ನವದೆಹಲಿ: ಜುಲೈ 23 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ ಕೇಂದ್ರ ಬಜೆಟ್ 2024 ವೇತನದಾರರ ತೀವ್ರ ಆಸಕ್ತಿಯನ್ನು ಕೆರಳಿಸಿದೆ. ಅವರ ನಿರೀಕ್ಷೆಗಳು ಅನುಕೂಲಕರ ಪ್ರಕಟಣೆಗಳ ನಿರೀಕ್ಷೆಯ ಸುತ್ತ ಕೇಂದ್ರೀಕೃತವಾಗಿವೆ, ವಿಶೇಷವಾಗಿ ತೆರಿಗೆ ಕಡಿತಗಳು ಮತ್ತು ತೆರಿಗೆ ಪ್ರಕ್ರಿಯೆಗಳನ್ನು ಸರಳೀಕರಿಸುವ ಮತ್ತು ಉತ್ತಮಗೊಳಿಸುವ ಗುರಿಯನ್ನು ಹೊಂದಿರುವ ಸುಧಾರಣೆಗಳ ಮೇಲೆ ಕೇಂದ್ರೀಕರಿಸುತ್ತವೆ. ಸಂಬಳ ಪಡೆಯುವ ತೆರಿಗೆದಾರರು ಹಣದುಬ್ಬರ ಮತ್ತು ಬಡ್ಡಿದರಗಳ ಏರಿಕೆಯ ಪರಿಣಾಮಗಳನ್ನು ತಗ್ಗಿಸಲು ಕಡಿಮೆ ಆದಾಯ ತೆರಿಗೆ …
Read More »25 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ
ಕೌಜಲಗಿ: ಸಾರ್ವಜನಿಕ ಸಂಚಾರಕ್ಕೆ ಅಗತ್ಯವಿರುವ ಮನ್ನಿಕೇರಿಯಿಂದ ಬೆಟಗೇರಿ ಮತ್ತು ಮನ್ನಿಕೇರಿಯಿಂದ ಕೌಜಲಗಿವರೆಗಿನ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ಒಟ್ಟಾರೆ ₹25 ಕೋಟಿ ಮಂಜೂರಾಗಿದ್ದು, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ತಿಳಿಸಿದರು. ಸಮೀಪದ ಮನ್ನಿಕೇರಿ ಗ್ರಾಮದ ಹತ್ತಿರ ಭಾನುವಾರ ಜರುಗಿದ ಲೋಕೋಪಯೋಗಿ ಇಲಾಖೆಯ ಎಸ್‌ಎಚ್‌ಡಿಪಿ 5ನೇ ಹಂತದ ಯೋಜನೆಯ ₹13 ಕೋಟಿ ವೆಚ್ಚದ ಬೆಟಗೇರಿ-ಬಗರನಾಳ-ಮನ್ನಿಕೇರಿ ರಸ್ತೆ ಅಭಿವೃದ್ಧಿ ಮತ್ತು ಅಗಲೀಕರಣ ಕಾಮಗಾರಿ ಮತ್ತು …
Read More »ತುಂಬಿದ ಕೃಷ್ಣೆ: ನದಿ ತೀರದ ಗ್ರಾಮಗಳಿಗೆ ಪ್ರಕಾಶ ಹುಕ್ಕೇರಿ ಭೇಟಿ
ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಪ್ರದೇಶ ಹಾಗೂ ಚಿಕ್ಕೋಡಿ ಉಪ ವಿಭಾಗದಲ್ಲಿ ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ಹಾಗೂ ಉಪ ನದಿಗಳ ನೀರಿನ ಮಟ್ಟ ಹೆಚ್ಚಳವಾಗಿದ್ದು, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ 2 ಪ್ರಕಾಶ ಹುಕ್ಕೇರಿ ಭಾನುವಾರ ಕೃಷ್ಣಾ ನದಿ ತೀರದ ಗ್ರಾಮಗಳಾದ ಚಿಕ್ಕೋಡಿ ತಾಲ್ಲೂಕಿನ ಇಂಗಳಿ, ಮಾಂಜರಿ, ಯಡೂರ, ಚಂದೂರ, ಕಲ್ಲೋಳಗಳಿಗೆ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿ ಪರಿಶೀಲಿಸಿದರು. ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಬಂದರೆ …
Read More »ಬೆಳಗಾವಿ: ಮನೆ ಗೋಡೆ ಕುಸಿದು ವ್ಯಕ್ತಿ ಸಾವು
ನಿಪ್ಪಾಣಿ(ಬೆಳಗಾವಿ): ಸತತ ಮಳೆಯಿಂದಾಗಿ ಇಲ್ಲಿನ ಜತ್ರಾಟ ವೇಸ್‌ನಲ್ಲಿ ಭಾನುವಾರ ಬೆಳಿಗ್ಗೆ ಪಕ್ಕದ ಮನೆಯ ಗೋಡೆ ತಗಡಿನ ಶೆಡ್ ಮೇಲೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ತಿರುಪತಿ ರಾಜಾರಾಮ ವಟಕರ್(50) ಮೃತರು. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಮುಜಫ್ಫರ್ ಬಳಿಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಪ್ಪಾಣಿಯ ಬಸವೇಶ್ವರ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Read More »ಉಕ್ಕೇರಿದ ನದಿಗಳು-
ಬೆಳಗಾವಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಯಮಕನಮರಡಿ, ನಿಪ್ಪಾಣಿ, ಚಿಕ್ಕೋಡಿ, ಗೋಕಾಕ ಭಾಗದ 10 ಸೇತುವೆಗಳು ಜಲಾವೃತಗೊಂಡಿವೆ. ಯಮಕನಮರಡಿ ವರದಿ: ಮಹಾ ಮಳೆಯಿಂದ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಹುಕ್ಕೇರಿ ತಾಲ್ಲೂಕಿನ ದಡ್ಡಿ, ಸಲಾಮವಾಡಿ, ಮೊದಗಾ, ಶೆಟ್ಟಿಹಳ್ಳಿ ಗ್ರಾಮದ ನಾಲ್ಕು ಸೇತುವೆಗಳು ಶನಿವಾರ ಮುಳುಗಿದ್ದು, ವಾಹನ ಸಂಚಾರ ಸ್ಥಗಿತವಾಗಿದೆ. ‘ನದಿ ದಡದ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ. ಸೇತುವೆ ಮೇಲೆ ಜನರು ಓಡಾಡದಂತೆ ತಡೆಯಲು ಪೊಲೀಸರು ಬ್ಯಾರಿಕೇಡ್ ಇಟ್ಟಿದ್ದು, ನಿಗಾ …
Read More »ಅಂಬಾನಿ ಮಗನಿಗೆ ಉಡುಗೊರೆಗಳ ಸುರಿಮಳೆ – ಏನೇನು ಕೊಟ್ಟಿದಾರೆ ಗೊತ್ತೇ?
ಮುಂಬೈ: ಇತ್ತೀಚೆಗೆ ನಡೆದ ಅನಂತ ಅಂಬಾನಿ (Anant Ambani) ಹಾಗೂ ರಾಧಿಕಾ ಮರ್ಚೆಂಟ್ (Radhika Merchant) ಮದುವೆ ಸಮಾರಂಭದಲ್ಲಿ ಐಶಾರಾಮಿ ಬಂಗಲೆ, ವಿಮಾನ ಸೇರಿ ನಾನಾ ರೀತಿಯ ಬೆಲೆ ಬಾಳುವ ಉಡುಗೊರೆ ಬಂದಿವೆ ಎನ್ನಲಾಗಿದೆ. ಜುಲೈ 12 ರಂದು ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಮುಂಬೈನಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ವೇಳೆ 14,000 ಅತಿಥಿಗಳು ಭಾಗವಹಿಸಿದ್ದರು. ಮುಖೇಶ ಅಂಬಾನಿ ಹಾಗೂ ನೀತಾ ಅಂಬಾನಿ ನವ ದಂಪತಿಯಾದ …
Read More »ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಖತರ್ನಾಕ್ ಲೇಡಿ!
