ತೀವ್ರ ಕುತೂಹಲ ಕೆರಳಿರುವ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಮಂಗಳಮುಖಿ ಚುನಾವಣೆ ಗೆದ್ದು ದಾಖಲೆ ಬರೆದಿದ್ದಾರೆ. ನವದೆಹಲಿ: ತೀವ್ರ ಕುತೂಹಲ ಕೆರಳಿರುವ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಮಂಗಳಮುಖಿ ಚುನಾವಣೆ ಗೆದ್ದು ದಾಖಲೆ ಬರೆದಿದ್ದಾರೆ. ಹೌದು.. ದೆಹಲಿ ಮಹಾನಗರ ಪಾಲಿಕೆಯ ಸುಲ್ತಾನ್ ಪುರಿ ಮಜ್ರಾ ಎ ವಾರ್ಡ್ ನಿಂದ ಆಪ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬೋಬಿ ಜಯಭೇರಿ ಭಾರಿಸಿದ್ದಾರೆ. …
Read More »ರಾಜ್ಯ ಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಸೇಂಟ್ ಜೋಸೆಫ್ ವಿದ್ಯಾರ್ಥಿಗಳ ಸಾಧನೆ
ರಾಜ್ಯ ಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಸೇಂಟ್ ಜೋಸೆಫ್ ವಿದ್ಯಾರ್ಥಿಗಳಾದ ಸಾನಿಯಾ ಜಹಗೀರದಾರ, ಆಫಿಯಾ ಶೇಖ ರಾಜ್ಯಕ್ಕೆ 2ನೇ ಸ್ಥಾನ ಹೌದು ಧಾರವಾಡದ ಬಾಲ ವಿಕಾಸ ಅಕಾಡೆಮಿ ಮತ್ತು ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ವತಿಯಿಂದ ಗದಗನಲ್ಲಿ ಇತ್ತಿಚೆಗೆ ಏರ್ಪಡಿಸಿದ್ದ “ಚಿನ್ನದ ಚಿತ್ರ ಚಿತ್ತಾರ” ಎಂಬ ರಾಜ್ಯ ಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಧಾರವಾಡದ ಸೇಂಟ್ ಜೋಸೆಫ್ ಹೈಸ್ಕೂಲಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ.ಈ ಸ್ಪರ್ಧೆಯಲ್ಲಿ …
Read More »ಪತ್ನಿ ಮೃತ ದೇಹವನ್ನು ಮೂಟೆಯಲ್ಲಿ ಸಾಗಿಸಿದ ಪತಿ..!
ಶವ ಸಂಸ್ಕಾರ ನೆರವೇರಿಸಲು ಹಣವಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೃತ ದೇಹವನ್ನು ಪ್ಲಾಸ್ಟಿಕ್ ಮೂಟೆಯಲ್ಲಿ ಹಾಕಿಕೊಂಡು ಹೆಗಲ ಮೇಲೆ ಸಾಗಿಸುತ್ತಿದ್ದ ಆಘಾತಕಾರಿ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಘಟನೆಯ ವಿವರ: ರವಿ ಹಾಗೂ ಕಾಳಮ್ಮ ಎಂಬ ದಂಪತಿ ಪ್ಲಾಸ್ಟಿಕ್ ಆಯುವ ಕೆಲಸ ಮಾಡುತ್ತಿದ್ದು, ಯಳಂದೂರು ತಾಲೂಕಿನ ಕಂದಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಪಾಳು ಬಿದ್ದಿರುವ ಮನೆಯಲ್ಲಿ ವಾಸವಾಗಿದ್ದರು. ಇಬ್ಬರೂ ವಿಪರೀತ ಮದ್ಯ ವ್ಯಸನಿಗಳಾಗಿದ್ದು, ಇದರ …
