Breaking News

ರಾಜ್ಯ

ಮಹಾಲಕ್ಷ್ಮಿ ನನ್ನ ಮಗನ ವಿರುದ್ಧ ‘ಹನಿಟ್ರ್ಯಾಪ್’ ಮಾಡಿದ್ದಳು : ಆರೋಪಿಯ ತಾಯಿ ಸ್ಪೋಟಕ ಹೇಳಿಕೆ!

ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನ ವೈಯಲಿಕಾವಲ್ ನಲ್ಲಿ ನೇಪಾಳ ಮೂಲದ ಮಹಾಲಕ್ಷ್ಮಿಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೊಲೆ ಆರೋಪಿ ಆಗಿದ್ದ ಮುಕ್ತಿ ರಂಜನ್ ರಾಯ್ ಅವರ ತಾಯಿ ಮಹಾಲಕ್ಷ್ಮಿ ವಿರುದ್ಧ ಸ್ಪೋಟಕ ವಾದಂತಹ ಆರೋಪ ಮಾಡಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಪಿಯ ತಾಯಿ ಕುಂಜಲತಾ ರಾಯ್, ನನ್ನ ಮಗನ ವಿರುದ್ಧ ಕೊಲೆಯಾದ ಮಹಿಳೆ ಟ್ರ್ಯಾಪ್ ಮಾಡಿದ್ದಳು. ಅವಳು ಅವನಿಂದ ನಿರಂತರವಾಗಿ ಹಣ ಕೇಳುತ್ತಲೇ ಇದ್ದಳು. ಈ …

Read More »

ಕಿತ್ತೂರು ಉತ್ಸವ: ಐತಿಹಾಸಿಕ ತಾಣಗಳಲ್ಲಿ ಸ್ವಚ್ಛತಾ ಕಾರ್ಯ

ಚನ್ನಮ್ಮನ ಕಿತ್ತೂರು: ಅ.23 ರಿಂದ 25 ರವರೆಗೆ ನಡೆಯುವ 200 ನೇ ಚನ್ನಮ್ಮನ ಕಿತ್ತೂರು ಉತ್ಸವದ ಅಂಗವಾಗಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಕಿರಣ ಘೋರ್ಪಡೆ ನೇತೃತ್ವದಲ್ಲಿ ಐತಿಹಾಸಿಕ ಸ್ಥಳಗಳನ್ನು ಗುರುವಾರ ಸ್ವಚ್ಛಗೊಳಿಸಲಾಯಿತು. ನಂತರ ಮಾತನಾಡಿದ ಕಿರಣ, ‘ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಿತ್ತೂರು ಸಂಸ್ಥಾನದ ಸ್ಮಾರಕಗಳು ಹಾಗೂ ಐತಿಹಾಸಿಕ ತಾಣಗಳನ್ನು ಉತ್ಸವದ ಅಂಗವಾಗಿ ಸ್ವಚ್ಛಗೊಳಿಸಲಾಗುತ್ತಿದೆ. ತಾಲೂಕು ಪಂಚಾಯಿತಿ ಕಿತ್ತೂರು ಹಾಗೂ ಗ್ರಾಮ ಪಂಚಾಯಿತಿ ದೇವರಶೀಗಿಹಳ್ಳಿ ಸಹಯೋಗದಲ್ಲಿ ‘ಸ್ವಚ್ಛತೆಯೆಡೆಗೆ ದಿಟ್ಟ …

Read More »

ತಾಂತ್ರಿಕ ಸಿಬ್ಬಂದಿ ಮಾದರಿಯಲ್ಲಿ ವೇತನ ಶ್ರೇಣಿ ನಿಗದಿಪಡಿಸಲು ಆಗ್ರಹ

ಬೆಳಗಾವಿ: ವಿವಿಧ ಇಲಾಖೆಗಳ ತಾಂತ್ರಿಕ ಸಿಬ್ಬಂದಿ ಮಾದರಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೂ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿ, ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಪದಾಧಿಕಾರಿಗಳು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಇಲ್ಲಿನ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಯಾವ ಘೋಷಣೆ ಕೂಗದ ಪ್ರತಿಭಟನಕಾರರು, ಮೌನವಾಗಿ ಕುಳಿತುಕೊಂಡೇ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಪಿ.ಶಿಂಧೆ, …

