್ ಸಂಸ್ಥೆ ಹಮ್ಮಿಕೊಂಡಿದ್ದ ನೇಮಕಾತಿ ಸಂದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.   ‘ನಮ್ಮ ಜ್ಞಾನ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ವೃತ್ತಿ …

Read More »