ಜಾಮ್‌ನಗರ: ಕ್ರಿಕೆಟಿಗ ರವೀಂದ್ರ ಜಡೇಜಾ ಅವರು ಪ್ರಸ್ತುತ ನಡೆಯುತ್ತಿರುವ ಸದಸ್ಯತ್ವ ಅಭಿಯಾನದಲ್ಲಿ ಭಾರತೀಯ ಜನತಾ ಪಕ್ಷಕ್ಕೆ(ಬಿಜೆಪಿ) ಸೇರಿದ್ದಾರೆ ಎಂದು ಅವರ ಪತ್ನಿ ಮತ್ತು ಕೇಸರಿ ಪಕ್ಷದ ಶಾಸಕಿ ರಿವಾಬಾ ಜಡೇಜಾ ಅವರು ಗುರುವಾರ ಹೇಳಿದ್ದಾರೆ. ಇಂದು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ರಿವಾಬಾ ಜಡೇಜಾ, ರವೀಂದ್ರ ಜಡೇಜಾ ಬಿಜೆಪಿ ಸದಸ್ಯತ್ವ ಪಡೆದ ಕಾರ್ಡ್‌ನ ಫೋಟೋಗಳನ್ನು “ಸದಾಸ್ಯತ ಅಭಿಯಾನ 2024” ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ …
Read More »ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಮೇಲೆ ಹರಿದ ಕಾಂಕ್ರಿಟ್ ಮಿಕ್ಸಿಂಗ್ ವಾಹನ; ಸ್ಥಳದಲ್ಲೇ ಸಾವು
ಗದಗ: ಕಾಂಕ್ರಿಟ್ ಮಿಕ್ಸಿಂಗ್ ವಾಹನ ಹರಿದು ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಸಾವನ್ನಪ್ಪಿರುವ ಘಟನೆ ಗದಗ ನಗರದ ಭೂಮರೆಡ್ಡಿ ಸರ್ಕಲ್ ನಲ್ಲಿ ನಡೆದಿದೆ. ರಮೇಶ್ ಡಂಬಳ (42) ಮೃತ ಹೆಡ್ ಕಾನ್ಸ್ ಟೇಬಲ್. ಗಜೇಂದ್ರಗಢ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ್ ಅವರ ಮನೆಯಲ್ಲಿ ನಾಳೆ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಹೂವು-ಹಣ್ಣು, ಪೂಜೆ ಸಾಮಗ್ರಿಗಳೊಂದಿಗೆ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಕಾಂಕ್ರಿಟ್ …
Read More »ಯಾವುದೇ ಸಮಯದಲ್ಲೂ ಚುನಾವಣೆ ಬರಬಹುದು ಸಿದ್ಧರಾಗಿ : HD ಕುಮಾರಸ್ವಾಮಿ ಶಾಕಿಂಗ್ ಹೇಳಿಕೆ!
ಶಿವಮೊಗ್ಗ : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯರಿಗೆ ತೀವ್ರ ಸಂಕಷ್ಟ ಎದುರಾಗಿದ್ದು, ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇದೀಗ ಕೇಂದ್ರ ಸಚಿವ HD ಕುಮಾರಸ್ವಾಮಿ ಹೇಳಿಕೆಯು ತೀವ್ರ ಕುತೂಹಲ ಮೂಡಿಸಿದ್ದು, ಯಾವ ಸಮಯದಲ್ಲಾದರೂ ಚುನಾವಣೆ ಬರಬಹುದು. ಎಲ್ಲದಕ್ಕೂ ಸಿದ್ಧರಾಗಿರಿ ಎಂದು ಕರೆ ನೀಡಿದ್ದಾರೆ. ಇಂದು ಶಿವಮೊಗ್ಗದಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆ 2028ರಲ್ಲೇ …
Read More »ಪರಿಶಿಷ್ಟ ವಿದ್ಯಾರ್ಥಿಗಳಿಗೆ ಸಿಗಬೇಕಾದ ಹಾಸಿಗೆ, ದಿಂಬಿನಲ್ಲೂ ಸರ್ಕಾರ ಲೂಟಿ ಹೊಡೆದಿದೆ : ಬಿಜೆಪಿ ಗಂಭೀರ ಆರೋಪ
