ಗೋಕಾಕ : 8ನೇ ಬಾರಿಗೆ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ, ನೇಗಿಲಯೋಗಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಸರ್ವತೋಮುಖ ಏಳ್ಗೆ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ವಿಶೇಷ ಆದ್ಯತೆ ನೀಡುವ ಮೂಲಕ ಸರ್ವರಿಗೂ ಸಮಪಾಲು ನೀಡಿದ್ದಾರೆಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿದರು. ಸೋಮವಾರದಂದು 2021-22 ನೇ ಸಾಲಿನ ರಾಜ್ಯ ಸರ್ಕಾರದ ಆಯವ್ಯಯ ಪತ್ರವನ್ನು ಮಾರ್ಚ್ 8 ರ ವಿಶ್ವ ಮಹಿಳಾ ದಿನಾಚರಣೆಯಂದು ಮಂಡಿಸಿರುವ ಮುಖ್ಯಮಂತ್ರಿಗಳು …
Read More »ರೈತರು ಪ್ರತಿಭಟನೆ ಮಾಡುತ್ತಿರುವ ಸಿಂಘುವಿನಲ್ಲಿ ಗುಂಡಿನ ದಾಳಿ
ದೆಹಲಿ : ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಮತ್ತು ಹರಿಯಾಣ ಗಡಿ ಪ್ರದೇಶ ಸಿಂಘುವಿನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ನಿನ್ನೆ ರಾತ್ರಿ(ಭಾನುವಾರ) ಗುಂಡಿನ ದಾಳಿ ನಡೆದಿದೆ. ಅಪರಿಚಿತ ನಾಲ್ವರು ವ್ಯಕ್ತಿಗಳು ಕಾರಿನಲ್ಲಿ ಬಂದು ಗುಂಡು ಹಾರಿದ್ದಾರೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ರೈತರು ಸಾಮೂಹಿಕವಾಗಿ ಊಟ ಮಾಡುತ್ತಿದ್ದ ವೇಳೆ ಬಿಳಿ ಬಣ್ಣ ಆಡಿ ಕಾರಿನಲ್ಲಿ ಬಂದ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ಕಾರು ಚತ್ತೀಸ್ ಘಡದ ನಂಬರನ್ನು …
Read More »ಕೃಷಿ ಪೂರಕ ಚಟುವಟಿಕೆಗಳಿಗೆ 31,028 ಕೋಟಿ ಅನುದಾನ
ಬೆಂಗಳೂರು, ಮಾರ್ಚ್ 8: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 2021-22ನೇ ಸಾಲಿನ ಆಯವ್ಯಯ ಮಂಡಿಸಿದ್ದು, ಅದರಲ್ಲಿ ಕೃಷಿ ಕ್ಷೇತ್ರಕ್ಕೆ ಪ್ರಾಧಾನ್ಯತೆ ಕೊಟ್ಟಿದ್ದಾರೆ. ಕೃಷಿ ಹಾಗೂ ಪೂರಕ ಚಟುವಟಿಕೆ ” ಕೃಷಿಕರ ಆದಾಯವನ್ನು 2023ರ ವೇಳೆಗೆ ದ್ವಿಗುಣಗೊಳಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೇಂದ್ರದೊಂದಿಗೆ ಕೈಜೋಡಿಸಿ ಹಲವು ಕ್ರಮಗಳನ್ನು ಕೈಗೊಂಡಿದೆ.” “ಗುಣಮಟ್ಟದ ಬಿತ್ತನೆ ಬೀಜ ಲಭ್ಯತೆ, ಬೆಳೆ ನಿರ್ವಹಣೆ, ಕೊಯ್ಲೋತ್ತರ ನಿರ್ವಹಣೆ, ಸಂಗ್ರಹಣೆ, ಸಂಸ್ಕರಣೆ …
