Breaking News

ರಾಜ್ಯ

ಬೆಂಗಳೂರಲ್ಲಿ ಹಾಡಹಗಲೇ ಇಂಥಾ ಘಟನೆ ನಡೆಯುತ್ತಾ ಅನ್ನೋ ಭಯ ಹುಟ್ಟಿಸುತ್ತಿದೆ.

ಬೆಂಗಳೂರು: ಇತ್ತೀಚೆಗಷ್ಟೇ ಚಾಕು ಹಿಡಿದ ವ್ಯಕ್ತಿಯೊಬ್ಬ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿ ಇಬ್ಬರ ಕೊಂದು ಹಾಕಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಅಂಥದ್ದೇ ಭಯಾನಕ ವಿಡಿಯೋವೊಂದು ವೈರಲ್ ಆಗಿದೆ. ಬೆಂಗಳೂರಿನಲ್ಲಿ ಸದ್ಯ ವೈರಲ್ ಆಗಿರೋ ವಿಡಿಯೋ ನೋಡ್ತಿದ್ರೆ ನಿಜಕ್ಕೂ ಬೆಂಗಳೂರಲ್ಲಿ ಹಾಡಹಗಲೇ ಇಂಥಾ ಘಟನೆ ನಡೆಯುತ್ತಾ ಅನ್ನೋ ಭಯ ಹುಟ್ಟಿಸುತ್ತಿದೆ. ಕೈಯಲ್ಲಿ ಡ್ಯಾಗರ್ ಹಿಡಿದು ಡರೋಡೆಗೆ ಸ್ಕೆಚ್! ಯೆಸ್.. ಸಿಟಿ ಮಾರ್ಕೆಟ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಲೈವ್ ರಾಬರಿಯ …

Read More »

ಹೆಣ್ಣುಮಕ್ಕಳ ತಂದೆತಾಯಿಗಳೇ ಕಾರಣ ಎಂಬ ಆಘಾತಕಾರಿ ಹೇಳಿಕೆ ನೀಡಿ ತಮ್ಮ ಸರ್ಕಾರವನ್ನು ಮುಜುಗರಕ್ಕೆ ನೂಕಿದ್ದಾರೆ .

ಜಾರ್ಖಂಡ್​ನಲ್ಲಿ ಆಡಳಿತರೂಢ ಜೆಎಮ್​ಎಮ್ ಪಕ್ಷದ ಲೊಮಿನ್ ಹೆಂಬ್ರೊಮ್ ಎಂಬ ಹೆಸರಿನ ಶಾಸಕ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಅಪಹರಣದಂಥ ಪ್ರಕರಣಗಳು ಹೆಚ್ಚಾಗಲು ಹೆಣ್ಣುಮಕ್ಕಳ ತಂದೆತಾಯಿಗಳೇ ಕಾರಣ ಎಂಬ ಆಘಾತಕಾರಿ ಹೇಳಿಕೆ ನೀಡಿ ತಮ್ಮ ಸರ್ಕಾರವನ್ನು ಮುಜುಗರಕ್ಕೆ ನೂಕಿದ್ದಾರೆ . ಕಳೆದ ವಾರ ರಾಜ್ಯದ ದುಮ್ಕಾ ಎಂಬಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಉಲ್ಲೇಖಿಸಿ ಹೆಂಬ್ರೊಮ್ ಹಾಗೆ ಹೇಳಿದ್ದಾರೆ . ಇದೇ ಕ್ಷೇತ್ರದಲ್ಲಿ ವಿಧಾನಸಭೆಗೆ ಉಪಚುನಾವಣೆ ನಡೆಯುತ್ತಿರುವುದರಿಂದ ಜೆ …

Read More »

ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಖಂಗಾಂ ಎಂಬ ಪುಟ್ಟ ಹಳ್ಳಿಯಿಂದ ವೃದ್ಧೆಯೊಬ್ಬರು ಬರೋಬ್ಬರಿ 2,200 ಕಿ.ಮೀ ದೂರವಿರುವ ಮಾತಾ ವೈಷ್ಣೋದೇವಿಯ ದೇವಸ್ಥಾನಕ್ಕೆ ತೆರಳಲು ಮುಂದಾಗಿದ್ದಾರೆ.

