Uncategorized

ಬೈಕ್ ಸವಾರರ ಮೇಲೆ ನರಿ ದಾಳಿ ಬೆಳಗಾವಿಯ ಶಾಸ್ತ್ರೀ ನಗರದಲ್ಲಿ ನರಿ ಪ್ರತ್ಯಕ್ಷ

ಬೆಳಗಾವಿ- ಇತ್ತೀಚಿಗೆ ಬೆಳಗಾವಿಯ ಶಾಸ್ತ್ರೀ ನಗರದಲ್ಲಿ ನರಿ ಪ್ರತ್ಯಕ್ಷವಾದ ಬೆನ್ನಲ್ಲಿಯೇ ಬೆಳಗಾವಿಯ ವೀರಭದ್ರ ನಗರದಲ್ಲಿ ನರಿ ದಾಳಿ ಮಾಡಿದ್ದು ಇಬ್ಬರು ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ಇಬ್ಬರು ಬೈಕ್ ಸವಾರರ ಮೇಲೆ ನರಿಯೊಂದು ದಾಳಿ ಮಾಡಿದ್ದು ಕಾಲಿಗೆ ಕಚ್ಚಿ ಪರಾರಿಯಾಗಿದೆ.ನರಿ ದಾಳಿಯಿಂದ ಅಲ್ಪ ಗಾಯಗೊಂಡ ಇಬ್ಬರು ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ.     ರಾತ್ರಿ ಹೊತ್ತು ವೀರಭದ್ರ ನಗರದಲ್ಲಿ ಇಬ್ಬರು ಬೈಕ್ ಮೇಲೆ ಹೋಗುತ್ತಿರುವಾಗ …

Read More »

ನಬಾರ್ಡ್​ನಲ್ಲಿ 150 ಅಸಿಸ್ಟಂಟ್​ ಮ್ಯಾನೇಜರ್​ ಹುದ್ದೆ

ಪದವಿ ಓದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಈ ಹುದ್ದೆ ಕುರಿತದ ಸಂಪೂರ್ಣ ಮಾಹಿತಿ ಇಲ್ಲಿದೆ. ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್​ (ನಬಾರ್ಡ್​)ನಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ರಾಷ್ಟ್ರಾದ್ಯಂತ ಈ ನೇಮಕಾತಿ ನಡೆಯಲಿದ್ದು, ಗ್ರೇಡ್ ​ಎ ಮಟ್ಟದ ಅಸಿಸ್ಟಂಟ್​ ಮ್ಯಾನೇಜರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 150 ಹುದ್ದೆಗಳ ಭರ್ತಿ ನಡೆಯಲಿದೆ. ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ …

Read More »

ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಪ್ರತಿಭಟನೆ

ಚಾಮರಾಜನಗರ: ಸನಾತನ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ತಮಿಳುನಾಡಿನ‌ ಸಚಿವ ಉದಯನಿಧಿ ಅವರನ್ನು ಬಂಧಿಸಿ, ಮೊಕದ್ದಮೆ ದಾಖಲಿಸಬೇಕು ಎಂದು ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಆಗ್ರಹಿಸಿದರು. ಚಾಮರಾಜನಗರದಲ್ಲಿ ಮಾಧ್ಯಮವರೊಟ್ಟಿಗೆ ಮಾತನಾಡಿ, ಸನಾತನ ಧರ್ಮ ಕೊರೊನಾ, ಡೆಂಘಿ ಇದ್ದಂತೆ ಎಂದು ಹೇಳಿಕೆ ಕೊಟ್ಟಿರುವುದು ಖಂಡನೀಯ, ಸನಾತನ ಧರ್ಮ ಎಂದರೆ ನಿನ್ನೆ- ಮೊನ್ನೆ ಹುಟ್ಟಿದ್ದಲ್ಲ, ಉದಯನಿಧಿ ಅಂತಹವರು ಕೋಟಿ ಮಂದಿ ಹುಟ್ಟಿದರೂ ಹಿಂದೂ ಧರ್ಮವನ್ನು ಕಿತ್ತುಹಾಕಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು. ಎಲ್ಲಾ ಧರ್ಮಗಳಿಗೂ ಅದರದೇ …