Read More »

ಕಳ್ಳತನ ಪ್ರಕರಣಗಳು: ಪತ್ತೆಯಾಗದ ಆರೋಪಿಗಳು

ಬ್ಯಾಡಗಿ: ಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಪಿಗಳು ಮಾತ್ರ ಪತ್ತೆಯಾಗುತ್ತಿಲ್ಲ. ಇದರಿಂದಾಗಿ ಜನರಲ್ಲಿ ಆತಂಕ ಮನೆ ಮಾಡಿದ್ದು, ಕಳ್ಳರನ್ನು ಪತ್ತೆ ಮಾಡುವಂತೆ ಪೊಲೀಸರನ್ನು ಒತ್ತಾಯಿಸುತ್ತಿದ್ದಾರೆ. ಮನೆಗಳು ಹಾಗೂ ಇತರ ಸ್ಥಳಗಳಿಗೆ ನುಗ್ಗುತ್ತಿರುವ ಕಳ್ಳರು, ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ಕದ್ದೊಯ್ಯುತ್ತಿದ್ದಾರೆ. ಕಳ್ಳತನದ ಬಗ್ಗೆ ಸಂತ್ರಸ್ತರು, ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಾರೆ. ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರಿಗೆ, ಆರೋಪಿಗಳ ಬಗ್ಗೆ ಇದುವರೆಗೂ ಸುಳಿವು ಲಭ್ಯವಾಗಿಲ್ಲ ಎಂದು ಜನರು ದೂರುತ್ತಿದ್ದಾರೆ. …

Read More »

ಮೂಡ ಪ್ರಕರಣದಲ್ಲಿ ಹಿನ್ನಡೆ – ಸಿಎಂ ಕಾನೂನು ತಜ್ಞರ ತಂಡಕ್ಕೆ ಗೇಟ್ ಪಾಸ್.?

ಬೆಂಗಳೂರು : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನವರಿಗೆ ಭಾರಿ ಹಿನ್ನಡೆಯಾದ ಕಾರಣ ಕಾನೂನು ತಜ್ಞರ ತಂಡಕ್ಕೆ ಗೇಟ್ ಪಾಸ್ ನೀಡಲು ಸಿಎಂ ನಿರ್ಧರಿಸಿದ್ದಾರೆ. ಮುಡಾ ಹಗರಣ ಹಾಗೂ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ರದ್ದುಗೊಳಿಸುವಂತೆ ಸಿಎಂ ಹೈ ಕೋರ್ಟ್ ಮೊರೆಹೋಗಿದ್ದರು, ಆದರೆ ಅಲ್ಲಿ ಸಿದ್ದರಾಮಯ್ಯ ನವರಿಗೆ ಸಾಲು ಸಾಲು ಹಿನ್ನಡೆಯಾಗುತ್ತಿರುವ ಕಾರಣ ಕಾನೂನು ತಜ್ಞರ ತಂಡವನ್ನು ಬದಲಾವಣೆಗೆ ಸರ್ಕಾರ ಚಿಂತನೆ ನಡೆಸುತ್ತಿದೆ.     ಇದೀಗ ಸಚಿವ ಸಂಪುಟ …

Read More »

ನಿಮಗೊಂದು ನ್ಯಾಯ, ಬೇರೆಯವರಿಗೊಂದು ನ್ಯಾಯವೇ?; ಮೊದಲು ರಾಜೀನಾಮೆ ನೀಡಿ: ಸಿಎಂ ಸಿದ್ದರಾಮಯ್ಯಗೆ ಗಾಲಿ ಜನಾರ್ಧನ ರೆಡ್ಡಿ ಆಗ್ರಹ

