Breaking News

ರಾಜ್ಯ

ಪ್ರಜ್ವಲ್ ಬೆನ್ನಲ್ಲೇ ಅಣ್ಣ ಸೂರಜ್‌ ರೇವಣ್ಣನ ಮೇಲೆ ಅತ್ಯಾಚಾರ ಆರೋಪ

ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಬರೀ ರಾಜ್ಯ, ದೇಶ ಅಲ್ಲದೆ, ವಿಶೇಶಗಳವರೆಗೂ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಪ್ರಜ್ವಲ್ ರೇವಣ್ಣ ಅಣ್ಣ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧವೂ ಸಹ ಅಸಹಜ ಲೈಂಗಿಕ ದೌರ್ಜನ್ಯ ಆರೋಪವೊಂದು ಕೇಳಿಬಂದಿದೆ. ಸೂರಜ್‌ ರೇವಣ್ಣ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಅರಕಲಗೂಡು ಜೆಡಿಎಸ್​ ಕಾರ್ಯಕರ್ತನ ಮೇಲೆ ಸೂರಜ್​ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈಗಾಗಲೇ ಪ್ರಜ್ವಲ್‌ …

Read More »

ಅಟಲ್ ಸೇತು ಉದ್ಘಾಟನೆಯಾದ ಕೆಲವೇ ತಿಂಗಳಲ್ಲಿ ಬಿರುಕು

ಮುಂಬೈ: ದಕ್ಷಿಣ ಮುಂಬೈನಿಂದ ನವಿ ಮುಂಬೈಗೆ ಸಂಪರ್ಕ ಕಲ್ಪಿಸುವ ಸಮುದ್ರ ಸೇತುವೆ ಅಟಲ್ ಸೇತು ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಳೆ ಶುಕ್ರವಾರ ಆರೋಪಿಸಿದ್ದಾರೆ. ಸೇತುವೆ ಉದ್ಘಾಟನೆಗೊಂಡ ಕೆಲವೇ ತಿಂಗಳೊಳಗೆ ಅದರಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಜನರ ಜೀವಕ್ಕೆ ಅಪಾಯವನ್ನುಂಟುಮಾಡಿದೆ ಎಂದು ಪಟೋಳೆ ಹೇಳಿದ್ದಾರೆ. ಇಂದು ಹಗಲಿನಲ್ಲಿ ಸೇತುವೆಯನ್ನು ಪರಿಶೀಲಿಸಿದ ಪಟೋಳೆ, ಸೇತುವೆಯ ನಿರ್ಮಾಣ ಗುಣಮಟ್ಟ ಕಳಪೆಯಾಗಿದೆ ಮತ್ತು ರಸ್ತೆಯ ಒಂದು ಭಾಗವು ಒಂದು ಅಡಿಯಷ್ಟು ಕುಸಿದಿದೆ …

Read More »

ರೇಣುಕಾಸ್ವಾಮಿ ಕೊಲೆ ಪ್ರಕರಣ: 40 ಲಕ್ಷ ರೂಪಾಯಿ ಕೈ ಸಾಲ ಕೊಟ್ಟ ಮೋಹನ್‌ರಾಜ್‌ ನಾಪತ್ತೆ!

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಮುಚ್ಚಿ ಹಾಕಲು ದರ್ಶನ್ ಏನೆಲ್ಲಾ ಮಾಡಲು ಯತ್ನಿಸಿದ್ದರು ಎಂಬ ಸ್ಪೋಟಕ ವಿಚಾರ ಬಯಲಾಗಿದೆ. ಮೊನ್ನೆಯಷ್ಟೇ ಆರ್​ಆರ್​ ನಗರದಲ್ಲಿರುವ ನಟ ದರ್ಶನ್ ಮನೆಯಲ್ಲಿ ಮತ್ತೆ 37 ಲಕ್ಷದ 40 ಸಾವಿರ ಹಣವನ್ನು, ಪತ್ನಿ ವಿಜಯಲಕ್ಷ್ಮಿ ಬಳಿಯಿಂದ 3 ಲಕ್ಷ ರೂ.ಹಣವನ್ನು ಸೀಜ್ ಮಾಡಲಾಗಿದೆ. ದರ್ಶನ್ ಮನೆಯ ಬೆಡ್ ರೂಮ್ ನಲ್ಲಿ ಕಬೋಡ್ ನಲ್ಲಿ 37 ಲಕ್ಷ ಹಣ ಸೀಜ್ ಆಗಿದೆ ಎಂದು ವರದಿ ಆಗಿದೆ. ಬ್ಯಾಗ್ ಒಳಗೆ …