Read More »

ಕ್ಯಾನ್ಸರ್​ನಿಂದ ಬಳಲುತ್ತಿದ್ದ ಜಿಂಬಾಬ್ವೆ ಕ್ರಿಕೆಟಿಗ ಹೀತ್ ಸ್ಟ್ರೀಕ್ ನಿಧನ

ಬುಲವಾಯೊ: ಜಿಂಬಾಬ್ವೆ ಕ್ರಿಕೆಟ್​​ ಪರ ಟೆಸ್ಟ್​​ನಲ್ಲಿ ಶತಕ ವಿಕೆಟ್​ ಗಳಿಸಿದ ದಿಗ್ಗಜ ಆಲ್​ರೌಂಡರ್​ ಆಟಗಾರ ಹೀತ್ ಸ್ಟ್ರೀಕ್ ನಿಧನರಾಗಿದ್ದಾರೆ. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು 49ನೇ ವಯಸ್ಸಿಗೆ ಇಹಲೋಕವನ್ನು ತ್ಯಜಿಸಿದ್ದಾರೆ. ಹೀತ್ ಸ್ಟ್ರೀಕ್ ಮರಣದ ಸುದ್ದಿಯಲ್ಲಿ ಅವರ ಪತ್ನಿ ನಾಡಿನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡುವ ಮೂಲಕ ತಿಳಿಸಿದ್ದಾರೆ. ಜಿಂಬಾಬ್ವೆಯ ಮಾಜಿ ನಾಯಕನ ಅಗಲಿಕೆಗೆ ಕ್ರಿಕೆಟ್​ ಜಗತ್ತು ಕಂಬನಿ ಮಿಡಿದಿದೆ. ಹೀತ್ ಸ್ಟ್ರೀಕ್ ಪತ್ನಿ ನಾಡಿನ್ ತಮ್ಮ ಫೇಸ್​ ಬುಕ್​ ಖಾತೆಯಲ್ಲಿ “ಸೆಪ್ಟೆಂಬರ್ …

Read More »

ವಿಶ್ವಕರ್ಮ ಜಯಂತಿ ನಿರ್ಲಕ್ಷ್ಯ ಬೇಡ ಅಸಮಾಧಾನ ವ್ಯಕ್ತಪಡಿಸಿದ

ಹುಕ್ಕೇರಿ : ವಿಶ್ವಕರ್ಮ ಮತ್ತು ಅಮರ ಶಿಲ್ಪಿ ಜಕನಾಚಾರಿ ಜಯಂತಿಯನ್ನು ಹುಕ್ಕೇರಿ ತಾಲೂಕಾ ಆಡಳಿತ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಹುಕ್ಕೇರಿ ನಗರದ ವಿಶ್ವಕರ್ಮ ಸಮಾಜದ ಮುಖಂಡರಾದ ರವೀಂದ್ರ ಬಡಿಗೇರ ಮತ್ತು ಕೆ ಬಿ ಬಡಿಗೇರ ಹಾಗೂ ಮೌನೇಶ ಪೊದ್ದಾರ ರವರು ಅಸಮಾಧಾನ ವ್ಯಕ್ತಪಡಿಸಿದರು ಹುಕ್ಕೇರಿ ನಗರದ ತಾಲೂಕಾ ಆಡಳಿತ ಸೌಧದಲ್ಲಿ ಜರುಗಿದ ವಿಶ್ವಕರ್ಮ ಮತ್ತು ಶ್ರೀ ಕೃಷ್ಣ ಜನ್ಮ ದಿನಾಚಾರಣೆ ಕುರಿತು ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಬಡಿಗೇರ ಸಮಾಜ …

Read More »

ಚಂದ್ರನ ಮೇಲ್ಮೈಯನ್ನು ಅನ್ವೇಷಿಸಿದ ನಂತರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈಗ ಸೂರ್ಯನ ಕಡೆಗೆ ಚಲಿಸುತ್ತಿದ್ದು, Aditya L1 ಉಡ್ಡಯನಕ್ಕೆ ಕ್ಷಣಗಣನೆ ಆರಂಭವಾಗಿದೆ.

