Breaking News

Uncategorized

ಕರೆಂಟ್‌​ ಬಿಲ್ ಜಾಸ್ತಿ ಬಂತೆಂದು ಮೀಟರ್‌​ ರೀಡರ್​ನನ್ನೇ ಕೊಂದರು!

(ಒಡಿಶಾ): ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಇಂದು (ಸೋಮವಾರ) ಭೀಕರ ಹತ್ಯೆ ನಡೆದಿದೆ. ಅಧಿಕ ಪ್ರಮಾಣದ ಬಿಲ್​ ನೀಡುತ್ತಿದ್ದಾನೆ ಎಂಬ ಆರೋಪದ ಮೇಲೆ ವಿದ್ಯುತ್​ ಮೀಟರ್​ ರೀಡರ್​ನನ್ನೇ ಹರಿತವಾದ ಆಯುಧಗಳಿಂದ ಇರಿದು ಹತ್ಯೆ ಮಾಡಲಾಗಿದೆ. ಹಂತಕರು ಪರಾರಿಯಾಗಿದ್ದು, ಪ್ರಕರಣ ದಾಖಲಾಗಿದೆ. ಘಟನೆಯ ವಿವರ: ಗಂಜಾಂ ಜಿಲ್ಲೆಯ ಕುಪಾಟಿ ಗ್ರಾಮದಲ್ಲಿ ಬೆಚ್ಚಿಬೀಳಿಸುವ ಹತ್ಯೆಯಾಗಿದೆ. ಲಕ್ಷ್ಮೀ ನಾರಾಯಣ ತ್ರಿಪಾಠಿ ಮೃತ ವ್ಯಕ್ತಿ. ಹಲವು ವರ್ಷಗಳಿಂದ ಇವರು ವಿದ್ಯುತ್​ ಬಿಲ್​ ರೀಡರ್​ ಆಗಿ ಕೆಲಸ ಮಾಡುತ್ತಿದ್ದರು. ಪ್ರತಿ ತಿಂಗಳು …

Read More »

ಜನರ ಆಶೀರ್ವಾದ ಇಲ್ಲಎಂದಾಗಲು ಅಧಿಕಾರದ ಹಪಾಹಪಿ ಬಿಜೆಪಿಯವರಿಗೆ ಜಾಸ್ತಿಯಾಗಿದೆ: ಸಚಿವ ಆರ್.ಬಿ. ತಿಮ್ಮಾಪೂರ ಕಿಡಿ

ಬಾಗಲಕೋಟೆ: ”ಜನರ ಆಶೀರ್ವಾದ ಇಲ್ಲಎಂದಾಗಲು ಅಧಿಕಾರದ ಹಪಾಹಪಿ ಬಿಜೆಪಿಯವರಿಗೆ ಜಾಸ್ತಿಯಾಗಿದೆ” ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಗರದಲ್ಲಿ ಕೆಪಿಡಿ ಸಭೆ ನಡೆಸಲು ಆಗಮಿಸಿದ ಸಂದರ್ಭದಲ್ಲಿ ಮಾತನಾಡಿ, ಸಿಂಗಪುರದಲ್ಲಿ ಆಪರೇಷನ್‌ ಸರ್ಕಾರ ಕೆಡವಲು ಯೋಚನೆ ಮಾಡುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ”ಬಿಜೆಪಿಯವರಿಗೆ ಜನರ ಆಶೀರ್ವಾದ ದೊರೆತಿಲ್ಲ. ಜನ ತಿರಸ್ಕರಿಸಿದರೂ ಬಿಜೆಪಿಯವರು ಅಧಿಕಾರದ ದಾಹದಿಂದ ಈ ಪ್ರಯತ್ನ ನಡೆದಿರಬಹುದು” ಎಂದು ಹೇಳಿದರು. …

Read More »

ಇತ್ತೀಚೆಗೆ ಸುರಿದ ಮಳೆಯಿಂದ ಶತಮಾನ ಕಂಡಿರುವ ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದಿದೆ

