ಹೊಸದಿಲ್ಲಿ: ವಜಾಗೊಂಡಿರುವ ಎಲ್ಲಾ ಕ್ಯಾಬಿನ್ ಸಿಬಂದಿಯನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ ಮರುನೇಮಕ ಮಾಡಿಕೊಳ್ಳಲು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಒಪ್ಪಿಕೊಂಡಿದೆ. ಗುರುವಾರ ಮಧ್ಯಾಹ್ನ 2 ಗಂಟೆಗೆ ಮುಖ್ಯ ಕಾರ್ಮಿಕ ಆಯುಕ್ತರು ಕರೆದಿದ್ದ ಸಭೆಯಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಆಡಳಿತವು ಪ್ರತಿಭಟನಾ ನಿರತ ಸಿಬಂದಿಯನ್ನು ಭೇಟಿ ಮಾಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಂಗಳವಾರ ರಾತ್ರಿಯಿಂದ ಸೂಚನೆ ನೀಡದೆ ಸಾಮೂಹಿಕ ಅನಾರೋಗ್ಯ ರಜೆಗೆ ತೆರಳಿದ 30 ಕ್ಯಾಬಿನ್ ಸಿಬಂದಿಯ ಸೇವೆಗಳನ್ನು ವಜಾಗೊಳಿಸುವುದಾಗಿ …
Read More »ಶ್ರೀ ಕೃಷ್ಣ ಮಠದಲ್ಲಿ ಸ್ವರ್ಣಾಲಯದ ಶುಭಾರಂಭ
ಉಡುಪಿ: ಶ್ರೀ ಕೃಷ್ಣನ ಸ್ವರ್ಣ ರಥಕ್ಕೆ ಬೇಕಾದ ಚಿನ್ನವನ್ನು ತಮ್ಮ ತಮ್ಮ ಶಕ್ತ್ಯನುಸಾರ ನೀಡಲು ಉತ್ಸುಕರಾದ ಭಕ್ತರಿಗಾಗಿ ಖರೀದಿಸಲು ಬೇಕಾದ ಚಿನ್ನದ ನಾಣ್ಯ ಸಂಗ್ರಹದ ಸ್ವರ್ಣಾಲಯವನ್ನು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಗೌರವ ಉಪಸ್ಥಿತಿಯಲ್ಲಿ ಭಂಡಾರಿಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಗುರುವಾರ ದೀಪ ಬೆಳಗಿಸಿ ಲೋಕಾರ್ಪಣೆ ಗೊಳಿಸಿದರು . ಮೇ 10 ರಂದು(ಶುಕ್ರವಾರ) ಅಕ್ಷಯ ತೃತೀಯದ ಪರ್ವ ದಿನವಾದ ಪ್ರಯುಕ್ತ ಪೂಜ್ಯ ಪರ್ಯಾಯ ಶ್ರೀಪಾದರ ಅಪೇಕ್ಷೆಯಂತೆ, ಭಕ್ತರ …
Read More »ಮತ್ತೆ ಬೆಂಗಳೂರಿನಲ್ಲಿ ಮಳೆ ಶುರು : ರಾಜ್ಯ ರಾಜಧಾನಿ ಕೂಲ್ ಕೂಲ್
ಬೆಂಗಳೂರು : ಇಂದು ಸಂಜೆ ಬಳಿಕ ದಿಢೀರನೆ ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟ ಶುರುವಾಯಿತು. ಅರ್ಧ ಗಂಟೆಗೂ ಹೆಚ್ಚು ಕಾಲ ಜೋರು ಮಳೆ ಸುರಿಯಿತು. ಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರಿನ ಜನತೆ ಎರಡು ದಿನಗಳಿಂದ ಸುರಿಯುತ್ತಿರು ಮಳೆಯಿಂದಾಗಿ ನಿಟ್ಟುಸಿರು ಬಿಟ್ಟಿದ್ದಾರೆ.ಆದರೆ, ದಿಢೀರ್ ಮಳೆಯಿಂದ ಕೆಲವೆಡೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಯಶವಂತಪುರ, ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ವಿಜಯನಗರ, ಬಸವನಗುಡಿ, ಚಾಮರಾಜಪೇಟೆ, ಕಾರ್ಪೊರೇಷನ್, ಟೌನ್ ಹಾಲ್, ಮೈಸೂರು ಬ್ಯಾಂಕ್ ಸರ್ಕಲ್ ಸೇರಿದಂತೆ ಹಲವೆಡೆ ಮಳೆಯಾಗಿದೆ. …
