ಮೂಡಲಗಿ : ತಾಲ್ಲೂಕಿನಲ್ಲಿ ಘಟಪ್ರಭಾ ನದಿಯ ಪ್ರವಾಹ ಪೀಡಿತ ಗ್ರಾಮಗಳ ಸಂತ್ರಸ್ತರಿಗೆ ವ್ಯವಸ್ಥೆ ಮಾಡಲಾದ 12 ಕಾಳಜಿ ಕೇಂದ್ರಗಳಲ್ಲಿ 350ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಅಲ್ಲಿ ಲಭ್ಯವಿರುವ ಸೌಲಭ್ಯ ಬಳಸಿಕೊಂಡು, ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಾರೆ. ವಡೇರಹಟ್ಟಿ, ಪಟಗುಂದಿ, ಮಸಗುಪ್ಪಿ, ಹುಣಶ್ಯಾಳ ಪಿಜಿ ಹೀಗೆ ಬೇರೆ ಬೇರೆ ಕಡೆಯಿರುವ ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರು ಇದ್ದಾರೆ. ‘ಉಪಾಹಾರ, ಊಟ ಸಿಗುತ್ತಿದೆ. ಸಂತ್ರಸ್ತರ ಮಕ್ಕಳಿಗೆ ಶಿಕ್ಷಣವೂ ನೀಡಬೇಕು ಎಂಬ ಉದ್ದೇಶದಿಂದ ನಿತ್ಯವೂ ಪಾಠ ಮಾಡುತ್ತಿದ್ದೇವೆ’ ಎಂದು …
Read More »ರಾತ್ರಿ ನಿದ್ದಿ ಇಲ್ಲ, ಮನ್ಯಾಗ್ ನೆಮ್ಮದಿ ಇಲ್ಲ’ – ಜುಗೂಳ ಗ್ರಾಮಸ್ಥರ ಸಂಕಷ್ಟ
ಜುಗೂಳ (ಕಾಗವಾಡ ತಾಲ್ಲೂಕು): ‘ಮನ್ಯಾಗೀನ ವಸ್ತುಗಳನ್ನೆಲ್ಲ ಕಟ್ಟಿ ಇಟ್ಟೇವ್ರಿ. ಪ್ರತಿದಿನಾ ನಸುಕಿನ್ಯಾಗ ಹೊಳಿದಂಡಿಗಿ ಬಂದ್ ಎಷ್ಟ ನೀರ ಬಂದೇತಿ ಅಂತ ನೋಡಿಹೋಗ್ತೇವ್ರಿ. ಮಳಿಗಾಲ ಬಂತಂದ್ರ ನಮಗ್ ರಾತ್ರಿ ನಿದ್ದಿ ಇಲ್ಲ. ಮನ್ಯಾಗ ನೆಮ್ಮದಿ ಇಲ್ಲ. ಬ್ಯಾರೆ ಕಡೆ ಸ್ಥಳಾಂತರ ಮಾಡೋದ ನಮ್ಮ ಸಮಸ್ಯೆಕ್ ಪರಿಹಾರ…’ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನದ ಹಿನ್ನೆಲೆಯಲ್ಲಿ ಕಾಗವಾಡ ತಾಲ್ಲೂಕಿನ ಜುಗೂಳ-ಮಹಾರಾಷ್ಟ್ರದ ಖಿದ್ರಾಪುರ ಸೇತುವೆ ಬಳಿ ಸೋಮವಾರ ಬಂದುನಿಂತಿದ್ದ ಜುಗೂಳ ಗ್ರಾಮಸ್ಥರಾದ ಪ್ರಕಾಶ ಪಾಟೀಲ ಮತ್ತು ವಿಜಯಕುಮಾರ ಮಿನಚೆ …
Read More »ಆ.15ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ರಕ್ತದಾನ ಶಿಬಿರ
ಬೆಳಗಾವಿ: ‘ಇಲ್ಲಿನ ಹಿಂದವಾಡಿಯ ಮಹಾವೀರ ಭವನದಲ್ಲಿ ಜೈನ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್(ಜಿತೋ) ಬೆಳಗಾವಿ ಘಟಕದ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಆ.15ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ’ ಎಂದು ಸಂಯೋಜಕ ಕುಂತಿನಾಥ ಕಲಮನಿ ಹೇಳಿದರು. ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂಕಷ್ಟ ಸಮಯದಲ್ಲಿ ಜನರಿಗೆ ನೆರವಾಗುವ ದೃಷ್ಟಿಯಿಂದ ನಾಲ್ಕು ವರ್ಷಗಳಿಂದ ಈ ಶಿಬಿರ ಆಯೋಜಿಸುತ್ತಿದ್ದೇವೆ. ಕಳೆದ ವರ್ಷ 936 ಯೂನಿಟ್ ರಕ್ತ ಸಂಗ್ರಹವಾಗಿತ್ತು. ಈ …
Read More »ಮಳೆಗಾಲದಲ್ಲಿ ‘ಟ್ಯೂಬ್ ತೆಪ್ಪ’ದಲ್ಲೇ ಶಾಲಾ ಮಕ್ಕಳ ಪಯಣ
