Breaking News

Uncategorized

ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಸೇರಿ ಮೂವರ ವಿರುದ್ಧ ಕೇಸ್

ಹುಬ್ಬಳ್ಳಿ, ಜೂನ್ 10: ಬೆದರಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಿಜೆಪಿ ವಿಧಾನ ಪರಿಷತ್ ಉಪನಾಯಕ ಅರವಿಂದ್ ಬೆಲ್ಲದ್ ಅವರು ಸೇರಿದಂತೆ ಮೂವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೌದು, ಬಿಜೆಪಿ ಶಾಸಕರು ಸೇರಿದಂತೆ ಮೂವರ ವಿರುದ್ಧ ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಮೂಲಗಳ ಪ್ರಕಾರ ಜೀವ ಬೆದರಿಕೆ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಶಾಸಕ ಅರವಿಂದ್ ಬೆಲ್ಲದ್, …

Read More »

ಮೋದಿ ಪ್ರಮಾಣವಚನದ ಬೆನ್ನಲ್ಲೇ ಬಿಜೆಪಿ ನಾಯಕನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ

ನವದೆಹಲಿ: ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಬಿಜೆಪಿ ನಾಯಕ ಅಮಿತ್‌ ಮಾಳವೀಯ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಪತ್ರಿಕಾಗೋಷ್ಠಿ ನಡೆಸಿರುವ ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರೀನೆತ್, ‘ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್‌ ಮಾಳವೀಯ ನೀಚ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಪಂಚತಾರಾ ಹೋಟೆಲ್‌ಗಳಲ್ಲಿ ಮಾತ್ರವಲ್ಲ, ಪಶ್ಚಿಮ ಬಂಗಾಳದ ಬಿಜೆಪಿ ಕಚೇರಿಯಲ್ಲಿಯೂ ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಬಿಜೆಪಿ ನಾಯಕ ರಾಹುಲ್‌ …

Read More »

ಆಪ್ತ ಸಹಾಯಕನಿಂದಲೇ ಅನ್ನದಾನೇಶ್ವರ ಮಠದ ಸ್ವಾಮೀಜಿಯ ಬರ್ಬರ ಹತ್ಯೆ

ಮೈಸೂರು, ಜೂ.10- ಆಪ್ತ ಸಹಾಯಕನೇ ಅನ್ನದಾನೇಶ್ವರ ಮಠದ ಸ್ವಾಮೀಜಿಯವರನ್ನು ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ನಜರ್‌ಬಾದ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಶಿವಾನಂದ ಸ್ವಾಮೀಜಿ(90) ಕೊಲೆಯಾದ ಹಿರಿಯ ಶ್ರೀಗಳು. ಕಳೆದ ಹಲವಾರು ವರ್ಷಗಳಿಂದ ರವಿ ಎಂಬಾತ ಸ್ವಾಮೀಜಿಯವರ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದು, ಶ್ರೀಗಳ ಕೆಲಸ ಕಾರ್ಯಗಳಿಗೆ ನೆರವಾಗಿದ್ದ ಸಿದ್ದಾರ್ಥ ನಗರದಲ್ಲಿರುವ ಮಠದಲ್ಲೇ ನೆಲೆಸಿದ್ದು, ಶ್ರೀಗಳ ಯೋಗಕ್ಷೇಮ, ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದ. ಆದರೆ ಇದ್ದಕ್ಕಿದ್ದಂತೆ ಶ್ರೀಗಳನ್ನು ಕೊಲೆ ಮಾಡಿರುವುದು ಸಾಂಸ್ಕೃತಿಕ ನಗರಿಯ ಜನರನ್ನು ಬೆಚ್ಚಿಬೀಳಿಸಿದೆ. …

Read More »

ಕಾಂಗ್ರೆಸ್ ಶಾಸಕರು ಬಾಯಿ ಮುಚ್ಕೊಂಡಿದ್ದರೆ ಒಳ್ಳೆಯದು : ಬಹಿರಂಗವಾಗಿ ವಾರ್ನ್ ಕೊಟ್ಟ ಡಿಸಿಎಂ

ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನಿರೀಕ್ಷಿತ ಸ್ಥಾನಗಳನ್ನು ಪಡೆಯದೆ ಇದದರಿಂದ ಇದೀಗ ಕಾಂಗ್ರೆಸ್ ಹಲವು ಶಾಸಕರು ನಾಲಿಗೆ ಹರಿಬಿಡುತ್ತಿದ್ದಿದ್ದು, ಈ ಕುರಿತಂತೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಶಾಸಕರು ಬಾಯಿ ಮುಚ್ಕೊಂಡಿದ್ದರೆ ಒಳ್ಳೆಯದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ನಾಯಕರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.   ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು 14 ಇಲ್ಲ 15 ಸೀಟ್ ಬರುತ್ತೆ ಅಂತ ನಮಗೆ …

Read More »

