ಹಾಸನ: ಹೊಳೆನರಸೀಪುರ ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣ ಹಾಗೂ ಅವರ ಪುತ್ರ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಕಿರುಕುಳ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಎಸ್‌ಐಟಿ, ತಂದೆ-ಮಗನಿಂದ ಕಿರುಕುಳಕ್ಕೊಳಗಾದ ಐವರು ಮಹಿಳೆಯರಿಂದ ಮಾಹಿತಿ ಕಲೆಹಾಕಿದೆ. ಈಮಧ್ಯೆ, ಎಸ್‌ಐಟಿ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲು ಸಿದ್ಧತೆ ನಡೆಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸುವ ಸಾಧ್ಯತೆಯಿದೆ. ಸೋಮವಾರ, ಸದ್ಯ ಸುತ್ತುತ್ತಿರುವ ವಿಡಿಯೋಗಳ ಆಧಾರದ ಮೇಲೆ ಗುರುತಿಸಲ್ಪಟ್ಟ ಐವರು ಮಹಿಳೆಯರನ್ನು ಎಸ್‌ಐಟಿಯ ಹಿರಿಯ ಅಧಿಕಾರಿಗಳು ವಿಚಾರಣೆಗೆ …
Read More »ಮೋದಿ ದೇಶ ಕಂಡ ಮಹಾನ್ ಸುಳ್ಳುಗಾರ: ಸಚಿವ ಸಂತೋಷ ಲಾಡ್
ಶಿವಮೊಗ್ಗ: ‘ದೇಶ ಕಂಡ ಮಹಾನ್ ಸುಳ್ಳುಗಾರ ಪ್ರಧಾನಿ ನರೇಂದ್ರ ಮೋದಿ. ಅವರು ಹೇಳುತ್ತಿರುವ ಸುಳ್ಳುಗಳೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣ ಆಗಲಿವೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಬೇರೆ ಬೇರೆ ಪಕ್ಷದವರು ಬಹಳಷ್ಟು ಜನರು ಪ್ರಧಾನ ಮಂತ್ರಿಗಳಾಗಿದ್ದಾರೆ.ಆದರೆ, ನರೇಂದ್ರ ಮೋದಿ ಅವರಷ್ಟು ಸುಳ್ಳನ್ನು ಯಾರೂ ಹೇಳಿಲ್ಲ ಎಂದು ಲೇವಡಿ ಮಾಡಿದರು. ‘ನರೇಂದ್ರ ಮೋದಿ ತಮ್ಮ 10 ವರ್ಷಗಳ ಆಡಳಿತದ …
Read More »ಗೃಹಲಕ್ಷ್ಮೀ ಯೋಜನೆ 80 ಸಾವಿರ ಅರ್ಜಿ ತಿರಸ್ಕಾರ
ಗೃಹಲಕ್ಷ್ಮೀ ಯೋಜನೆಯ ಮೂಲಕ ಕುಟುಂಬದ ಯಜಮಾನಿ ಮಹಿಳೆಗೆ ಪ್ರತೀ ತಿಂಗಳು 2 ಸಾವಿರ ರೂಪಾಯಿ ಹಣ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ. ಆದ್ರೆ ಇದುವರೆಗೆ ಹಣ ಪಡೆದು ಕೊಂಡ ಎಲ್ಲರಿಗೂ ಕೂಡ ಗೃಹಲಕ್ಷ್ಮೀಯೋಜನೆಯ ಹಣ ಸಿಗುತ್ತೆ ಅನ್ನೋ ಗ್ಯಾರಂಟಿ ಇಲ್ಲ. ಅದ್ರಲ್ಲೂ ಯೋಜನೆಗೆ ಅರ್ಜಿ ಸಲ್ಲಿಸಿದ 80 ಸಾವಿರ ಮಹಿಳೆಯರ ಅರ್ಜಿ ತಿರಸ್ಕಾರಗೊಂಡಿದೆ. ಕರ್ನಾಟಕದಲ್ಲಿ ಸುಮಾರು ಈಗಾಗಲೇ ಗೃಹಲಕ್ಷ್ಮೀ ಯೋಜನೆಯ ಮೂಲಕ ಹಣವನ್ನು ಪಡೆದುಕೊಂಡಿರುವ 26 ಸಾವಿರ ಮಹಿಳೆಯರ ಖಾತೆಗೆ ಇನ್ಮುಂದೆ …
Read More »ಸೋಷಿಯಲ್ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ
ಸೋಷಿಯಲ್ ಮೀಡಿಯಾ ಕುರಿತು ಹಲವು ನಟ-ನಟಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಮಾತುಗಳನ್ನು ತಿರುಚುವ, ಥಂಬ್‌ನೈಲ್ ಮೂಲಕ ಅವಹೇಳನ ಮಾಡುವುದನ್ನು ವಿರೋಧಿಸಿದ್ದಾರೆ. ಈಗ ನಟ ಶಿವರಾಜಕುಮಾರ್ ಸಹ ಸೋಷಿಯಲ್ ಮೀಡಿಯಾ ವಿರುದ್ಧ ಕಿಡಿಕಾರಿದ್ದಾರೆ. ಶನಿವಾರ ಬೆಳಿಗ್ಗೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನಡೆದ “ಫಾದರ್’ ಚಿತ್ರದ ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಎನ್ನುವುದು ಆಟ ಸಾಮಾನು ಆಗಿಬಿಟ್ಟಿದೆ. ನಾವಿದ್ದ ಕಾಲ ಬಹಳ ಚೆನ್ನಾಗಿತ್ತು. ನಾವು …
