ಬೈಲಹೊಂಗಲ: ರೈತ ಸಮುದಾಯದ ಅಧ್ಯಾತ್ಮಿಕ ಕೇಂದ್ರವಾಗಿರುವ, ಇತಿಹಾಸ ಪ್ರಸಿದ್ಧ ಇಲ್ಲಿನ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 18 ರಂದು ಸಂಜೆ 4.30ಕ್ಕೆ ನವಿಲಿನ ಕಳಶ ಹೊತ್ತ ಮಹಾರಥ ಎಳೆಯಲು ಭಕ್ತರು ಕಾಯುತ್ತಿದ್ದಾರೆ. 80 ಅಡಿ ಎತ್ತರದ ರಥಃ ಪ್ರತಿವರ್ಷ ಮರಡಿ ಬಸವೇಶ್ವರ ಜಾತ್ರೆಗೆ ಒಂದು ತಿಂಗಳ ಮುನ್ನವೇ ಸಿದ್ಧತೆ ಆರಂಭಿಸಲಾಗುತ್ತದೆ. ವಿಜಯದಶಮಿ ದಿನದಂದು ದೇವಸ್ಥಾನದಲ್ಲಿರುವ ಬೃಹತ್ ಆಕಾರದ ಕಲ್ಲಿನ ಗಾಲಿಗಳಿಗೆ ಪೂಜೆ ಸಲ್ಲಿಸಿ ಮೆರವಣಿಗೆ …
Read More »ಬಹುಮತ ಹೊಂದಿರುವ ಸರ್ಕಾರ ಬೀಳಿಸುವುದು ಹುಚ್ಚುತನದ ಪರಮಾವಧಿ: B.S.Y.
ಶಿವಮೊಗ್ಗ: ‘ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಕೆಲಸವನ್ನು ಯಾರೂ ಮಾಡುತ್ತಿಲ್ಲ. ಪೂರ್ಣ ಬಹುಮತ ಹೊಂದಿರುವ ಸರ್ಕಾರವನ್ನು ಬೀಳಿಸುವುದು ಹುಚ್ಚುತನದ ಪರಮಾವಧಿ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು. ‘ಸರ್ಕಾರ ಬೀಳಿಸುವುದಕ್ಕಾಗಿ ಕಾಂಗ್ರೆಸ್ ಶಾಸಕರನ್ನು ಯಾರೂ ಬಿಜೆಪಿಗೆ ಕರೆಯುತ್ತಿಲ್ಲ’ ಎಂದು ಶನಿವಾರ ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ‘ಕೋವಿಡ್ ಸಂದರ್ಭದಲ್ಲಿ ಜೀವ ಉಳಿಸುವ ಕೆಲಸ ಮಾಡಿದ್ದೇವೆ. ಯಾವುದೇ ಭ್ರಷ್ಟಾಚಾರ ಅಥವಾ ಹಣಕಾಸಿನ ಏರುಪೇರು ಆಗಿಲ್ಲ. ರಾಜ್ಯ ಸರ್ಕಾರ ದುರುದ್ದೇಶದಿಂದ …
Read More »ಕುಷ್ಟಗಿ: ಹರಾಜು ಹಣ ಪಾವತಿಸದಿದ್ದರೂ ಕರ ವಸೂಲಿ
ಕುಷ್ಟಗಿ: ಪುರಸಭೆ ವ್ಯಾಪ್ತಿಯ ದಿನದ ಸಂತೆಯಲ್ಲಿ ವ್ಯಾಪಾರಿಗಳಿಂದ ವರ್ಷದ ಅವಧಿಗೆ ಶುಲ್ಕ ವಸೂಲಿ ಮಾಡುವ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಮುಂಚಿತವಾಗಿ ಸಂಪೂರ್ಣ ಹಣ ಪಾವತಿಸದಿದ್ದರೂ ಸಂತೆಯಲ್ಲಿ ಶುಲ್ಕ ವಸೂಲಿಗೆ ಅವಕಾಶ ಕಲ್ಪಿಸಲಾಗಿದೆ ಎಂಬ ದೂರು ಕೇಳಿ ಬಂದಿದೆ. ತರಕಾರಿ, ಮಾಂಸದ ಅಂಗಡಿಗಳು, ಹಣ್ಣು, ಮಾರಾಟದ ಬಂಡಿ, ಫಾಸ್ಟ್‌ಫುಡ್, ಹೋಟೆಲ್ ಸೇರಿ ವಾರದ, ದೈನಂದಿನ ಸಂತೆ ಹಾಗೂ ಜಾನುವಾರು ಸಂತೆಯಲ್ಲಿ ವ್ಯಾಪಾರ ವಹಿವಾಟು ನಡೆಸುವವರಿಂದ ನಿಗದಿಪಡಿಸಿದ ಶುಲ್ಕ ವಸೂಲಿ ಮಾಡುವ ಹಕ್ಕನ್ನು …