ಹೆಬ್ಬಾಳ್ಕರ್ ಕಡೆಗೆ ನೋಡಿ ಸ್ವಾರಿ ಎಂದ ಸಿಎಂ

ಬೆಂಗಳೂರು : ಲೋಕಸಭಾ ಚುನಾವಣಾ ಫಲಿತಾಂಶ ಕಾಂಗ್ರೆಸ್ಸಿನ ಕೆಲ ನಾಯಕರಲ್ಲಿ ಖುಷಿ ತಂದಿದ್ದರೆ ಇನ್ನೂ ಅನೇಕರಲ್ಲಿ ನೋವುಂಟು ಮಾಡಿದೆ. ಈ ಮಧ್ಯೆ ಬೆಳಗಾವಿಯಿಂದ ತಮ್ಮ ಪುತ್ರನನ್ನು ಕಣಕ್ಕೆ ಇಳಿಸಿದ್ದ ಸಚಿವೆ ಹೆಬ್ಬಾಳ್ಕರ್ ಅವರಿಗೆ ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಿರುವ ವೀಡಿಯೋ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೌದು ಚುನಾವಣಾ ಫಲಿತಾಂಶದ ನಂತರ ಬೆಂಗಳೂರಿಗೆ ತೆರಳಿರುವ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಾಯಕರ ತಂಡ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿದೆ. ಈ …

Read More »

ಬಗೆಹರಿಯದ ನೀರಿನ ಸಮಸ್ಯೆ: ಸರ್ಕಾರದ ಮಾತಿಗೆ ಇಲ್ಲಿ ಕವಡೆ ಕಾಸಿನ ಬೆಲೆ ಇಲ್ಲ

ರಾಯಚೂರು: ರಾಜ್ಯದಲ್ಲಿ ಯಾವ ಸರ್ಕಾರ ಬಂದರೇನು?, ಹೋದರೇನು? ಸರ್ಕಾರದ ಮಾತಿಗೆ ಜಿಲ್ಲೆಯಲ್ಲಿ ಕವಡೆ ಕಾಸಿನ ಬೆಲೆ ಇಲ್ಲ. ಜಿಲ್ಲೆಯ ಹಲವೆಡೆ ನೀರಿಗಾಗಿ ಪರಿತಪಿಸುತ್ತ ವರ್ಷ ಕಳೆದರೂ ಜಿಲ್ಲಾಡಳಿತ ಗಂಭೀರವಾಗಿಲ್ಲ. ಚುನಾಯಿತ ಪ್ರತಿನಿಧಿಗಳೂ ತಲೆಕೆಡಿಸಿಕೊಂಡಿಲ್ಲ. ಅಧಿಕಾರಿಗಳು ಯಾರ ಮಾತನ್ನೂ ಕೇಳುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಜನರ ಗೋಳು ಹೆಚ್ಚಿದೆ. ಜಿಲ್ಲಾ ಉಸ್ತುವಾರಿ ಸಚಿವರು ಇದ್ದರೂ ಯಾವ ಲೆಕ್ಕಕ್ಕೂ ಇಲ್ಲ. ಅವರು ಜಿಲ್ಲೆಯ ಜನರ ಸಮಸ್ಯೆಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ರಾಜ್ಯ …

Read More »

ಮೋದಿ ಗೆದ್ದಿರುವುದು 1.5 ಲಕ್ಷ ಮತಗಳ ಅಂತರದಲ್ಲಿ ಮಾತ್ರ: ಸಂತೋಷ್ ಲಾಡ್

ಧಾರವಾಡ: ‘ಮೋದಿ ಅಲೆ ಕೆಲವು ಕಡೆ ಮಾತ್ರ ಇದೆ, ಎಲ್ಲ ಕಡೆ ಇಲ್ಲ. ಮೋದಿ ಅವರು ಗೆದ್ದಿರುವುದೇ 1.5 ಲಕ್ಷ ಮತಗಳ ಅಂತರದಲ್ಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಕುಟುಕಿದರು. ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪ್ರಧಾನಿಗಳು 5 ಲಕ್ಷಕ್ಕೂ ಹೆಚ್ಚು ಅಂತರ ಪಡೆದವರೇ ಹೆಚ್ಚು. ಕಡಿಮೆ ಮತಗಳ ಅಂತರದಲ್ಲಿ ಗೆದ್ದ ಎರಡನೇ ಪ್ರಧಾನಿ ಮೋದಿ. ಚಂದ್ರಶೇಖರ್ ಅವರು 1.5 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದರು ಎಂದರು. …

Read More »