Read More »ಜನಸಂಕಲ್ಪ ಯಾತ್ರೆ | ಇಂದು ಕುಣಿಗಲ್‌ನಲ್ಲಿ ಸಮಾವೇಶ, ಸಿಎಂ ಭಾಗಿ
ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ 156 ಕ್ಷೇತ್ರಗಳಲ್ಲಿ ರಾಜ್ಯ ಬಿಜೆಪಿ ನಡೆಸುತ್ತಿರುವ ಜನಸಂಕಲ್ಪ ಸಮಾವೇಶ ತುಮಕೂರು ಕ್ಷೇತ್ರದಲ್ಲಿ ನಡೆಯಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಇದರಲ್ಲಿ ಭಾಗವಹಿಸಲಿದ್ದಾರೆ. ಬೃಹತ್ ಸಮಾವೇಶದ ಮೂಲಕ ಮತ ಕ್ರೋಡೀಕರಣಕ್ಕೆ ಬಿಜೆಪಿ ಪ್ಲಾನ್ ಮಾಡಿದ್ದು, ಸೋತ ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಲು ಲೆಕ್ಕಾಚಾರ ಹಾಕಿದೆ. ಮಾಜಿ ಸಂಸದ ಮುದ್ದಹನುಮೇಗೌಡ ಬಿಜೆಪಿ ಸೇರ್ಪಡೆ ಬಳಿಕ ಕುಣಿಗಲ್‌ನಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶ ಇದಾಗಿದೆ. ಇಂದು …
Read More »ದೆಹಲಿ-ಬೆಳಗಾವಿ ನೇರ ವಿಮಾನ ಸಂಚಾರ ಸೇವೆ ಡಿ.9ರಿಂದ ಸ್ಥಗಿತಕ್ಕೆ ಜನಾಕ್ರೋಶ; ಹುಬ್ಬಳ್ಳಿ ರಾಜಕಾರಣಿಗಳ ಪ್ರಭಾವ ಎಂದು ಆರೋಪ
ಬೆಳಗಾವಿ: ದೆಹಲಿ-ಬೆಳಗಾವಿ ನೇರ ವಿಮಾನ ಸಂಚಾರ ಸೇವೆಯನ್ನು ಡಿಸೆಂಬರ್ 9ರಿಂದ ಸ್ಥಗಿತಗೊಳಿಸಲು ಕೇಂದ್ರ ವಿಮಾನಯಾನ ಸಚಿವಾಲಯ ನಿರ್ಧಾರ ಮಾಡಿದ್ದು, ಬೆಳಗಾವಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ದೆಹಲಿ ಮತ್ತು ಬೆಳಗಾವಿ ನೇರ ವಿಮಾನಯಾನ ಸೇವೆ 2021ರ ಆಗಸ್ಟ್ನಿಂದ ಪ್ರಾರಂಭವಾಗಿತ್ತು. ಆಗಸ್ಟ್ನಿಂದ 2022ರ ಮಾರ್ಚ್ವರೆಗೆ ವಾರದಲ್ಲಿ ಎರಡು ದಿನ ಮಾತ್ರ ದೆಹಲಿ-ಬೆಳಗಾವಿ ವಿಮಾನ ಸಂಚಾರ ಮಾಡುತ್ತಿತ್ತು. ಮಾರ್ಚ್ ತಿಂಗಳಿಂದ ಪ್ರತಿದಿನವೂ ಸಂಚಾರ ಸೇವೆ ಲಭ್ಯವಿತ್ತು. ಇಲ್ಲಿ ಪ್ರಯಾಣಿಕರೂ ಕೂಡ ಇರುತ್ತಿದ್ದರು. ಹಾಗಿದ್ದಾಗ್ಯೂ …
