ಬೆಂಗಳೂರು: ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ವಹಿಸುವುದಕ್ಕೆ ತಮ್ಮ ಸರ್ಕಾರಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ, ತಮ್ಮ ಸರ್ಕಾರ ಪ್ರಕರಣವನ್ನು ತನ್ನದೇ ಆದ ರೀತಿಯಲ್ಲಿ ನಿಭಾಯಿಸುತ್ತದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೋಮವಾರ ಹೇಳಿದ್ದಾರೆ. ಕಳೆದ ವಾರ ಬಿವಿಬಿ ಕಾಲೇಜಿನ ಕ್ಯಾಂಪಸ್‌ನಲ್ಲಿ ಚಾಕುವಿನಿಂದ ಇರಿದು ಕೊಲ್ಲಲ್ಪಟ್ಟ ಕಾಂಗ್ರೆಸ್ ಕೌನ್ಸಿಲರ್‌ನ ಮಗಳು ನೇಹಾ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಬಿಜೆಪಿ ಒತ್ತಾಯಿಸಿದ್ದು, ಪೊಲೀಸರು ಪ್ರಕರಣವನ್ನು …
Read More »BJPಯವರಿಗೆ ಚುನಾವಣೆ ಬಳಿಕ ನೇಹಾ ಯಾರು ಎಂಬುದೇ ಗೊತ್ತಿರುವುದಿಲ್ಲ: ಹೆಬ್ಬಾಳ್ಕರ್
ಬೆಳಗಾವಿ : ಹುಬ್ಬಳ್ಳಿಯ ಕಾಲೇಜಿನಲ್ಲಿ ಕೊಲೆಯಾದ ನೇಹಾ ಪ್ರಕರಣದಲ್ಲಿ ಬಿಜೆಪಿ ನಾಯಕರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಈ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಅವರಿಗೆ ನೇಹಾ ಯಾರು ಎಂಬುದೇ ಗೊತ್ತಿರುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಆಕ್ರೋಶ ಹೊರ ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಇದರಲ್ಲೂ ರಾಜಕೀಯ ಮಾಡಲು ಮುಂದಾಗಿರುವುದು ತುಂಬಾ ನಾಚಿಗೇಡಿತನದ ಸಂಗತಿ. ಬಿಜೆಪಿಯವರು ಜಾಣ ಕುರುಡರಷ್ಟೇ ಅಲ್ಲ ಜಾಣ ಕಿವುಡರು ಹೌದು. ಅವರು ಬೇಕಾದಾಗ …
Read More »4 ವರ್ಷದ ಪದವಿಗೂ ಪಿಎಚ್.ಡಿ ಪ್ರವೇಶಕ್ಕೆ ಅವಕಾಶ
ಹೊಸದಿಲ್ಲಿ: ಕನಿಷ್ಠ ಶೇ.75ರಷ್ಟು ಅಂಕಗಳೊಂದಿಗೆ 4 ವರ್ಷಗಳ ಪದವಿ ಪೂರೈಸಿರುವ ವಿದ್ಯಾರ್ಥಿಗಳು ನೇರ ವಾಗಿ ಎನ್‌ಇಟಿ(ನೆಟ್) ಪರೀಕ್ಷೆ ಬರೆದು, ಪಿಎಚ್.ಡಿ ಪ್ರವೇಶ ಪಡೆಯಬಹುದು ಎಂದು ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ತಿಳಿಸಿದ್ದಾರೆ. ಜೂನಿಯರ್ ರಿಸರ್ಚ್ ಫೆಲೋಶಿಪ್(ಜೆಆರ್‌ಎಫ್) ಜತೆಗೆ ಅಥವಾ ಇಲ್ಲದೆಯೇ ಪಿಎಚ್.ಡಿ ಪಡೆಯಲು ಅಭ್ಯರ್ಥಿಗಳು 4 ವರ್ಷ ಪದವಿಯಲ್ಲಿ ಕನಿಷ್ಠ ಶೇ.75ರಷ್ಟು ಅಂಕಗಳು ಅಥವಾ ಸಮಾನ ಗ್ರೇಡ್ ಹೊಂದುವುದು ಅಗತ್ಯವಿದೆ. ಎಸ್‌ಸಿ, ಎಸ್‌ಟಿ, ಒಬಿಸಿ(ಕೆನೆ ಪದರ ಕೆಳಗಿನವರು), ಅಂಗವಿಕಲರು, ಆರ್ಥಿಕವಾಗಿ ಹಿಂದುಳಿದ …
Read More »ಅಂದು ಬಿಜೆಪಿ ವಿರುದ್ಧ ‘ಪೇಸಿಎಂ’, ಇಂದು ‘ಚೊಂಬು’ ಅಭಿಯಾನ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
ಅಂದು ಬಿಜೆಪಿ ವಿರುದ್ಧ ‘ಪೇಸಿಎಂ’, ಇಂದು ‘ಚೊಂಬು’ ಅಭಿಯಾನ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ ಬೆಂಗಳೂರು: 2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ‘ಪೇಸಿಎಂ’ ಎಂಬ ಅಭಿಯಾನವನ್ನು ರಾಜ್ಯಾದ್ಯಂತ ವ್ಯಾಪಕವಾಗಿ ಪರಿಣಾಮಕಾರಿಯಾಗಿ ನಡೆಸಿತ್ತು.