Read More »

ಚಿನ್ನದ ಬೆಲೆ ₹800, ಬೆಳ್ಳಿ ₹1,400 ಏರಿಕೆ

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಧಾರಣೆಯು ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ದರವು ₹800 ಏರಿಕೆಯಾಗಿ, ₹73,350ಕ್ಕೆ ಮಾರಾಟವಾಗಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ ₹1,400 ಹೆಚ್ಚಳವಾಗಿ, ₹93,700ಕ್ಕೆ ಮುಟ್ಟಿದೆ. ‘ಅಮೆರಿಕದಲ್ಲಿ ಚಿಲ್ಲರೆ ಹಣದುಬ್ಬರವು ಅಂದಾಜಿಗೂ ಮೀರಿ ಇಳಿಕೆಯಾಗಿದೆ. ಹಾಗಾಗಿ, ಪ್ರಸಕ್ತ ವರ್ಷದಲ್ಲಿ ಅಮೆರಿಕದ ಫೆಡರಲ್‌ ರಿಸರ್ವ್‌ ಎರಡು ಬಾರಿ ಬಡ್ಡಿದರ ಕಡಿತಗೊಳಿಸಲಿದೆ ಎಂಬ ನಿರೀಕ್ಷೆ ಹೆಚ್ಚಿದೆ. ಇದು ಹಳದಿ ಲೋಹದ ಬೆಲೆ ಏರಿಕೆಗೆ ಕಾರಣವಾಗಿದೆ’ …

Read More »

ದಲಿತ ಉದ್ಯಮಿಗಳ ಸಮಸ್ಯೆ ಇತ್ಯರ್ಥಕ್ಕೆ ಉನ್ನತ ಮಟ್ಟದ ಸಮಿತಿ: ಸಚಿವ ಎಂ.ಬಿ ಪಾಟೀಲ್

ದಲಿತ ಉದ್ಯಮಿಗಳ ಸಮಸ್ಯೆ ಇತ್ಯರ್ಥಕ್ಕೆ ಉನ್ನತ ಮಟ್ಟದ ಸಮಿತಿ: ಸಚಿವ ಎಂ.ಬಿ ಪಾಟೀಲ್ ಬೆಂಗಳೂರು: ರಾಜ್ಯದ ದಲಿತ ಉದ್ಯಮಿಗಳು ಎದುರಿಸುತ್ತಿರುವ ನಾನಾ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದು ಭಾರೀ ಮತ್ತು ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದರು.   ಖನಿಜ ಭವನದಲ್ಲಿ ಶುಕ್ರವಾರ ನಡೆದ ರಾಜ್ಯಸಭೆ ಮಾಜಿ ಸದಸ್ಯ ಎಲ್.ಹನುಮಂತಯ್ಯ ಅಧ್ಯಕ್ಷತೆಯ ಕರ್ನಾಟಕ ದಲಿತ …

Read More »

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ!