ಬಾಗಲಕೋಟೆ: ಇತ್ತೀಚೆಗೆ ಸುರಿದ ಮಳೆಯಿಂದ ಶತಮಾನ ಕಂಡಿರುವ ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಜಿಲ್ಲೆಯ ಇಲಕಲ್ಲ ತಾಲೂಕಿನ ಗುಡೂರ ಎಸ್. ಸಿ. ಗ್ರಾಮದಲ್ಲಿರುವ ಸರಕಾರಿ ಶಾಲೆ ಇದಾಗಿದೆ. ಮಳೆಯಿಂದ ಸಂಪೂರ್ಣ ಶಾಲೆಯ ಮೇಲ್ಛಾವಣಿ ಜಖಂಗೊಂಡಿದೆ. ಈ ಸರ್ಕಾರಿ ಶಾಲೆಯು 150 ವರ್ಷದ ಹಳೆಯದಾಗಿದೆ. ಶಾಲೆಯ ಕಟ್ಟಡ ಶಿಥಿಲಗೊಂಡಿತ್ತು. ಕೆಲವು ದಿನಗಳ ಹಿಂದೆ ಸುರಿದ ಭಾರಿ ಮಳೆ ಹೆಂಚಿನ ಮೇಲ್ಛಾವಣಿ ಕಸಿದುಬಿದ್ದಿದೆ. ಶಾಲೆಯ ಒಟ್ಟು ಐದು ಕೊಠಡಿಗಳು ಹೆಂಚಿನ ಮೇಲ್ಛಾವಣಿ ಹೊಂದಿವೆ. …

Read More »

ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ B.J.P.ಹೈಕಮಾಂಡ್, ಬುಲಾವ್

ಬೆಂಗಳೂರು: ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರ ಹೆಸರು ಅಂತಿಮಗೊಳಿಸಲು ವಿಳಂಬ ಮಾಡುತ್ತಿರುವ ಬಿಜೆಪಿ ಹೈಕಮಾಂಡ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಬುಲಾವ್ ನೀಡಿದೆ. ಬೊಮ್ಮಾಯಿ ಪರ ಯಡಿಯೂರಪ್ಪ ಒಲವಿರುವ ಹಿನ್ನಲೆಯಲ್ಲಿ ಬೊಮ್ಮಾಯಿ ದೆಹಲಿ ಭೇಟಿ ಮಹತ್ವ ಪಡೆದುಕೊಂಡಿದೆ. ಬೊಮ್ಮಾಯಿ ಇಂದೇ ದೆಹಲಿಗೆ ತೆರಳುತ್ತಿದ್ದಾರೆ. ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ …

Read More »

ಬೆಂಗಳೂರಿನ ಚರ್ಚ್ ಸ್ಟ್ರೀಟ್​ನಲ್ಲಿ ಮದ್ಯದ ಅಮಲಿನಲ್ಲಿದ್ದ ಯುವತಿಯ ರಂಪಾಟ.

ಬೆಂಗಳೂರು: ವಾರಾಂತ್ಯದ ಪಾರ್ಟಿ ನೆಪದಲ್ಲಿ ಪುಂಡಾಟಿಕೆ ಮೆರೆಯುವ ಪ್ರಕರಣಗಳು ನಗರದಲ್ಲಿ ಆಗಾಗ ವರದಿಯಾಗುತ್ತಲೇ ಇರುತ್ತವೆ. ಅಂಥಹದ್ದೇ ಮತ್ತೊಂದು ಪ್ರಕರಣ ಶನಿವಾರ ತಡರಾತ್ರಿ ನಗರದ ಚರ್ಚ್ ಸ್ಟ್ರೀಟ್​ನಲ್ಲಿ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಯುವತಿಯೊಬ್ಬಳು ತೂರಾಡುತ್ತ ಸಾರ್ವಜನಿಕರಿಗೆ ತಲೆ ನೋವಾದ ಘಟನೆ ನಡೆದಿದೆ. ಬುದ್ಧಿ ಹೇಳಲು ಹೋದವರ ಮೇಲೆಯೇ ಮುಗಿ ಬೀಳುತ್ತಿದ್ದ ಯುವತಿಯನ್ನು ಸಂಬಾಳಿಸುವಲ್ಲಿ ಪೊಲೀಸರೇ ಹೈರಾಣಾಗಿದ್ದಾರೆ. ರಾತ್ರಿ ಪಾಳಿಯಲ್ಲಿದ್ದ ಪೊಲೀಸ್​ ಸಿಬ್ಬಂದಿ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಯತ್ನಿಸಿದ್ದಾರೆ. ಆದರೆ ಮಹಿಳಾ ಸಿಬ್ಬಂದಿಗಳಿಲ್ಲದ …

