ಅಪಘಾತಗಳ ನಿಯಂತ್ರಣಕ್ಕೆ ಕ್ರಮ ವಹಿಸಿ: ಜಿಲ್ಲಾಧಿಕಾರಿ ಬೆಳಗಾವಿ: ‘ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಅಪಘಾತ ಸಂಭವಿಸುವ ಸ್ಥಳ ಗುರುತಿಸಿ, ಅಪಘಾತಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚಿಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಮೂರು ವರ್ಷಗಳಲ್ಲಿ ಆಗಿರುವ ಅಪಘಾತಗಳು, ಅದರಲ್ಲಿ …
Read More »ದೀನದಯಾಳ ಉಪಾಧ್ಯಾಯ ಜಯಂತಿ ಆಚರಣೆ
ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ವತಿಯಿಂದ ಬುಧವಾರ ಪಂಡಿತ ದೀನದಯಾಳ ಉಪಾಧ್ಯಾಯ ಅವರ 108ನೇ ಜಯಂತಿ ಆಚರಿಸಲಾಯಿತು. ಚಲನಚಿತ್ರ ಕಲಾವಿದ ಸುಚೇಂದ್ರಪ್ರಸಾದ, ‘ಪ್ರತಿಯೊಬ್ಬರೂ ನಾಡಿಗೆ ತಮ್ಮದೇಯಾದ ಕೊಡುಗೆ ಸಮರ್ಪಿಸಬೇಕು. ಉತ್ತಮ ನಡೆ-ನುಡಿ ಬೆಳಸಿಕೊಳ್ಳಬೇಕು’ ಎಂದರು. ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ, ‘ಇಂದು ಯುವಶಕ್ತಿಗೆ ಆರ್ಥಿಕ ಚೈತನ್ಯ ತುಂಬುವ ಕೆಲಸವಾಗಬೇಕಿದೆ. ಶಿಕ್ಷಣವು ಮಾನವತೆಯ ನಿರ್ಮಾಣದೊಂದಿಗೆ, ಬದುಕು ಸೃಷ್ಟಿಸುವ ಶಕ್ತಿಯಾಗಬೇಕು. ಸರ್ವರ ಪಾಲಿನ ಭಾಗ್ಯವಾಗಬೇಕು. ಜತೆಗೆ, ಸರ್ವರಿಗೂ …
Read More »ಉಚಿತ ಹೊಲಿಗೆ ಯಂತ್ರ’ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ!
ಬೆಂಗಳೂರು : ರಾಜ್ಯ ಸರ್ಕಾರವು ಮಹಿಳೆಯರಿಗೆ ಸಿಹಿಸುದ್ದಿ ನೀಡಿದ್ದು, ಉಚಿತ ಹೊಲಿಗೆ ಯಂತ್ರ ಸೇರಿದಂತೆ ವಿವಿಧ ಯೋಜನೆಗಳಡಿ ಸಹಾಯಧ ಪಡೆಯಲು ಅರ್ಜಿ ಸಲ್ಲಿಕೆ ಅವಧಿಯನ್ನು ಸೆ.30 ರವರೆಗೆ ವಿಸ್ತರಿಸಲಾಗಿದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ವತಿಯಿಂದ 2024-25ನೇ ಸಾಲಿನ ಉದ್ಯೋಗಿನಿ ಯೋಜನೆ, ಚೇತನ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಧನಶ್ರೀ ಯೋಜನೆ ಮತ್ತು ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಗಳ ಸೌಲಭ್ಯ ಪಡೆಯಲು ಅರ್ಹರಿಂದ ಸೇವಾಸಿಂಧು ಪೋರ್ಟಲ್ …
Read More »ಸಿದ್ದರಾಮಯ್ಯಗೆ ಎದುರಾಯ್ತು ಮುಡಾ ಸಂಕಷ್ಟ; ʼಕೇವಲ ಶೇ 25ರಷ್ಟು ಲೋಕಾಯುಕ್ತ ತನಿಖೆ ಬಾಕಿʼ
