Breaking News

ರಾಜ್ಯ

ಅಪ್ಲಿಕೇಶನ್ ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ನಿಖರವಾಗಿದೆ.

ಡಿಜಿಟಲ್‌ ಡೆಸ್ಕ್:‌ ಪ್ರಪಂಚದಾದ್ಯಂತ ಅನೇಕ ಜನರು ನಿರ್ದೇಶನಕ್ಕಾಗಿ ಗೂಗಲ್ ನಕ್ಷೆಗಳನ್ನು ಅವಲಂಬಿಸಿದ್ದಾರೆ. ಅಪ್ಲಿಕೇಶನ್ ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ನಿಖರವಾಗಿದೆ. ಆದ್ರೆ, ಗ್ರಾಮೀಣ ಪ್ರದೇಶಗಳ ವಿಷಯಕ್ಕೆ ಬಂದಾಗ ಅಥವಾ ಅಷ್ಟು ಜನಪ್ರಿಯ ರಸ್ತೆಗಳ ವಿಷಯಕ್ಕೆ ಬಂದಾಗ, ಅದು ಸವಾರನನ್ನ ಮಧ್ಯೆದಲ್ಲಿಯೇ ಕೈ ಬಿಡುತ್ತೆ. ಇತ್ತೀಚಿನ ಘಟನೆಯೊಂದರಲ್ಲಿ, ರಾಜಸ್ಥಾನದ ಉದಯಪುರಕ್ಕೆ ಹೋಗುತ್ತಿದ್ದ ಪ್ರವಾಸಿಗರ ಗುಂಪು ಗೂಗಲ್ ಮ್ಯಾಪ್ಸ್ʼನಿಂದ ದಾರಿ ತಪ್ಪಿದ್ದು, ಹಳ್ಳಿಯಲ್ಲಿ ಸಿಲುಕಿಕೊಂಡಿತ್ತು.   ನಿಮ್ಮ ಮುಂಜಾನೆಯನ್ನು ಒಂದು ಕಪ್ ಚಹಾದಿಂದ ಆರಂಭಿಸುವಿರೇ? …

Read More »

ದೇವಾಲಯ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೆ ಸರ್ಕಾರ ಹಸಿರು ನಿಶಾನೆ ನೀಡಿದೆ.

ಉಡುಪಿ, ಜುಲೈ 04; ಕರ್ನಾಟಕ ಸರ್ಕಾರ ಜುಲೈ 5ರಿಂದ ಅನ್ವಯವಾಗುವಂತೆ ಅನ್‌ಲಾಕ್ ಮಾರ್ಗಸೂಚಿ ಪ್ರಕಟಿಸಿದೆ. ದೇವಾಲಯ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೆ ಸರ್ಕಾರ ಹಸಿರು ನಿಶಾನೆ ನೀಡಿದೆ. ಅದರಲ್ಲೂ ಭಕ್ತರಿಗಂತೂ ದೇವಾಲಯದ ಬಾಗಿಲು ತೆರೆದಿರೋದು ಖುಷಿಯನ್ನು ಇಮ್ಮಡಿಗೊಳಿಸಿದೆ. ಆದರೆ ಉಡುಪಿಯ ಶ್ರೀ ಕೃಷ್ಣನನ್ನು ಕಾಣಲು ಇನ್ನೂ ಒಂದು ವಾರ ಕಾಯಲೇಬೇಕಿದೆ. ಉಡುಪಿಯ ಕೃಷ್ಣಮಠ ಇನ್ನೂ ಒಂದು ವಾರಗಳ ಕಾಲ ತೆರೆಯುವುದಿಲ್ಲ ಎಂದು ಪರ್ಯಾಯ ಅದಮಾರು ಈಶಪ್ರೀಯ ತೀರ್ಥ ಸ್ವಾಮಿಜಿ ಹೇಳಿದ್ದಾರೆ. ಒಂದುವಾರ …

Read More »

