Breaking News

ರಾಜ್ಯ

ಪ್ಯಾಲೇಸ್ತೇನ್’ ಧ್ವಜ ಹಾರಿಸುವವರನ್ನು ‘ಶೂಟ್’ ಮಾಡಿ ಬಿಸಾಕಿ : ಪ್ರಮೋದ್ ಮುತಾಲಿಕ್ ಹೇಳಿಕೆ

ಮಂಡ್ಯ : ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಧಾನ ತಾಲೂಕ್ ಅವರು ಮಂಡ್ಯಾಕೆ ಭೇಟಿ ನೀಡುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಅವರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಆಕ್ರೋಶ ಹೊರಹಾಕಿದ ಪ್ರಮೋದ್ ಮುತಾಲಿಕ್, ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಲೇ ಇವೆಲ್ಲಾ ಗಲಭೆ ನಡೆಯುತ್ತಿವೆ. ಇಂತವರನ್ನು ಶೂಟ್ ಮಾಡಬೇಕು ಎಂದು ಕಿಡಿ ಕಾಡಿದರು. ಮದ್ದೂರಿನ ನಿಡಘಟ್ಟದ ಬಳಿ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದು, …

Read More »

ಅತ್ಯಾಚಾರ ಪ್ರಕರಣ; ಶಾಸಕ ಮುನಿರತ್ನಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್​

ಬೆಂಗಳೂರು: ಆತ್ಯಾಚಾರ ಹಾಗೂ HIV ಸೋಂಕಿತ ಮಹಿಳೆಯನ್ನು ಹನಿಟ್ರ್ಯಾಪ್​ಗೆ ಬಳಸಿಕೊಂಡ ಆರೋಪದ ಮೇಲೆ ಕಗ್ಗಲೀಪುರ ಪೊಲೀಸರ ವಶದಲ್ಲಿರುವ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ ಕೋರ್ಟ್​ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಮತ್ತು ಜಾತಿ ನಿಂದನೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದ ಅವರು ಗುರುವಾರವಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದರ ಬೆನ್ನಲ್ಲೇ ಅತ್ಯಾಚಾರ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಮುನಿರತ್ನರನ್ನು ಪೊಲೀಸರು ಶನಿವಾರ ಕೋರ್ಟ್​ಗೆ …

Read More »

ರೇಣುಕಾ ಸ್ವಾಮಿ ಕೊಲೆ ಪ್ರಕರಣ : ಮೊದಲ ಬಾರಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ದರ್ಶನ್

ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಆಗಿರುವ ದರ್ಶನ್ ಇದೀಗ ಅವರ ಪರ ವಕೀಲರಿಂದ ಜಾಮೀನು ಕೋರಿ ಬೆಂಗಳೂರಿನ ಸೆಷನ್ಸ್ ಕೋರ್ಟಿಗೆ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಹೌದು ಬೆಂಗಳೂರಿನ ಸೇಷನ್ಸ್ ಕೋರ್ಟಿಗೆ ನಟ ದರ್ಶನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚಿಗೆ ನಟ ದರ್ಶನ್ ಅವರನ್ನು ನೋಡಲು ತಾಯಿ ಮೀನಾ ತೂಗುದೀಪ್, ಅಕ್ಕ ಹಾಗೂ ಭಾವ, ಸೋದರ …

Read More »

ಪೊಲೀಸರಿಗೆ ತಲೆನೋವಾದ ಮುನಿರತ್ನ ಮೊಬೈಲ್

ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್ ಆಗಿರೋ ಮುನಿರತ್ನ ಪೊಲೀಸ್ರ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಿಲ್ವಂತೆ. ಸಂತ್ರಸ್ತೆ ಆರೋಪಕ್ಕೆ ಮುನಿರತ್ನ ಮೊಬೈಲ್ ಪ್ರಮುಖ ಸಾಕ್ಷಿಯಾಗಲಿದೆ. ಆದ್ರೆ ಮುನಿರತ್ನ ತನ್ನ ಮೊಬೈಲ್ ಪೊಲೀಸ್ರಿಗೆ ತೋರಿಸಿಲ್ವಂತೆ. ಮೊಬೈಲ್ ಬಗ್ಗೆ ಕೇಳಿದ್ರೆ ಅಟ್ರಾಸಿಟಿ ಪ್ರಕರಣದಲ್ಲಿ ಪೊಲೀಸ್ರು ಕೋಲಾರ ಬಳಿ ನನ್ನ ಅರೆಸ್ಟ್ ಮಾಡುವಾಗ ಮೊಬೈಲ್ ಮಿಸ್ ಆಗಿದೆ. ಆ ಸಮಯದಲ್ಲಿ ಜನ ಸೇರಿದ್ರು ಆಗ ನನ್ನ ಮೊಬೈಲ್ ನ ಯಾರೋ ಎತ್ತಿಕೊಂಡಿದ್ದಾರೆ ಅಂತ ಹೇಳ್ತಿದ್ದಾರಂತೆ. …

