ಬೆಂಗಳೂರು: ಲೋಕಸಭೆ ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿರುವ ನಡುವೆಯೇ, ಬಿಜೆಪಿ ಗುರುವಾರ 100 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಪಟ್ಟಿಯಲ್ಲಿ ಪಕ್ಷದ ಪ್ರಭಾವಿ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿ ಈ ಮೂವರು ಕಾಣಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಚುನಾವಣೆಗೆ ಸಂಬಂಧಿಸಿದಂತೆ ಹಲವು ರಾಜ್ಯಗಳ ಬಿಜೆಪಿ ನಾಯಕರ ಜೊತೆ ವರಿಷ್ಠರು ಬುಧವಾರ ರಾತ್ರಿ …
Read More »ಉತ್ತರ ಕನ್ನಡ: ಜಿಲ್ಲೆಯಲ್ಲಿ ಮಂಗನ ಕಾಯಿಲೆ(Monkey Disease) ಹಾವಳಿ ಹೆಚ್ಚಾಗಿದೆ
ಉತ್ತರ ಕನ್ನಡ: ಜಿಲ್ಲೆಯಲ್ಲಿ ಮಂಗನ ಕಾಯಿಲೆ(Monkey Disease) ಹಾವಳಿ ಹೆಚ್ಚಾಗಿದೆ. ಅದು ಅಲ್ಲದೆ ಇಷ್ಟು ದಿನ ಕೇವಲ ಸಿದ್ದಾಪುರಕ್ಕೆ ಮಾತ್ರ ಸೀಮಿತವಾಗಿದ್ದಮಂಗನ ಕಾಯಿಲೆ, ಇದೀಗ ಅಂಕೋಲಾ(Ankola) ತಾಲೂಕಿಗೆ ವ್ಯಾಪಿಸಿದೆ. ತಾಲೂಕಿನ ಮಾವಿನಕೇರಿ ಗ್ರಾಮದ ವ್ಯಕ್ತಿಯಲ್ಲಿ ಕಾಯಿಲೆ ಕಂಡು ಬಂದಿದೆ. ಕಾಡಿನಂಚಿನಲ್ಲಿರುವ ಜಮೀನಿನಲ್ಲಿ ಕೃಷಿ ಕೆಲಸ ಮಾಡಿಕೊಂಡಿರುವ ವ್ಯಕ್ತಿಗೆ ಎಲ್ಲೋ ಕಾಡಿನಲ್ಲಿ ಮಂಗ ಸಾವನಪ್ಪಿರುವ ಹಿನ್ನೆಲೆ ಈ ಕಾಯಿಲೆ ಕಂಡು ಬಂದಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕ …
Read More »ಗುತ್ತಿಗೆ ಪಟ್ಟಿಯಿಂದ ಶ್ರೇಯಸ್-ಇಶಾನ್ಗೆ ಕೊಕ್; ಬಿಸಿಸಿಐ ನಿರ್ಧಾರದ ಕುರಿತು ಕ್ರಿಕೆಟ್ ದಿಗ್ಗಜ ಹೇಳಿದ್ದಿಷ್ಟು
ನವದೆಹಲಿ: ಇತ್ತೀಚಿಗೆ ಬಿಸಿಸಿಐ ಬಿಡುಗಡೆ ಮಾಡಿದ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಹಲವು ಆಟಗಾರರಿಗೆ ಕೊಕ್ ನೀಡುವ ಮೂಲಕ ಬಿಸಿಸಿಐ ಶಾಕ್ ನೀಡಿತ್ತು. ಮುಖ್ಯವಾಗಿ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ಗೆ ಕೊಕ್ ನೀಡುವ ಮುಲಕ ಶಾಕ್ ನೀಡಿದ್ದ ಬಿಸಿಸಿಐ ಮುಮಬರುವ ಟಿ-20 ವಿಶ್ವಕಪ್ಗೂ ಈ ಇಬ್ಬರು ಆಟಗಾರರನ್ನು ಪರುಗಣನೆಗೆ ತೆಗೆದುಕೊಳ್ಳುವುದು ಅನುಮಾನ ಎಂದು ಹೇಳಲಾಗಿದೆ.