ಬೆಂಗಳೂರು : ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಲ್ಲಿ ಮೂಲಭೂತ ಸೌಕರ್ಯಗಳಾದ ಹಾಸಿಗೆ, ದಿಂಬು ಕುರಿತಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ನಯಾಪೈಸೆ ಕೂಡ ಅನುದಾನ ನೀಡಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ನೀಡುವ ಹಾಸಿಗೆ ದಿಂಬಿನಲ್ಲೂ ಸರ್ಕಾರ ಲೂಟಿ ಮಾಡಿದೆ ಎಂದು ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಕುರಿದಂತೆ ಟ್ವೀಟ್ ನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿರುವ ಬಿಜೆಪಿ, ಶೋಷಿತ ಸಮುದಾಯವನ್ನು ಚುನಾವಣೆ …
Read More »ಪ್ರಧಾನಿ ಮೋದಿಗೆ ಪತ್ರ ಬರೆದ ದಿನೇಶ್ ಗುಂಡೂರಾವ್
ಬೆಂಗಳೂರು, ಸೆಪ್ಟೆಂಬರ್ 06:ಆರೋಗ್ಯ ವಿಮೆಯ ಮೇಲಿನ ಶೇ 18 ರಷ್ಟು ಜಿ.ಎಸ್.ಟಿಯನ್ನ ಮರು ಪರಿಶೀಲಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ. ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವ ಆರೋಗ್ಯ ಸಚಿವರು, ಸೆಪ್ಟೆಂಬರ್ 9 ರಂದು ಸಭೆ ಸೇರಲಿರುವ GST ಕೌನ್ಸಿಲ್‌ಗೆ ಮಧ್ಯಮ ಮತ್ತು ಕಡಿಮೆ ಆದಾಯದ ಪಾಲಿಸಿದಾರರಿಗೆ ಆರೋಗ್ಯ ವಿಮೆಯ ಮೇಲಿನ 18% ತೆರಿಗೆಯನ್ನು ಮರು ಪರಿಶೀಲಿಸುವಂತೆ ಶಿಫಾರಸು ಮಾಡಲು ಮನವಿ ಮಾಡಿದ್ದಾರೆ. ಆರೋಗ್ಯ ವಿಮೆ ಮೇಲೂ ಶೇ …
Read More »ರೇಣುಕಸ್ವಾಮಿ ಹತ್ಯೆ ಬಳಿಕ ಪವಿತ್ರಾ ಗೌಡ ಕರೆ ಮಾಡಿದ್ದು ಯಾರಿಗೆ, ಹೋಗಿದ್ದು ಎಲ್ಲಿಗೆ? ಚಾರ್ಜ್ಶೀಟ್ನಲ್ಲಿ ಬಯಲಾಯ್ತು ‘ಡಿ ಗ್ಯಾಂಗ್’ನ ಮತ್ತೊಂದು ಕರಾಳ ಮುಖ
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸ್ಸೇಜ್ ಮಾಡಿದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಸ್ವಾಮಿಯನ್ನು ಭೀಕರವಾಗಿ ಕೊಲೆ ಮಾಡಿ ಜೈಲು ಪಾಲಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್ನ ಕರಾಳ ಕೃತ್ಯಗಳು ದಿನ ಕಳೆದಂತೆ ಒಂದೊಂದೇ ಬಯಲಾಗುತ್ತಿದೆ. ನಿಜಜೀವನದಲ್ಲಿ ಮಾದರಿಯಾಗಬೇಕಿದ್ದ ಸ್ಟಾರ್ ನಟನ ಈ ಕೃತ್ಯ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಚಾರ್ಜ್ಶೀಟ್ನಲ್ಲಿ ಪೊಲೀಸರು ಉಲ್ಲೇಖಿಸಿರುವ ಆಘಾತಕಾರಿ ಅಂಶಗಳು ಡಿ ಗ್ಯಾಂಗ್ನ ಕರಾಳ ಮುಖವನ್ನು ಹೊರಜಗತ್ತಿಗೆ ಪರಿಚಯಿಸುತ್ತಿದೆ. ಪ್ರಕರಣದ …
Read More »ರಾಜ್ಯದ ಸಂಸದರು ಗಂಡಸರೋ ಅಥವಾ ಹೆಂಗಸರೋ :ಸಿ.ಎಂ ಇಬ್ರಾಹಿಂ ಆಕ್ರೋಶ
