Uncategorized

ವಾಮಾನ ಇಲಾಖೆ ಮಾಹಿತಿ ನೀಡಿರುವ ಪ್ರಕಾರ ಅಕಾಲಿಕ ಮುಂಗಾರಿನ ಪರಿಣಾಮ ಗುಜರಾತ್​ನಲ್ಲಿ ಇನ್ನೆರಡು ದಿನ ಗಾಳಿ ಮಳೆಯಾಗಲಿದೆ.

ಅಹಮದಾಬಾದ್​ (ಗುಜರಾತ್): ಶುಭಮನ್​ ಗಿಲ್​, ರಶೀದ್​ ಖಾನ್​, ಹಾರ್ದಿಕ್​ ಪಾಂಡ್ಯರ ಚುರುಕಿನ ಆಟ, ಕ್ರಿಕೆಟ್​ನ ಮಾಸ್ಟರ್​ ಮೈಂಡ್​ ಎಮ್​ಎಸ್​ ಧೋನಿ ಅವರ ಚಾಣಾಕ್ಷ ನಡೆಯ ಪಂದ್ಯವನ್ನು ನೋಡಲು ನಿನ್ನೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂಗೆ ಬಂದಿದ್ದ ಅಭಿಮಾನಿಗಳಿಗೆ ವರುಣ ಬೇಸರ ಉಂಟುಮಾಡಿದ್ದ. ಆದರೆ, ಪಂದ್ಯವನ್ನು ಸೋಮವಾರ (ಇಂದು)ದ ಮೀಸಲು ದಿನಕ್ಕೆ ಮುಂದೂಡಲಾಯಿತು. ಹಾಗಾದರೆ ಇಂದಿನ ಹವಾಮಾನ ವರದಿ ಏನಿದೆ..?   ಗುಜರಾತ್​ನಲ್ಲಿ ಅಕಾಲಿಕ ಮಳೆ ಅನಾಹುತ ಸೃಷ್ಟಿಸುತ್ತಿದೆ. ಚಂಡಮಾರುತದ ಚಲನೆಯಿಂದಾಗಿ, ಕಳೆದ …

Read More »

ಖಾಸಗಿ ಬಸ್ ಮತ್ತು ಇನ್ನೋವಾ ಕಾರ್ ನಡುವೆ ಭೀಕರ ಅಪಘಾತ: 6 ಮಂದಿ ಸಾವು..

ಮೈಸೂರು: ಖಾಸಗಿ ಬಸ್ ಮತ್ತು ಇನ್ನೋವಾ ಕಾರ್ ನಡುವೆ ಡಿಕ್ಕಿ ಸಂಭವಿಸಿ ಕಾರ್​ನಲ್ಲಿ ಪ್ರಯಾಣಿಸುತ್ತಿದ್ದ 6 ಮಂದಿ ಸಾವನ್ನಪ್ಪಿರುವ ದುರ್ಘಟನೆ ಮೈಸೂರಿನ ಕೊಳ್ಳೇಗಾಲ ಮುಖ್ಯರಸ್ತೆಯ ಕುರುಬೂರು ಗ್ರಾಮದ ಬಳಿ ನಡೆದಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ನಡೆದ ಸ್ಥಳಕ್ಕೆ ನರಸೀಪುರ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾರ್​​ನಲ್ಲಿ ಪ್ರಯಾಣಿಸುತ್ತಿದ್ದವರನ್ನು ಬಳ್ಳಾರಿ ಮೂಲದವರು ಎಂದು ಹೇಳಲಾಗುತ್ತಿದ್ದು, ಮಲೆ ಮಾದೇಶ್ವರನ ದರ್ಶನಕ್ಕೆ ಹೋಗಿ ಮೈಸೂರು ನಗರದತ್ತ ಆಗಮಿಸುತ್ತಿದ್ದರು. ಈ …

Read More »