Read More »ಮಹಿಳಾ ಐಪಿಎಲ್ ಶುರು ಬೆನ್ನಲ್ಲೇ ಬುಕ್ಕಿಗಳ ಮೇಲೆ ರೌಡಿಗಳ ಕಣ್ಣು
ಬೆಂಗಳೂರು, ಫೆಬ್ರವರಿ 29: ಮಹಿಳಾ ಐಪಿಎಲ್ ಶುರು ಬೆನ್ನಲ್ಲೆ ರೌಡಿಗಳ(rowdy sheeter)ಕಣ್ಣು ಬುಕ್ಕಿಗಳ ಮೇಲೆ ಬಿದ್ದಂತಿದೆ. ಬುಕ್ಕಿ ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ ರೌಡಿಶೀಟರ್ನನ್ನು ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಇಟ್ಟಮಡು ಸಾಗರ್ ಅಂಡ್ ಗ್ಯಾಂಗ್ ಬಂಧಿತರು. ಸಿಸಿಬಿ ಪೊಲೀಸರಿಂದ ಐವರನ್ನು ವಶಕ್ಕೆ ಪಡೆಯಲಾಗಿದ್ದು, ಕಿಡ್ನ್ಯಾಪ್ ಆಗಿದ್ದ ವ್ಯಕ್ತಿಯ ರಕ್ಷಣೆ ಮಾಡಲಾಗಿದೆ. ಕ್ರಿಕೆಟ್ ಬುಕ್ಕಿಯಾಗಿದ್ದ ಸಂತೋಷ್ ಎಂಬಾತನನ್ನು ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದರು. ಮಹಿಳಾ ಐಪಿಎಲ್ ನಲ್ಲಿ ಸಂತೋಷ್ಗೆ ಸಾಕಷ್ಟು ಹಣ ಬಂದಿತ್ತು. ಈ …
Read More »ಮುಖ ಜಜ್ಜಿ ಅಪರಿಚಿತ ಮಹಿಳೆಯ ಕೊಲೆ
ಬೆಂಗಳೂರು, : ಅಪರಿಚಿತ ಮಹಿಳೆಯ ಮುಖ ಜಜ್ಜಿ ಕೊಲೆಗೈದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ವಡ್ಡರಹಳ್ಳಿ (Vaddarahalli) ಗ್ರಾಮದ ಬಳಿ ನಡೆದಿದೆ. ನರಸಿಂಹಮೂರ್ತಿ ಎಂಬುವರ ಜಮೀನಿನಲ್ಲಿ ಅಂದಾಜು 35 ವರ್ಷದ ಮಹಿಳೆಯನ್ನ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆನೆಲಮಂಗಲಎಎಸ್‌ಪಿ ಪುರುಷೋತ್ತಮ್ ಹಾಗೂ ಡಿವೈಎಸ್‌ಪಿ ಜಗದೀಶ್ ಭೇಟಿ ನೀಡಿ, ಸೋಕೋ ಟೀಮ್ ಹಾಗೂ ಡಾಗ್ ಸ್ಕೋರ್ಡ್ ತಂಡದಿಂದ ಪರಿಶೀಲನೆ ನಡೆಸಲಾಗುತ್ತಿದೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸುಟ್ಟ ಸ್ಥಿತಿಯಲ್ಲಿ …
Read More »ಜಾತಿಗಣತಿ ವರದಿ ಸ್ವೀಕಾರ: ಈ ಬಗ್ಗೆ ತುಮಕೂರು ಸಿದ್ಧಗಂಗಾಶ್ರೀ ಹೇಳಿದ್ದಿಷ್ಟು