Read More »ಬಿರುಗಾಳಿ ಮಳೆಗೆ ನೆಲಕಚ್ಚಿದ ಬಾಳೆ
IFS ಪರೀಕ್ಷೆಯಲ್ಲಿ ದೇಶಕ್ಕೆ 42 ನೇ ರ‍್ಯಾಂಕ್ ಪಡೆದ ಅಕ್ಕಿಮರಡಿಯ ಪಾಂಡುರಂಗ ಸದಾಶಿವ ಕಂಬಳಿ
ಮಹಾಲಿಂಗಪುರ : ಕಳೆದ ವರ್ಷದ ನವೆಂಬರ್ ನಲ್ಲಿ ಕೇಂದ್ರ ಲೋಕಸೇವಾ ಆಯೋಗವು ನಡೆಸಿದ IFS (ಭಾರತೀಯ ಅರಣ್ಯ ಸೇವೆ) ಪರೀಕ್ಷೆಯಲ್ಲಿ ಸಮೀಪದ ಅಕ್ಕಿಮರಡಿ(ಮುಧೋಳ ತಾಲೂಕು) ಗ್ರಾಮದ ಪ್ರಗತಿಪರ ರೈತರಾದ ಸದಾಶಿವ ಮತ್ತು ಸುರೇಖಾ ಕಂಬಳಿ ದಂಪತಿಗಳ ಸುಪುತ್ರನಾದ ಪಾಂಡುರಂಗ ಸದಾಶಿವ ಕಂಬಳಿ ಅವರು ದೇಶಕ್ಕೆ 42ನೇ ರ‌್ಯಾಂಕ್ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಗ್ರಾಮೀಣ ಭಾಗದ ರೈತನ ಮಗನಾದ ಪಾಂಡುರಂಗ ಅವರು 1 ರಿಂದ 5ನೇ ತರಗತಿ ಶಿಕ್ಷಣವನ್ನು ಸೈದಾಪೂರ …
Read More »ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಯುವಕನ ಹತ್ಯೆ
ಮುಂಡರಗಿ: ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಹೊರವಲಯದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಯುವಕನೋರ್ವನ ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆಯು ಗುರುವಾರ ನಡೆದಿದೆ. ಹತ್ಯೆಯಾಗಿರುವ ಯುವಕ ಸುಭಾಸ ನಾಯಕನು ಕೊಪ್ಪಳ ಜಿಲ್ಲೆಯ ಹ್ಯೆದರ ನಗರ ತಾಂಡಾದ ನಿವಾಸಿ ಆಗಿದ್ದು. ಬುಧವಾರ ರಾತ್ರಿ ಮುಂಡರಗಿ ಹೊರವಲಯದ ಹೌಸೀಂಗ್ ಬೋರ್ಡ್ ನ ಕಾಲೋನಿಯ ಬಯಲಿನಲ್ಲಿ ಇಬ್ಬರು ಗೆಳೆಯರ ಜೊತೆಗೆ ಕೂಡಿಕೊಂಡು ಪಾರ್ಟಿ ಮಾಡಿದ್ದಾನೆ. ಆದರೆ ಅದೆ ಬಯಲಿನಲ್ಲಿ ತಡರಾತ್ರಿ ಸುಭಾಸ ನಾಯಕನನ್ನು …
Read More »ಬೆಳಗಾವಿಯಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ
ಬೆಳಗಾವಿ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಹಿಂದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಎಂದು ಆರೋಪಿಸಿ ಗುರುವಾರ ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಪ್ರಕರಣದಲ್ಲಿ ಡಿ ಕೆ ಶಿವಕುಮಾರ್ ಅವರು ಖಳನಾಯಕರಾಗಿದ್ದಾರೆ ಎಂದು ಅರೋಪಿಸಿದ ಕಾರ್ಯಕರ್ತರು, ಕೂಡಲೇ ಶಿವಕುಮಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ ಹಾಗೂ ರಣದೀಪಸಿಂಗ್ …