Read More »

ಆಸ್ತಿಗಾಗಿ ಪತ್ನಿಯೊಂದಿಗೆ ಸೇರಿ ಹೆತ್ತಮ್ಮನನ್ನೇ ಕೊಂದ ಪುತ್ರ

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಆಸ್ತಿಗಾಗಿ ಹೆತ್ತ ತಾಯಿಯನ್ನು ಮಗ ಕೊಲೆ ಮಾಡಿರುವ ಪ್ರಕರಣ ದೇವನಹಳ್ಳಿ ತಾಲೂಕಿನ ಉದಯಗಿರಿ ಸಮೀಪ ನಡೆದಿದೆ. ಚಿನ್ನಮ್ಮ ಕೊಲೆಗೀಡಾದ ಮಹಿಳೆ. ಚಿನ್ನಮ್ಮನಿಗೆ ಇಬ್ಬರು ಗಂಡು ಮಕ್ಕಳು. ಮೊದಲನೇ ಮಗ ರಾಘವೇಂದ್ರ ಮತ್ತು ಎರಡನೇ ಮಗ ರಾಜೇಶ್. ಮೊದಲ ಮಗ ರಾಘವೇಂದ್ರನಿಗೆ ಸುಧಾ ಎಂಬುವವಳೊಂದಿಗೆ ಮದುವೆ ಆಗಿದೆ. ಕಳೆದ ಒಂದು ವರ್ಷದ ಹಿಂದೆ ಚಿನ್ನಮ್ಮ ತನ್ನ ಗಂಡನನ್ನು ಕಳೆದುಕೊಂಡಿದ್ದರು. ಇರೋ ಜಮೀನನ್ನು ಮಾರಿ ಇಬ್ಬರು ಮಕ್ಕಳಿಗೆ ಸಮನಾಗಿ ಹಂಚುವ …

Read More »

ಅರ್ಬಾಜ್​ ಖಾನ್​ ಬರ್ತ್​ಡೇ ಪಾರ್ಟಿಯಲ್ಲಿ ಬಾಲಿವುಡ್​ ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​ ಹೊಸ ಲುಕ್

ನಟ ಹಾಗೂ ನಿರ್ಮಾಪಕ ಅರ್ಬಾಜ್​ ಖಾನ್​ ಬರ್ತ್​ಡೇ ಪಾರ್ಟಿಯಲ್ಲಿ ಬಾಲಿವುಡ್​ ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​ ಭಾಗವಹಿಸಿ ಗಮನ ಸೆಳೆದರು. ಬಾಲಿವುಡ್​ ನಟ ಹಾಗೂ ನಿರ್ಮಾಪಕ ಅರ್ಬಾಜ್​ ಖಾನ್​ ನಿನ್ನೆಯಷ್ಟೇ ತಮ್ಮ 56ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಅವರು ತಮ್ಮ ಆತ್ಮೀಯರಿಗಾಗಿ ಗ್ರ್ಯಾಂಡ್​ ಪಾರ್ಟಿಯನ್ನು ಆಯೋಜಿಸಿದ್ದರು. ಅರ್ಬಾಜ್​ ಖಾನ್​ ಹಿರಿಯ ಸಹೋದರ ಮತ್ತು ಬಾಲಿವುಡ್​ ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​ ಈ ಪಾರ್ಟಿಯಲ್ಲಿ ಭಾಗವಹಿಸಿ ಗಮನ ಸೆಳೆದರು. …

Read More »

ಲೋಕಸಭಾ ಚುನಾವಣೆಯಲ್ಲಿ ನನಗೆ ಸ್ಪರ್ಧೆ ಮಾಡಿ ಎಂದು ಹೈಕಮಾಂಡ್ ಹೇಳಿಲ್ಲ. ಆದರೆ ಹೆಚ್ಚು ಸ್ಥಾನ ಗೆಲ್ಲಿಸುವಂತೆ ಸೂಚನೆ ನೀಡಿದ್ದಾರೆ :ಸತೀಶ ಜಾರಕಿಹೊಳಿ