ಮುಂಬೈ: ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಖಂಗಾಂ ಎಂಬ ಪುಟ್ಟ ಹಳ್ಳಿಯಿಂದ ವೃದ್ಧೆಯೊಬ್ಬರು ಬರೋಬ್ಬರಿ 2,200 ಕಿ.ಮೀ ದೂರವಿರುವ ಮಾತಾ ವೈಷ್ಣೋದೇವಿಯ ದೇವಸ್ಥಾನಕ್ಕೆ ತೆರಳಲು ಮುಂದಾಗಿದ್ದಾರೆ. ಅದು ಬಸಲ್ಲಿ ಅಥವಾ ಕಾರಿನಲ್ಲಿ ಅಲ್ಲ; ಬದಲಿಗೆ ಸೈಕಲ್​ನಲ್ಲಿ. ಹೌದು, ರೇಖಾ ದೇವ್ಭಂಕರ್​ ಎಂಬುವ 68 ವರ್ಷದ ವೃದ್ಧೆ ಮಹಾರಾಷ್ಟ್ರದ ತಮ್ಮ ಹಳ್ಳಿಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿರುವ ವೈಷ್ಣೋದೇವಿಯ ಸನ್ನಿಧಾನಕ್ಕೆ ಹೋಗಿ ದೇವಿಯ ದರ್ಶನ ಪಡೆಯಲು ಮುಂದಾಗಿದ್ದಾರೆ. ಪ್ರಯಾಣದ ವೇಳೆ ತಮಗೆ ಬೇಕಾಗುವ ಅಗತ್ಯ ವಸ್ತುಗಳನ್ನ …

Read More »

ಸಿಡಿಲು ಬಡಿದು ಕುರಿಗಾರರ 45 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.

ಸವದತ್ತಿ : ಇಂದು ತಾಲೂಕಿನಾದ್ಯಂತ ಸುರಿದ ಗುಡುಗು ಸಹಿತ ಸಿಡಿಲು ಭಾರಿ ಮಳೆಗೆ ನವಿಲುತೀರ್ಥ ಡ್ಯಾಮ್ ಹತ್ತಿರ ಸಿಡಿಲು ಬಡಿದು ಕುರಿಗಾರರ 45 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.   ಸ್ಥಳಕ್ಕೆ ಶಾಸಕ ಹಾಗೂ ವಿಧಾನಸಭೆಯ ಉಪಸಭಾದ್ಯಕ್ಷ ಆನಂದ ಮಾಮನಿ ಹಾಗೂ ತಾಲೂಕು ದಂಡಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ನಂತರ ಕುರಿಗಾರರಿಗೆ ಸೂಕ್ತ ಪರಿಹಾರ ನೀಡುವಂತೆ ತಾಲೂಕು ದಂಡಾಧಿಕಾರಿಗಳಿಗೆ ಆನಂದ ಮಾಮನಿ ಸೂಚಿಸಿದರು.  

Read More »

ಯಡಿಯೂರಪ್ಪ ಸಿಎಂ ಆಗಿರಲ್ಲ ಎಂಬ ಮಾತು ಸದ್ಯ ಹೆಚ್ಚಾಗಿ ಕೇಳಿ ಬರುತ್ತಿದೆ. ಶಾಸಕ ಯತ್ನಾಳ ಹೇಳಿಕೆಗೆ  ಬಾದಾಮಿಯಲ್ಲಿ ಪ್ರತಿಕ್ರಿಯೆ

ಬಾಗಲಕೋಟೆ : ನಾವಂತೂ ಸರ್ಕಾರವನ್ನು ಬೀಳಿಸೋಕೆ ಹೋಗಲ್ಲ. ಒಂದು ವೇಳೆ ಅವರ ತಿಕ್ಕಾಟದಿಂದಲೇ ಸರ್ಕಾರ ಬಿದ್ದು ಹೋದರೆ ನಾವು ಚುನಾವಣೆ ಎದುರಿಸಲು ಸಿದ್ದರಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಶಾಸಕ ಯತ್ನಾಳ ಹೇಳಿಕೆಗೆ  ಬಾದಾಮಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಹಳ ದಿನ ಯಡಿಯೂರಪ್ಪ ಸಿಎಂ ಆಗಿರಲ್ಲ ಎಂಬ ಮಾತು ಸದ್ಯ ಹೆಚ್ಚಾಗಿ ಕೇಳಿ ಬರುತ್ತಿದೆ. ಯಡಿಯೂರಪ್ಪನವರನ್ನು ತೆಗೆಯಬೇಕೆಂದು ಬಹಳ ದೊಡ್ಡ ಚರ್ಚೆ ನಡೆದಿದೆ. ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸುವ …

Read More »

ಸಿದ್ದರಾಮಯ್ಯ ಭೇಟಿ ಕೊಟ್ಟ ವೇಳೆ ಅವರ ಎದುರು ಪ್ರವಾಹ ಸಂತ್ರಸ್ತೆಯೊಬ್ಬರು ತಮ್ಮ ಅಳಲು ತೋಡಿಕೊಳ್ಳಲು ಮುಂದಾದರು.

ಬಾಗಲಕೋಟೆ: ತಾವು ಪ್ರತಿನಿಧಿಸುವ ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಕೊಟ್ಟ ವೇಳೆ ಅವರ ಎದುರು ಪ್ರವಾಹ ಸಂತ್ರಸ್ತೆಯೊಬ್ಬರು ತಮ್ಮ ಅಳಲು ತೋಡಿಕೊಳ್ಳಲು ಮುಂದಾದರು. ತಮಗೊಂದು ಸೂರಿಗಾಗಿ ಸಿದ್ದರಾಮಯ್ಯ ಕಚೇರಿಗೆ ಅರ್ಜಿ ಸಲ್ಲಿಸಲು ಬಾದಾಮಿ ತಾಲೂಕಿನ ನೆಲವಿಗಿ ಗ್ರಾಮದ ಯಲ್ಲವ್ವ ಹನಮಂತಪ್ಪ ಗಾರವಾಡ ಬಂದಿದ್ದರು. ಆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಸರಿಯಾಗಿ ಸ್ಪಂದಿಸಲಿಲ್ಲ ಎಂದು ಅವರು ತಮ್ಮ ಆಕ್ರೋಶ ಹೊರಹಾಕಿದರು.    ಇದ್ದವರು ಸರ್ಕಾರದಿಂದ ಎರಡೆರಡು ಮನೆ ಹಾಕಿಸಿಕೊಂಡಾರ. …

Read More »

ಬಿಎಸ್‌ವೈ ಇಳಿಸಲು ಬಿಜೆಪಿಯಲ್ಲಿ ದೊಡ್ಡ ಚರ್ಚೆ ನಡೆದಿದೆ. ಸಿದ್ದರಾಮಯ್ಯ

ಬೆಂಗಳೂರು: ಬಿಎಸ್‌ವೈ ಇಳಿಸಲು ಬಿಜೆಪಿಯಲ್ಲಿ ದೊಡ್ಡ ಚರ್ಚೆ ನಡೆದಿದೆ. ನಾವಂತೂ ರಾಜ್ಯ ಸರ್ಕಾರವನ್ನು ಬೀಳಿಸೋಕೆ ಹೋಗಲ್ಲ ಎಂದು ಬಾದಾಮಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುವ ವೇಳೆ ಹೇಳಿದ್ದಾರೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಮಾರಂಭವೊಂದರಲ್ಲಿ ಬಿಎಸ್‌ವೈ ಮುಖ್ಯಮಂತ್ರಿಯಾಗಿ ಬಹಳ ದಿನ ಇರುವುದಿಲ್ಲ, ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗೋದು ಎಂದು ಹೇಳಿದ್ದರು. ಈ ಹೇಳಿಕೆ ಸಂಬಂಧಿಸಿ ಪ್ರತಿಕ್ರಿಯೆಸಿರುವ ಸಿದ್ದು ಈ ರೀತಿ ಹೇಳಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಶಾಸಕ …

Read More »