Read More »ತೀವ್ರಗೊಂಡ ಬೆಳಗಾವಿ ಗಡಿ ವಿವಾದ: ಪೊಲೀಸರ ಎಚ್ಚರಿಕೆ, ಕರ್ನಾಟಕಕ್ಕೆ ಬಸ್ಸು ಸಂಚಾರ ರದ್ದುಗೊಳಿಸಿದ ಮಹಾರಾಷ್ಟ್ರ
ಕರ್ನಾಟಕ-ಮಹಾರಾಷ್ಟ್ರ ವಿವಾದ ತಾರಕಕ್ಕೇರುತ್ತಿದ್ದಂತೆ ಮಹಾರಾಷ್ಟ್ರ ರಾಜ್ಯ ಸಾರಿಗೆ ನಿಗಮ(MSRTC) ಕರ್ನಾಟಕಕ್ಕೆ ಬಸ್ ಸೇವೆಯನ್ನು ರದ್ದುಗೊಳಿಸಿದೆ. ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ವಿವಾದ ತಾರಕಕ್ಕೇರುತ್ತಿದ್ದಂತೆ ಮಹಾರಾಷ್ಟ್ರ ರಾಜ್ಯ ಸಾರಿಗೆ ನಿಗಮ(MSRTC) ಕರ್ನಾಟಕಕ್ಕೆ ಬಸ್ ಸೇವೆಯನ್ನು ರದ್ದುಗೊಳಿಸಿದೆ. ಪ್ರಯಾಣಿಕರು ಮತ್ತು ಬಸ್ಸಿನ ಸುರಕ್ಷತೆ ಮತ್ತು ಭದ್ರತೆಯನ್ನು ನೋಡಿಕೊಂಡು ಪೊಲೀಸರ ಜೊತೆ ಪರಿಶೀಲಿಸಿ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಬೆಳಗಾವಿಯಲ್ಲಿ ಮತ್ತು ಗಡಿಭಾಗದಲ್ಲಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ ತೀವ್ರವಾಗಿರುವುದರಿಂದ ಮಹಾರಾಷ್ಟ್ರದ ಬಸ್ಸುಗಳ …
Read More »ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದ ಫಲ.
*ಮೂಡಲಗಿ*-ಮೂಡಲಗಿ ತಾಲ್ಲೂಕಿನ ಸಾರ್ವಜನಿಕರ ಬಹು ನಿರೀಕ್ಷಿತ ಉಪ ನೋಂದಣಿ ಕಛೇರಿಯಲ್ಲಿ ನೋಂದಣಿ ಕಾರ್ಯವನ್ನು ಆರಂಭಿಸಲಿಕ್ಕೆ ಇಲಾಖೆಯು ಅನುಮತಿ ನೀಡಿದ್ದರ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರು ಇದೇ ಡಿ. 20 ರಂದು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಅರಭಾವಿ ಶಾಸಕ ಮತ್ತು ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು. ಈಗಾಗಲೇ ಹೊಸದಾಗಿ ಆರಂಭಿಸಲಾಗಿರುವ ಉಪ ನೋಂದಣಿ ಕಛೇರಿಯಲ್ಲಿ ಸಂಬಂಧಪಟ್ಟ ಎಲ್ಲ ಕೆಲಸಗಳು ಪೂರ್ಣಗೊಂಡಿವೆ. ಕಾವೇರಿ ತಂತ್ರಾಂಶ …
Read More »ಮಸೀದಿಗೂ ಕನ್ನ ಹಾಕಿದ ಖದೀಮರು: ಅಂದಾಜು 2 ಲಕ್ಷ ರೂ. ಮೌಲ್ಯದ ವಸ್ತುಗಳು ಕಳ್ಳತನ