Read More »

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಮೂಡಲಗಿ ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಶ್ರೀ ಕರಿಸಿದ್ದೇಶ್ವರ ದೇವರ ಹಾಗೂ ಶ್ರೀ ಹಣಮಂತ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ …

Read More »

ಗಾಡಿ ಈ ತರ ಪಾರ್ಕಿಂಗ್‌ ಆಗಿರೋದನ್ನ ನೀವು ನೋಡಿರಲ್ಲ ಬಿಡಿ..!

ಸಾಮಾನ್ಯವಾಗಿ ರಸ್ತೆಗಳಲ್ಲಿರುವ ಗುಂಡಿಯಿಂದಾಗಿ ವಾಹನಗಳು ಪಲ್ಟಿ ಹಾಕೋದನ್ನ ನೋಡಿರ್ತೀವಿ. ಇದರಿಂದ ಅಪಘಾತಗಳು ಆಗೋದನ್ನೂ ಕೇಳಿರ್ತೀವಿ. ಆದರೆ, ಇದ್ದಕ್ಕಿದ್ದಂತೆ ಗುಂಡಿ ಬಿದ್ದು, ಅದರಲ್ಲಿ ಗಾಡಿ ಪಾರ್ಕ್‌ ಆಗೋದನ್ನು ಕೇಳಿರೋಕೆ ಸಾಧ್ಯವಿಲ್ಲ. ಮಹರಾಷ್ಟ್ರದ ಪುಣೆಯಲ್ಲಿ ಇಂತದ್ದೊಂದು ವಿಚಿತ್ರ ಘಟನೆ ನಡೆದು ಹೋಗಿದೆ.   ಪುಣೆ ನಗರದ ಬುದ್ವಾರ್ ಪೇಠ್ ಪ್ರದೇಶದಲ್ಲಿರುವ ಅಂಚೆ ಕಚೇರಿಯ ಆವರಣದಲ್ಲಿ ಟ್ರಕ್ ತಲೆಕೆಳಗಾಗಿ ಗುಂಡಿಗೆ ಬಿದ್ದಿರುವ ಘಟನೆ ವರದಿಯಾಗಿದೆ. ಇನ್ನು ಇದ್ದಕ್ಕಿದ್ದಂತೆ ಅಂಚೆ ಕಚೇರಿಯ ಆವರಣದಲ್ಲಿ ಬೃಹತ್‌ ಗುಂಡಿ …

Read More »

ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ ಪ್ರಕರಣ: ಕೊಲೆ ಆರೋಪಿ ಮೇಲೆ ಪೊಲೀಸ್ ಫೈರಿಂಗ್

ಕಲಬುರಗಿ: ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿಶ್ವನಾಥ್ ಜಾಮದಾರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಕೊಲೆ ಆರೋಪಿಯ ಮೇಲೆ ಪೊಲೀಸರು ಫೈರಿಂಗ್ ನಡೆಸಿರುವ ಘಟನೆ ಕಲಬುರಗಿಯ ಅಫಜಲಪುರದಲ್ಲಿ ನಡೆದಿದೆ. ಕೊಲೆ ಆರೋಪಿ ಲಕ್ಷ್ಮಣ್ ಕಾಲಿಗೆ ಅಫಜಲಪುರ ಠಾಣೆ ಪಿಎಸ್‌ಐ ಸೋಮಲಿಂಗ ಒಡೆಯರ್ ಗುಂಡೇಟು ಹೊಡೆದಿದ್ದು, ಆತನ ಬಳಿ ಇದ್ದ ಗನ್ ವಶಕ್ಕೆ ಪಡೆಯಲಾಗಿದೆ.   ಆರೋಪಿ ಲಕ್ಷ್ಮಣ್ ನನ್ನು ಕರೆದುಕೊಂಡು ಪೊಲೀಸರು ಮಡ್ಯಾಳ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಆತ ತಪ್ಪಿಸಿಕೊಳ್ಳಲು …

