Breaking News

Uncategorized

ಲೋಕಸಭೆಯಲ್ಲಿ ‘ಕಾಂಗ್ರೆಸ್’ಗೆ ವೋಟ್ ಹಾಕಿಲ್ಲ: ‘ಗ್ಯಾರಂಟಿ ಯೋಜನೆ’ ನಿಲ್ಲಿಸಿ: ಕಾಂಗ್ರೆಸ್ ನಾಯಕ ಎಂ.ಲಕ್ಷ್ಮಣ್ ಆಗ್ರಹ

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಜನರಿಗೆ ಇಷ್ಟವಾಗಿಲ್ಲ. ಅದರ ವಿರುದ್ಧ ಮಾತನಾಡುತ್ತಿರೋ ಬಿಜೆಪಿಗರಿಗೆ ಜನರು ಮತ ಹಾಕಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ನಿಲ್ಲಿಸೋದು ಒಳ್ಳೇದು. ಸಿಎಂ ಸಿದ್ಧರಾಮಯ್ಯ ಈ ಬಗ್ಗೆ ಮರು ಪರಿಶೀಲನೆ ಮಾಡಬೇಕು ಅಂತ ಕಾಂಗ್ರೆಸ್ ನಾಯಕ ಎಂ.ಲಕ್ಷ್ಮಣ್ ಹೇಳಿದ್ದಾರೆ.   ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ರಾಜ್ಯ ಸರ್ಕಾರ ಗ್ಯಾರಂಟಿ ನಿಲ್ಲಿಸುವುದು ಒಳ್ಳೇದು, ಜನರಿಗೆ ಕಾಂಗ್ರೆಸ್ ಗ್ಯಾರಂಟಿಗಳು …

Read More »

ಮಳೆಯಿಂದ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು:

ವಿಜಯಪುರ, ಜೂನ್‌ 08: ರಾಜ್ಯದಲ್ಲಿ ಮುಂಗಾರು ಆರಂಭಕ್ಕೂ ಮೊದಲೇ ಉತ್ತಮ ಮಳೆಯಾಗುತ್ತಿದ್ದು, ನದಿ ಹಳ್ಳ ಕೊಳ್ಳಗಳ ನೀರಿನ ಮಟ್ಟ ಹೆಚ್ಚಾಗುತ್ತಿದೆ. ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಅದರಂತೆ ಕೃಷ್ಣಾನದಿ ಉಗಮಸ್ಥಾನ ಮಹಾಬಲೇಶ್ವರದಲ್ಲೂ ಭಾರೀ ಮಳೆಯಾಗಿದ್ದು, ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಇದರಿಂದಾಗಿ ರೈತರು ಸಂತಸಗೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಹಲವೆಡೆ ಶುಕ್ರವಾರ ತಡರಾತ್ರಿ ಧಾರಾಕಾರ ಮಳೆ ಸುರಿದಿದೆ. ಇದರಿಂದ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ …

Read More »

ಸಂಸದೆ ‘ಕಂಗನಾ ರಣಾವತ್’ ಕೆನ್ನೆ ಮೇಲೆ ಕಪಾಳಮೋಕ್ಷದ ಗುರುತು? ಇಲ್ಲಿದೆ ವೈರಲ್ ಫೋಟೋದ ಅಸಲಿಯತ್ತು..!

ನವದೆಹಲಿ: ನೂತನವಾಗಿ ಆಯ್ಕೆಯಾದ ಸಂಸದೆ ಮತ್ತು ನಟಿ ಕಂಗನಾ ರನೌತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಕಾನ್ಸ್ಟೇಬಲ್ ಕಪಾಳಮೋಕ್ಷ ಮಾಡಿದ ಘಟನೆ ಗುರುವಾರ ನಡೆದಿದೆ. ಈ ಘಟನೆ ಬಳಿಕ ಕಂಗನಾ ರನೌತ್ ಫೋಟೋವೊಂದು ಭಾರಿ ವೈರಲ್ ಆಗಿದೆ. ಕಂಗನಾ ರನೌತ್ ಮೇಲೆ ಕೆನ್ನೆ ಮೇಲೆ ಮಾರ್ಕ್ ಇದ್ದು, ಕಪಾಳ ಮೋಕ್ಷ ಮಾಡಿದ್ದರಿಂದ ಕೆನ್ನೆ ಮೇಲೆ ಗುರುತು ಮೂಡಿದೆ ಎಂದು ಹೇಳಲಾಗಿದ್ದು, ಫೋಟೋ ವೈರಲ್ …