Read More »ಬಜೆಟ್ ಪ್ರಮುಖಾಂಶಗಳು:ಮಹದಾಯಿ ಯೋಜನೆಗೆ 1677 ಕೋಟಿ
ಬೆಂಗಳೂರು: 2021-22ನೇ ಸಾಲಿನ ರಾಜ್ಯ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸ್ಪಂದಿಸಿದವರಿಗೆ ಧನ್ಯವಾದ ಹೇಳಿದರು. ಡಿವಿಜಿಯವರ ಮಂಕುತಿಮ್ಮನ ಕಗ್ಗದ ಕಲ್ಲಾಗು ಬೆಟ್ಟದಡಿ ಮನದಿ ಮಲ್ಲಿಗೆಯಾಗು… ಸಾಲುಗಳನ್ನು ಸ್ಮರಿಸುತ್ತಾ ಆಯವ್ಯಯ ಮಂಡನೆ ಮಾಡಿದರು. ಕೊರೊನಾ ಲಾಕ್ ಡೌನ್ ಕಾರಣದಿಂದಾಗಿ ಆರ್ಥಿಕ ವರ್ಷ ಮೊದಲ ಮೂರು ತಿಂಗಳು ರಾಜಸ್ವ ಸಂಗ್ರಹ ಇಳಿಕೆಯಾಗಿದೆ. ಆದರೆ ಈಗ ರಾಜ್ಯದಲ್ಲಿ ಅಹಾರ ಉತ್ಪಾದನೆಯಲ್ಲಿ ನೂತನ ದಾಖಲೆ ನಿರ್ಮಿಸಿರುವುದು ಸಂತಸದ ಸಂಗತಿ ಎಂದರು. ಕೊರೊನಾ …
Read More »ಪಾಲಿಕೆ ಎದುರು ಭಗವಾ ಧ್ವಜ ಹಾರಿಸಲು ಯತ್ನ,ಎಂಈಎಸ್ ಕಾರ್ಯಕರ್ತೆಯರ ವಶಕ್ಕೆ
ಬೆಳಗಾವಿ- ಮಹಾನಗರ ಪಾಲಿಕೆಯ ಎದರು ಭಗವಾ ಧ್ವಜ ಹಾರಿಸಲು ಯತ್ನಿಸಿದ ಐವರು ಮಹಿಳಾ ಕಾರ್ಯಕರ್ತೆಯರನ್ನು ಪೋಲೀಸರು ವಶಕ್ಕೆ ಪಡೆದಿದಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆಯ ಎದರು ಕನ್ನಡಿಗರು ಕನ್ನಡ ಧ್ವಜ ಹಾರಿಸಿದ್ದನ್ನು ವಿರೋಧಿಸಿ,ಎಂಈಎಸ್ ಮತ್ತು ಶಿವಸೇನೆ ಕಾರ್ಯಕರ್ತರು ಬೆಳಗಾವಿಯ ಕಾಲೇಜು ರಸ್ತೆಯಲ್ಲಿ ಪ್ರತಿಭಟನಾ ರ್ಯಾಲಿ ನಡೆಸುತ್ತಿರುವಾಗ,ಇನ್ನೊಂದೆಡೆ ಮಹಿಳಾ ಕಾರ್ಯಕರ್ತೆಯರು ಪಾಲಿಕೆ ಎದರು ಭಗವಾ ಧ್ವಜ ಹಾರಿಸುವ ವಿಫಲ ಯತ್ನ ನಡೆಸಿದ್ದಾರೆ. ಸುಮಾರು ಐದು ಜನ ಮಹಿಳಾ ಕಾರ್ಯಕರ್ತೆ ಯರು …
Read More »ವಿಶ್ವ ಮಹಿಳಾ ದಿನಾಚರಣೆ ಶುಭ ಕೋರಿದ ಪ್ರಧಾನಿ ಮೋದಿ
