Breaking News

ರಾಜ್ಯ

ಮಹಿಳೆಯರ ಒಡವೆ ಮತ್ತು ಹಣ ಕಳವು ಮಾಡುತ್ತಿದ್ದ ಮೂವರು ಮಹಿಳೆಯರನ್ನು ಗೌರಿಬಿದನೂರು ನಗರ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ: ಮಹಿಳೆಯರ ಒಡವೆ ಮತ್ತು ಹಣ ಕಳವು ಮಾಡುತ್ತಿದ್ದ ಮೂವರು ಮಹಿಳೆಯರನ್ನು ಗೌರಿಬಿದನೂರು ನಗರ ಪೊಲೀಸರು ಬಂಧಿಸಿದ್ದಾರೆ. ನ.16ರಂದು ಶಾಂತಕುಮಾರಿ ಎಂಬವರು ತಾವು ಬೆಂಗಳೂರಿಗೆ ಹೋಗಲು ನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಕತ್ತಿನಲ್ಲಿದ್ದ ಸುಮಾರು 50 ಗ್ರಾಂ ತೂಕದ ಎರಡೆಳೆಯ ಬಂಗಾರದ ಚೈನ್ ಅನ್ನು ಬುರ್ಕಾ ಧರಿಸಿದ್ದ ಮಹಿಳೆಯರು ಕಳವು ಮಾಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಡಿ.6ರಂದು ರತ್ನಮ್ಮ ಎಂಬವರು ತಾವು ಬೆಂಗಳೂರಿಗೆ ಹೋಗಲು ಬಸ್ ಹತ್ತುವಾಗ ಬ್ಯಾಗ್​ನಲ್ಲಿದ್ದ …

Read More »

ಬೈಕ್ ವ್ಹೀಲಿಂಗ್ ವೇಳೆ ಅಪಘಾತವಾಗಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ದೇವನಹಳ್ಳಿ: ಬೈಕ್ ವ್ಹೀಲಿಂಗ್ ಮಾಡುವ ವೇಳೆ ಎದುರಗಡೆಯಿಂದ ಬರುತ್ತಿದ್ದ ಕ್ಯಾಂಟರ್​ಗೆ ಡಿಕ್ಕಿ ಹೊಡೆದು ಯುವಕರಿಬ್ಬರು ಮೃತಪಟ್ಟ ಘಟನೆ ದೇವನಹಳ್ಳಿಯ ವಿಜಯಪುರ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ವಿಜಯಪುರ ಪಟ್ಟಣದ ಮನೋಜ್ (19) ಮತ್ತು ಹರ್ಭಾಜ್ (19) ಮೃತರು. ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಇಂದು ಬೆಳಗ್ಗೆ ಮಳೆಯ ನಡುವೆ ಇಬ್ಬರು ದ್ವಿಚಕ್ರ ವಾಹನದಲ್ಲಿ ಬೈಕ್​ ವ್ಹೀಲಿಂಗ್​ ಮಾಡುತ್ತಿದ್ದರು. ಈ ವೇಳೆ ಎದುರುಗಡೆ ಬರುತ್ತಿದ್ದ ಕ್ಯಾಂಟರ್​ಗೆ ಡಿಕ್ಕಿ ಹೊಡೆದು ತೀವ್ರ …

Read More »

ಗೋಕಾಕ ಹಿಲ್ ಗಾರ್ಡನ್ ಕಛೇರಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ.