Read More »

ಹೊಳೆನರಸೀಪುರದ ಪ್ರಜ್ವಲ್ ನಿವಾಸದಲ್ಲಿ ಎಸ್‍ಐಟಿಯಿಂದ ಸ್ಥಳ ಮಹಜರು

ಹಾಸನ: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನಕ್ಕೊಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ಎಸ್‍ಐಟಿ (SIT) ಅಧಿಕಾರಿಗಳು ಅವರ ಹೊಳೆನರಸೀಪುರದ (Holenarasipur) ಚೆನ್ನಾಂಬಿಕಾ ನಿವಾಸಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ. ಈ ಮೂಲಕ 43 ದಿನಗಳ ಬಳಿಕ ಹೊಳೆನರಸೀಪುರಕ್ಕೆ ಪ್ರಜ್ವಲ್ ಆಗಮನವಾಗಿದೆ.. ಡಿವೈಎಸ್‍ಪಿ ಸತ್ಯನಾರಾಯಣ ನೇತೃತ್ವದಲ್ಲಿ ಕ್ಯೂಆರ್‌ಟಿ ವಾಹನದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಮಾಧ್ಯಮಗಳ ಕ್ಯಾಮೆರಾಗಳಿಗೆ ಕಾಣದಂತೆ ಅವರ ನಿವಾಸಕ್ಕೆ ಕರೆದೊಯ್ಯಲಾಯಿತು. ಎಸ್‍ಐಟಿ ಅಧಿಕಾರಿಗಳೊಂದಿಗೆ …

Read More »

ನಿತೀಶ್​​​ಗೆ ಇಂಡಿಯಾ ಬಣದಿಂದ ಬಂದಿತ್ತು ಪ್ರಧಾನಿ ಆಫರ್

ಬಿಹಾರ ಮುಖ್ಯಮಂತ್ರಿ ಮತ್ತು ಜನತಾ ದಳ (ಯುನೈಟೆಡ್) ಮುಖ್ಯಸ್ಥ ನಿತೀಶ್ ಕುಮಾರ್ (Nitish Kumar) ಅವರು ಇದೀಗ ಡಿಮ್ಯಾಂಡ್​​​ ಮ್ಯಾನ್​​​​, ಇವರು ಇಂಡಿಯಾಕ್ಕೂ ಬೇಕು ಎನ್​ಡಿಎಗೂ ಬೇಕು, ಆದರೆ ನಿತೀಶ್ ಕುಮಾರ್ ಮಾತ್ರ ಎನ್​​ಡಿಎಗೆ ತಮ್ಮ ಬೆಂಬಲ ನೀಡಿದ್ದಾರೆ. ಪ್ರಧಾನಿ ಮೋದಿ ಆಡಳಿತವನ್ನು ಮೆಚ್ಚಿಕೊಂಡು, ಜತೆಯಾಗಿ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ಎನ್​​ಡಿಎ ಸೇರಿಕೊಂಡಿದ್ದಾರೆ, ಆದರೆ ಇತ್ತ ಇಂಡಿಯಾ ಒಕ್ಕೂಟ ಅವರಿಗೆ ಪ್ರಧಾನಿ ಸ್ಥಾನ ನೀಡುತ್ತೇವೆ ಎಂದು ಹೇಳಿದ್ದಾರೆ ಎಂಬ ಸತ್ಯ ಈಗ …

Read More »