  ಬೆಂಗಳೂರು: ಚಂದ್ರನ ಮೇಲ್ಮೈಯನ್ನು ಅನ್ವೇಷಿಸಿದ ನಂತರ ಇಸ್ರೋ ತನ್ನ ಪ್ರಯಾಣವನ್ನು ಸೂರ್ಯನ ಕಡೆಗೆ ಚಲಿಸುತ್ತಿದೆ. ಇಂದು ಆಗಸಕ್ಕೆ ಹಾರಲಿರುವ Aditya L1 ಉಪಗ್ರಹ ಭಾಗಮಂಡಲದಲ್ಲಿ ಅಡಗಿರುವ ಹಲವು ರಹಸ್ಯಗಳನ್ನು ಬಿಚ್ಚಿಡಲಿದೆ ಎನ್ನುತ್ತಾರೆ ವಿಜ್ಞಾನಿಗಳು. ಇದು ಸೂರ್ಯನಿಂದ ಹೊರಹೊಮ್ಮುವ ವಿನಾಶಕಾರಿ ಸೌರ ಬಿರುಗಾಳಿಗಳು, ಪ್ಲಾಸ್ಮಾ ಮತ್ತು ಜ್ವಾಲೆಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ರೋಡೇಶಿಯಾದಲ್ಲಿ ಉಪಗ್ರಹಗಳು ಮತ್ತು ಬಾಹ್ಯಾಕಾಶ ನೌಕೆಗಳ ಪರಿಣಾಮಕಾರಿ ರಕ್ಷಣೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಹೇಳಲಾಗುತ್ತದೆ. …

Read More »

ವಕೀಲರೊಂದಿಗೆ ಚರ್ಚಿಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ತೀರ್ಮಾನ’: ಪ್ರಜ್ವಲ್ ರೇವಣ್ಣ

ಹಾಸನ: 2019ರ ಲೋಕಸಭೆ ಚುನಾವಣೆಯ ವೇಳೆ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸುವಾಗ ಪೂರ್ಣ ಪ್ರಮಾಣದಲ್ಲಿ ಆಸ್ತಿ ವಿವರ ಘೋಷಿಸಿಲ್ಲ ಎಂದು ಅರ್ಜಿದಾರರಾದ ಅಂದಿನ ಬಿಜೆಪಿಯ ಪರಾಜಿತ ಅಭ್ಯರ್ಥಿ ಎ. ಮಂಜು ಹಾಗೂ ಇತರರು ಹೈಕೋರ್ಟ್‌​ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಜ್ವಲ್​ ರೇವಣ್ಣ ಅವರು ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪ ಸಾಬೀತಾದ ಹಿನ್ನೆಲೆ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಆದೇಶಿಸಿದೆ. ಈ ಬಗ್ಗೆ ಹಾಸನದಲ್ಲಿ ಪ್ರತಿಕ್ರಿಯೆ …

Read More »

ಪೌರ ಕಾರ್ಮಿಕ ಮನೆಯಲ್ಲೇ ಆತ್ಮಹತ್ಯೆ ಗುತ್ತಿಗೆದಾರನ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರ ಆರೋಪ

ಬೆಳಗಾವಿ : ಪೌರ ಕಾರ್ಮಿಕ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ‌ಯ ಗಣೇಶಪುರದಲ್ಲಿ ಇಂದು ನಡೆದಿದೆ. ಜ್ಯೋತಿ ನಗರದ ನಿವಾಸಿ ಶಶಿಕಾಂತ ಸುಭಾಷ ದವಾಳೆ (26) ಸಾವಿಗೀಡಾದವರು. ಪತ್ನಿ, ನಾಲ್ವರು ಮಕ್ಕಳ ಆಕ್ರಂದನ ಮುಗಿಲುಮುಟ್ಟಿದೆ. “ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಶಶಿಕಾಂತ, ಗುತ್ತಿಗೆದಾರ ಎನ್.ಡಿ.ಪಾಟೀಲ್ ಅವರಿಂದ 80 ಸಾವಿರ ರೂ. ಸಾಲ ಪಡೆದಿದ್ದರು. ಐವತ್ತು ಸಾವಿರ ರೂ. ಸಾಲ ಮರುಪಾವತಿಸಿ 30 ಸಾವಿರ ರೂಪಾಯಿಯನ್ನು ಶೀಘ್ರದಲ್ಲೇ ಹಿಂತಿರುಗಿಸುವುದಾಗಿ …