Read More »ಬಿಜೆಪಿ ಪರ ಪ್ರಚಾರಕ್ಕೆ ಹೋಗು ವುದಿಲ್ಲ.; ಶಿವರಾಮ್ ಹೆಬ್ಬಾರ್
ಶಿರಸಿ: ಬಿಜೆಪಿ ಪರ ಪ್ರಚಾರಕ್ಕೆ ಹೋಗು ವುದಿಲ್ಲ. ಅದಕ್ಕೆ ಪೂರಕ ವಾತಾ ವರಣವೂ ಈಗಿಲ್ಲ ಎಂದು ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದರು. ನಗರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ಎಲ್ಲ ಪ್ರಚಾರದ ಪೋಸ್ಟರ್‌ಗಳಲ್ಲಿ ನನ್ನ ಹೆಸರು, ಭಾವಚಿತ್ರವನ್ನು ಬಿಜೆಪಿ ಪ್ರಕಟಿಸಿಲ್ಲ.ನನ್ನ ಜೊತೆ ಕುಮಟಾ ಶಾಸಕ ದಿನಕರ ಶೆಟ್ಟಿ ಅವರ ಹೆಸರನ್ನೂ ಸಹ ಹಾಕಿಲ್ಲ. ಬಿಜೆಪಿಯವರಿಗೇ ನಾನು ಬೇಡ ವಾಗಿದ್ದೇನೆ ಎಂದರೆ ನಾವು ಏಕೆ ಮುಂದಾಗ ಬೇಕು ಎಂದರು. ಪುತ್ರ ವಿವೇಕ …
Read More »“ಒಬ್ಬ ವ್ಯಕ್ತಿಯ ತಪ್ಪಿಗೆ ಇಡೀ ಕೋಮಿನ ಮೇಲೆ ಅಪರಾಧ ಹೊರಿಸುವುದು ಎಷ್ಟು ಸರಿ?” ನಟ ಕಿಶೋರ್ ಪ್ರಶ್ನೆ
ನೇಹಾ ಹಿರೇಮಠ್ ಕೊಲೆ ಪ್ರಕರಣ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ನೇಹಾಗೆ ಆದ ಅನ್ಯಾಯ ಮತ್ಯಾರಿಗೂ ಆಗಬಾರದು ಎಂದು ಹಲವರು ಆಗ್ರಹಿಸಿದ್ದಾರೆ. ಕೊಲೆ ಆರೋಪಿ ಫಯಾಜ್‌ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ನೇಹಾ ಹುಬ್ಬಳ್ಳಿಯ ಎಂಸಿಎ 1ನೇ ವರ್ಷದ ವಿದ್ಯಾರ್ಥಿ ಆಗಿದ್ದರು. ಆರೋಪಿ ಫಯಾಜ್ ಅದೇ ಕಾಲೇಜಿನಲ್ಲಿ ನೇಹಾಗೆ ಸೀನಿಯರ್ ಆಗಿದ್ದ. ಕೆಲ ತಿಂಗಳಿಂದ ಆರೋಪಿ ಪ್ರೀತಿಸುವಂತೆ ನೇಹಾಗೆ ಕಿರುಕುಳ ನೀಡುತ್ತಿದ್ದನು. ಕೆಲ ದಿನಗಳ ಹಿಂದೆ …
Read More »ನೇಹಾ ತಂದೆ ನಿರಂಜನ್ ಹಿರೇಮಠ ನಿವಾಸಕ್ಕೆ ಮುಸ್ಲಿಂ ಮುಖಂಡರ ಭೇಟಿ
ನಗರದಲ್ಲಿ ಎಂಸಿಎ ವಿದ್ಯಾರ್ಥಿನಿ ನೇಹಾ ನಿರಂಜನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಬಿಡನಾಳ ಬಡಾವಣೆಯಲ್ಲಿರುವ ನೇಹಾ ತಂದೆ ನಿರಂಜನ್ ಹಿರೇಮಠ ನಿವಾಸಕ್ಕೆ ಮುಸ್ಲಿಂ ಮುಖಂಡರು ಭೇಟಿ ನೀಡಿ ಸಾಂತ್ವಾನ ಹೇಳಿದರು. ‘ನಿನ್ನೆ(ಏ.19) ನಿಮ್ಮನ್ನು ಭೇಟಿಯಾಗಲು ಧೈರ್ಯ ಸಾಲಲಿಲ್ಲ. ಹುಬ್ಬಳ್ಳಿ, ಏ.20: ನಗರದಲ್ಲಿ ಎಂಸಿಎ ವಿದ್ಯಾರ್ಥಿನಿ ನೇಹಾ ನಿರಂಜನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ (Hubballi)ಯ ಬಿಡನಾಳ ಬಡಾವಣೆಯಲ್ಲಿರುವ ನೇಹಾ ತಂದೆ ನಿರಂಜನ್ ಹಿರೇಮಠ ನಿವಾಸಕ್ಕೆ ಮುಸ್ಲಿಂ ಮುಖಂಡರು ಭೇಟಿ ನೀಡಿ ಸಾಂತ್ವಾನ ಹೇಳಿದರು. ‘ನಿನ್ನೆ(ಏ.19) …
Read More »ಪೇಮೆಂಟ್ ತಗೊಂಡು ಚುನಾವಣೆಗೆ ನಿಂತಿರುವ ದಿಂಗಾಲೇಶ್ವರ – ಯತ್ನಾಳ್ ಗಂಭೀರ ಆರೋಪ!