ಕಿತ್ತೂರು: ಎರಡು ಲಾರಿ ಟ್ಯೂಬ್ ಗಳಿಗೆ ಗಾಳಿ ತುಂಬಿಸಿ ಅದರ ಮೇಲೆ ಕಟ್ಟಿಗೆಯಿಟ್ಟು, ಎರಡೂ ದಂಡೆಗೆ ನೆಡಲಾಗಿರುವ ಗೂಟಗಳಿಗೆ ಹಗ್ಗ ಕಟ್ಟಿ ಮಾಡಿರುವ ‘ಜಗ್ಗುವ ಟ್ಯೂಬ್ ತೆಪ್ಪ’ದಲ್ಲಿ ತಾಲ್ಲೂಕಿನ ಕುಲವಳ್ಳಿಯ ನಿಂಗಾಪುರ ಗ್ರಾಮಸ್ಥರು, ಶಾಲಾ ಮಕ್ಕಳು, ಮಹಿಳೆಯರು, ರೈತರಿಗೆ ಇದೇ ಸಂಚಾರದ ಜಲಮಾರ್ಗವಾಗಿದೆ. ‘ಧಾರವಾಡ ತಾಲ್ಲೂಕಿನ ಅಳ್ನಾವರ ಬಳಿಯ ಹುಲಿಕೆರೆ ಭರ್ತಿಯಾದರೆ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ನಿಂಗಾಪುರಕ್ಕೆ ಈ ಅಪಾಯಕಾರಿ ನೀರ ಮೇಲಿನ ಸಂಚಾರ ತಪ್ಪಿದ್ದಲ್ಲ’ ಎನ್ನುತ್ತಾರೆ ಗ್ರಾಮಸ್ಥರು. ‘ಅಲ್ಲದೇ, …
Read More »ಆಗಸ್ಟ್ 21ರ ಬಳಿಕ ಖಾಸಗಿ ಶಾಲೆಗಳು ಬಂದ್-ಕಾರಣ ಏನು?
ಬೆಂಗಳೂರು, ಆಗಸ್ಟ್ 05: ರಾಜ್ಯದಲ್ಲಿ ಆಗಸ್ಟ್ 21ರ ಬಳಿಕ ಖಾಸಗಿ ಶಾಲೆಗಳನ್ನು ಬಂದ್ ಮಾಡಲು ರುಪ್ಸಾ ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದಿಂದ ನಿರ್ಧಾರ ಮಾಡಲಾಗಿದೆ. ಹಾಗಾದರೆ ಯಾಕೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಾಲಾ ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರ ಹಾಗೂ ಖಾಸಗಿ ಶಾಲೆಗಳ ಮೇಲಿನ ಅನ್ಯಾಯ ವಿರೋಧಿಸಿ ರುಪ್ಸಾ ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದಿಂದ ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡುವುದಾಗಿ ಸರ್ಕಾರಕ್ಕೆ …
Read More »ಸಿಎಂ ಪತ್ನಿಗೆ ನೀಡಿದ್ದ 14 ನಿವೇಶನ ವಾಪಸ್ ಪಡೆಯಲು ಮನವಿ
ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯರ ಪತ್ನಿ ಪಾರ್ವತಿ ಅವರಿಗೆ ನೀಡಿರುವ 14 ನಿವೇಶನಗಳನ್ನು ವಾಪಸ್ ಪಡೆಯಬೇಕು’ ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಮುಡಾ ಆಯುಕ್ತ ರಘುನಂದನ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ರಹಾಂ, ‘ಮೈಸೂರಿನ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464 ರಲ್ಲಿ 2001ರಲ್ಲಿಯೇ ಮುಡಾ ನಿವೇಶನಗಳನ್ನು ರಚಿಸಿ, ನಂತರದಲ್ಲಿ 19 ಫಲಾನುಭವಿಗಳಿಗೆ ಹಂಚಿದೆ. 2004ರಲ್ಲಿ ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಅದೇ …
Read More »ನಿರಂತರ ಮಳೆಯಿಂದಾಗಿ ಅಂಗನವಾಡಿಗಳಿಗೆ ರಜೆ ಘೋಷಣೆ
ನಿರಂತರ ಮಳೆಯಿಂದಾಗಿ ಅಂಗನವಾಡಿಗಳಿಗೆ ರಜೆ ಘೋಷಣೆ ನಿರಂತರ ಮಳೆಯ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಅವರು ಕಿತ್ತೂರು, ಖಾನಾಪುರ, ಮತ್ತು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಅಂಗನವಾಡಿಗಳಿಗೆ ರಜೆ ಘೋಷಿಸಿದ್ದಾರೆ. ### ರಜೆ ಆದೇಶದ ವಿವರಗಳು – *ಅಂಗನವಾಡಿ ರಜೆ ಅವಧಿ*: – *ಕಿತ್ತೂರು ತಾಲೂಕು*: ಆಗಸ್ಟ್ 6 ರಿಂದ 8ರವರೆಗೆ. – *ಬೆಳಗಾವಿ ಗ್ರಾಮೀಣ ಮತ್ತು ಖಾನಾಪುರ ತಾಲೂಕುಗಳು*: ಆಗಸ್ಟ್ 6 ರಿಂದ 10ರವರೆಗೆ. ಈ ರಜೆ ಆದೇಶವನ್ನು …