ಡಿಕೆ ಸುರೇಶ್ ಸೋಲಿಗೆ ಸಿದ್ದರಾಮಯ್ಯ ಆ್ಯಂಡ್​ ಟೀಮ್ ಕಾರಣ: ಶಾಸಕ ಸುರೇಶ್ ಗೌಡ ಸ್ಫೋಟಕ ಹೇಳಿಕೆ

ತುಮಕೂರು, ಜೂನ್​ 08: ಡಿ.ಕೆ.ಸುರೇಶ್ (DK Suresh) ಸೋಲಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಆ್ಯಂಡ್​ ಟೀಮ್ ಕಾರಣ ಎಂದು ಬಿಜೆಪಿ ಶಾಸಕ ಸುರೇಶ್ ಗೌಡ ಸ್ಫೋಟಕ ಹೇಳಿಕೆ ನಿಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗಿ ಮಾತನಾಡಿದ ಅವರು, ಜಾರಕಿಹೊಳಿ, ಪರಮೇಶ್ವರ್, ರಾಜಣ್ಣ, ಸಿದ್ದರಾಮಯ್ಯ ಇವರೆಲ್ಲರೂ ಡಿ.ಕೆ.ಸುರೇಶ್​ರನ್ನು ಸೋಲಿಸ್ತಾರೆಂದು ಒಂದು ತಿಂಗಳ ಹಿಂದೆಯೇ ಹೇಳಿದ್ದೆ, ಈಗ ಅದು ರಿಪೀಟ್ ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯಬೇಕು ಅಂತಾ ಒಂದು ಅಹಿಂದ ಟೀಮ್ ಯಾವಾಗಲೂ ಸಹ ಕೆಲಸ …

Read More »

ಅಂಜಲಿ ಹತ್ಯೆ ಪ್ರಕರಣ ನೇಹಾ ತಂದೆ ಆಪ್ತ ಸಹಾಯಕನ ಕೈವಾಡ ಆರೋಪ

ಹುಬ್ಬಳ್ಳಿ, ಜೂ.08: ಮೇ.15 ರಂದು ಮನೆಗೆ ನುಗ್ಗಿ ಅಂಜಲಿ ಹತ್ಯೆ ಪ್ರಕರಣ (Anjali Ambigera Murder Case)ಕ್ಕೆ ಸಂಬಂಧಿಸಿದಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು,  ಅಂಜಲಿ ಕೊಲೆಯಲ್ಲಿ ವಿಜಯ್ ಅಲಿಯಾಸ್ ಈರಣ್ಣನ‌ ಪಾತ್ರ ಇದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನಲೆ ನೇಹಾ ತಂದೆ ನಿರಂಜನ ಹಿರೇಮಠ ಅವರ ಆಪ್ತ ಸಹಾಯಕನಾಗಿರುವ ವಿಜಯ್ ಮೇಲೆ ಅಂಜಲಿ ಸಹೋದರಿಯ ಪತಿಯಾದ ಶಿವಕುಮಾರ್ ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯ ಬಸವನಗರದಲ್ಲಿ ಹಲ್ಲೆಗೆ ಯತ್ನಿಸಿದ್ದ. ಈ ಕುರಿತು …

Read More »

ಬೆಂಗಳೂರಿನ ತಮ್ಮ ಕಚೇರಿಯಲ್ಲೂಸವದಿ ವಿರುದ್ಧ ಮತ್ತೇ ಹರಿಹಾಯ್ದ ಸತೀಶ್ ಜಾರಕಿಹೊಳಿ

ಬೆಳಗಾವಿ: . ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವಿಧಾನಸಭಾ ಸೆಗ್ಮೆಂಟ್ ಗಳಾಗಿರುವ ಅಥಣಿ ಮತ್ತು ಕುಡಚಿಯಲ್ಲಿ ಅವರ ಮಗಳು ಮತ್ತು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಚಾರಕಿಹೊಳಿಗೆ (Priyanka Jarkiholi) ಲೀಡ್ ಸಿಕ್ಕಿಲ್ಲ ಅನ್ನೋದು. ನಿನ್ನೆ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಎರಡೆರಡು ಬಾರಿ ಅಥಣಿ ಶಾಸಕ ಲಕ್ಷ್ಮಣ    ಸವದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇವತ್ತು ಬೆಂಗಳೂರಿನ ತಮ್ಮ ಕಚೇರಿಯಲ್ಲೂ ಅವರು ಮತ್ತೊಮ್ಮೆ ಅದೇ ವಿಷಯದ ಬಗ್ಗೆ ಮಾತಾಡಿ ಅಸಮಾಧಾನವನನ್ನು ಹೊರಹಾಕಿದರು. ವಿಧಾನಸಭಾ …