Read More »ಬೆಳ್ಳುಳ್ಳಿ ಬೆಲೆ ಕೆ.ಜಿಗೆ ₹400: ಬಹುತೇಕ ತರಕಾರಿ ಬೆಲೆ ಸ್ಥಿರ
ರಾಯಚೂರು: ಮಳೆಗಾಲ ಮುಗಿದು ಚಳಿಗಾಲ ಪ್ರವೇಶ ಮಾಡಿದೆ. ಬಿಸಿಲ ಧಗೆ ಮುಂದುವರಿದರೂ ರಾತ್ರಿ ಸ್ವಲ್ಪ ಮಟ್ಟಿಗೆ ಸೆಕೆ ಕಡಿಮೆ ಇದೆ. ತರಕಾರಿ ಬೆಲೆಗಳಲ್ಲೂ ಏಳಿತವಾಗಿದೆ. ರಾಯಚೂರಿಗೆ ಹೊರ ಜಿಲ್ಲೆಗಳಿಂದ ತರಕಾರಿ ಬರುವುದು ಮುಂದುವರಿದೆ. ಬೆಳ್ಳುಳ್ಳಿ ಬೆಲೆ ಪ್ರತಿ ಕೆಜಿಗೆ ₹400 ತಲುಪಿದ್ದು, ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಗಜ್ಜರಿ, ಬೀಟ್‌ರೂಟ್, ತೊಂಡೆಕಾಯಿ, ಹಿರೇಕಾಯಿ ₹ 2 ಸಾವಿರ, ಡೊಣಮೆಣಸಿನಕಾಯಿ ₹1 ಸಾವಿರ, ನುಗ್ಗೆಕಾಯಿ ₹8 ಸಾವಿರ ಹೆಚ್ಚಾಗಿದೆ. ಆಲೂಗಡ್ಡೆ, ಮೆಣಸಿನಕಾಯಿ ಹಾಗೂ ಚವಳೆಕಾಯಿ …
Read More »ಹುಬ್ಬಳ್ಳಿ: ಕಾಯಕಯೋಗಿ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
ಹುಬ್ಬಳ್ಳಿ: ತಾಲ್ಲೂಕಿನ ಮಂಟೂರು, ಕಲಘಟಗಿ ತಾಲ್ಲೂಕಿನ ಬಮ್ಮಿಗಟ್ಟಿ ಅಡವಿಸಿದ್ಧೇಶ್ವರ ಮಠ ಹಾಗೂ ಶಿವಮೊಗ್ಗ ಜಿಲ್ಲೆ ಬಳ್ಳಿಗಾವಿಯ ಶ್ರೀ ಅಲ್ಲಮಪ್ರಭು ಅನುಭಾವ ಪೀಠ ವಿರಕ್ತಮಠದ ಪೀಠಾಧಿಪತಿಯಾಗಿದ್ದ ಶಿವಲಿಂಗೇಶ್ವರ ಸ್ವಾಮೀಜಿ (82) ಭಾನುವಾರ ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದಾರೆ. ಹೃದಯಾಘಾತವಾಗಿದ್ದ ಸ್ವಾಮೀಜಿ ಅವರನ್ನು ಇಲ್ಲಿನ ತತ್ವದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿದ್ದ ಅವರು ಭಾನುವಾರ ಬೆಳಿಗ್ಗೆ ಕೊನೆಯುಸಿರು ಎಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮಂಟೂರು ಮಠದ ಅವರಣದಲ್ಲಿ ಅಂತ್ಯಕ್ರಿಯೆ …
Read More »ರಾಜ್ಯ ಸರ್ಕಾರ ನಿಷ್ಕ್ರೀಯ: ಸಿ.ಸಿ.ಪಾಟೀಲ