ಬೆಂಗಳೂರು: ಇಷ್ಟೆಲ್ಲ ಆದರೂ ಇನ್ನೂ ಕುರ್ಚಿಗೆ, ಅಧಿಕಾರಕ್ಕೆ ಅಂಟಿಕೊಂಡಿರುವ ಸಿಎಂ ಸಿದ್ದರಾಮಯ್ಯನವರಿಗೆ ಏನು ಹೇಳಬೇಕು? ಅಂದು ಗಣಿ ಲೂಟಿ ಎಂದು ಬಳ್ಳಾರಿವರೆಗೂ ಪಾದಯಾತ್ರೆ ಮಾಡಿದ್ರಿ. ಇಂದು ಮುಡಾ ಹಗರಣದಲ್ಲಿ ಸಿಲುಕಿಕೊಂಡಿರುವ ನಿಮ್ಮ ವಿರುದ್ಧ ಹೈಕೋರ್ಟ್ ತನಿಖೆಗೆ ಆದೇಶಿಸಿದೆ. ಆದರೂ ರಾಜೀನಾಮೆ ನೀಡದೇ ಇರುವುದನ್ನು ನೋಡಿದರೆ ಯಾವ ಮಟ್ಟಕ್ಕೆ ತಲುಪಿದ್ದೀರಿ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಜನಾರ್ಧನ ರೆಡ್ಡಿ, ಅಂದು ಬಿಜೆಪಿ …

Read More »

ಬೇಕರಿ ಐಟಂಗಳ ಮೇಲೆ ಆಹಾರ ಇಲಾಖೆ ಕಣ್ಣು!

ದಸರಾ, ದೀಪಾವಳಿ ಹಬ್ಬ (Dasara And Deepavali) ಬಂತು ಅಂದ್ರೆ ನೆನಪಾಗೋದು ರುಚಿರುಚಿಯಾದ ಸ್ವೀಟ್‌ಗಳು (Sweets). ಈ ಹಬ್ಬಗಳಲ್ಲಿ ಸ್ವೀಟ್ ಹಂಚಿ ಸಂಭ್ರಮಿಸ್ತಾರೆ. ಆದರೆ ಇದೀಗ ಸ್ವೀಟ್‌ಗಳಲ್ಲೂ ಕಲಬೆರಕೆ (Mixing) ಪದಾರ್ಥ ಇದ್ಯಾ ಅನ್ನೋ ಅನುಮಾನ ಶುರುವಾಗಿದೆ. ಈ ಹಿನ್ನೆಲೆ ಸ್ವೀಟ್ಸ್‌ಗಳ ಗುಣಮಟ್ಟ ಪರಿಶೀಲನೆಗೆ ಆಹಾರ ಇಲಾಖೆ (Department of Food) ಮುಂದಾಗಿದೆ. ಈ ಕಲಿಗಾಲದಲ್ಲಿ ಕಲಬೆರಕೆ ಇಲ್ದಿರೋ ಆಹಾರನೇ ಇಲ್ವಾ ಅನ್ನೋ ಅನುಮಾನ ಹುಟ್ಕೊಂಡ್‌ ಬಿಟ್ಟಿದೆ. ಕಲಬೆರಕೆ ಆಹಾರ …

Read More »

ಮುಡಾ ಹಗರಣ ; ‘FIR’ ದಾಖಲಾದ್ರೆ CM ಸಿದ್ದರಾಮಯ್ಯ A-1, ಪತ್ನಿ ಪಾರ್ವತಿ A-2 ಆರೋಪಿ.!