ಕಿಡ್ನಿ ಮಾರಾಟ ದಂಧೆಯಲ್ಲಿ ತೊಡಗಿದ್ದ ಬೃಹತ್ ಜಾಲವನ್ನು ಪತ್ತೆ ಮಾಡಿರುವ ಬೇಗೂರು ಪೊಲೀಸರು

ಬೆಂಗಳೂರು: ಕಿಡ್ನಿ ಮಾರಾಟ ದಂಧೆಯಲ್ಲಿ ತೊಡಗಿದ್ದ ಬೃಹತ್ ಜಾಲವನ್ನು ಪತ್ತೆ ಮಾಡಿರುವ ಬೇಗೂರು ಪೊಲೀಸರು ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಡ್ನೂಡಿನ್ ಓಬಿನ್ನಾ ಕಿಂಗ್ ಲೈ ಬಂಧಿತ ಆರೋಪಿಯಾಗಿದ್ದು, ಈತ ನೈಜೀರಿಯಾ ಮೂಲದವ ಎನ್ನಲಾಗಿದೆ. ಡ್ರಗ್ಸ್ ಮಾರಾಟ ಹಾಗೂ ಕಿಡ್ನಿ ಮಾರಾಟ, ಖರೀದಿ ದಂಧೆಯಲ್ಲಿ ಗ್ಯಾಂಗ್ ಕಟ್ಟಿಕೊಂಡು ಜನರನ್ನು ವಂಚಿಸುತ್ತಿದ್ದ. ಈತನನ್ನು ಕಳೆದ ಒಂದು ವರ್ಷದಿಂದ ಗುಜರಾತ್ ಪೊಲೀಸರು ಹುಡುಕಾಡುತ್ತಿದ್ದರು. ಕಿಡ್ನಿ ಮಾರಾಟ ಹಾಗೂ ಖರೀದಿ ಮಾಡಲಾಗುವುದು ಎಂದು ಜಾಹೀರಾತಿನ …

Read More »

ರಾಜ್ಯದಲ್ಲಿ ಈವರೆಗೆ 725 ಡೆಲ್ಟಾ, ಎರಡು ಡೆಲ್ಟಾಪ್ಲಸ್‌ ಮಾದರಿಗಳು ಪತ್ತೆಯಾಗಿವೆ.

ಬೆಂಗಳೂರು(ಜು.04): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಭೀಕರತೆಗೆ ಡೆಲ್ಟಾ ರೂಪಾಂತರಿ ಕೊರೋನಾ ವೈರಾಣುವೇ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ರೂಪಾಂತರಿ ವೈರಾಣುಗಳು ಸೃಷ್ಟಿಸಬಹುದಾದ ಅವಾಂತರದ ಬಗ್ಗೆ ನಿಗಾವಹಿಸಲು ಸತತವಾಗಿ ಜಿನೋಮಿಕ್‌ ಸೀಕ್ವೆನ್ಸ್‌ ಪರೀಕ್ಷೆ ಮುಂದುವರೆಸುವಂತೆ ಸಲಹೆ ನೀಡಿದ್ದಾರೆ.   ರಾಜ್ಯದಲ್ಲಿ ಈವರೆಗೆ 725 ಡೆಲ್ಟಾ, ಎರಡು ಡೆಲ್ಟಾಪ್ಲಸ್‌ ಮಾದರಿಗಳು ಪತ್ತೆಯಾಗಿವೆ. ಉಳಿದಂತೆ ಅಲ್ಫಾ 14, ಬೀಟಾ 06, ಕಪ್ಪಾ 145 ಪ್ರಕರಣ ಪತ್ತೆಯಾಗಿವೆ. ಇವೆಲ್ಲವುಗಳ ಪೈಕಿ ರಾಜ್ಯದಲ್ಲಿ ಪಾಸಿಟಿವಿಟಿ …

Read More »

UNLOCK 3.0 : ಪಬ್‌ ಇಲ್ಲ, ಬಾರ್‌ನಲ್ಲಿ ಕೌಂಟರ್‌ ಜತೆ ಕೂತ್ಕೊಂಡು ಕುಡಿಯಲು ಅನುಮತಿ.. ಸಿಎಂ ಬಿಎಸ್​ವೈ

  ಬೆಂಗಳೂರು : ಅನ್​ಲಾಕ್​ 3.0 ಕುರಿತು ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದರು. ರಾಜ್ಯದಲ್ಲಿ ಸೋಮವಾರದಿಂದಲೇ 3.0 ಅನ್‌ಲಾಕ್‌ ಪ್ರಕ್ರಿಯೆ ಸಂಪೂರ್ಣ ಜಾರಿಯಾಗಲಿದೆ ಅಂತ ಮುಖ್ಯಮಂತ್ರಿ ಬಿಎಸ್‌ವೈ ಹೇಳಿದಾರೆ. ಮಾಲ್​ಗಳನ್ನು ಓಪನ್​ ಮಾಡಲು, ಬಾರ್​ ತೆರೆಯಲು ಅನುಮತಿ ನೀಡಲಾಗಿದೆ. ವೀಕೆಂಡ್​ ಕರ್ಫ್ಯೂ ಅನ್ನು ರದ್ದುಪಡಿಸಲಾಗಿದ್ದು, ನೈಟ್​ ಕರ್ಫ್ಯೂ ಮುಂದುವರೆಯಲಿದೆ ಎಂದು ಸಿಎಂ ಹೇಳಿದ್ದಾರೆ.