Read More »

ಬಸ್​​ನಲ್ಲಿ ಯುವತಿ ಜೊತೆಗೆ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಧರ್ಮದೇಟು

ಮಂಗಳೂರು, ಜೂನ್​ 08: ಬಸ್ಸಿನಲ್ಲಿ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಯುವತಿಯ (Girl) ಸಂಬಂಧಿಕರು ಧರ್ಮದೇಟು ನೀಡಿರುವ ಘಟನೆ ಮಂಗಳೂರಿನ (Mangaluru) ಬಲ್ಲಾಳ್‌ ಬಾಗ್ ಎಂಬಲ್ಲಿ ನಡೆದಿದೆ. ಪಾಂಡೇಶ್ವರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಯುವತಿ ಮಂಗಳೂರು ನಗರದ ನಾಗೂರಿಯಲ್ಲಿರುವ ಎಸ್​ಕೆ ಗ್ರೂಪ್ ಆಫ್ ಕಂಪನಿಯಲ್ಲಿ ಪ್ರೊಡಕ್ಟ್​ಗಳನ್ನು ಸೇಲ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಯುವತಿ ಶುಕ್ರವಾರ (ಜೂ.07) ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ನಾಗೂರಿಯಲ್ಲಿರುವ ಕಚೇರಿಗೆ ಹೋಗಿ ಪ್ರೊಡಕ್ಟ್​ಗಳನ್ನು ತೆಗೆದುಕೊಂಡಿದ್ದಾಳೆ. ಬಳಿಕ …

Read More »

ನದಿ ಪಕ್ಕದಲ್ಲೇ ಇದ್ದರೂ ಕುಡಿಯಲು ನೀರಿಲ್ಲ

ಮೈಸೂರು,ಜೂ. 8- ಕಪಿಲಾ ನದಿ ದಂಡೆ ಕೂಗಳತೆ ದೂರದಲ್ಲಿದ್ದರೂ ಸಹ ಸ್ಥಳೀಯರಿಗೆ ನೀರಿನ ಸಮಸ್ಯೆ ತಪ್ಪಿಲ್ಲ. ಬಿಂದಿಗೆ ಹಿಡಿದು ನೀರಿಗಾಗಿ ಅಲೆದಾಡುವಂತಾಗಿದೆ.ಪ್ರತಿದಿನ ಬಿಂದಿಗೆ ಹಿಡಿದು ನೀರಿಗಾಗಿ ಅಲೆದಾಡುವ ಗೋಳೂರು ಗ್ರಾಮಸ್ಥರ ಪರಿಪಾಟಲಿಗೆ ಸ್ಪಂದಿಸುವವರೇ ಇಲ್ಲದಂತಾಗಿದೆ. ಸುಮಾರು ಮೂರು ಸಾವಿರ ಕುಟುಂಬಗಳಿರುವ ಈ ಗ್ರಾಮ ನಿರ್ಲಕ್ಷಕ್ಕೆ ಒಳಗಾಗಿ ನೀರಿನ ಅಭಾವ ಇಲ್ಲಿನ ಜನಗಳಿಗೆ ನಿರಂತರವಾಗಿ ಕಾಡುತ್ತಿದೆ.ನೀರಿಗಾಗಿ ಪರದಾಡುತ್ತಿರುವ ಗ್ರಾಮಸ್ಥರ ಸಂಯಮ ಮೀರಿದೆ. ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿ ಗಳ ವಿರುದ್ಧ ಆಕೋಶ …

Read More »