ಅತಿಥಿ ಶಿಕ್ಷಕರ ನೇಮಕಕ್ಕೆ ಅನುಮತಿ

ಬೆಂಗಳೂರು : ನೂತನ ಶೈಕ್ಷಣಿಕ ವರ್ಷದ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಶಾಲಾ ಶಿಕ್ಷಣ ಇಲಾಖೆಯು ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲ ಖಾಲಿ ಇರುವ ಶಿಕ್ಷಕರಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದೆ. ಒಟ್ಟು 33 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಪ್ರಾಥಮಿಕ ಶಾಲೆಗಳಲ್ಲಿ ಪಾಠಮಾಡಲು ಒಟ್ಟು 27 ಸಾವಿರ ಹಾಗೂ ಪ್ರೌಢಶಾಲೆಗಳಲ್ಲಿ ಪಾಠ ಮಾಡಲು ಒಟ್ಟು 6 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಶಿಕ್ಷಣ …

Read More »

ಕುಕ್ಕರ್ ಸ್ಫೋಟಗೊಂಡು ಬಾಲಕಿ ಗಂಭೀರವಾಗಿ ಗಾಯ

ರಾಮನಗರ: ವಿಧಾನಸಭಾ ಚುನಾವಣೆ ವೇಳೆ ಮತದಾರರ ಮನವೊಲಿಕೆಗೆ ಹಂಚಲಾಗಿದ್ದ ಕುಕ್ಕರ್ ಸ್ಫೋಟಗೊಂಡು ಬಾಲಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮನಗರ ಜಿಲ್ಲೆಯ ಕೂನಮುದ್ದನಹಳ್ಳಿಯಲ್ಲಿ ನಡೆದಿದೆ. ಬಾಲಕಿ ಮಹಾಲಕ್ಷ್ಮೀ ಗಂಭೀರವಾಗಿ ಗಾಯಗೊಂಡಿದ್ದಾಳೆ. ಚುನಾವಣೆಯ ವೇಳೆ ನೀಡಿದ್ದ ಕುಕ್ಕರ್ ನಿಂದ ಮೊದಲ ಬಾರಿಗೆ ಅಡುಗೆ ಮಾಡುತ್ತಿದ್ದರು. ಈ ವೇಳೆ ಕುಕ್ಕರ್ ಸಿಡಿದಿದ್ದು, ಬಾಲಕಿಯ ಮುಖ ಸೇರಿದಂತೆ ಹಲವೆಡೆ ಗಾಯಗಳಾಗಿವೆ. ಗಾಯಾಳು ಬಾಲಕಿಯನ್ನು ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ …

Read More »

ಬಳಸಿದ ಬಟ್ಟೆಗಳ ಮರುಬಳಕೆ ಪ್ರಯತ್ನ: ಮಂಗಳೂರಿನಲ್ಲಿ ವಿಶೇಷ ಅಭಿಯಾನ

ಮಂಗಳೂರು: ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಬಳಕೆಯಾಗುವ ಬಟ್ಟೆಗಳೊಂದಿಗೆ ಬಳಕೆಯಾಗದ ಬಟ್ಟೆಗಳೂ ಇರುತ್ತವೆ. ಆದರೆ ಇಂತಹ ಬೇಡದ ಬಟ್ಟೆಗಳು ಕೊನೆಗೆ ಮಣ್ಣು, ಹೊಳೆ, ಸಮುದ್ರ ಸೇರಿ ಪರಿಸರ ನಾಶಕ್ಕೆ ಕಾರಣವಾಗುತ್ತದೆ. ಆದರೆ ಮಂಗಳೂರಿನ ಪರಿಸರಾಸಕ್ತ ಜೀತ್ ಮಿಲನ್ ರೋಚ್, ಲೂಯಿ ಪಿಂಟೊ ಹಾಗೂ ತಂಡ ಇಂತಹ ಮರುಬಳಕೆಯಾಗುವ ಬಟ್ಟೆಗಳನ್ನು ಸಂಗ್ರಹಿಸಿ ಅಗತ್ಯವುಳ್ಳವರಿಗೆ ಉಚಿತವಾಗಿ ನೀಡುವ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಈ ಮೂಲಕ ಪರಿಸರ ಉಳಿಸುವತ್ತ ದೂರದೃಷ್ಟಿತ್ವ ಇರಿಸಿಕೊಂಡಿದ್ದಾರೆ. ಆರು ತಿಂಗಳ ಹಿಂದೆ ಈ …

