Breaking News

Uncategorized

ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿರುವ ಟಿಬಿ ಜಯಚಂದ್ರಗೆ ಪ್ರಾಣ ಬೆದರಿಕೆ ಕರೆ

ಬೆಂಗಳೂರು : ಸಿರಾ ಕ್ಷೇತ್ರದಶಾಸಕ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿರುವ ಟಿಬಿ ಜಯಚಂದ್ರಗೆ ಪ್ರಾಣ ಬೆದರಿಕೆ ಕರೆ ಬಂದಿದೆ ಎಂದು ಸಂಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿಂದೆ ಸಚಿವರಾಗಿದ್ದ ಅವಧಿಯಲ್ಲಿ ಟಿಬಿ ಜಯಚಂದ್ರ ನೈಸ್‌ ಸಂಸ್ಥೆಯ ಹಗರಣಗಳಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಿದ್ದರು. ಅಲ್ಲದೇ ಆ ವರದಿಯನ್ವಯ ನೈಸ್‌ ಸಂಸ್ಥೆಯ ಮೇಲೆ ಕ್ರಮ ಜಾರಿಗೊಳಿಸುವಂತೆ ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಆಗ್ರಹಿಸಿದ್ದರು. ಅಂದಿನಿಂದಲೂ ಜಯಚಂದ್ರರಿಗೆ ಸತತವಾಗಿ ಬೇರೆ …

Read More »

ಅಂತರ್ಜಲ ಮರುಪೂರಣ ಆಗಬೇಕಾದ್ರೆ ಅದಕ್ಕೆ ಕೆರೆಗಳು ಬೇಕೇ ಬೇಕು

ಧಾರವಾಡ: ಅಂತರ್ಜಲ ಮರುಪೂರಣ ಆಗಬೇಕಾದ್ರೆ ಅದಕ್ಕೆ ಕೆರೆಗಳು ಬೇಕೇ ಬೇಕು. ಪ್ರತಿ ಮಳೆಗಾಲ ಬಂದಾಗ ಕೆರೆಗಳು ತನ್ನೆಲ್ಲ ಜಾಗ ಆಕ್ರಮಿಸಿ ಮೈತುಂಬ ತುಂಬಿಕೊಳ್ಳಬೇಕು. ಅಷ್ಟೇ ತುಂಬಿ ತುಳುಕಿ ಕೋಡಿ ಹರಿಯಬೇಕು. ಹೀಗೆ ಮೈದುಂಬಿ ಕೋಡಿ ಹರಿಯುತ್ತಿರೋ ಈ ಕೆರೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಅಂಚಿನಲ್ಲಿದೆ. ಸುತ್ತಲೂ ಹಸಿರ ಸಿರಿಯ ಗುಡ್ಡದ ನಡುವೆ ವಿಶಾಲವಾದ ಕೆರೆ. ಈ ಕೆರೆಯ ಎರಡು ಕಡೆಯಲ್ಲಿ ಕೋಡಿ ಹರಿಯುತ್ತೆ. ಪ್ರತಿ ಸಲ ಮಳೆಗಾಲ ಬಂದಾಗ …

Read More »

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿದೆ.

ಬೆಂಗಳೂರು: ಅನುತ್ತೀರ್ಣರಾದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಮತ್ತೊಂದು ಪೂರಕ ಪರೀಕ್ಷೆ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ಧರಿಸಿದ್ದು, ಇಂದು ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಆಗಸ್ಟ್ 21ರಿಂದ ಸೆಪ್ಟೆಂಬರ್ 2ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ನಡೆಯಲಿವೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವೇಳಾಪಟ್ಟಿ ಪ್ರಕಟಿಸಿದೆ. 2022-23ನೇ ಸಾಲಿನಲ್ಲಿ ಹಾಗೂ ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮಾತ್ರ ಈ ಪರೀಕ್ಷೆಗೆ ನೋಂದಾಯಿಸಲು …

Read More »