ತುಮಕೂರು, ಫೆಬ್ರವರಿ 29: ಜಾತಿಗಣತಿ ವರದಿ ಸಲ್ಲಿಕೆಗೆ ತೀವ್ರ ವಿರೋಧವ್ಯಕ್ತವಾಗಿತ್ತು. ಅವೈಜ್ಞಾನಿಕ ವರದಿ ಎಂದು ಒಕ್ಕಲಿಗ, ವೀರಶೈವಲಿಂಗಾತ ಸಮುದಾಯ ವಿರೋಧ ಮಾಡಿತ್ತು. ಇದೀಗ ವಿರೋಧದ ನಡುವೆಯೇ ಜಾತಿಗಣತಿ ವರದಿ ಸಿಎಂ ಸಿದ್ದರಾಮಯ್ಯ ಕೈಸೇರಿದೆ. ಸದ್ಯ ಈ ವಿಚಾರವಾಗಿ ತುಮಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ(Siddaganga Shree)ಪ್ರತಿಕ್ರಿಯೆ ನೀಡಿದ್ದು, ಈ ವಿಚಾರದಲ್ಲಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಗೊತ್ತಿಲ್ಲ. ಇದಕ್ಕೆ ಯಾರೂ ವಿರೋಧ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಜಾತಿ ಆಧಾರದ ಮೇಲೆ ಸವಲತ್ತುಗಳನ್ನು …
Read More »ಕನ್ನಡ ನಾಮಫಲಕ: ಗಡುವು ವಿಸ್ತರಿಸಿದ್ದಕ್ಕೆ ಕರವೇ ನಾರಾಯಣಗೌಡ ಗರಂ
ಬೆಂಗಳೂರು, (ಫೆಬ್ರವರಿ 29): ಕರ್ನಾಟಕದ (Karnataka) ಎಲ್ಲಾ ಅಂಗಡಿ ಮಳಿಗೆಗಳ ಬೋರ್ಡ್ಗಳಲ್ಲಿ (Kannada Board) ಶೇ.60 ರಷ್ಟು ಕನ್ನಡ ಅಳವಡಿಕೆಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ. ಇದರಿಂದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ (karave Narayana Gowda) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ (BBMP) ಆಯುಕ್ತರ ಜತೆ ನಿನ್ನೆ(ಫೆಬ್ರವರಿ 28) ಮಾತನಾಡಿದಾಗ ಮಧ್ಯರಾತ್ರಿ ತನಕ ಗಡುವು ಅಂದಿದ್ದರು. ಅಲ್ಲದೇ ನಿಯಮ ಉಲ್ಲಂಘಿಸಿದರೆ. ಮುಲಾಜಿಲ್ಲದೇ ಕ್ರಮ ಕೈಗೊಳ್ಳುವ ಕುರಿತು ಬಿಬಿಎಂಪಿ ಕಮೀಷನರ್ ತಿಳಿಸಿದ್ದರು. …
Read More »ಮತ್ತೆ ಮುನ್ನಲೆಗೆ ಬಂದ ಗದಗಿನ ಶಿವಾನಂದ ಮಠದ ಶ್ರೀಗಳ ಪೀಠ ಗುದ್ದಾಟ! ಮಠದ ಅಂಗಳದಲ್ಲಿ ಬಿಗುವಿನ ವಾತಾವರಣ
ಗದಗ, ಫೆ.29: ಜಿಲ್ಲೆಯ ಪ್ರತಿಷ್ಟಿತ ಶಿವಾನಂದ ಮಠದ ಉಭಯ ಶ್ರೀಗಳ ಪೀಠ ಗಲಾಟೆ (Shivananda Mutt succession controversy) ಮತ್ತೆ ಜೋರಾಗಿದೆ. ಕಳೆದ ವರ್ಷದಿಂದಉಭಯ ಶ್ರೀಗಳನಡುವಿನ ಗುದ್ದಾಟ ಬಲು ಜೋರಾಗಿದೆ. ವರ್ಷಗಳು ಕಳೆದರೂ ಇನ್ನೂ ವೈಮನಸ್ಸು ದೂರವಾಗಿಲ್ಲ. ಇನ್ನು ಮಾರ್ಚ್ 8, ಶಿವರಾತ್ರಿ ದಿನದಂದು ಶಿವಾನಂದ ಮಠದ ಜಾತ್ರಾಮಹೋತ್ಸವ ನಡೆಯಲಿದೆ. ಕಿರಿಯ ಶ್ರೀಗಳನ್ನು ಹೊರಗಿಟ್ಟು ಹಿರಿಯ ಶ್ರೀಗಳು ಜಾತ್ರಾಮಹೋತ್ಸವ ನಡೆಸಲು ಸಜ್ಜಾಗಿದ್ದಾರೆ. ಇದು ಕಿರಿಯ ಶ್ರೀಗಳು ಹಾಗೂ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. …