ಹುಬ್ಬಳ್ಳಿ, ಸೆಪ್ಟೆಂಬರ್ 06: ಮುಡಾ ಹಾಗೂ ವಾಲ್ಮೀಕಿ ಹಗರಣದಲ್ಲಿಯೇ ಸರ್ಕಾರ, ಪ್ರತಿಪಕ್ಷಗಳು ಕಾಲಹರಣ ಮಾಡುತ್ತಿದೆ. ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಕಾಂಗ್ರೆಸ್ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಿಂದ ಆರೋಪ ಹಾಗೂ ಪ್ರತ್ಯಾರೋಪದಲ್ಲಿಯೇ ಕಾಲಹರಣ ಹಾಕಲಾಗುತ್ತಿದ್ದು, ಸರಿಯಾಗಿ ನಮ್ಮ ವಿರೋಧ ಪಕ್ಷ ವಿರೋಧ ಪಕ್ಷವಾಗಿ ಕೆಲಸ …
Read More »ಇಬ್ಬರು `IAS’, ಮೂವರು `IFS’ ಅಧಿಕಾರಿಗಳನ್ನು ವರ್ಗಾವಣೆ
ಬೆಂಗಳೂರು : ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಲಾಗಿದ್ದು, ರಾಜ್ಯ ಸರ್ಕಾರ ಇಬ್ಬರು ಐಎಎಸ್, ಮೂವರು ಐಎಫ್ ಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಐಎಎಸ್ ಅಧಿಕಾರಿ ಟಿ.ಹೆಚ್.ಎಂ.ಕುಮಾರ್ ಅವರನ್ನು ಸಹಕಾರ ಸೊಸೈಟಿ ರಿಜಿಸ್ಟ್ರಾರ್ ಆಗಿ ಹಾಗೂ ಡಾ.ರಾಜೇಂದ್ರ ಅವರನ್ನು ಸಣ್ಣ ಕೈಗಾರಿಕಾ ನಿಗಮ ಎಂಡಿಯನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇನ್ನು ಐಎಫ್ ಎಸ್ ಅಧಿಕಾರಿ ಬಿ.ಪಿ. ರವಿ, ರುಥ್ರೆನ್ ಪಿ ಹಾಗೂ ಐಎಸ್ …
Read More »ಬೈಕ್ ಗೆ ಲಾರಿ ಡಿಕ್ಕಿ: ಮೂವರು ಕಾರ್ಮಿಕರ ಸಾವು
ರಾಮನಗರ: ತಾಲ್ಲೂಕಿನ ಮಾಯಗಾನಹಳ್ಳಿಯ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಎದುರು ಶುಕ್ರವಾರ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದರಿಂದ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಮಿಕರಾದ ಗುರುಮೂರ್ತಿ (39), ಶೇಕ್ ಅಫೀಸ್ (45) ಹಾಗೂ ವೆಂಕಟೇಶ್ (50) ಮೃತರು. ಘಟನೆಯಲ್ಲಿ ಹನುಮಂತ ಅವರು ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲಸದ ನಿಮಿತ್ತ ನಾಲ್ವರು ಕಾರ್ಮಿಕರು ಒಂದೇ ಬೈಕ್ ನಲ್ಲಿ ಹೋಗುತ್ತಿದ್ದರು. ಆಗ ಎದುರಿಗೆ ಬಂದ …
Read More »ಲಕ್ಷ್ಮೇಶ್ವರ: ರೈತನ ಕೈ ಹಿಡಿದ ತರಕಾರಿ ಕೃಷಿ
ಲಕ್ಷ್ಮೇಶ್ವರ: ಅಲ್ಪಸ್ವಲ್ಪ ಭೂಮಿಯಲ್ಲೇ ಕಷ್ಪಪಟ್ಟು, ವಿವಿಧ ತರಕಾರಿಗಳನ್ನು ಬೆಳೆದು ಸೈ ಎನಿಸಿಕೊಂಡವರು ತಾಲ್ಲೂಕಿನ ಗುಲಗಂಜಿಕೊಪ್ಪ ಗ್ರಾಮದ ರಾಮನಗೌಡ ಶಂಕರಗೌಡ ದುರುಗನಗೌಡ್ರ. ಮೂಲತಃ ಲಕ್ಷ್ಮೇಶ್ವರ ತಾಲ್ಲೂಕು ಗುಲಗಂಜಿಕೊಪ್ಪದ ನಿವಾಸಿಯಾದ ರಾಮನಗೌಡ್ರ ಈಗ ಲಕ್ಷ್ಮೇಶ್ವರದ ರಂಭಾಪುರಿ ನಗರದ ಆಶ್ರಯ ಕಾಲೊನಿಯಲ್ಲಿ ವಾಸವಾಗಿದ್ದಾರೆ. ಲಕ್ಷ್ಮೇಶ್ವರದ ಮಾನ್ವಿ ಎಂಬುವವರಿಗೆ ಸೇರಿದ ಆರು ಎಕರೆ ತೋಟವನ್ನು ವರ್ಷಕ್ಕೆ ₹50 ಸಾವಿರದಂತೆ ಇವರು ಲಾವಣಿ ಆಧಾರದ ಮೇಲೆ ಪಡೆದುಕೊಂಡು ವಿವಿಧ ತರಕಾರಿ, ಗಲಾಟೆ ಹೂವು ಬೆಳೆಯುತ್ತಿದ್ದಾರೆ. ಹದಿನೈದು ಗುಂಟೆಯಲ್ಲಿ …
Read More »
Laxmi News 24×7