ಗೋಕಾಕ ಹಿಲ್ ಗಾರ್ಡನ್ ಕಛೇರಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ. ಗೋಕಾಕ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನಗರದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹಿಲ್ ಗಾರ್ಡನ್ ಕಛೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ವಿವೇಕ ಜತ್ತಿ ಅವರು ಮಾತನಾಡಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದ ಭಾರತದ ಹಿರಿಯ ಮುತ್ಸದ್ದಿಯನ್ನು ಕಳೆದುಕೊಂಡಿದೆ. ಮೃದು ಸ್ವಭಾವದ ಅರ್ಥಿಕ …

Read More »

ಭಕ್ತಿಭಾವದಲ್ಲಿ ನಡೆದ ಕಂಗ್ರಾಳಿ ಬಿ.ಕೆ. ಗ್ರಾಮದೇವತೆ ಶ್ರೀ ಮಹಾಲಕ್ಷ್ಮೀಯ ಜನ್ಮೋತ್ಸವ ಕಂಗ್ರಾಳಿ ಬಿ.ಕೆ. ಗ್ರಾಮದೇವತೆ

ಶ್ರೀ ಮಹಾಲಕ್ಷ್ಮೀಯ ಜನ್ಮೋತ್ಸವ ಉತ್ಸಾಹದಲ್ಲಿ ನಡೆದ ಉಡಿ ತುಂಬುವ ಕಾರ್ಯಕ್ರಮ ವಿವಿಧ ಧಾರ್ಮಿಕ ಕಾರ್ಯಕ್ರಮ ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿ.ಕೆ. ಗ್ರಾಮದೇವತೆ ಶ್ರೀ ಮಹಾಲಕ್ಷ್ಮೀಯ ಜನ್ಮೋತ್ಸವ ಕಾರ್ಯಕ್ರಮ ಅತ್ಯುತ್ಸಾಹದಲ್ಲಿ ನಡೆಯಿತು. ಇಂದು ಶುಕ್ರವಾರದಂದು ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿ.ಕೆ. ಗ್ರಾಮದೇವತೆ ಶ್ರೀ ಮಹಾಲಕ್ಷ್ಮೀಯ ಜನ್ಮೋತ್ಸವ ಕಾರ್ಯಕ್ರಮ ಅತ್ಯುತ್ಸಾಹದಲ್ಲಿ ನಡೆಯಿತು. ಈ ನಿಮಿತ್ಯ ದೇವಿಯ ಉಡಿ ತುಂಬು ಕಾರ್ಯಕ್ರಮ ನಡೆಯಿತು. ಬೆಳಿಗ್ಗೆಯಿಂದಲೇ ಪೂಜೆ ಪುನಸ್ಕಾರಗಳು ಆರಂಭಗೊಂಡವು. ಗ್ರಾಮದಲ್ಲಿ ವಾದ್ಯಗಳ ಮೇಳದೊಂದಿಗೆ ಭಂಡಾರ …

Read More »

ಅರ್ಥಶಾಸ್ತ್ರದ ವಿದ್ಯಾರ್ಥಿಗಳಿಗಾಗಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ- ಡಿಸಿಎಂ ಡಿ.ಕೆ.ಶಿವಕುಮಾರ್

ಅರ್ಥಶಾಸ್ತ್ರದ ವಿದ್ಯಾರ್ಥಿಗಳಿಗಾಗಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ- ಡಿಸಿಎಂ ಡಿ.ಕೆ.ಶಿವಕುಮಾರ್ ಅರ್ಥಶಾಸ್ತ್ರದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಮಾಜಿ ಪಿಎಂ ಡಾ. ಮನಮೋಹನ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರವನ್ನು ಕಲಿಯುವ ವಿದ್ಯಾರ್ಥಿಗಳಿಗಾಗಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಬೇಕೆಂದರು. ಪ್ರಧಾನಿ ಡಾ. ಮನಮೋಹನ ಸಿಂಗ್ ಇನ್ನಿಲ್ಲ. …

Read More »