Read More »

ಉದ್ಯೋಗದಾತರು – ಉದ್ಯೋಗಿಗಳು ರಾಜಿ ಸಂಧಾನದ ನಿರ್ಧಾರಕ್ಕೆ ಬದ್ಧರಾಗಿರಬೇಕು: ಹೈಕೋರ್ಟ್

ಬೆಂಗಳೂರು: ಉದ್ಯೋಗದಾತರು ಮತ್ತು ಉದ್ಯೋಗಿಗಳು ರಾಜಿ ಸಂಧಾನದ ಮೂಲಕ ಕೈಗೊಂಡ ನಿರ್ಧಾರಕ್ಕೆ ಬದ್ಧರಾಗಿರಬೇಕು ಎಂದು ಹೈಕೋರ್ಟ್​ ಆದೇಶ ನೀಡಿದೆ. ಇಂಡಿಯನ್ ಟೆಲಿಫೋನ್ ಲಿಮಿಟೆಡ್‌ನಲ್ಲಿ (ಐಟಿಐ) ಹಲವು ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದ 80 ನೌಕರರ ಮರು ನೇಮಕಾತಿಗೆ ಸಂಬಂಧಿಸಿದಂತೆ ಮತ್ತೊಂದು ಬಾರಿ ರಾಜಿ ಸಂಧಾನ ನಡೆಸಲು ಕೋರ್ಟ್‌ ಸೂಚನೆ ನೀಡಿದೆ. ಕರ್ನಾಟಕ ಜನರಲ್ ಲೇಬರ್ ಯೂನಿಯನ್‌ನ ಐಟಿಐ ಘಟಕ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ವಿಚಾರಣೆ …

Read More »

UPSC-2022 ಫಲಿತಾಂಶ ಪ್ರಕಟ – ಬೆಳಗಾವಿಯ ಮೂವರ ಸಾಧನೆ

ಗೋಕಾಕ್ ತಾಲೂಕಿನ ಅರಭಾವಿಮಠ ಗ್ರಾಮದ ಯುವತಿ ಶೃತಿ ಯರಗಟ್ಟಿ ಯುಪಿಎಸ್ಸಿ – AIR 362, ಕಾಗವಾಡ ತಾಲೂಕಿನ ಉಗಾರ ಗ್ರಾಮದ ಆದಿನಾಥ್ ತಮದಡ್ಡಿ – AIR 566 ಹಾಗು ಶಮಣೆವಾಡಿ ಗ್ರಾಮದ ಅಕ್ಷಯ್ ಪಾಟೀಲ AIR 746 ರ್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಬೆಂಗಳೂರು (ಮೇ 23, 2023): ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2022 ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.  933 ಅಭ್ಯರ್ಥಿಗಳು ಈ ವರ್ಷದ ನಾಗರಿಕ ಸೇವಾ …

Read More »