ನರಗುಂದ: ‘ರಾಜ್ಯ ಸರ್ಕಾರ ಸಂಪೂರ್ಣ ನಿಷ್ಕ್ರೀಯವಾಗಿದೆ. ಮುಡಾ ಹಗರಣ ಬೇರೆಡೆ ಸೆಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯಿಂದ ₹50 ಕೋಟಿಗೆ ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಲು ಸಂಚು ನಡೆದಿದೆ ಎಂಬ ಗಂಭೀರ ಆರೋಪ ಮಾಡಿದ್ದು ಸರಿಯಲ್ಲ. ಇದು ನಿಜವಿದ್ದರೆ ತಮ್ಮದೇ ಸರ್ಕಾರವಿದೆ, ತನಿಖೆ ನಡೆಸಲಿ’ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು. ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಶನಿವಾರ ನಡೆದ ರೈತ ಸಂಪರ್ಕ ಕೇಂದ್ರದ ಗೋದಾಮು ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಬಳಿಕ …
Read More »ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಸುಟ್ಟು ಭಸ್ಮವಾದ ಕಿರಾಣಿ ಅಂಗಡಿ;ಓರ್ವನಿಗೆ ಗಾಯ
ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಸುಟ್ಟು ಭಸ್ಮವಾದ ಕಿರಾಣಿ ಅಂಗಡಿ;ಓರ್ವನಿಗೆ ಗಾಯ ಅಥಣಿ :ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕಿರಾಣಿ ಅಂಗಡಿ ಸುಟ್ಟು ಭಸ್ಮವಾದ ಘಟನೆ ಅಥಣಿ ತಾಲೂಕಿನ ಅಡಳ್ಳಿ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಿಗ್ಗೆ 9:00 ಗಂಟೆ ಸುಮಾರಿಗೆ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ನಂದಿಸಲು ಹೋದ ಇಬ್ಬರಿಗೆ ಗಾಯಗಳಾಗಿವೆ ಓರ್ವ ಬಾಲಕನಿಗೆ ಬೆಂಕಿ ತಿವ್ರತೆಗೆ ಸುಟ್ಟ ಗಾಯಗಳಾಗಿದ್ದು.ಅಪಾರ ಪ್ರಾಮಾನದ ವಸ್ತುಗಳು ನಾಶವಾಗಿವೆ.ಸುಭಾಸ್ ಮಹಾನಿಂಗ ಸೂರ್ಯವಂಶಿ ಮಾಲೀಕತ್ವದ ಅಪ್ಪಾಜಿ …
Read More »ಜಮೀರ್ ಹೇಳಿದ್ದು ಸರಿಯಲ್ಲ. ಕಪ್ಪು ಬಿಳುಪು ಅಂತ ಕರೆಯೋದು ಸರಿಯಲ್ಲ- ಡಿಸಿಎಂ ಡಿ.ಕೆ. ಶಿವಕುಮಾರ್