Read More »ಸಮಾಜದ ಕಟ್ಟಕಡೆಯ ವ್ಯಕ್ತಿ ಸಹ ಉನ್ನತ ಸ್ಥಾನ ತಲುಪಬೇಕೆಂದು ಶಿವರಾಮು ಹೇಳುತ್ತಿದ್ದರು: ಸಿದ್ಧರಾಜು, ನಿವೃತ್ತ ಐಪಿಎಸ್ ಅಧಿಕಾರಿ
ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮತ್ತು ಕನ್ನಡದಲ್ಲಿ ಐಎಎಸ್ (IAS) ಬರೆದು ಪಾಸಾದ ನಾಡಿನ ಮೊದಲಹೆಮ್ಮೆಯ ಕುವರ ಕೆ ಶಿವರಾಮ್(K Shivaram) ಕೊನೆಯುಸಿರೆಳೆದಿದ್ದಾರೆ. ದಕ್ಷ ಆಡಳಿತಾಧಿಕಾರಿಯಾಗಿ ಹೆಸರು ಮಾಡಿದ್ದ ಶಿವರಾಮು ಸ್ಯಾಂಡಲ್ ವುಡ್ ನಟ (actor) ಕೂಡ ಆಗಿದ್ದರು ಹಾಗೂ ನಿವೃತ್ತಿಯ ಬಳಿಕ ರಾಜಕೀಯಕ್ಕಿಳಿದು ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ನಿಧನ ಕೇವಲ ಸಂಬಂಧಿಕರಿಗೆ ಮತ್ತು ಅಭಿಮಾನಿಗಳಿಗೆ ಮಾತ್ರವಲ್ಲ, ಅವರನ್ನು ಬಲ್ಲ ಅನೇಕರಿಗೆ ಆಘಾತಕಾರಿ ಸಂಗತಿಯಾಗಿದೆ ಎಂದು ಅವರ ಒಡನಾಡಿ …
Read More »ಕೀಟನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವಕ, ಹೆಗಲ ಮೇಲೆ ಹೊತ್ತು ಓಡಿ ಪ್ರಾಣ ಉಳಿಸಿದ ಕಾನ್ಸ್ಟೇಬಲ್
ಮನೆಯಲ್ಲಿ ನಡೆದ ಸಣ್ಣ ಜಗಳದಿಂದ ಯುವಕನೊಬ್ಬ ಖಿನ್ನತೆಗೆ ಒಳಗಾಗಿ ಕೀಟನಾಶಕ ಕುಡಿದು ಪ್ರಜ್ಞೆ ತಪ್ಪಿ ಬಿದ್ದಿದ್ದ. ಆತನನ್ನು ಗಮನಿಸಿದ ಪೊಲೀಸ್ ಪೇದೆಯೊಬ್ಬರು ಆತನನ್ನು ಹೆಗಲ ಮೇಲೆ ಎತ್ತಿಕೊಂಡು ಎರಡು ಕಿಲೋಮೀಟರ್ ಓಡಿ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ್ದಾರೆ. ಪೊಲೀಸ್ ಪೇದೆ ಹಾಘೂ ಗೃಹರಕ್ಷಕ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.ಸಣ್ಣದೊಂದು ವಿಚಾರಕ್ಕೆ ಮನೆಯಲ್ಲಿ ನಡೆದ ಜಗಳದಿಂದ ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ (Young Man) ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು ಸಮಯ …
Read More »
Laxmi News 24×7