ಮೊಬೈಲ್ ಚಾರ್ಜ್ ಹಾಕಲು ಹೋಗಿ ಯುವಕ ವಿದ್ಯುತ್ ತಗುಲಿ ಸಾವ ಸಂಭವಿಸಿದೆ

ಚಿಕ್ಕೋಡಿ: ಮೊಬೈಲ್ ಚಾರ್ಜ್ ಹಾಕಲು ಹೋಗಿ ಯುವಕ ವಿದ್ಯುತ್ ತಗುಲಿ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕೋಡಿಯಲ್ಲಿ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಶಿರಪ್ಪೆವಾಡಿ ಗ್ರಾಮದ ಆಕಾಶ ಸಂಕಪಾಳ (27) ಸಾವನ್ನಪ್ಪಿದ ದುರ್ದೈವಿ ಎಂದು ಗುರುತಿಸಲಾಗಿದೆ.   ಮುಂಜಾನೆ ಎಂಟು ಗಂಟೆ ಸುಮಾರಿಗೆ ಮನೆಯಲ್ಲಿ ಮೊಬೈಲ್ ಚಾರ್ಚ್ ಹಾಕುವುದಕ್ಕೆ ಯುವಕ ಮುಂದಾಗಿದ್ದಾನೆ. ಆಕಸ್ಮಿಕವಾಗಿ ವಿದ್ಯುತ್ ಕೈಗೆ ತಗುಲಿ ಸಾವು ಸಂಭವಿಸಿದೆ ಎಂದು ಮೃತ ಯುವಕನ ತಂದೆ ನಿಪ್ಪಾಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. …

Read More »

ಶಾಸಕ ತನ್ವೀರ್ ಸೇಠ್ ಅವರು ಗೃಹ ಸಚಿವ ಪರಮೇಶ್ವರ್ ಅವರಿಗೆ ಬರೆದ ಪತ್ರ ಸಹಜವಾಗಿದೆ

ವಿಜಯಪುರ : ಕಾಂಗ್ರೆಸ್ ಶಾಸಕ ತನ್ವೀರ್​ ಸೇಠ್​ ಡಿಜೆ – ಕೆಜಿಹಳ್ಳಿ ಸೇರಿದಂತೆ ವಿವಿಧೆಡೆ ನಡೆದ ಗಲಭೆ ಪ್ರಕರಣವನ್ನು ಮರುಪರಿಶೀಲನೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಗೃಹಸಚಿವ ಪರಮೇಶ್ವರ್​ ಅವರಿಗೆ ಬರೆದ ಪತ್ರ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ ಪಾಟೀಲ್​ ಪ್ರತಿಕ್ರಿಯಿಸಿದ್ದಾರೆ. ಇದು ಸಹಜ ಪ್ರಕ್ರಿಯೆಯಾಗಿದೆ. ಈಗಾಗಲೇ ಗೃಹ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು. ವಿಜಯಪುರದಲ್ಲಿ ಕುಡಿಯುವ ನೀರಿನ ಕುರಿತು ಅಧಿಕಾರಿಗಳ ಸಭೆ ನಡೆಸಿ …

Read More »

ಸಿಂಗಾಪುರ ಆಪರೇಷನ್ ವಿಚಾರ: ಏಕಾಏಕಿ ಮೌನಕ್ಕೆ ಜಾರಿದ ಡಿಕೆಶಿ

ಬೆಂಗಳೂರು: ನಿನ್ನೆಯಷ್ಟೇ ಸಿಂಗಾಪುರದಲ್ಲಿ ಕುಳಿತು ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳಿಸುವ ಆಪರೇಷನ್ ಪ್ರಯತ್ನ ನಡೆದಿದೆ ಎಂದು ಆರೋಪ ಮಾಡಿದ್ದ ಡಿಸಿಎಂ ಡಿ ಕೆ ಶಿವಕುಮಾರ್ ಇಂದು ಆ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಅಚ್ಚರಿಯ ಬೆಳವಣಿಗೆಯ ರೀತಿ ಇದು ಗೋಚರಿಸಿದೆ. ನಿನ್ನೆ ಮಾಧ್ಯಮಗಳ ಪ್ರಶ್ನೆಗೆ ರಾಜ್ಯ ಸರ್ಕಾರ ಪತನಗೊಳಿಸಲು ಸಿಂಗಪೂರದಲ್ಲಿ ಕುಳಿತು ಪ್ರಯತ್ನ ನಡೆಸುತ್ತಿದ್ದಾರೆ. ಇದರ ಮಾಹಿತಿ ನಮಗೆ ಇದೆ. ನಾವು ಇಂತಹ ಪ್ರಯತ್ನಕ್ಕೆ ಬೆಲೆ ಸಿಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದರು. ಆದರೆ, ಇಂದು …

Read More »

ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಕೊಲೆ

ಕಲಬುರಗಿ: ಹಣಕಾಸಿನ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಮಾಜಿ ಗ್ರಾಮ ಪಂಚಾಯತ್​ ಸದಸ್ಯನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜೇವರ್ಗಿ ತಾಲೂಕಿನ ಮದರಿ ಗ್ರಾಮದಲ್ಲಿ ನಡೆದಿದೆ. ಅಶೋಕ ಪ್ಯಾಟಿ (45) ಕೊಲೆಯಾದವರು. ಅಶೋಕ್ ಪ್ಯಾಟಿ ಪಕ್ಕದ ಮನೆಯ ಹಾಲಗಡ್ಲಾ ಕುಟುಂಬದ ಜಾನಪ್ಪ, ಸಿದ್ದಪ್ಪ, ಗುಂಡಪ್ಪ ಮತ್ತು ಅವರ ಸಂಬಂಧಿಗಳು ಈ ಕೊಲೆ ಮಾಡಿದ್ದಾರೆ ಎಂದು ಮೃತನ‌ ಪತ್ನಿ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಏನಿದು ಪ್ರಕರಣ ?: ಕೊಲೆಯಾದ ಅಶೋಕ್ ಪ್ಯಾಟಿ …