ಕುಮಾರಸ್ವಾಮಿಯವರನ್ನು ಕರಿಯ ಎಂದು ಕರೆದ ಜಮೀರ್ ಅಹ್ಮದ್… ಜಮೀರ್ ಹೇಳಿದ್ದು ಸರಿಯಲ್ಲ. ಕಪ್ಪು ಬಿಳುಪು ಅಂತ ಕರೆಯೋದು ಸರಿಯಲ್ಲ- ಡಿಸಿಎಂ ಡಿ.ಕೆ. ಶಿವಕುಮಾರ್ ಕುಮಾರಸ್ವಾಮಿಯವರನ್ನು ಕರಿಯ ಎಂದು ಕರೆದ ಜಮೀರ್ ಅಹ್ಮದ್… ಜಮೀರ್ ಹೇಳಿದ್ದು ಸರಿಯಲ್ಲ. ಕಪ್ಪು ಬಿಳುಪು ಅಂತ ಕರೆಯೋದು ಸರಿಯಲ್ಲ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ಚನ್ನಪಟ್ಟಣ ಉಪಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರನ್ನು ಕರಿಯ …
Read More »ತಂದೆಯಿಂದ ಕಾಟ: ಬಾಲಕಿ ರಕ್ಷಿಸಿದ ಹೆಬ್ಬಾಳಕರ
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು, ಮದ್ಯವ್ಯಸನಿ ತಂದೆಯಿಂದ ತೊಂದರೆಗೆ ಒಳಗಾಗಿದ್ದ ಬಾಲಕಿಯೊಬ್ಬಳನ್ನು ಶುಕ್ರವಾರ ರಕ್ಷಿಸಿ, ಆಕೆಯ ಕಲಿಕೆಗೆ ಹಾಸ್ಟೆಲ್ ವ್ಯವಸ್ಥೆ ಮಾಡಿದರು. ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ಅಂಗನವಾಡಿ ಕಟ್ಟಡದ ಭೂಮಿಪೂಜೆಯಲ್ಲಿ ಪಾಲ್ಗೊಂಡಿದ್ದ ಸಚಿವೆ ಹೆಬ್ಬಾಳಕರ ಅವರನ್ನು ಭೇಟಿಯಾದ 12 ವರ್ಷದ ಬಾಲಕಿ ಸಮಸ್ಯೆ ಹೇಳಿ ಕಣ್ಣೀರು ಹಾಕಿದಳು. ಬಾಲಕಿಯ ಜೊತೆಗೆ ಅವಳ ಅಜ್ಜಿಯೂ ಪರಿಸ್ಥಿತಿ ಮನವರಿಕೆ ಮಾಡಿದರು. ‘ಅಪ್ಪ ಮದ್ಯವ್ಯಸನಿ ಆಗಿದ್ದು, ಅವ್ವನಿಗೆ ನಿತ್ಯವೂ …
Read More »ಬಟ್ಟೆ ಹರಿದು ಮಹಿಳೆಯರ ಮೇಲೆ ಹಲ್ಲೆ: ದೂರು ದಾಖಲು
ಬೆಳಗಾವಿ: ಇಲ್ಲಿನ ವಡ್ಡರವಾಡಿ ಪ್ರದೇಶದಲ್ಲಿ ಮಹಿಳೆಯರಿಬ್ಬರನ್ನು ರಸ್ತೆಗೆ ಎಳೆದು ತಂದು ಬಟ್ಟೆ ಹರಿದು ಹಲ್ಲೆ ಮಾಡಿದ ಪ್ರಕರಣ ತಡವಾಗಿ ಗೊತ್ತಾಗಿದೆ. ಕಳೆದ ಸೋಮವಾರ (ನ.11) ರಾತ್ರಿ ಘಟನೆ ನಡೆದಿದೆ. ಶನಿವಾರ ಇದರ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇಂದ್ರಾ ಅಷ್ಟೇಕರ್, ಹೂವಪ್ಪ ಅಷ್ಟೇಕರ್, ಮಣಿಕಂಠ ಅಷ್ಟೇಕರ್ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಆರೋಪಿಗಳು ಎಂದು ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಾಗಿದೆ. ವಡ್ಡರವಾಡಿಯ ಮಹಿಳೆಯೊಬ್ಬರನ್ನು ಮಹಾರಾಷ್ಟ್ರಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ಅವರಿಗೆ …
Read More »
Laxmi News 24×7