ನವದೆಹಲಿ: ತನ್ನ ಯೂಟ್ಯೂಬ್ ಚಾನೆಲ್ ಮತ್ತು ಇನ್ಸ್ಟಾಗ್ರಾಂಗೆ ಹೈ ಕ್ವಾಲಿಟಿ ವಿಡಿಯೋ ಮಾಡಲು, ದುಬಾರಿ ಡಿಎಸ್ಎಲ್ಆರ್ ಕ್ಯಾಮೆರಾ ಖರೀದಿಸುವುದಕ್ಕಾಗಿ ಮಾಲೀಕರ ಮನೆಗೆ ಕನ್ನ ಹಾಕಿದ ಮನೆಗೆಲಸದಾಕೆಯನ್ನು ದೆಹಲಿ ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ. ಬಂಧಿತಳನ್ನು 30 ವರ್ಷದ ನೀತು ಯಾದವ್ ಎಂದು ಗುರುತಿಸಲಾಗಿದೆ. ಈ ಘಟನೆ ದೆಹಲಿಯ ದ್ವಾರಕ ಏರಿಯಾದಲ್ಲಿ ನಡೆದಿದೆ. ಆರೋಪಿ ನೀತು, ನಿಕೋನ್ ಡಿಎಸ್ಎಲ್ಆರ್ ಕ್ಯಾಮೆರಾ ಖರೀದಿ ಮಾಡಲು ಬಯಸಿದ್ದಳು. ಈ ಕ್ಯಾಮೆರಾದಲ್ಲಿ ಇನ್ಸ್ಟಾಗ್ರಾಂ ರೀಲ್ಸ್ ಮತ್ತು …
Read More »ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಬೈಕ್: ಸವಾರ ಸಾವು
ಬೆಂಗಳೂರು: ಮೈಸೂರು ರಸ್ತೆಯ ಬಿಜಿಎಸ್ ಮೇಲು ಸೇತುವೆಯ ಡೌನ್ ರ್‍ಯಾಂಪ್‌ನಲ್ಲಿ ಬೈಕ್ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಸವಾರ ಮೃತಪಟ್ಟಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ. ವಾಲ್ಮೀಕಿನಗರದ ವಿಘ್ನೇಶ್ (26) ಮೃತ ಸವಾರ. ಕೆಂಗೇರಿಯ ಶ್ರೀನಿಧಿ ಗಾಯಗೊಂಡಿರುವ ಹಿಂಬದಿ ಸವಾರ. ಸದ್ಯ ಶ್ರೀನಿಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಭಾನುವಾರ ಮುಂಜಾನೆ ಸುಮಾರು 1.30ಕ್ಕೆ ಬಿಜಿಎಸ್ ಮೇಲು ಸೇತುವೆಯಲ್ಲಿ ಡೌನ್ ರ್‍ಯಾಂಪ್‌ನಲ್ಲಿ ಸಿಟಿ ಮಾರ್ಕೆಟ್ …
Read More »ಬೆಲೆ ಏರಿಕೆ ನಡುವೆ BSNL ಗ್ರಾಹಕರಿಗೆ ಗುಡ್ ನ್ಯೂಸ್
ನವದೆಹಲಿ: ಭಾರತದಲ್ಲಿನ ಟೆಲಿಕಾಂ ಸೇವಾ ಪೂರೈಕೆದಾರರು ಇತ್ತೀಚೆಗೆ ತಮ್ಮ ರೀಚಾರ್ಜ್ ಬೆಲೆಗಳನ್ನು ನವೀಕರಿಸಿದ್ದಾರೆ. ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವಿ(ವೊಡಾಫೋನ್ ಐಡಿಯಾ) ಬಳಕೆದಾರರು ಅಗ್ಗದ ಮತ್ತು ಹೆಚ್ಚು ಆರ್ಥಿಕ ರೀಚಾರ್ಜ್ ಯೋಜನೆಗಳನ್ನು ಬಯಸುತ್ತಿದ್ದಾರೆ. ಏರುತ್ತಿರುವ ಬೆಲೆಯ ನಡುವೆ, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ- BSNL ಬಜೆಟ್ ಸ್ನೇಹಿ ಯೋಜನೆಗಳೊಂದಿಗೆ ಪರಿಹಾರ ನೀಡಲು ಮುಂದಾಗಿದೆ. 28 ದಿನ ಮತ್ತು 30 ದಿನಗಳ ಮಾನ್ಯತೆಯೊಂದಿಗೆ ಎರಡು ಯೋಜನೆಗಳನ್ನು BSNL ಪ್ರಕಟಿಸಿದೆ. BSNL ರೀಚಾರ್ಜ್ ಯೋಜನೆಗಳು …
Read More »ಆರೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನ: ನಿರಾಣಿ
ಬಾಗಲಕೋಟೆ: ಇನ್ನು ಆರೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಭವಿಷ್ಯ ನುಡಿದಿದ್ದಾರೆ. ಬಾಗಲಕೋಟೆಯಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿ, ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣಗಳಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ಮುಂದಿನ ಆರು ತಿಂಗಳಲ್ಲಿ ಪತನವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದ ಹಗರಣಗಳು ಒಂದಾದ ಮೇಲೊಂದರಂತೆ ಬಯಲಾಗುತ್ತಿದ್ದು, ಮಾಧ್ಯಮಗಳಲ್ಲಿ ಪ್ರತಿದಿನವೂ ಸರ್ಕಾರದ ಹಗರಣಗಳು …
Read More »
Laxmi News 24×7