Breaking News

ರಾಜ್ಯ

ಜೂ.17 ರವರೆಗೆ ಕರ್ನಾಟಕದಲ್ಲಿ ಭಾರೀ ‘ಮಳೆ’ ಮುನ್ಸೂಚನೆ ನೀಡಿದ ‘ಹವಾಮಾನ ಇಲಾಖೆ’

ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿ ದ್ದು, ಇದೀಗ ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇನ್ನೂ 4 ದಿನ ಜೂನ್ 17 ರವರೆಗೆ ಭಾರೀ ಮಳೆ ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂದಿನಿಂದ ( ಜೂ.13) ಐದು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸೋಮವಾರದಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, …

Read More »

ಮುಂಗಾರು ಮಳೆಯ ಅಬ್ಬರ : ಮತ್ತೆ ಜೀವ ಪಡೆದುಕೊಂಡ ಜೋಗ ಜಲಪಾತ

ಸಾಗರ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಾನ್ಸೂನ್ ಮಳೆಯ ಹಿನ್ನೆಲೆಯಲ್ಲಿ ತಾಲೂಕಿನ ಜೋಗ ಜಲಪಾತ ಮತ್ತೆ ಜೀವಕಳೆ ಪಡೆಯಲಾರಂಭಿಸಿದೆ. ಜಲಪಾತದ ರಾಜಾ, ರಾಣಿ, ರೋರರ್, ರಾಕೆಟ್ ಭಾನುವಾರದಂದು ಬೋರ್ಗರೆಯುತ್ತ ಧುಮುಕುತ್ತಿರುವುದು ಕಂಡುಬಂದಿತು. ಕೋವಿಡ್ ಲಾಕ್‌ಡೌನ್ ಕಾರಣದಿಂದ ಪ್ರವಾಸಿಗರಿಗೆ ದರ್ಶನ ಅವಕಾಶ ಮಾತ್ರ ಲಭ್ಯವಾಗಲಿಲ್ಲ.

Read More »

ಸಿದ್ದುಗೆ ಬಾಗಲಕೋಟೆಯಿಂದ ಸ್ಪರ್ಧಿಸುವಂತೆ ಆಹ್ವಾನಿಸಿದ ಮಾಜಿ ಸಚಿವ ಮೇಟಿ

ಬಾಗಲಕೋಟೆ : ರಾಜ್ಯದಲ್ಲಿ ಐದು ವರ್ಷ ಮುಖ್ಯಮಂತ್ರಿಯಾಗಿ ಸಮರ್ಥ ಆಡಳಿತ ನೀಡಿದ ಸಿದ್ದರಾಮಯ್ಯ ಅವರು, ರಾಜ್ಯದ 224 ಕ್ಷೇತ್ರಗಳಲ್ಲಿ ಯಾವುದೇ ಭಾಗದಿಂದ ಸ್ಪರ್ಧಿಸಲು ಸಮರ್ಥರು. ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಾಗಲಕೋಟೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ, ಈ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಎಚ್.ವೈ. ಮೇಟಿ ಮನವಿ ಮಾಡಿದ್ದಾರೆ. ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು, ಕಳೆದ ಬಾರಿ …

Read More »

ಕೊರೊನಾದಿಂದ ಸಾವನ್ನಪ್ಪಿದ ತಂದೆಯ ಅಂತ್ಯಕ್ರಿಯೆ ಮಾಡಿದ ಪುತ್ರಿಯರು

ದಾವಣಗೆರೆ: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಮೃತದೇಹವನ್ನು ಕುಟುಂಬಸ್ಥರು ಅಂಬುಲೆನ್ಸ್ ನಲ್ಲೇ ಬಿಟ್ಟುಹೋಗುವ ಪ್ರಕರಣಗಳನ್ನು ನೋಡಿದ್ದೇವೆ. ಕೆಲವರು ಅಪ್ಪನ ಹಣ ಬೇಕು, ಅಪ್ಪ ಬೇಡ ಎಂದವರೂ ಇದ್ದಾರೆ. ಇಂತಹವರ ಮಧ್ಯೆ ಕೋವಿಡ್ ನಿಂದ ಮೃತರಾದ ತಂದೆಯ ಶವದ ಅಂತ್ಯಕ್ರಿಯೆಯನ್ನು ಇಬ್ಬರು ಹೆಣ್ಣುಮಕ್ಕಳು ಮಾಡಿ ಜವಾಬ್ದಾರಿ ಮೆರೆದಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಗಾಂಧಿ ವೃತ್ತದಲ್ಲಿರುವ ಶಾಸ್ತ್ರೀ ಬೇಕರಿ ಮಾಲೀಕರಾದ ಶ್ರೀಕಂಠ ಅವರು ಕೋವಿಡ್ ನಿಂದ ಬಾಪೂಜಿ ಆಸ್ಪತ್ರೆಯಲ್ಲಿ ಅಸುನೀಗಿದ್ದು, ಅವರ ಇಬ್ಬರು …