ಬೆಂಗಳೂರು, ಸೆಪ್ಟೆಂಬರ್ 26: ಮೈಸೂರಿನ ಮುಡಾದಿಂದ ಎರಡು ಸೈಟ್ ಪಡೆಯಬೇಕಾದ ಜಾಗದಲ್ಲಿ ನೀವು (ಮುಖ್ಯಮಂತ್ರಿಗಳ ಕುಟುಂಬ) 14 ಸೈಟ್ ಪಡೆದುದೇಕೆ ಎಂದು ಹೈಕೋರ್ಟ್ ಪ್ರಸ್ತಾಪಿಸಿದೆ. ಹೀಗಾಗಿ ಗವರ್ನರ್ ಅವರು ತನಿಖೆಗೆ ಕೊಟ್ಟ ಆದೇಶ ಸರಿ ಇದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು. ಮಾಧ್ಯಮಗಳ ಜೊತೆಗೆ ಬುಧವಾರ ಮಾತನಾಡಿ, ಹೈಕೋರ್ಟ್ ಆದೇಶವನ್ನು ಗಮನಿಸಿದ್ದೇವೆ. ಗವರ್ನರ್ ಅವರ ಆದೇಶವನ್ನು ಕೋರ್ಟ್ ಎತ್ತಿಹಿಡಿದಿದೆ ಎಂದರು. ಮಾನ್ಯ ಮುಖ್ಯಮಂತ್ರಿಗಳೂ …
Read More »ತಿರುಮಲ ಲಡ್ಡು ವಿವಾದ: ಚಂದ್ರಬಾಬು ನಾಯ್ಡು ಪಾಪವನ್ನು ಶುದ್ಧೀಕರಿಸಲು ರಾಜ್ಯವ್ಯಾಪಿ ಪೂಜೆಗೆ ಜಗನ್ ರೆಡ್ಡಿ ಕರೆ
ಹೈದರಾಬಾದ್: ಸೆಪ್ಟೆಂಬರ್ 28 ರ ಶನಿವಾರದಂದು ಆಂಧ್ರಪ್ರದೇಶದಾದ್ಯಂತ ವಿಶೇಷ ಪೂಜೆಯಲ್ಲಿ ಭಾಗವಹಿಸುವಂತೆ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್ಸಿಪಿ) ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಭಕ್ತರಿಗೆ ಕರೆ ನೀಡಿದ್ದಾರೆ. ಈ ಪೂಜೆಯು “ಪಾಪಕ್ಕೆ ಪ್ರಾಯಶ್ಚಿತ್ತ” ಮತ್ತು ತಿರುಮಲ ತಿರುಪತಿ ದೇವಾಲಯದ ಪಾವಿತ್ರ್ಯವನ್ನು ಪುನಃಸ್ಥಾಪಿಸುವ ಉದ್ದೇಶವನ್ನು ಹೊಂದಿದೆ, ಪವಿತ್ರ ಸ್ಥಳದಲ್ಲಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಆರೋಪಗಳಿಂದ ಕಳಂಕಿತವಾಗಿದೆ ಎಂದು …
Read More »ಕಾರಂತರ ನೆನಪು
ಕನ್ನಡ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಭಾಷೆ. ನಮ್ಮ ಈ ಕರುನಾಡಿನಲ್ಲಿ ಅದೆಷ್ಟೋ ಸಾಹಿತಿಗಳು ಕನ್ನಡ ಭಾಷೆಯ ಕಂಪು, ಅದರ ಮಹತ್ವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿಯಲುವಲ್ಲಿ ಶ್ರಮಿಸಿದ್ದಾರೆ. ಅಂಥವರ ಸಾಲಿನಲ್ಲಿ ಬರುವ ಮಹಾನ್ ಸಾಹಿತಿಗಳಲ್ಲಿ ಒಬ್ಬರು ಕೋಟ ಶಿವರಾಮ ಕಾತಂತರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕಥೆ, ಸಣ್ಣಕಥೆ, ಹರಟೆ, ವ್ಯಂಗ್ಯ, ಕವನ, ಕಾದಂಬರಿ, ನಾಟಕ, ಪ್ರವಾಸ ಕಥನ, ಮಕ್ಕಳ ಸಾಹಿತ್ಯ, ಪರಿಸರ ವಿಜ್ಞಾನ, ಜೀವನಚರಿತ್ರೆ, ಕಲೆ, ಯಕ್ಷಗಾನ …
Read More »ದೇವಾಲಯದ ಕೆರೆಯಲ್ಲಿ ಈಜಲು ಹೋದ ವಿದ್ಯಾರ್ಥಿಗಳಿಬ್ಬರು ಮೃ*ತ್ಯು
ಬೈಂದೂರು: ಇಲ್ಲಿನ ಪೇಟೆಯಲ್ಲಿನ ದೇವಸ್ಥಾನದ ಕೆರೆಯಲ್ಲಿ ಈಜಾಡಲೆಂದು ತೆರಳಿದ ವಿದ್ಯಾರ್ಥಿಗಳಿಬ್ಬರು ನೀರಿನಲ್ಲಿ ಮುಳುಗಿ ಮೃತ ಪಟ್ಟ ಘಟನೆ ಮಂಗಳವಾರ(ಸೆ24 )ಸಂಜೆ ನಡೆದಿದೆ. ಮೃತ ಬಾಲಕರು ನಾಗೇಂದ್ರ (13) ಮತ್ತು ಮೊಹಮದ್ ಶಫಾನ್ (13) ಎನ್ನುವವರಾಗಿದ್ದಾರೆ. ನಾಗೇಂದ್ರ ಯೋಜನಾ ನಗರದ ನಿವಾಸಿ ಕೃಷ್ಣ ಅವರ ಪುತ್ರ ನಾಗಿದ್ದು, ಮೊಹಮದ್ ಶಫಾನ್ ರೈಲ್ವೆ ನಿಲ್ದಾಣದ ಬಳಿಯ ಶಾನು ಶಾಲಿಯಾನ್ ಅವರ ಪುತ್ರ. ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಿಬ್ಬರು ಪರೀಕ್ಷೆ ಬರೆದು …