Read More »

ನಾನು ರಾಜಕಾರಣದಿಂದ ಒಂದು ಹೆಜ್ಜೆ ಹೊರಗಡೆ ಇಟ್ಟಿದ್ದೇನೆ ಎನ್ನುವ ಭಾವನೆ ಯಾರಿಗೂ ಬೇಡ : ನಿಖಿಲ್ ಸ್ಪಷ್ಟನೆ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಪುತ್ರ, ನಟ ನಿಖಿಲ್​ ಕುಮಾರಸ್ವಾಮಿ ಅವರ ರಾಜಕೀಯ ಜೀವನದ ಬಗ್ಗೆ ಚರ್ಚೆ ಏರ್ಪಟ್ಟಿದ್ದು, ಈ ಬಗ್ಗೆ ಖುದ್ದು ಅವರೇ ಟ್ವೀಟ್​ ಮೂಲಕ ಸ್ಪಷ್ಟನೆ ನೀಡಿದ್ದಾರೆ. ”ನಿನ್ನೆಯ ದಿನ ಚರ್ಚೆಗೆ ಗ್ರಾಸವಾದ ವಿಷಯದ ಬಗ್ಗೆ ಸ್ಪಷ್ಟನೆ ನೀಡಲು ಇಚ್ಛಿಸುತ್ತೇನೆ. ಲೋಕಸಭೆ, ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ನಾನು ರಾಜಕಾರಣದಿಂದ ಒಂದು ಹೆಜ್ಜೆ ಹೊರಗಡೆ ಇಟ್ಟಿದ್ದೇನೆ ಎನ್ನುವ ಭಾವನೆ ಯಾರಿಗೂ ಬೇಡ” ಎಂದು ಜೆಡಿಎಸ್​ …

Read More »

ರಾಜಕೀಯ ಸೇಡು ತೀರಿಸಿಕೊಳ್ಳುವ ಹುನ್ನಾರ: ವಿಚಾರಣಾ ಆಯೋಗ ರಚನೆಗೆ ಬೊಮ್ಮಾಯಿ ಕಿಡಿ

ಬೆಂಗಳೂರು : ನಮ್ಮ ಕಾಲದ ಆರೋಪಗಳನ್ನು ತನಿಖೆ ಮಾಡಿ ಎಂದು ಮುಕ್ತವಾಗಿ ಹೇಳಿದ್ದೇವೆ. ಆದರೆ ಅವರ ಕಾಲದ ಆರೋಪಗಳ ಬಗ್ಗೆಯೂ ತನಿಖೆ ಮಾಡಬೇಕು, ಅದಕ್ಯಾಕೆ ಹಿಂದೇಟು ಹಾಕುತ್ತಿದ್ದಾರೆ? ರಾಜಕೀಯವಾಗಿ ಸೇಡು ತೀರಿಸಿಕೊಳ್ಳುವ, ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುವ ಹುನ್ನಾರ ಇದರ ಹಿಂದೆ ಇದೆ ಎಂದು ವಿಚಾರಣಾ ಆಯೋಗ ರಚನೆ ಮಾಡಿದ ಸರ್ಕಾರದ ನಡೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಂದ್ರಯಾನ-3 ಸಕ್ಸಸ್ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳಿಗೆ ನಾಗಸಂದ್ರದ ಖಾಸಗಿ ಅಪಾರ್ಟ್ಮೆಂಟ್ ನಿವಾಸಿಗಳಿಂದ …

Read More »