ನವದೆಹಲಿ: ಇಂದು ವಿಶ್ವಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಹಿಳಾ ದಿನಾಚರಣೆ ಶುಭ ಕೋರಿದರು. ಈ ಕುರಿತು ಟ್ವೀಟ್ ಮಾಡಿದ ಪ್ರಧಾನಿ ಮೋದಿ ದೇಶದ ಮಹಿಳೆಯರಿಗೆ ಶುಭಕೋರಿ ಮಹಿಳಾ ಶಕ್ತಿಗೆ ಸಲ್ಯೂಟ್ ಮಾಡುವೆ ಎಂದು ಟ್ವೀಟ್ ಮಾಡಿದ್ದಾರೆ. ನಮ್ಮ ರಾಷ್ಟ್ರದ ಮಹಿಳೆಯರ ಅನೇಕ ಸಾಧನೆಗಳನ್ನು ಮಾಡಿದ್ದು, ಭಾರತ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಮಹಿಳಾ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವು ಕೆಲಸ …
Read More »ಮಹಿಳಾ ಉದ್ಯಮಿಗಳಿಗೆ ಎಂಜಿ ಮೋಟಾರ್ ನೆರವು
ಬೆಂಗಳೂರು: ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು ಮಾರ್ಗದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಮುದಾಯ ಮತ್ತು ವೈವಿಧ್ಯತೆ ಎರಡಕ್ಕೂ ತನ್ನ ಬದ್ಧತೆಗೆ ಅನುಗುಣವಾಗಿ, ಎಂಜಿ ಮೋಟಾರ್ ಇಂಡಿಯಾ, ವುಮೆನ್ ಹೂ ವಿನ್ ಸಹಯೋಗದೊಂದಿಗೆ, ಸೃಜನಶೀಲ ಮಾರ್ಗದರ್ಶನ ಕಾರ್ಯಕ್ರಮ ‘ವುಮೆಂಟೋರ್ ಶಿಪ್’ ಅನ್ನು ಪ್ರಾರಂಭಿಸಿದೆ. ಹೆಚ್ಚು ಮಹಿಳೆಯರನ್ನು ಉನ್ನತೀಕರಿಸಲು ಸಮಾಜದ ಕೆಳವರ್ಗದವರಿಗೆ ಸಮೃದ್ಧಿಯನ್ನು ಸೃಷ್ಟಿಸಲು ಈ ಹಿಂದೆ ಕೈಗೊಂಡ ಐದು ಸಾಮಾಜಿಕ ಮಹಿಳಾ ಉದ್ಯಮಿಗಳನ್ನು ಎಂ.ಜಿ ಆಯ್ಕೆ ಮಾಡಿದೆ. …
Read More »ಮಹಿಳಾ ದಿನಾಚರಣೆ ವಿಶೇಷ; ಮಹಿಳೆಯರಿಗಿಂದು ತಾಜ್ಮಹಲ್ ಪ್ರವೇಶ ಫ್ರೀ
ಲಖನೌ: ಮಹಿಳಾ ದಿನಾಚರಣೆಯ ಅಂಗವಾಗಿ ಉತ್ತರ ಪ್ರದೇಶದ ಲಖನೌ ಜಿಲ್ಲಾಡಳಿತ ಇಂದು ಮಹಿಳೆಯರಿಗೆ ಹಲವು ಪ್ರವಾಸಿ ತಾಣಗಳಿಗೆ ಉಚಿತ ಪ್ರವೇಶ ಘೋಷಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಲಖನೌ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಭಿಷೇಕ್ ಪ್ರಕಾಶ್, ಮಿಷನ್ ಶಕ್ತಿ ಯೋಜನೆಯಡಿ ಉಚಿತ ಪ್ರವೇಶದ ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದಾರೆ. ಚೋಟಾ ಇಮಾಂಬರ, ಬಡಾ ಇಮಾಂಬರಾ ಮತ್ತು ಪಿಕ್ಚರ್ ಗ್ಯಾಲರಿಗೆ ಮಹಿಳೆಯರಿಗೆ ಇಂದು ಉಚಿತ ಪ್ರವೇಶ ಘೋಷಿಸಲಾಗಿದೆ. ಇತ್ತ ಪುರಾತತ್ವ ಇಲಾಖೆ …