Read More »

ಗಂಡನನ್ನು ತೊರೆದು ಪ್ರೀತಿಸಿದವನ ಜೊತೆ ರೈಲಿನಲ್ಲಿ ಮದುವೆಯಾದ ಯುವತಿ

ಪಾಟ್ನಾ: ಯುವ ಪ್ರೇಮಿಗಳಿಬ್ಬರು ಚಲಿಸುತ್ತಿದ್ದ ರೈಲಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಘಟನೆ ಬಿಹಾರಿನಲ್ಲಿ ನಡೆದಿದೆ. ಬಿಹಾರದ ಸುಲ್ತಾನ್​ಗಂಜ್ ಪ್ರದೇಶದ ಭಿರ್ ಕುರ್ದ್ ಎಂಬ ಗ್ರಾಮದ ನಿವಾಸಿ ಆಶು ಕುಮಾರ್ ಹಾಗೂ ಅನು ಕುಮಾರಿ ಹೀಗೆ ವಿಭಿನ್ನವಾಗಿ ಮದುವೆಯಾದ ಪ್ರೇಮ ಪಕ್ಷಿಗಳು. ಹಲವು ವರ್ಷಗಳಿಂದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ಹುಡುಗಿ ಮನೆಯವರಿಗೆ ಗೊತ್ತಾಗಿತ್ತು. ಹೀಗಾಗಿ ತರಾತುರಿಯಲ್ಲಿ ಕಿರಣಪುರ್ ಹಳ್ಳಿಯ ಬೇರೊಬ್ಬನ ಜೊತೆ ಕಳೆದ ಎರಡು ತಿಂಗಳ ಹಿಂದ ಮದುವೆ …

Read More »

CD ಕೇಸ್​​; ಪ್ರತ್ಯೇಕ ದಿನಗಳಲ್ಲಿ ವಿಚಾರಣೆಗೆ ಹಾಜರಾಗಲು ನರೇಶ್​, ಶ್ರವಣ್​​ಗೆ SIT ನೋಟಿಸ್​​

ಬೆಂಗಳೂರು: ಸಿ.ಡಿ ಕೇಸ್​ಗೆ ಸಂಬಂಧಿಸಿದಂತೆ ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ನಿನ್ನೆ ಆರೋಪಿಗಳಾದ ನರೇಶ್​ ಹಾಗೂ ಶ್ರವಣ್ ವಿಚಾರಣೆ ನಡೆದಿದೆ. ಅದರ ಬೆನ್ನಲ್ಲೇ ಆರೋಪಿಗಳಿಗೆ ಮತ್ತೆ ವಿಚಾರಣೆಗೆ ಹಾಜರಾಗಲು ಎಸ್​​ಐಟಿ ನೋಟಿಸ್ ನೀಡಿದೆ. ವಿಶೇಷ ಎಂದರೆ ನಿನ್ನೆ ಒಟ್ಟಿಗೆ ವಿಚಾರಣೆಗೆ ಹಾಜರಾಗಿದ್ದ ಇಬ್ಬರು ಆರೋಪಿಗಳಿಗೆ ನೋಟಿಸ್​ ನೀಡಿರುವ ಪೊಲೀಸರು, ಪ್ರತ್ಯೇಕ ದಿನಗಳಲ್ಲಿ ವಿಚಾರಣೆಗೆ ಕರೆದಿದ್ದಾರೆ. ಜೂನ್ 14ರ ಸೋಮವಾರ 11 ಗಂಟೆಗೆ ಆರೋಪಿ ನರೇಶ್​​ಗೆ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ಇನ್ನು …

Read More »

ಸೋದರತ್ತೆ ಮಗಳ ಜೊತೆ ಸಪ್ತಪದಿ ತುಳಿದ ನಿರ್ದೇಶಕ ಚೇತನ್​ ಕುಮಾರ್​

ಮಾರ್ಚ್​ 6ರಂದು ಕುಟುಂಬಸ್ಥರ ಸಮ್ಮುಖದಲ್ಲಿ ನಿರ್ದೇಶಕ ಬಹದ್ದೂರ್​ ಚೇತನ್​ ತಮ್ಮ ಬಹುಕಾಲದ ಗೆಳತಿ ಮಾನಸ ಜೊತೆ ರಿಂಗ್​ ಎಕ್ಸ್​​​ಚೇಂಜ್​ ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿ ಇತ್ತು. ಇದೇ ಬಹುಕಾಲದ ಗೆಳತಿ ಸ್ವತಃ ಚೇತನ್​ ಕುಮಾರ್​ ಸೋದರತ್ತೆ ಮಗಳು ಅನ್ನೋದು ಅನಂತರ ತಿಳಿದು ಬಂದಿತ್ತು. ಇಂದು ನಿರ್ದೇಶಕ ಚೇತನ್​ ಸೋದರತ್ತೆ ಮಗಳು ಮಾನಸ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಕಲ್ಪವೃಕ್ಷ ರಾಘವೇಂದ್ರ ಸ್ವಾಮಿ ಮಠದಲ್ಲಿ ಸರಳವಾಗಿ ಮದುವೆ ಆಗಿದ್ದಾರೆ.   ಹಲವು …