Read More »ಸಲ್ಮಾನ್ ಖಾನ್ ʼಸಿಕಂದರ್ʼಗೆ ರಶ್ಮಿಕಾ ಮಂದಣ್ಣ ನಾಯಕಿ
ಮುಂಬಯಿ: ಕನ್ನಡದ ರಶ್ಮಿಕಾ ಮಂದಣ್ಣ ಅವರಿಗೆ ದಕ್ಷಿಣದ ಸಿನಿಮಾಗಳ ಬಳಿಕ ಬಿಟೌನ್ ನಲ್ಲಿ ಅದೃಷ್ಟ ಖುಲಾಯಿಸಿದೆ. ರಣ್ಬೀರ್ ಕಪೂರ್ ಅವರ ‘ಅನಿಮಲ್’ ಸಿನಿಮಾದಲ್ಲಿ ಕಾಣಿಸಿಕೊಂಡು ಬಿಟೌನ್ ಮಂದಿಯ ಮನಗೆದ್ದ ‘ಕಿರಕ್ ಪಾರ್ಟಿ’ ಬೆಡಗಿ ಈಗ ಬಾಲಿವುಡ್ ನ ಖ್ಯಾತ ನಟನ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿಗಷ್ಟೇ ಎ.ಆರ್ ಮುರುಗದಾಸ್ ಹಾಗೂ ಸಲ್ಮಾನ್ ಖಾನ್ ಅವರ ಸಿನಿಮಾ ಅನೌನ್ಸ್ ಆಗಿತ್ತು. ಇದಕ್ಕೆ ‘ಸಿಕಂದರ್’ ಎನ್ನುವ ಟೈಟಲ್ ಇಡಲಾಗಿದೆ. ಈ ಸಿನಿಮಾವನ್ನು ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣ …
Read More »ನಟಿ ಜ್ಯೋತಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್; ಮೌನ ಮುರಿದ ನಟಿ
ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ಕಿರುತೆರೆ ನಟಿ ಜ್ಯೋತಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಇದನ್ನು ಹಂಚಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಕೆಲ ಖಾತೆಗಳಲ್ಲಿ ನಟಿ ಜ್ಯೋತಿ ರೈ ಅವರದ್ದು ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿದೆ. ʼಎಡಿಟ್ ಬೈ ಅಭಿʼ ಎನ್ನುವ ಎಕ್ಸ್ ಖಾತೆಯಲ್ಲಿ ಜ್ಯೋತಿ ರೈ ಅವರ ಫೋಟೋವೊಂದನ್ನು ಹಂಚಿಕೊಂಡು ಅದರ ಕೆಳಗೆ ಜ್ಯೋತಿ ಅವರ ವಿಡಿಯೋ …
Read More »ಹೆಚ್.ಡಿ.ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ
ಬೆಂಗಳೂರು, ಮೇ 9- ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರಕ್ಕೆ ಮುಂದೂಡಿದೆ. ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಹೆಚ್.ಡಿ.ರೇವಣ್ಣ ಅವರ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರಿದ್ದ ಪೀಠದಲ್ಲಿ ಹೆಚ್.ಡಿ.ರೇವಣ್ಣಪರ ಹಿರಿಯ ವಕೀಲರಾದ ಸಿ.ವಿ.ನಾಗೇಶ್ ಅವರು ಪ್ರಬಲ ವಾದ ಮಂಡಿಸಿದರು.
Read More »