Read More »ಲೈಂಗಿಕ ಹಗರಣ ಪ್ರಕರಣ: ಪ್ರಜ್ವಲ್ ರೇವಣ್ಣ ದೇಶ ತೊರೆಯಲು ಬಿಜೆಪಿ ಸಹಾಯ ಮಾಡಿದೆ; ಪ್ರಿಯಾಂಕ್ ಖರ್ಗೆ
ಬೆಂಗಳೂರು: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ದೇಶ ತೊರೆದಿದ್ದಾರೆ ಎಂಬ ವರದಿಗಳ ನಡುವೆ, ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಆಪಾದಿತ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ಅವರನ್ನು ರಕ್ಷಿಸಿ ಬಿಜೆಪಿಯೇ ವಿದೇಶಕ್ಕೆ ಕಳಿಸಿದೆ ಎನ್ನಲಾಗುತ್ತಿದೆ. ಆರೋಪಿಯನ್ನು ರಕ್ಷಿಸುವುದು ಯಾವ ನ್ಯಾಯ ಎಂದು ಸೋಮವಾರ ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಹಿಂದಿನ ಮನೆಯ ಸಹಾಯಕರು ನೀಡಿದ ದೂರಿನ ಮೇರೆಗೆ ಭಾನುವಾರ ಲೈಂಗಿಕ ಕಿರುಕುಳ ಪ್ರಕರಣವನ್ನು ದಾಖಲಿಸಲಾಗಿದೆ. …
Read More »ನಾಳೆಯಿಂದ ಪಿಯುಸಿ ಪೂರಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ
ನಾಳೆಯಿಂದ ಪಿಯುಸಿ ಪೂರಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಹುಬ್ಬಳ್ಳಿ, ಏಪ್ರಿಲ್ 28: ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ನಾಳೆ ಸೋಮವಾರದಿಂದ (ಏಪ್ರಿಲ್ 29) ನಡೆಯಲಿರುವ ಪೂರಕ ಪರೀಕ್ಷೆಗಳಿಗೆ (ಪರೀಕ್ಷೆ-2) ಹಾಜರಾಗುತ್ತಿದ್ದಾರೆ. ಇದೀಗ ಈ ಎಲ್ಲ ವಿದ್ಯಾರ್ಥಿಗಳಿಗೆ ರಾಜ್ಯ ಸಾರಿಗೆ ಸಂಸ್ಥೆಯು ಸಿಹಿ ಸುದ್ದಿ ನೀಡಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅವರ ವಿದ್ಯಾಸಂಸ್ಥೆಯ ಹೊರತಾಗಿ ಇತರೆ ವಿದ್ಯಾ ಸಂಸ್ಥೆಗಳಿಗೆ ಪರೀಕ್ಷಾ ಕೇಂದ್ರಗಳ ನಿಯೋಜನೆ ಆಗಿರುತ್ತಾರೆ. ಹೀಗಾಗಿ ಅವರಿಗೆ ತಮ್ಮ ನಿವಾಸದಿಂದ …
Read More »ಮೈ ,ಕೈ , ನೋವನ್ನ ಕಡಿಮೆ ಮಾಡಲು ಅತ್ಯುತ್ತಮ ಸಲಹೆ
ನೀವು ದೇಹದಲ್ಲಿ ಎಲ್ಲೇ ಇದ್ದರೂ ಕೇವಲ 5 ಸೆಕೆಂಡುಗಳಲ್ಲಿ ನೋವನ್ನ ಕಡಿಮೆ ಮಾಡಲು ಅತ್ಯುತ್ತಮ ಸಲಹೆ ಇದು. ಸಾಮಾನ್ಯವಾಗಿ, ನಮ್ಮಲ್ಲಿ ಹೆಚ್ಚಿನವರಿಗೆ ಮೈ ಕೈ ನೋವು ಅನುಭವಿಸುತ್ತಿರುತ್ತಾರೆ. ಅಂತಹ ನೋವುಗಳು ಬಂದಾಗ ಅನೇಕ ಜನರು ನೋವು ನಿವಾರಕಗಳನ್ನು ಬಳಸುತ್ತಾರೆ. ನೋವು ನಿವಾರಕಗಳ ಬಳಕೆಯಿಂದ ಕೆಲವು ಅಡ್ಡಪರಿಣಾಮಗಳು ಇವೆ. ಆದ್ದರಿಂದ, ಅದನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಪ್ರಯತ್ನಿಸಬೇಕು. ದೇವರಿಗೆ ಬಳಸುವ ಕರ್ಪೂರವು ನೋವುಗಳನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹದಲ್ಲಿ ಸ್ನಾಯು …