ಬೆಂಗಳೂರು : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದ್ದು, ಎಫ್ ಐ ಆರ್ ದಾಖಲಿಸುವಂತೆ ಜನಪ್ರತಿನಿಧಿಗಳ ಕೋರ್ಟ್ ಸೂಚನೆ ನೀಡಿದೆ. ಇಂದೇ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐ ಆರ್ ದಾಖಲಿಸುವ ಸಾಧ್ಯತೆಯಿದೆ. ಒಂದು ವೇಳೆ ಎಫ್ ಐ ಆರ್ ದಾಖಲಾದ್ರೆ ಸಿದ್ದರಾಮಯ್ಯ ಎ1, ಪತ್ನಿ ಪಾರ್ವತಿ ಎ 2 ಆರೋಪಿಗಳಾಗಲಿದ್ದಾರೆ. ಈ ಕುರಿತಂತೆ ಸ್ನೇಹಮಯಿ ಕೃಷ್ಣ ಅವರು ಈಗಾಗಲೇ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಿದ್ದಾರೆ. ಸ್ನೇಹಮಯಿ ಕೃಷ್ಣ …

Read More »

ದರ್ಶನ್‌ ಆತಿಥ್ಯಕ್ಕೆ ಜೈಲಾಧಿಕಾರಿಗಳಿಗೆ 8 ಲಕ್ಷ ಡೀಲ್‌?

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್‌ ಮತ್ತು ಕುಖ್ಯಾತ ರೌಡಿಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗ ಹಾಗೂ ಇತರರಿಗೆ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಯೇ ಲಕ್ಷಾಂತರ ರೂ. ಆಸೆಗೆ ವಿಶೇಷ ಆತಿಥ್ಯ ನೀಡಿರುವುದು ಆಗ್ನೇಯ ವಿಭಾಗದ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಸುಮಾರು 6-8 ಲಕ್ಷ ರೂ.ಗೆ ಡೀಲ್‌ ನಡೆದಿತ್ತು ಎಂದು ಹೇಳಲಾಗಿದೆ. ಈ ಸಂಬಂಧ ಈಗಾಗಲೇ ಆಗ್ನೇಯ ವಿಭಾಗದ ಪೊಲೀಸರು ವರದಿ ಸಿದ್ಧಪಡಿಸಿದ್ದು, ಒಂದೆರಡು ದಿನಗಳಲ್ಲೇ …

Read More »

ಭ್ರಷ್ಟಾಚಾರದ ಆರೋಪಮೆತ್ತಿಕೊಂಡಿಲ್ಲದ ಒಬ್ಬನೇ ಒಬ್ಬ ನಾಯಕನನ್ನು ಕರ್ನಾಟಕದ ಬಿಜೆಪಿಯಲ್ಲಿ ನೀವು ತೋರಿಸಿದರೆ ನಿಮ್ಮನ್ನು ಕರ್ನಾಟಕಕ್ಕೆ ಗೌರವದಿಂದ ಕರೆಸಿ ಸಾರ್ವಜನಿಕವಾಗಿ ಸನ್ಮಾನ

ಬೆಂಗಳೂರು, ಸೆಪ್ಟೆಂಬರ್‌ 26: ನಮ್ಮ ಸರ್ಕಾರದ ವಿರುದ್ದ ಭ್ರಷ್ಟಾಚಾರದ ಆರೋಪ ಹೊರಿಸಿ ಭಾಷಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರೇ, ಭ್ರಷ್ಟಾಚಾರದ ಆರೋಪದ ಕಳಂಕ ಮೆತ್ತಿಕೊಂಡಿಲ್ಲದ ಒಬ್ಬನೇ ಒಬ್ಬ ನಾಯಕನನ್ನು ಕರ್ನಾಟಕದ ಬಿಜೆಪಿಯಲ್ಲಿ ನೀವು ತೋರಿಸಿದರೆ ನಿಮ್ಮನ್ನು ಕರ್ನಾಟಕಕ್ಕೆ ಗೌರವದಿಂದ ಕರೆಸಿ ಸಾರ್ವಜನಿಕವಾಗಿ ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.   ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ ಅವರು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ಎರಡುವರೆ …

Read More »