Read More »ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ವಿಶೇಷ ಕೋರ್ಟ್ ಆದೇಶ
ಬೆಂಗಳೂರು: ಮುಡಾ ಹಗರಣದ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿದ ಅಭಿಯೋಜನೆಯನ್ನು ಹೈಕೋರ್ಟ್ ಎತ್ತಿಹಿಡಿದ ಬೆನ್ನಲ್ಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬುಧವಾರ (ಸೆ.25) ಮೈಸೂರು ಲೋಕಾಯುಕ್ತ ಪೊಲೀಸರು ಮುಡಾ ಹಗರಣದ ತನಿಖೆ ನಡೆಸಬೇಕೆಂದು ಆದೇಶ ನೀಡಿದೆ. ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್, CrPC 156(3) ಅಡಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ …
Read More »ದೂರು ನೀಡಿ ಎರಡುವರೆ ಗಂಟೆಯೊಳಗಡೆ ನಾಪತ್ತೆಯಾದ ಮಹಿಳೆಯನ್ನು ಪತ್ತೆ ಹಚ್ಚಿದ ಪೊಲೀಸರು
ದಾಂಡೇಲಿ: ನಾಪತ್ತೆಯಾಗಿದ್ದ ಮಹಿಳೆಯೋರ್ವರ ಬಗ್ಗೆ ದೂರು ನೀಡಿದ ಕೇವಲ ಎರಡುವರೆ ಗಂಟೆಯೊಳಗಡೆ ಪೊಲೀಸರು ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಒಪ್ಪಿಸಿದ ಶ್ಲಾಘನಾರ್ಹ ಘಟನೆ ಅಂಬಿಕಾನಗರದ ಜಮಗಾದಲ್ಲಿ ನಡೆದಿದೆ. ಅಂಬಿಕಾನಗರದ ಜಮಗಾ ನಿವಾಸಿ 50 ವರ್ಷ ವಯಸ್ಸಿನ ಫಾತಿಮಾ ಮುಂಡಗೋಡ ಇವರು ಮಂಗಳವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಅಣಬೆ ತರಲೆಂದು ಕಾಡಿಗೆ ಹೋಗಿದ್ದವರು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಮನೆ ಮಂದಿಯೆಲ್ಲ ಸುತ್ತಮುತ್ತಲೂ ಹುಡುಕಿ, ಕೊನೆಗೆ ಸಂಜೆ 7.45 ನಿಮಿಷಕ್ಕೆ ಅಂಬಿಕಾನಗರ …
Read More »ಕೊನೆಗೂ 71 ದಿನಗಳ ಬಳಿಕ ಅರ್ಜುನ್ ಲಾರಿ ಹಾಗೂ ಮೃತದೇಹ ಪತ್ತೆ
ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತ ಸಂಭವಿಸಿ ಎರಡು ತಿಂಗಳು ಕಳೆದಿದ್ದು, ಕೊನೆಗೂ ನಾಪತ್ತೆಯಾಗಿದ್ದ ಕೇರಳದ ಲಾರಿ ಹಾಗೂ ಚಾಲಕ ಅರ್ಜುನ್ ಅವರ ಮೃತದೇಹ ಬುಧವಾರ(ಸೆ.25ರಂದು) ಪತ್ತೆ ಆಗಿದೆ ಎಂದು ವರದಿಯಾಗಿದೆ. ಕಳೆದ 6 ದಿನಗಳಿಂದ ನಡೆಯುತ್ತಿದ್ದ ಕಾರ್ಯಾಚರಣೆಯ ಮೂಲಕ ಗಂಗಾವಳಿ ನದಿಯಲ್ಲಿ ಮುಳುಗಿದ್ದ ಅರ್ಜುನ್ ಅವರ ಬೆಂಜ್ ಲಾರಿ ಪತ್ತೆಯಾಗಿದ್ದು, ಲಾರಿಯೊಳಗೆ ಅರ್ಜುನ್ ಅವರ ಮೃತದೇಹ ಪತ್ತೆಯಾಗಿದೆ ಎಂದು ಕಾರ್ಯಾಚರಣೆಯ ತಂಡದ ಮೂಲಗಳು ತಿಳಿಸಿವೆ. ಲಾರಿಯ ಮಾಲೀಕ ಮನಾಫ್ …
Read More »
Laxmi News 24×7