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri) ಅವರಿಗೆ ಸಂಕಷ್ಟ ಎದುರಾಗಿದೆ. ರೋಹಿಣಿ ಸಿಂಧೂರಿ ವಿರುದ್ಧ ಬಾಲಿವುಡ್‌ನ ಖ್ಯಾತ ಗಾಯಕ ಲಕ್ಕಿ ಅಲಿ (Singer Lucky Ali) ಕರ್ನಾಟಕ ಲೋಕಾಯುಕ್ತ (Karnataka Lokayukta) ಪೊಲೀಸರಿಗೆ ದೂರು ನೀಡಿದ್ದಾರೆ. ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ (Sudhir Reddy) ಮತ್ತು ಸೋದರ ಮಾವ ಮಧುಸೂದನ್ ರೆಡ್ಡಿ ತಮ್ಮ ಟ್ರಸ್ಟ್‌ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಲಕ್ಕಿ ಅಲಿ ಆರೋಪಿಸಿದ್ದಾರೆ. ಈ …

Read More »

ಬಿಹಾರ ಮಾದರಿಯಲ್ಲಿ ರಾಜ್ಯದಲ್ಲೂ ದೊಡ್ಡ ಪ್ರಮಾಣದ ಮೇವು ಹಗರಣ ನಡೆದಿದೆ: ಅಭಯ ಪಾಟೀಲ ಆರೋಪ

ಬೆಳಗಾವಿ: ಬಿಹಾರ ಮಾದರಿಯಲ್ಲಿ ರಾಜ್ಯದಲ್ಲೂ ದೊಡ್ಡ ಪ್ರಮಾಣದ ಮೇವು ಹಗರಣ ನಡೆದಿದೆ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲದ ಹಿನ್ನೆಲೆಯಲ್ಲಿ ಸರ್ಕಾರ ರೈತರಿಗೆ ಮೇವು ವಿತರಣೆಗೆ ನಿರ್ಧರಿಸಿತ್ತು. ಆದರೆ ದಾಖಲೆಯಲ್ಲಷ್ಟೇ ಮೇವು ವಿತರಿಸಲಾಗಿದೆ. ಇದರಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ಎಸಗಲಾಗಿದೆ. ಮೇವಿನಲ್ಲಿ ಹಣ ತಿನ್ನುವ ಅಧಿ ಕಾರಿಗಳು ಮತ್ತು ರಾಜಕಾರಣಿಗಳು ನಮ್ಮಲ್ಲಿದ್ದಾರೆ. ಇನ್ನು ಮುಂದೆ ಎಲ್ಲ ಹಗರಣಗಳು ಹೊರಗೆ ಬರಲಿವೆ. ಸಿಎಂ …

Read More »

ಕನ್ನಡ ಶಿಕ್ಷಕರ ನೇಮಕವೇ ಆಗಿಲ್ಲ !ಚಕಾರ ಎತ್ತದ ಕರ್ನಾಟಕ ಗಡಿಯ ಶಾಸಕರು

ಬೆಳಗಾವಿ: ಕರ್ನಾಟಕದ ಗಡಿಭಾಗದಲ್ಲಿ ರುವ ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನು ನೇಮಿಸುತ್ತಿರುವ ಮಹಾರಾಷ್ಟ್ರ ಸರಕಾರವು ಸದ್ದಿಲ್ಲದೆ ಇನ್ನೊಂದು ಪಿತೂರಿ ಮಾಡುತ್ತಿದೆ ಎಂದು ಆರೋಪಿಸ ಲಾಗಿದೆ. ಅದು ಕಳೆದ 15 ವರ್ಷಗಳಿಂದ ಕನ್ನಡ ಶಾಲೆಗಳಿಗೆ ಶಿಕ್ಷಕರ ನೇಮಕಾತಿಯನ್ನೇ ಮಾಡಿಲ್ಲ ಎನ್ನುವ ಸಂಗತಿ ಈಗ ಹೊರಬಿದ್ದಿದೆ. ಉರ್ದು ಭಾಷಾ ಶಿಕ್ಷಕರ ನೇಮಕಾತಿ ಮಾಡಿದ್ದು, ಕನ್ನಡ ಶಾಲೆಗಳಿಗೆ ಮಾತ್ರ ಅರ್ಹ ಶಿಕ್ಷಕರಿದ್ದರೂ ಮಹಾರಾಷ್ಟ್ರ ಸರಕಾರ ಅವರನ್ನು ಪರಿಗಣಿಸಿಲ್ಲ. 15 ವರ್ಷಗಳಿಂದ ಕನ್ನಡ ಶಾಲೆಗಳಿಗೆ ಶಿಕ್ಷಕರ ನೇಮಕಾತಿ …