ಸಂಜೆ 6 ಗಂಟೆಗೆ ದೇಶದ ಜನರಿಗೆ ಸಂದೇಶವೊಂದನ್ನು ನೀಡಲಿದ್ದೇನೆ: ನರೇಂದ್ರ ಮೋದಿ

ಹೊಸದಿಲ್ಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನರೇಂದ್ರ ಮೋದಿ ಭಾಷಣ ದೇಶಾದ್ಯಂತ ಕುತೂಹವನ್ನು ಮೂಡಿಸಿದೆ. ಮಂಗಳವಾರ ಮಧ್ಯಾಹ್ನ ನರೇಂದ್ರ ಮೋದಿ ಈ ಕುರಿತು ಟ್ವೀಟ್ ಮಾಡಿದ್ದಾರೆ. ಸಂಜೆ 6 ಗಂಟೆಗೆ ದೇಶದ ಜನರಿಗೆ ಸಂದೇಶವೊಂದನ್ನು ನೀಡಲಿದ್ದೇನೆ ಎಂದು ಹೇಳಿದ್ದಾರೆ. ನವರಾತ್ರಿಯ ಸಂದರ್ಭದಲ್ಲಿ ಮೋದಿ ಭಾಷಣ ಮಾಡುತ್ತಿದ್ದಾರೆ. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ಬಳಿಕ ಅನ್ ಲಾಕ್ 3.0 ಜಾರಿಗೆ ಬಂದ …

Read More »

B.S.Y.ಇವರು ಶಿವಮೊಗ್ಗ ಮುಖ್ಯಮಂತ್ರಿಯೋ ? ಕರ್ನಾಟಕದ ಮುಖ್ಯಮಂತ್ರಿಯೋ ?: ಉಮೇಶ ಕತ್ತಿ

ಬೆಂಗಳೂರು : ಬಿಜೆಪಿ ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಇದೆ ಎಂಬುವುದು ಪುಃನ ಪುನಹ ಸಾಭಿತಾಗುತ್ತಿದೆ. ಬಿಜೆಪಿ ಶಾಸಕರೇ ಸಿಎಂ ಬಿ.ಎಸ್.ಯಡಿಯೂರಪ್ಪನ ವಿರುದ್ಧ ಅಸಮಾಧಾನ ಹೊರ  ಹಾಕುತ್ತಿದ್ದಾರೆ. ವಿಜಯಪುರದಲ್ಲಿ  ಬಿಜೆಪಿ ಶಾಸಕ ಬಸವರಾಜ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ. ಸಿಎಂ ಬಿಎಸ್.ಯಡಿಯೂರಪ್ಪ ಕೇಂದ್ರಕ್ಕೂ ಸಾಕಾಗಿದ್ದಾರೆ. ಇನ್ನು ಬಹಳ ದಿನ ಅಧಿಕಾರದಲ್ಲಿ ಇರುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಜತೆಗೆ ಕ್ಷೇತ್ರಕ್ಕೆ ನೀಡಿದ ಅನುದಾನ ವಾಪಾಸ ಪಡೆದಿರುವುದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ ಅವರು, ಅನುದಾನ …

Read More »

ಭೀಮಾ ನದಿ ಪ್ರವಾಹ ಮುಂದುವರೆದಿದೆ.

ಕಲಬುರ್ಗಿ: ಕಲಬುರ್ಗಿ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹ ಮುಂದುವರೆದಿದೆ. ಪ್ರವಾಹದಲ್ಲಿ ಜನರ ಬದುಕೇ ಕೊಚ್ಚಿ ಹೋಗಿದೆ. ಮನೆಗಳ ಹಾನಿಯ ಜೊತೆ ಅಂಗಡಿಗಳಲ್ಲಿಯೂ ಅಪಾರ ಹಾನಿ ಸಂಭವಿಸಿದೆ. ಭೀಮಾ ನದಿ ಪ್ರವಾಹಕ್ಕೆ ಕಲಬುರ್ಗಿ ಜಿಲ್ಲೆ ಜನತೆ ತತ್ತರಿಸಿ ಹೋಗಿದ್ದಾರೆ. ಅಫಜಲಪುರ ತಾಲೂಕಿನಲ್ಲಿ ಪ್ರವಾಹ ಒಂದಷ್ಟು ಇಳಿಮುಖವಾಗಿದೆ. ಆದರೆ ಕಲಬುರ್ಗಿ, ಜೇವರ್ಗಿ, ಶಹಾಬಾದ್ ಹಾಗು ಚಿತ್ತಾಪುರ ತಾಲೂಕುಗಳಲ್ಲಿ ಪ್ರವಾಹ ಮುಂದುವರಿದಿದೆ. ಭಾರಿ ಪ್ರವಾಹದಲ್ಲಿ ಜನರ ಬದುಕೇ ಕೊಚ್ಚಿ ಹೋಗಿದೆ. ಕಲಬುರ್ಗಿ ತಾಲೂಕಿನ ಸರಡಗಿ …

Read More »