Read More »

ಧಾರಾಕಾರ ಮಳೆ: ಚಿಕ್ಕೋಡಿಯಲ್ಲಿ 7 ಸೇತುವೆಗಳು ಜಲಾವೃತ

ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನದಿಗಳಲ್ಲಿ ನೀರಿನ ಮಟ್ಟ ಪ್ರತಿ ಗಂಟೆಗೂ ಹೆಚ್ಚಳವಾಗುತ್ತಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ಇದರಿಂದ ಕೆಳಹಂತದ ಏಳು ಸೇತುವೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ. ಕೃಷ್ಣಾ ನದಿ ಹಾಗೂ ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಏಳು ಕೆಳಹಂತದ ಸೇತುವೆಗಳು ಈಗಾಗಲೇ ಜಲಾವೃತಗೊಂಡು ನದಿಯ ದಂಡೆಯ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಚಿಕ್ಕೋಡಿ ತಾಲೂಕಿನ ಮಲಿಕವಾಡ – ದತ್ತವಾಡ ಸಂಪರ್ಕ ಕಲ್ಪಿಸುವ ಸೇತುವೆ …

Read More »

ಬೆಂಗಳೂರು ನಗರದಲ್ಲಿ ಐವರು ಶಂಕಿತ ಉಗ್ರರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಇವರಿಂದ ವಶಕ್ಕೆ ಪಡೆದಿರುವ ಗ್ರೆನೇಡ್​ ಕುರಿತು ತನಿಖೆ ನಡೆಸಲಿದ್ದಾರೆ.

ಬೆಂಗಳೂರು : ರಾಜಧಾನಿಯಲ್ಲಿ‌ ಶಂಕಿತ ಉಗ್ರರ ಬಂಧನದ ಬಳಿಕ ಅವರಿಂದ ವಶಕ್ಕೆ ಪಡೆಯಲಾದ ಗ್ರೆನೇಡ್ ಹಿಂದಿನ ರಹಸ್ಯ ತಿಳಿಯಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಆರೋಪಿಗಳಿಗೆ ಗ್ರೆನೇಡ್ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸಲಿದ್ದಾರೆ. ಸಿಸಿಬಿ ಪೊಲೀಸರು ಸದ್ಯ ನಾಲ್ಕು ಗ್ರೆನೇಡ್​​ಗಳನ್ನು ಶಂಕಿತರಿಂದ ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದ ಬಳಿಕ ವಿಧಿ ವಿಜ್ಞಾನ ಪ್ರಯೋಗಾಲಯ (FSL) ಹಾಗೂ ರಾಷ್ಟ್ರೀಯ ಬಾಂಬ್ ಡಾಟಾ ಸೆಂಟರ್ (NBDC)ಗಳು ಈ ಪರಿಶೀಲನೆ ಆರಂಭಿಸಲಿವೆ. ಮೊದಲಿಗೆ …

Read More »

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಏಕ ಸದಸ್ಯ ತನಿಖಾ ಆಯೋಗ ನೇಮಿಸಿ ಆದೇಶ

ಬೆಂಗಳೂರು: ಬಿಜೆಪಿ ಸರ್ಕಾರವಧಿಯಲ್ಲಿ ನೇದ ಮತ್ತೊಂದು ಅಕ್ರಮವನ್ನು ಕಾಂಗ್ರೆಸ್ ಸರ್ಕಾರ ತನಿಖೆಗೆ ಒಪ್ಪಿಸಿದೆ. ಬಹುಚರ್ಚಿತ ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮವನ್ನು ನ್ಯಾಯಾಂಗ ತನಿಖೆಗೆ ನೀಡಿ ಸರ್ಕಾರ ಆದೇಶಿಸಿದೆ.‌ ಕಳೆದ ಬಿಜೆಪಿ ಸರ್ಕಾರದಲ್ಲಿ ಸದ್ದು ಮಾಡಿದ್ದ 545 ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ತನಿಖೆಗಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದಲ್ಲಿ ಏಕ ಸದಸ್ಯ ತನಿಖಾ ಆಯೋಗವನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. 545 ಪಿಎಸ್‌ಐ ನೇಮಕಾತಿ ಲಿಖಿತ ಪರೀಕ್ಷಾ ಅಕ್ರಮ ಪ್ರಕರಣದ ತನಿಖೆಯನ್ನು …

Read More »