Read More »

ಹಾಸನದಲ್ಲಿ ಹೃದಯಘಾತದಿಂದ ಬಾಲಕ ಸಾವು

ಹಾಸನ: ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ಹೃದಯಘಾತದಿಂದ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಬಾಲಕನನ್ನು ಸಚಿನ್‌ (10) ಅಂತ ತಿಳಿದು ಬಂದಿದೆ. ನಿನ್ನೆ ಅನಾರೋಗ್ಯದಿಂದ (ಎದೆ ನೋವಿನಿಂದ) ಶಾಲೆಗೆ ಸಚಿನ್‌ ಶಾಲೆಗೆ ಹೋಗದೇ ಇರುವುದುನ್ನು ತಂದೆ-ತಾಯಿ ಗಮನಿಸಿದ್ದಾರೆ. ಈ ನಡುವೆ ಮನೆಯಲ್ಲಿ ಉಳಿದುಕೊಂಡಿದ್ದ, ಈ ನಡುವೆ ಸಚಿನ್‌ ಮನೆಯಲ್ಲಿ ಟಿವಿ ನೋಡುತ್ತಲ್ಲೇ ಇದ್ದ ಎನ್ನಲಾಗಿದ್ದು, ಇದನ್ನು ಗಮನಿಸಿದ ಹೆತ್ತವರು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ನಡುವೆ ಆಸ್ಪತ್ರೆಯಲ್ಲಿ …

Read More »

ಕಾಂಗ್ರೆಸ್‌ನಿಂದ ದ್ವೇಷದ ರಾಜಕಾರಣ: ಜಗದೀಶ ಶೆಟ್ಟರ್‌

ಬೆಳಗಾವಿ: ‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಬಿಜೆಪಿ, ಜೆಡಿಎಸ್‌ ನಾಯಕರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಆರೋಪಿಸಿದರು. ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣಗಳ ವಿರುದ್ಧ ನಾವು ಹೋರಾಟ ಮಾಡಿದೆವು. ಅದಕ್ಕಾಗಿ ಬಿಜೆಪಿ, ಜೆಡಿಎಸ್‌ ನಾಯಕರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಕಾಂಗ್ರೆಸ್‌ ವಿರುದ್ಧ ನಾವು ಹೇಳಿಕೆ ಕೊಟ್ಟರೆ, ಎಫ್‌ಐಆರ್ ದಾಖಲಿಸಿ ಹೆದರಿಸುವ ತಂತ್ರ ಅನುಸರಿಸಲಾಗುತ್ತಿದೆ. ಹಳೆಯ ಪ್ರಕರಣಗಳನ್ನೆಲ್ಲ …

Read More »

ಬಿಜೆಪಿಯಿಂದ ದೇಶದಾದ್ಯಂತ ದ್ವೇಷ ರಾಜಕಾರಣ: ವಿನಯ ಕುಲಕರ್ಣಿ

ಬೆಳಗಾವಿ: ‘ಬಿಜೆಪಿಯವರಂತೆ ನಾವ್ಯಾರೂ ದ್ವೇಷ ರಾಜಕಾರಣ ಮಾಡಿಲ್ಲ. ಅವರು ಎಷ್ಟು ಜನರಿಗೆ, ಎಷ್ಟು ಹಿಂಸೆ ಕೊಟ್ಟಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಇದಕ್ಕೆ ನಾನೇ ದೊಡ್ಡ ಸಾಕ್ಷಿ’ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು. ‘ಕಾಂಗ್ರೆಸ್‌ ದ್ವೇಷದ ರಾಜಕಾರಣ ಮಾಡುತ್ತಿದೆ’ ಎಂಬ ಸಂಸದ ಜಗದೀಶ ಶೆಟ್ಟರ್‌ ಹೇಳಿಕೆ‌ಗೆ, ಪ್ರತಿಕ್ರಿಯಿಸಿದ ಅವರು, ‘ಇಡೀ ದೇಶದಲ್ಲಿ ವಿರೋಧ ಪಕ್ಷದವರ ವಿರುದ್ಧ ಬಿಜೆಪಿಯವರು ದ್ವೇಷದ ರಾಜಕಾರಣ ನಡೆಸಿದ್ದಾರೆ. ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕನಾದರೂ ನಾಲ್ಕು ವರ್ಷಗಳಿಂದ ನನ್ನೂರು …

Read More »