Read More »ಮೇ 07 ರಂದು ‘ಲೋಕಸಭಾ ಚುನಾವಣೆ’ಗೆ 2 ನೇ ಹಂತದ ಮತದಾನ : ರಾಜ್ಯದ ಈ ಜಿಲ್ಲೆಗಳಲ್ಲಿ ‘ಸರ್ಕಾರಿ ರಜೆ’ ಘೋಷಣೆ
ಬೆಂಗಳೂರು : ಲೋಕಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ನಡೆಯಲಿದೆ. ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡೋದಕ್ಕಾಗಿ ರಾಜ್ಯ ಸರ್ಕಾರದಿಂದ ಸಾರ್ವತ್ರಿಕ ರಜೆ ಘೋಷಣೆ ಮಾಡಿ ಆದೇಶಿಸಿದೆ. ಮೇ 07 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಕಚೇರಿ, ಶಾಲಾ ಕಾಲೇಜು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಎಲ್ಲಾ ವ್ಯವಹಾರ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಹಾಗೂ ಇತರ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಸಂವಿಧಾನಾತ್ಮಕ ಅಥವಾ ಶಾಸನಾತ್ಮಕ …
Read More »ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ-2 ಪರೀಕ್ಷೆ ಆರಂಭ
ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ-2 ಪರೀಕ್ಷೆ ಆರಂಭ ಬೆಂಗಳೂರು: 2023 -24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ -2 ಎಪ್ರಿಲ್ 29 ರಿಂದ ರಾಜ್ಯದಾತ್ಯಂತ ಆರಂಭವಾಗಲಿದೆ. 84,933 ಬಾಲಕರು, 64,367 ಬಾಲಕಿಯರು ಸೇರಿ ಒಟ್ಟು 1,49,300 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಇದೇ ಮೊದಲ ಬಾರಿಗೆ ಮೂರು ಬಾರಿ ಪರೀಕ್ಷೆ ಬರೆದು ಯಾವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತದೆಯೋ ಅದನ್ನು ಉಳಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಈಗಾಗಲೇ ಪರೀಕ್ಷೆ …
Read More »ಪುನಃ ನಾನೂರು ರೂಪಾಯಿ ದಾಟಿದೆ ಟೊಮ್ಯಾಟೊ ಬೆಲೆ ..!
ಚಿಕ್ಕಬಳ್ಳಾಪುರ: ಟೊಮ್ಯಾಟೊ ಬೆಲೆ (tomato price) ಪುನಃ ನಾನೂರು ರೂಪಾಯಿ ದಾಟಿದೆ. ಹತ್ತು ಕೆಜಿ ಟೊಮ್ಯಾಟೊ ಬಾಕ್ಸ್ ಬೆಲೆ (tomato price rise) ನಾನೂರು ರೂಪಾಯಿ ತಲುಪಿದ್ದು, ಗ್ರಾಹಕರ ಕೈ ಸುಡಲು ಸಿದ್ಧವಾಗಿದೆ. ಬಿಸಿಲಿನ ತಾಪಕ್ಕೆ ಹೆಚ್ಚಾಗಿ ಫಸಲು ಬಾರದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚುತ್ತಿದೆ.ಜೊತೆಗೆ ಟೊಮ್ಯಾಟೊ ಬೆಳೆಗೆ ಬಿನುಗು ರೋಗ ತಗುಲಿದ ಹಿನ್ನೆಲೆಯಲ್ಲಿ ನಿರೀಕ್ಷಿತ ಫಸಲು ಕೂಡ ಬಂದಿಲ್ಲ. ಆ ಬಾರಿ ಬಿಸಿಲಿನ ಪರಿಣಾಮ ನಿರೀಕ್ಷೆಗಿಂತ ಮೊದಲೇ ನೀರಿನ ಲಭ್ಯತೆ …
Read More »