ಬಳ್ಳಾರಿ, ಡಿ.06:ಹೊಸಪೇಟೆ ರಸ್ತೆಯ ಅಲ್ಲಿಪುರ ಬಸ್ ನಿಲ್ದಾಣ ಸಮೀಪ, ಮಜೀದ್ ಎ ಆಲಿಯಾದಲ್ಲಿ ಕಳ್ಳತನ ಶನಿವಾರ ರಾತ್ರಿ ನಡೆದಿದೆ. ಮಸೀದಿಯಲ್ಲಿದ್ದ ವೆಂಟಿಲೇಟರ್‍ಗಳು, ಗ್ರಿಲ್‍ಗಳು, ಯುಪಿಎಸ್ ಬ್ಯಾಟರಿ, ಕಟ್ಟಡ ನಿರ್ಮಾಣಕ್ಕೆ ಇಡಲಾಗಿದ್ದ ಕಬ್ಬಿಣ, 14 ಕಬ್ಬಿಣದ ಕಿಟಕಿಗಳು, ನೀರಿನ ಸಂಪ್‍ನ ಬಾಗಿಲುಗಳು ಸೇರಿದಂತೆ ಅಂದಾಜು 2 ಲಕ್ಷ ರೂ. ಮಾಲೀಕರು, ನಿರ್ವಹಣೆ ಹೊಂದಿರುವ ಆಲಿಯಾಬೇಗಂ ಅವರು ತಿಳಿಸಿದರು. ಈ ಹಿಂದೆ ಮೂರು ಸಲ ಕಳ್ಳತನ ಆದಾಗಲೂ ಕೂಡ ಗ್ರಾಮೀಣ …
Read More »ವಿದ್ಯಾರ್ಥಿನಿಯ ಕತ್ತು ಕೊಯ್ದು ಕೊಂದ ಬಗ್ನ ಪ್ರೇಮಿ
ಅಮರಾವತಿ, ಡಿ .6- ಬಗ್ನ ಪ್ರೇಮಿಯೊಬ್ಬ ದಂತ ವೈದ್ಯಕೀಯ ವಿದ್ಯಾರ್ಥಿನಿಯ ಕತ್ತು ಕೂಯ್ದು ಕೊಲೆ ಮಾಡಿರುವ ಘಟನೆ ಗುಂಟೂರು ಜಿಲ್ಲೆಯ ತಕ್ಕೆಲ್ಲಪ್ಡು ನಗರದಲ್ಲಿ ಕಳೆದ ರಾತ್ರಿ ನಡೆದಿದೆ. ವಿಜಯವಾಡದಲ್ಲಿ ಕಾಲೇಜಿನಲ್ಲಿ ಬಿಡಿಎಸ್ ಮೂರನೇ ವರ್ಷದ ವಿದ್ಯಾರ್ಥಿನಿ ತಪಸ್ವಿ (20) ಕೊಲೆಯಾದ ಯುವತಿ. ಬಗ್ನ ಪ್ರೇಮಿನ್ನು ಸಾಫ್ಟ್‍ವೇರ್ ಇಂಜಿನಿಯರ್ ಜ್ಞಾನೇಶ್ವರ್ ಎಂದು ಪೊಲೀಸರು ತಿಳಿಸಿದಾರೆ. ಕಳೆದ 2 ವರ್ಷದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಜ್ಞಾನೇಶ್ವರ್ ಮತ್ತು ತಪಸ್ವಿ ಸಂಪರ್ಕಕ್ಕೆ …
Read More »ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವರ ಮಹತ್ವದ ಸಭೆ
ಬೆಂಗಳೂರು, ಡಿ.6- ಬೆಳಗಾವಿಯ ಚಳಿಗಾಲದ ಅವೇಶನ, ಇತ್ತೀಚೆಗೆ ನಡೆದ ಭಯೋತ್ಪದನೆ ಘಟನೆ, ಗಡಿ ಬಿಕ್ಕಟ್ಟು, ರಾಜ್ಯದ ಸಾಮಾನ್ಯ ಕಾನೂನು ಸುವ್ಯವಸ್ಥೆ ಕುರಿತಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಗೃಹ ಸಚಿವರು ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲï, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಎಡಿಜಿಪಿ ಅಧಿಕಾರಿಗಳಾದ ಅಲೋಕ್ ಕುಮಾರ್, ದಯಾನಂದ, …
Read More »