ಹುಬ್ಬಳ್ಳಿ-ಕನ್ಯಾಕುಮಾರಿ ನಡುವೆ ವಿಶೇಷ ರೈಲು ಸೇವೆ ಆರಂಭ

ಹುಬ್ಬಳ್ಳಿ: ಕ್ರಿಸ್ಮಸ್ ಹಬ್ಬದ ನಂತರ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಪೂರೈಸಲು ನೈಋತ್ಯ ರೈಲ್ವೆ, ಎಸ್ಎಸ್ಎಸ್ ಹುಬ್ಬಳ್ಳಿ-ಕನ್ಯಾಕುಮಾರಿ ನಿಲ್ದಾಣಗಳ ನಡುವೆ ಪ್ರತೀ ದಿಕ್ಕಿನಲ್ಲಿ 3 ಟ್ರಿಪ್ ವಿಶೇಷ ರೈಲುಗಳನ್ನು ಓಡಿಸಲಿದೆ. ರೈಲು ಸಂಖ್ಯೆ 07367/07368 ಎಸ್ಎಸ್ಎಸ್ ಹುಬ್ಬಳ್ಳಿ-ಕನ್ಯಾಕುಮಾರಿ-ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್​ಪ್ರೆಸ್​ ವಿಶೇಷ (3 ಟ್ರಿಪ್​​ಗಳು) ರೈಲು ಸಂಖ್ಯೆ 07367 ಎಸ್ಎಸ್ಎಸ್ ಹುಬ್ಬಳ್ಳಿ-ಕನ್ಯಾಕುಮಾರಿ ಎಕ್ಸ್​ಪ್ರೆಸ್​ ವಿಶೇಷ ರೈಲು ಡಿಸೆಂಬರ್ 30, ಜನವರಿ 6 ಮತ್ತು 13, 2025ರಂದು ಸಂಜೆ 4 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ …

Read More »

ಗದಗ ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಆರು ಜನರಿಗೆ ಚೂರಿಯಿಂದ ಇರಿತ

ಗದಗ, ಡಿಸೆಂಬರ್ 27: ಗದಗ ನಗರದಲ್ಲಿ ಪುಡಿ ರೌಡಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಜುಮ್ಮಾ ಮಸೀದಿ ಬಳಿ ಗುರುವಾರ ಸಂಜೆ ಆರು ಜನರಿಗೆ ಚೂರಿಯಿಂದ ಇರಿತಯಲಾಗಿದ್ದು, ಗಾಯಾಳುಗಳ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಅನಿಲ್ ಮುಳ್ಳಾಳ (27), ಚೇತನ್ ಮುಳ್ಳಾಳ, ವಿನಾಯಕ್ ಮುಳ್ಳಾಳ, ಶಾರುಖ್ ಮುಲ್ಲಾ, ಅಭಿಷೇಕ್ ಹರ್ಲಾಪುರ, ಕಿರಣ್ ಸಾಲಿಮಠ ಹೀಗೆ ಆರು ಮಂದಿ ಗಾಯಗೊಂಡಿದ್ದಾರೆ. ಇಬ್ಬರ ಕುತ್ತಿಗೆಗೆ ಗಂಭೀರ ಗಾಯಗಳಾಗಿವೆ. ಅನಿಲ್ …

Read More »

ನಾಳೆ ಕರೆ ಕೊಟ್ಟಿದ್ದ ವಿಜಯಪುರ ಬಂದ್ ಮುಂದೂಡಿಕೆ

ವಿಜಯಪುರ, : ಬಿಆರ್​ ಅಂಬೇಡ್ಕರ್ ಅವರ ಕುರಿತಾಗಿ ಕೇಂದ್ರ ಸಚಿವ ಅಮಿತ್ ಶಾ (Amit Shah) ಅವಮಾನಕಾರಿ ಹೇಳಿಕೆ ಖಂಡಿಸಿ ವಿವಿಧ ದಲಿತ ಪರ ಸಂಘಟನೆಗಳು ನಾಳೆ ವಿಜಯಪುರ ಬಂದ್​ಗೆ ಕರೆ ನೀಡಿದ್ದರು. ಆದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನಲೆ ವಿಜಯಪುರ ಬಂದ್​ ಅನ್ನು ಹೋರಾಟಗಾರರು ಮುಂದೂಡಿದ್ದಾರೆ. ನಾಳೆ ಬದಲಾಗಿ ಡಿಸೆಂಬರ್ 30ರಂದು ಬಂದ್​​ಗೆ ಕರೆ ನೀಡಿದ್ದಾರೆ.ಮಾಜಿ ಶಾಸಕ ಪ್ರೊ. ರಾಜು ಅಲಗೂರು, ಸೋಮನಾಥ ಕಳ್ಳಿಮನಿ, ಅಬ್ದುಲ್ ಹಮೀದ್ ಮುಶ್ರೀಫ್ ಹಾಗೂ …