ಧಾರಾಕಾರ ಮಳೆ ಸುರಿದು ಭತ್ತ ಹಾನಿ

ದಾವಣಗೆರೆ.ಮೇ.೨೩; ಜಿಲ್ಲೆಯಲ್ಲಿ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಭಾನುವಾರ ರಾತ್ರಿ ಸುರಿದ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕೊಯ್ಲಿಗೆ ಬಂದಿದ್ದ ಭತ್ತ ಕೈಗೆ ಸಿಗದಂತಾಗಿ ಅಪಾರ ನಷ್ಟ ಸಂಭವಿಸಿದೆ.ಮಾಯಕೊAಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೊಲ್ಕುಂಟೆ, ತೋಗಲೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಕೊಯಿಲಿಗೆ ಬಂದ ಭತ್ತ ನಷ್ಟ ಸಂಭವಿಸಿದ್ದು, ಸುದ್ದಿ ತಿಳಿದ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಅಧಿಕಾರಿಗಳಿಗೆ ಕೂಡಲೇ ಸ್ಥಳಕ್ಕೆ ಧಾವಿಸಿ ನಷ್ಟವಾಗಿರುವ ಭತ್ತದ ಹಾನಿ ಬಗ್ಗೆ …

Read More »

ರಾಜ್ಯ ವಿಧಾನಸಭಾ ಅಧಿವೇಶನ: ಸಿಎಂ. ಡಿಸಿಎಂ ಸೇರಿ ನೂತನ ಸಚಿವರು ಹಾಗೂ ಶಾಸಕರ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: 16ನೇ ವಿಧಾನಸಭೆಯ ಮೊದಲ ಅಧಿವೇಶನದ ಮೊದಲ ದಿನದ ಕಲಾಪ ಸೋಮವಾರ ಆರಂಭಗೊಂಡಿದ್ದು, ಮೊದಲ ದಿನದ ಅಧಿವೇಶನದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್‌ ಸೇರಿ ನೂತನ ಸಚಿವರು ಹಾಗೂ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರೆ.   ಸೋಮವಾರದಿಂದ ಬುಧವಾರದವರೆಗೆ (ಮೇ 22ರಿಂದ ಮೇ 24) ವಿಧಾನಸಭೆ ಅಧಿವೇಶನ ನಡೆಯಲಿದ್ದು, ಇಂದು ಬೆಳಗ್ಗೆ 11.15ರ ಹೊತ್ತಿಗೆ ಅಧಿವೇಶನ ಆರಂಭವಾಗಿದೆ.   ಮೊದಲ ಎರಡು ದಿನಗಳ ಕಾಲ ಎಲ್ಲ ಶಾಸಕರ ಪ್ರಮಾಣವಚನ ಸ್ವೀಕಾರ …

Read More »

24ನೇ ವಿಟಿಯು ರಾಜ್ಯ ಮಟ್ಟದ ಅಥ್ಲೆಟಿಕ್ ಕೂಟಕ್ಕೆ ಚಾಲನೆ

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯು “ರಜತ ಮಹೋತ್ಸವ” ಅಂಗವಾಗಿ ೨೦೨೩ ಮೇ ದಿನಾಂಕ ೨೧ನೇ ರಿಂದ ೨೪ನೇ ರವರಿಗೆ ರಂದು ‘೨೪ ನೇ ಅಂತರ ಕಾಲೇಜು ರಾಜ್ಯ ಮಟ್ಟದ ಅಥ್ಲೆಟಿಕ್ ಕೂಟ’ ವನ್ನು ವಿ.ತಾ.ವಿ. ಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಇದರ ಉದ್ಘಾಟನಾ ಸಮಾರಂಭವು ರವಿವಾರ, ದಿನಾಂಕ ೨೧.೦೫.೨೦೨೩ ರಂದು ಬೆಳಗ್ಗೆ ೯.೦೦ ಗಂಟೆಗೆ ವಿ.ತಾ.ವಿ.ಯ ಮೈದಾನದಲ್ಲಿ ಜರುಗಿತು. ಮಾನ್ಯ ಕುಲಪತಿಗಳಾದ ಪ್ರೊ ವಿದ್ಯಾಶಂಕರ್ ಎಸ್. ಅಧ್ಯಕ್ಷತೆಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ಒಲಿಂಪಿಕ್ …

Read More »