ಹುಬ್ಬಳ್ಳಿ: ಈ ಬಾರಿಯ ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಶ್ರೀ ದಿಂಗಾಲೇಶ್ವರ ಸ್ವಾಮೀಜಿಗೆ (Dingaleshwara) ಪೇಮೆಂಟ್ ಬಂದಿದೆ. ಈ ಪೇಮೆಂಟ್ ಯಾರು ಮಾಡಿದ್ದಾರೆಂಬುದು ನನಗೆ ಗೊತ್ತು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda patil yatnal) ಗಂಭೀರವಾಗಿ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಚುನಾವಣೆಯಲ್ಲಿ ಸ್ಪರ್ಧಿಸಲು ಯಾರು ಪೇಮೆಂಟ್ ಮಾಡಿದ್ದಾರೆಂದು ಮೇ ೭ರಂದು ಬಹಿರಂಗಪಡಿಸುತ್ತೇನೆ ಎಂದರು.ದೇಶದ ವಿಚಾರ ಬಂದಾಗ ಲಿಂಗಾಯತರು, ವೀರಶೈವ ಲಿಂಗಾಯತರು ಬಿಜೆಪಿ …
Read More »ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ
ಬೆಳಗಾವಿ: ಹುಬ್ಬಳ್ಳಿಯ ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣವಾಗಿದ್ದು ತಂದೆ ಬಾವಾಸಾಹೇಬ್ ಕೊಂಡುನಾಯ್ಕ ಮೇಲೆಯೂ ಹಲ್ಲೆ ಮಾಡಿದ ವಿಚಾರ ಬೆಳಕಿಗೆ ಬಂದಿದೆ. ಆಸ್ತಿ ವಿಚಾರಕ್ಕೆ ಮೂರು ತಿಂಗಳ ಹಿಂದೆ ತಂದೆಯ ಮೇಲೆಯೇ ಹಲ್ಲೆ ಮಾಡಿದ್ದು, ಮಗನ ಕೃತ್ಯದಿಂದ ನೊಂದಿದ್ದ ತಂದೆ ಸವದತ್ತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.ಮಗನಿಂದ ರಕ್ಷಣೆ ಕೊಡಿಸಿ ಎಂದು ಮನವಿ ಮಾಡಿದ್ದರು. ಬಳಿಕ ಫಯಾಜ್‌ನನ್ನು ಠಾಣೆಗೆ ಕರೆಯಿಸಿಕೊಂಡು ಪೊಲೀಸರು ಬುದ್ದಿವಾದ ಹೇಳಿ ಮುಚ್ಚಳಿಕೆ ಬರೆಯಿಸಿಕೊಂಡು, ಮತ್ತೆನಾದರೂ …
Read More »ಅತೀ ದೊಡ್ಡ ಹಂತದಲ್ಲಿ 62.37% ಮತದಾನ
ಹೊಸದಿಲ್ಲಿ: ಜಗತ್ತಿನ ಅತೀದೊಡ್ಡ ಚುನಾವಣೆ ಎನಿಸಿ ರುವ ಭಾರತದ ಲೋಕಸಭೆ ಎಲೆಕ್ಷನ್‌ನ ಮೊದಲ ಹಂತಕ್ಕೆ ಶುಕ್ರವಾರ ಬಹುತೇಕ ಶಾಂತಿಯುತ ಮತ ದಾನ ನಡೆಯಿತು. 21 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಗಳ 102 ಲೋಕಸಭೆ ಕ್ಷೇತ್ರಗಳಿಗೆ ಶೇ.62.37 ರಷ್ಟು ಮತದಾನವಾಗಿದೆ. ಲೋಕಸಭೆ ಚುನಾವಣೆಯ 7 ಹಂತಗಳ ಪೈಕಿ, 1ನೇ ಹಂತವು ಅತೀ ದೊಡ್ಡ ಹಂತವಾಗಿದ್ದು, 1625 ಅಭ್ಯರ್ಥಿಗಳ ಹಣೆಬರಹವನ್ನು 16.53 ಕೋಟಿ ಮತದಾರರು ನಿರ್ಧರಿಸಿದ್ದಾರೆ. ಇದೇ ವೇಳೆ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನ …
Read More »