Read More »ಮಾದಕ ವಸ್ತುಗಳ ಬಳಕೆ; 251 ಮಂದಿ ವಶಕ್ಕೆ ಪಡೆದ ಪೊಲೀಸರು
ಹುಬ್ಬಳ್ಳಿ: ವಾರದ ಹಿಂದಷ್ಟೇ ಮಾದಕ ವಸ್ತುಗಳ ಬಳಕೆ ಮಾಡುವವರ ವಿರುದ್ಧ ಕಾರ್ಯಾಚರಣೆ ನಡೆಸಿ 255 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಹು-ಧಾ ಮಹಾನಗರ ಪೊಲೀಸರು, ಭಾನುವಾರ ಮತ್ತೊಮ್ಮೆ ಕಾರ್ಯಾಚರಣೆ ನಡೆಸಿ 251 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾದಕ ವಸ್ತು ಬಳಸುವ ಸಂಶಯಾಸ್ಪದ 467 ಮಂದಿಯನ್ನು ವಶಕ್ಕೆ ಪಡೆದು ಧಾರವಾಡ ಜಿಲ್ಲಾಸ್ಪತ್ರೆ, ಡಿಮಾನ್ಸ್ ಮತ್ತು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದು, ಪರೀಕ್ಷೆ ಮಾಡಿಸಿದರು. 251 ಮಂದಿ ಮಾದಕ ವಸ್ತುಗಳನ್ನು ಬಳಸಿರುವುದು ವರದಿಯಾಗಿದ್ದು, …
Read More »ವಯನಾಡು ಭೂಕುಸಿತ: ದೇಣಿಗೆ ನೀಡಿದ ಕಬಡ್ಡಿ ಪಟು
ರಿಪ್ಪನ್‌ಪೇಟೆ: ಕೇರಳದ ವಯನಾಡಿನಲ್ಲಿ ಭಾರಿ ಮಳೆಯಿಂದ ಸಂಭವಿಸಿದ ಭೂ ಕುಸಿತದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಇಲ್ಲಿನ ರಾಮಕೃಷ್ಣ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ, ಕಬಡ್ಡಿ ಪಟು ಆರ್. ಶ್ರೇಯಾ ಹಾಗೂ ಆಕೆಯ ಸೋದರ ಶ್ರವಂತ್ ₹ 15,000 ದೇಣಿಗೆ ನೀಡಿದ್ದಾರೆ. ಈಚೆಗೆ ಹೈದರಾಬಾದ್‌ನಲ್ಲಿ ನಡೆದ 14 ವರ್ಷದೊಳಗಿನ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಶ್ರೇಯಾ ಹಾಗೂ ಇದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಶ್ರವಂತ್ ಅವರು ಗ್ರಾಮದ ಸವಿತಾ …
Read More »ತುಮರಿ | ಬಸ್ ಕಾಣದ ಗ್ರಾಮಗಳು; ಗ್ರಾಮಸ್ಥರ ಗೋಳು ಕೇಳುವವರಿಲ್ಲ..
ತುಮರಿ: ತಾಲ್ಲೂಕು ಕೇಂದ್ರದಿಂದ 55 ಕಿ.ಮೀ ದೂರದ ಕರೂರು ಹೋಬಳಿಯ ಹಲವು ಗ್ರಾಮಗಳು ಇಂದಿಗೂ ಬಸ್ ಸೌಲಭ್ಯವನ್ನೇ ಕಂಡಿಲ್ಲ. ಇಲ್ಲಿನ ಜನರು ಸಮೀಪದ ತುಮರಿ, ಕರೂರು, ನಿಟ್ಟೂರು, ಇಲ್ಲವೇ ಹೊಳೆಬಾಗಿಲಿಗೆ ಬಂದು ಬಸ್ ಹತ್ತಿ ಕೆಲಸ, ಕಾರ್ಯಗಳಿಗೆ ತೆರಳಬೇಕಿದೆ. ಕೆಲ ಗ್ರಾಮಗಳು ದಶಕಗಳಿಂದ ಬಸ್ ಸೌಲಭ್ಯ ಕಂಡಿಲ್ಲ. ಇನ್ನು ಕೆಲ ಗ್ರಾಮಗಳಲ್ಲಿ ಮೊದಲಿದ್ದ ಖಾಸಗಿ ಬಸ್‌ಗಳು ಕೋವಿಡ್, ಶಕ್ತಿ ಯೋಜನೆಯ ಪರಿಣಾಮ ಸೇವೆ ಸ್ಥಗಿತಗೊಳಿಸಿವೆ. ಸಿಗ್ಗಲು, ಕಳೋಡಿ, ಬೊಬ್ಬಿಗೆ, ಹೆರಾಟೆ …
Read More »
Laxmi News 24×7