ಹುಕ್ಕೇರಿ: ಬಕ್ರೀದ್ ಶಾಂತಿ ಸಭೆ

ಹುಕ್ಕೇರಿ: ಬಕ್ರೀದ್ ಹಾಗೂ ಅಕಾನಿಬಾಷಾ ಉರುಸ್ ಶಾಂತಿಪಾಲನಾ ಪೂರ್ವಭಾವಿ ಸಭೆ ಪಾಶ್ಚಾಪುರ ಗ್ರಾಮದ ಪೊಲೀಸ್ ಠಾಣೆಯಲ್ಲಿ ಶನಿವಾರ ನಡೆಯಿತು. ಯಮಕನಮರಡಿ ಪಿ.ಐ. ಮಹಾದೇವ ಶಿರಹಟ್ಟಿ, ಎ.ಎಸ್.ಐ. ಎಸ್.ಬಿ. ಮುರಗೋಡ, ಪೊಲೀಸ್ ಸಿಬ್ಬಂದಿ ಗ್ರಾಮಸ್ಥರ ಕುರಿತು ಚರ್ಚಿಸಿ, ಸಲಹೆ, ಸೂಚನೆ ನೀಡಿದರು.   ಪಾಶ್ಚಾಪುರ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಅಬ್ದುಲಗಣಿ ದರ್ಗಾ, ನಜೀರ ಮೊಮೀನ, ರಫೀಕ್ ಪೀರಜಾದೆ, ಅಣ್ಣಾಸಾಹೇಬ ಮಹಾಜನಶೆಟ್ಟಿ, ಅಮರ ಮಹಾಜನಶೆಟ್ಟಿ, ಹಯಾತಚಾಂದ ಸನದಿ, ಮಹೇಶ ಹೂಗಾರ, ಮಹಾಂತೇಶ …

Read More »

ದಾರಿ ಯಾವುದಯ್ಯ ಹೊಲಕ್ಕೆ?

ಬೈಲಹೊಂಗಲ: ಮುಂಗಾರು ಬಂತೆಂದರೆ ರೈತರಿಗೆ ‌ಜಮೀನುಗಳಿಗೆ ಹೇಗೆ ಹೋಗಬೇಕು, ಹೇಗೆ ಬಿತ್ತನೆ ಮಾಡಬೇಕು ಎಂಬುದೇ ಚಿಂತೆಯಾಗುತ್ತದೆ. ಈ ಬಾರಿ ಕೂಡ ಬೈಲಹೊಂಗಲ ಮತಕ್ಷೇತ್ರದ ಮಾಟೊಳ್ಳಿ ಗ್ರಾಮದ ರೈತರು ಹೊಲಕ್ಕೆ ಹೋಗುವ ದಾರಿ ಇಲ್ಲದೇ ಪರದಾಡುವಂತಾಗಿದೆ. ಗ್ರಾಮದ ಅಂಗಡಿ ಅವರ ಹೊಲದಿಂದ ಗುಡಿ ಅವರ ಹೊಲದವರೆಗೆ ಈ ಭಾಗದ ರೈತರ ಹೊಲಗಳಿಗೆ ಹೋಗುವ ರಸ್ತೆ ತೀರ ಹದಗೆಟ್ಟಿದ್ದು, ರೈತರ ಗೋಳು ಕೇಳುವರು ಯಾರು ಎಂಬತಾಗಿದೆ. ಮಳೆ ಆಗಿದ್ದರಿಂದ ಗ್ರಾಮದ ರೈತರ ಜಮೀನುಗಳಿಗೆ ಹೋಗಿ …

Read More »

ವರುಣನ ಅಬ್ಬರ: ಆರಂಭದಲ್ಲೇ ಅವಾಂತರ

ಬೆಳಗಾವಿ: ಮುಂಗಾರು ಚುರುಕುಗೊಂಡಿದೆ. ಕುಡಿಯುವ ನೀರಿನ ಸಮಸ್ಯೆಯಿಂದ ಕಂಗೆಟ್ಟಿದ್ದ ಜನರು ತುಸು ನಿರಾಳವಾಗಿದ್ದಾರೆ. ಆದರೆ, ಮಳೆ ಸೃಷ್ಟಿಸಿದ ಅವಾಂತರಗಳು ನಗರದಲ್ಲಿ ಜನರನ್ನು ಮತ್ತೆ ಸಂಕಷ್ಟಕ್ಕೆ ತಳ್ಳುತ್ತಿವೆ. ಒಂದು ಸಮಸ್ಯೆ ನೀಗಿತು ಎನ್ನುಷ್ಟರಲ್ಲಿ ಮತ್ತೊಂದು ಧುತ್ತೆಂದು ಎದುರಾಗಿದೆ. ಒಂದು ತಾಸು ಧಾರಾಕಾರ ಮಳೆಯಾದರೆ ಸಾಕು; ವಿವಿಧ ಬಡಾವಣೆಗಳ ಮುಖ್ಯರಸ್ತೆಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ. ಚರಂಡಿಗಳು ತುಂಬಿ ಕೊಳಚೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಮರಗಳು ನೆಲಕ್ಕುರುಳುವುದು, ವಿದ್ಯುತ್‌ ಪರಿಕರಗಳಿಗೆ ಹಾನಿಯಾಗುವುದು, ತಗ್ಗು …

Read More »