Read More »

ಪರಮೇಶ್ವರ್ ಮನೆಯಲ್ಲಿ ಡಿ.ಕೆ.ಶಿವಕುಮಾರ್ ಉಪಹಾರ: 100 ನಾಟೌಟ್ ಪ್ರತಿಭಟನೆ ಬಗ್ಗೆ ಸಮಾಲೋಚನೆ

ತುಮಕೂರು/ ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತುಮಕೂರಿನಲ್ಲಿ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ ಅವರ ನಿವಾಸಕ್ಕೆ ಇಂದು ಭೇಟಿ ನೀಡಿದರು. ರಾಜ್ಯಾದ್ಯಂತ ಜಿಲ್ಲಾ ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ನಡೆಯುತ್ತಿರುವ ತೈಲ ಬೆಲೆ ಏರಿಕೆ ವಿರುದ್ದದ 100 ನಾಟೌಟ್ ಪ್ರತಿಭಟನೆ ಬಗ್ಗೆ ಜೂಮ್ ವಿಡಿಯೋ ಸಂವಾದದ ಮೂಲಕ ಪರಿಶೀಲನೆ ನಡೆಸಿ, ಸಲಹೆ-ಸೂಚನೆಗಳನ್ನು ನೀಡಿದರು. ಪೆಟ್ರೋಲ್, ಡೀಸೆಲ್ ಬೆಲೆ ನಿರಂತರ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ವಿರುದ್ಧ …

Read More »

ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಪ್ರಯಾಣಿಸಿದ ಸಚಿವರಾದ ಕೆ ಎಸ್ ಈಶ್ವರಪ್ಪ, ಭೈರತಿ ಬಸವರಾಜ್

ಶಿವಮೊಗ್ಗ: ನಂಬರ್ ಪ್ಲೇಟ್ ಇಲ್ಲದಿರುವ ವಾಹನಗಳಲ್ಲಿ ಪ್ರಯಾಣ ಮಾಡಬಾರದು ಎಂದು ಸರ್ಕಾರದ ನಿಯಮವೇ ಇದೆ, ನಂಬರ್ ಪ್ಲೇಟ್ ಇಲ್ಲದಿರುವ ವಾಹನವನ್ನು ಚಲಾಯಿಸಿ ಸಿಕ್ಕಿಬಿದ್ದು ಅನೇಕರು ದಂಡ ಕಟ್ಟಿಸಿಕೊಳ್ಳುವುದೂ ಇದೆ. ಆದರೆ ಜನಸಾಮಾನ್ಯರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೊಂದು ನ್ಯಾಯ, ರಾಜಕಾರಣಿಗಳು ಏನು ಮಾಡಿದರೂ ನಡೆಯುತ್ತದೆ ಎಂಬಂತೆ ಹೇಳುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಇಂದು ಶಿವಮೊಗ್ಗದಲ್ಲಿ ನಗರಾಭಿವೃದ್ಧಿ ಸಚಿವ ಬಿ ಎ ಬಸವರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಪ್ರಯಾಣಿಸಿದ …

Read More »

16.80 ಲಕ್ಷದ ಸ್ಟಾಂಪ್ ಡ್ರಗ್ಸ್ ವಶ- ಕಿಂಗ್ ಪಿನ್ ಬಂಧನ

ಮಂಗಳೂರು: ನಗರದ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಐಷಾರಾಮಿ ವ್ಯಕ್ತಿಗಳಿಗೆ ಡ್ರಗ್ಸ್ ಮಾರುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ಮೂಲಕ ಡ್ರಗ್ಸ್ ವಿರುದ್ಧದ ಸಮರವನ್ನು ಮುಂದುವರಿಸಿದ್ದಾರೆ. ನಿಷೇಧಿತ ಮಾದಕವಸ್ತು ಎಲ್‍ಎಸ್‍ಡಿ ಮಾರಾಟ ಮಾಡುತ್ತಿದ್ದ ಕೇರಳದ ಕ್ಯಾಲಿಕಟ್ ಮೂಲದ ಆರೋಪಿ ಮೊಹಮ್ಮದ್ ಅಜಿನಾಸ್ ನನ್ನು ಖೆಡ್ಡಾಕೆ ಬೀಳಿಸಿದ್ದಾರೆ. ಈತ ವಿದ್ಯಾರ್ಥಿಯಾಗಿದ್ದು, ಪಿ.ಜಿಯಲ್ಲಿ ವಾಸವಾಗಿದ್ದ. ನಗರದ ಕದ್ರಿ ಮೈದಾನದಲ್ಲಿ ಗ್ರಾಹಕರ ಬರುವಿಕೆಗಾಗಿ ಕಾಯುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು. 16.80ಲಕ್ಷ …

Read More »