Read More »

ಸಿನಿಮಾ ಶೈಲಿಯಲ್ಲಿ ಬ್ಯಾಂಕಿಗೆ ವಂಚನೆ: ತಂಗಿ ಮದ್ವೆ ಸಾಲಕ್ಕೆ ಅಣ್ಣ ಜೈಲು ಸೇರುವ ಪರಿಸ್ಥಿತಿ

ನೆಲಮಂಗಲ, ಡಿಸೆಂಬರ್​ 27: ಆಭರಣ ಮೌಲ್ಯಮಾಪಕನಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್​ಗೆ 23 ಲಕ್ಷಕ್ಕೂ ಹೆಚ್ಚು ಹಣ ವಂಚನೆ (fraud) ಮಾಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ. ಆಭರಣ ಮೌಲ್ಯಮಾಪಕ ಮಂಜುನಾಥ ವಂಚಕ. ನೆಲಮಂಗಲ ಪೊಲೀಸ್ ಠಾಣೆಗೆ ಮ್ಯಾನೇಜರ್ ಆನಂದ್ ದೂರು ನೀಡುತ್ತಿದ್ದಂತೆ ಇತ್ತ ವಂಚಕ ಪರಾರಿ ಆಗಿದ್ದಾರೆ. ತಂಗಿಯ ಮದುವೆ ಸಾಲಕ್ಕೆ ಅಣ್ಣ ಜೈಲು ಸೇರುವ ಪರಿಸ್ಥಿತಿ ಎದರಾಗಿದೆ.ಅರ್ಧ ಕೆಜಿಯಷ್ಟು ನಕಲಿ ಚಿನ್ನಾಭರಣ ಅಡವಿಟ್ಟು ಮಂಜುನಾಥ …

Read More »

ಮುದ್ದುಲಕ್ಷ್ಮಿ‌’ ನಟ ಚರಿತ್ ಬಾಳಪ್ಪ ಬಂಧನ

ಕಿರುತೆರೆ ನಟ ಚರಿತ್ ಬಾಳಪ್ಪ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. ಹಾಗಾಗಿ ಆರ್​ಆರ್ ನಗರ ಠಾಣೆಯ ಪೊಲೀಸರು ಅವರನ್ನು ಅರೆಸ್ಟ್​ ಮಾಡಿದ್ದಾರೆ. ಕನ್ನಡದ ‘ಮುದ್ದುಲಕ್ಷ್ಮಿ‌’ ಸೇರಿದಂತೆ ಹಲವು ಸೀರಿಯಲ್​ನಲ್ಲಿ ಚರಿತ್ ನಟಿಸಿದ್ದಾರೆ. ತೆಲುಗಿನಲ್ಲೂ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ. ತನಗೆ ಪರಿಚಯವಿದ್ದ ಗೆಳತಿಗೆ ಲೈಂಗಿಕ ದೌರ್ಜನ್ಯ ಎಸಗಿರೋ ಆರೋಪ ಈಗ ಚರಿತ್ ಬಾಳಪ್ಪ ಮೇಲೆ ಎದುರಾಗಿದೆ. ಪ್ರೀತಿಸುತ್ತೇನೆ ಅಂತ ಹೇಳಿ ದೈಹಿಕ ಸಂಪರ್ಕಕ್ಕೆ ಒತ್ತಾಯ ಮಾಡಿದ್ದಾರೆ ಎಂದು ಯುವತಿಯೊಬ್ಬರು …

Read More »