Read More »

ಸಿದ್ದು ಸಿಎಂ ಇರುವವರೆಗೆ ಮಾತ್ರ ಕಾಂಗ್ರೆಸ್‌ ಸರ್ಕಾರ ಸೇಫ್; : ರಮೇಶ್‌ ಜಾರಕಿಹೊಳಿ

ಬೆಳಗಾವಿ: ಸಿದ್ದರಾಮಯ್ಯ ಸಿಎಂ ಇರುವವರೆಗೆ ಕಾಂಗ್ರೆಸ್‌ ಸರ್ಕಾರ ಇರುತ್ತದೆ. ಅವರ ಅವ ಧಿ ಮುಗಿದ ನಂತರ ಹೇಳಲಾಗಲ್ಲ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಬೆಳಗಾವಿ ನಗರದ ಯೋಗಿಕೊಳ್ಳ ಪ್ರದೇಶದಲ್ಲಿ 6 ಟಿಎಂಸಿ ನೀರು ನಿಲ್ಲಿಸಲು ಉದ್ದೇಶಿಸಿ ಮಾಡಲಾದ ಘಟ್ಟಿ ಬಸವಣ್ಣ ಡ್ಯಾಂ ಯೋಜನೆಯನ್ನು ನಿಲ್ಲಿಸಲು ಮಹಾನಾಯಕ ಪ್ಲಾನ್‌ ಮಾಡಿದ್ದ. ಯೋಜನೆ ನಿಲ್ಲಿಸಲು ಅಧಿ ಕಾರಿಗಳಿಂದ ಸತೀಶ್‌ ಜಾರಕಿಹೊಳಿ ಹೆಸರು ಹೇಳಿಸಿದ್ದ. ಆದರೆ ನಾನು ಸತೀಶ ಜತೆ ಮಾತನಾಡಿದಾಗ …

Read More »

ನಾಗನೂರ ಪಟ್ಟಣದಲ್ಲಿ ನೂತನ ಸಂಸದರಿಗೆ ಅಭಿನಂದನೆ

ನಾಗನೂರ ಪಟ್ಟಣದಲ್ಲಿ ನೂತನ ಸಂಸದರಿಗೆ ಅಭಿನಂದನೆ ಕಾಂಗ್ರೆಸ್ಸಿಗೆ ಕೈ ಕೊಟ್ಟ ಮತದಾರ, ಗ್ಯಾರಂಟಿ ಯೋಜನೆಗೆ ಸರಕಾರದಿಂದ ಬ್ರೇಕ್- ಜಗದೀಶ ಶೆಟ್ಟರ್ ಅರಭಾವಿಮಠದಿಂದ ಲೋಕಾಪೂರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಹಾಗೂ ಅರಭಾವಿ ಕ್ಷೇತ್ರದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಸಂಸದರಲ್ಲಿ ಮನವಿ ಮಾಡಿಕೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ   ಮೂಡಲಗಿ: ಮತದಾರರ ಮುಂದೆ ಕಾಂಗ್ರೇಸಿನವರು ಒಡ್ಡಿದ ಹಣಬಲ, ತೋಳಬಲ, ಆಸೆ-ಆಮಿಷಗಳ ಆಟ ನಡೆಯಲಿಲ್ಲ. ಜೊತೆಗೆ ಕಾಂಗ್ರೇಸ್ಸಿನ ಗ್ಯಾರಂಟಿ ಯೋಜನೆಗಳ ಫಲ ನೀಡಲಿಲ್ಲ. ಗೆಲುವಿಗೆ …

Read More »