ಲೋಕಸಭಾ ಚುನಾವಣೆಯಲ್ಲಿ ನನಗೆ ಸ್ಪರ್ಧೆ ಮಾಡಿ ಎಂದು ಹೈಕಮಾಂಡ್ ಹೇಳಿಲ್ಲ. ಆದರೆ ಹೆಚ್ಚು ಸ್ಥಾನ ಗೆಲ್ಲಿಸುವಂತೆ ತಯಾರಿ ನಡೆಸುವಂತೆ ಎಲ್ಲರಿಗೂ ಸೂಚನೆ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಶನಿವಾರ ನಗರದ ಕುಮಾರ ಗಂಧರ್ವ ರಂಗ ಮಂದಿರದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಅತೀ ಹೆಚ್ಚು ಸ್ಥಾನ ಗೆಲ್ಲಿಸಬೇಕು. ಆದ್ದರಿಂದ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕೆಂದು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ …

Read More »

ರೇಮೆಂಡ ಕಂಪನಿ ಹೆಸರು ಬಳಿಸಿ ನಕಿಲಿ ಬಟ್ಟೆ ಮಾರಾಟ ಮೂರೂ ಅಂಗಡಿ ಮೇಲೆ ಪೊಲೀಸ ಕ್ರಮ

ಪ್ರತಿಯೊಬ್ಬರೂ ಜೀವನದ ಲೈಫ್ ಸ್ಟೈಲ್ ತಕ್ಕನಾಗಿ ಬ್ರ್ಯಾಂಡೆಡ್ ಬಟ್ಟೆಗಳನ್ನು ಧರಿಸುವುದು ಸರ್ವೇ ಸಾಮಾನ್ಯವಾಗಿರುತ್ತದೆ ಆದರೆ ಬ್ರ್ಯಾಂಡೆಡ್ ಬಟ್ಟೆಗಳು ಕಡಿಮೆ ದರದಲ್ಲಿ ಸಿಗುತ್ತೆ ಅಂದರೆ ಸಕ್ಕರೆಗೆ ಇರುವೆ ಮುತ್ತಿದಂತೆ ಮುತ್ತಿಕೊಳ್ಳುತ್ತೇವೆ ಅಲ್ಲೇ ನೋಡಿ ಮೋಸ ಹೋಗುವುದು ಮೋಸ ಮಾಡಿಸಿಕೊಳ್ಳುವವವರು ಇದ್ದಾಗ ಮೋಸ ಮಾಡುವವರು ಇರುತ್ತಾರೆ, ಅನ್ನುವುದಕ್ಕೆ ಈ ಘಟನೆ ನಿದರ್ಶನ ನಗರದ ಖಡೆ ಬಜಾರನಲ್ಲಿ ಮೂರೂ ಅಂಗಡಿಯವರು ರೇಮೆಂಡ ಕಂಪನಿ ಬಟ್ಟೆ ಎಂದು ಲೋಕಲ್ ಬಟ್ಟೆಯನ್ನು ಮಾರಾಟ ಮಾಡಿ ಜನರನ್ನು ಮರಳು …

Read More »

ಕಳೆದ ಎರಡು ತಿಂಗಳಿನಿಂದ ಗೌರವ ವೇತನ ಇಲ್ಲದೇ ಅತಿಥಿ ಉಪನ್ಯಾಸಕರು ಸಮಸ್ಯೆ ಎದುರಿಸುವಂತಾಗಿದ್ದು, ಕೂಡಲೇ ವೇತನ ಬಿಡುಗಡೆ ಮಾಡಬೇಕು ಎಂದು ಮಾಜಿ ಸಚಿವ ಸುರೇಶ್​ ಕುಮಾರ್​ ಪತ್ರ ಬರೆದಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಕಳೆದ ಎರಡೂವರೆ ತಿಂಗಳಿನಿಂದ ಗೌರವ ವೇತನ ಬಿಡುಗಡೆಯಾಗದೇ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಬಾಕಿ ಉಳಿಸಿಕೊಂಡಿರುವ ಗೌರವ ವೇತನ ಬಿಡುಗಡೆ ಮಾಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್​ಗೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.   ಮಾಜಿ ಸಚಿವರು ಬರೆದ ಪತ್ರರಾಜ್ಯದ 436 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 14 ಸಾವಿರಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. …

Read More »