Read More »Womens Day 2021; ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಬಲೀಕರಣಕ್ಕೆ ಹೊಸ ಉಡುಗೊರೆ ನೀಡಿದ ನೀತಾ ಅಂಬಾನಿ
ಮಾರ್ಚ್ 08 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇಡೀ ವಿಶ್ವದಾದ್ಯಂತ ಆಚರಿಸುತ್ತಿದ್ದು, ಇದೇ ಸಂದರ್ಭದಲ್ಲಿ ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಮುಖೇಶ್ ಅಂಬಾನಿ ಮಹಿಳೆಯರಿಗೆ ಹೊಸದೊಂದು ಉಡುಗೊರೆಯನ್ನು ನೀಡಿದ್ದಾರೆ. ನೂತನ ಡಿಜಿಟಲ್ ಕ್ರಾಂತಿಯ ಮೂಲಕ ಮಹಿಳಾ ಶಕ್ತಿಯನ್ನು ಸಂಘಟಿಸುವ ಸಲುವಾಗಿ “ಹರ್ ಸರ್ಕಲ್” (ಅವಳ ವಲಯ) ಎಂಬ ಹೊಸ ವೇದಿಕೆಯನ್ನು ಪ್ರಾರಂಭಿಸಲಾಗಿದೆ. ಪ್ರಪಂಚದಾದ್ಯಂತದ ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಪರಸ್ಪರ ಸಹಕರಿಸಲು ಸುರಕ್ಷಿತ ವೇದಿಕೆಯಾಗಿ ‘ಹರ್ ಸರ್ಕಲ್’ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಲಾಗಿದೆ. …
Read More »ಕ್ರೀಡಾ ಮನೋಭಾವದಿಂದ ಈ ಕ್ರೀಡಾಕೂಟದಲ್ಲಿ ಪಾಲ್ಗೋಳಿ : ಜಾವೇದ ಇನಾಮದಾರ
ಗೋಕಾಕ:ಕ್ರೀಡಾ ಮನೋಭಾವದಿಂದ ಈ ಕ್ರೀಡಾಕೂಟದಲ್ಲಿ ಪಾಲ್ಗೋಳಿ : ಜಾವೇದ ಇನಾಮದಾರ ಸೋಲು ಗೆಲುವಿಗೆ ಮಹತ್ವ ನೀಡದೆ ಕ್ರೀಡಾ ಮನೋಭಾವದಿಂದ ಈ ಕ್ರೀಡಾಕೂಟದಲ್ಲಿ ಪಾಲ್ಗೋಳುವಂತೆ ಡಿ.ವಾಯ್.ಎಸ್.ಪಿ ಜಾವೇದ ಇನಾಮದಾರ ಹೇಳಿದರು ರವಿವಾರದಂದು ನಗರದ ಕೆಎಲ್ಇ ಶಾಲಾ ಆವರಣದಲ್ಲಿ ಜೆಸಿಐ ಸಂಸ್ಥೆಯವರು ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಹಿಳೆಯರು ಇಂದು ಮನೆಗೆ ಸಿಮಿತವಾಗದೆ ಎಲ್ಲ ಕ್ಷೇತ್ರಗಳಲೂ ಮಾದರಿಯಾಗಿ ಕಾರ್ಯನಿರ್ವಸುತ್ತಿದ್ದಾರೆ. ಇಂತಹ ವೇದಿಕೆಗಳ ಸದುಪಯೋಗದಿಂದ ತಮ್ಮಲ್ಲಿಯ ಪ್ರತಿಭೆ ಹಾಗೂ …
Read More »
Laxmi News 24×7