Read More »

ತಾಯಿ-ತಂದೆಯವರ ಸ್ಮರಣಾರ್ಥ ಅರಭಾವಿ ಮಠದಲ್ಲಿ ನಿರ್ಮಿಸಿರುವ ಸಮುದಾಯ ಭವನ ಶೀಘ್ರದಲ್ಲಿಯೇ ಲೋಕರ್ಪಣೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

  ಘಟಪ್ರಭಾ : ಭಕ್ತ ಸಮೂಹ ಮತ್ತು ಸಾರ್ವಜನಿಕರ ಶುಭ ಕಾರ್ಯಗಳಿಗಾಗಿ ಅನುಕೂಲ ಕಲ್ಪಿಸಿಕೊಡಲು ಅರಭಾವಿ ಮಠದ ಆವರಣದಲ್ಲಿ 1.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನವನ್ನು ಇಷ್ಟರಲ್ಲಿಯೇ ಲೋಕಾರ್ಪಣೆ ಮಾಡಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಶನಿವಾರ ಸಂಜೆ ಇಲ್ಲಿಗೆ ಸಮೀಪದ ಅರಭಾವಿ ದುರದುಂಡೀಶ್ವರ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಭಕ್ತರ ಅನುಕೂಲಕ್ಕೋಸ್ಕರ ಮಠದಲ್ಲಿ ಸಮುದಾಯ ಭವನ …

Read More »

ಭಾರತೀಯ ಕ್ರೈಸ್ತರ ದಿನಾಚರಣೆ ಅಂಗವಾಗಿ ಕೋವಿಡ್ ಪೀಡಿತರಿಗೆ ಹಣ್ಣು, ಹಂಪಲು ವಿತರಣೆ

  ಬೆಳಗಾವಿ : ಬೆಳಗಾವಿ ಫಾಸ್ಟರ್ಸ್ ಅಂಡ್ ಕ್ರಿಸ್ಟಿನ್ ಲೀಡರ್ಸ್ ಅಸೋಸಿಯೇಷನ್, ಶನಿವಾರ – ಭಾರತೀಯ ಕ್ರೈಸ್ತ ದಿನಾಚರಣೆ – ಅಂಗವಾಗಿ ಬೆಳಗಾವಿಯ ಜಿಲ್ಲಾ ಆಸ್ಪತ್ರೆಯ ಒಳ ರೋಗಿಗಳಿಗೆ ಕೋವಿಡ್ 19 ನಿಯಮಗಳನ್ನು ಪಾಲಿಸಿ, ಹಣ್ಣು ಹಂಪಲವನ್ನು ವಿತರಿಸಲಾಯಿತು. ಅಸೋಸಿಯೇಷನ್ ಅಧ್ಯಕ್ಷ ಪಾಸ್ಟರ್ ಜೆ ಥೋಮಸ್ ನೇತೃತ್ವದಲ್ಲಿ ಕೋವಿಡ್ ಹಾಗು ಇತರ ಒಳರೋಗಿಗಳಿಗೆ ಹಣ್ಣು, ಹಾಲು, ಬಿಸ್ಕೆಟ್, ನೀರು ನೀಡಿ ಅವರು ಶೀಘ್ರ ಗುಣವಾಗಲೆಂದು ಅವರಿಗಾಗಿ ಪ್ರಾರ್ಥಿಸಲಾಯಿತು. ಬೆಳಗಾವಿ ಫಾಸ್ಟರ್ಸ್ …

Read More »

ಕರ್ನಾಟಕ ಪೊಲೀಸರಿಗೆ ತಲೆನೋವಾಯ್ತು ಆಂಧ್ರ-ತೆಲಂಗಾಣ ರೈತರ ಜಗಳ

ರಾಯಚೂರು: ಸುಮಾರು ವರ್ಷಗಳಿಂದ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ರಾಜೋಳಿ ಬಂಡಾ ಜಲಾಶಯದ ನೀರು ಹಂಚಿಕೆ ವಿಚಾರವಾಗಿ ಆಂಧ್ರ – ತೆಲಂಗಾಣ ನಡುವೆ ಗಲಾಟೆ ನಡೆಯುತ್ತಲೇ ಇದೆ. ಇಷ್ಟು ದಿನ ರಾಜೋಳಿ ಬಂಡಾ ಜಲಾಶಯದ ನೀರನ್ನು ಕೇವಲ ತೆಲಂಗಾಣಕ್ಕೆ ಮಾತ್ರ ಬಿಡಲಾಗುತ್ತಿತ್ತು. ಈಗ ಆಂಧ್ರದ ರಾಯಲಸೀಮ ಪ್ರದೇಶಕ್ಕೂ ಈ ಜಲಾಶಯದ ನೀರು ಬೇಕು ಎಂಬ ಕೂಗು ಕೇಳಿ ಬಂದಿದೆ. ರಾಜೋಳಿ ಬಂಡಾ ಜಲಾಶಯದ ನೀರನ್ನು ನಮಗೂ ಬಿಡಿ ಎಂದು ಆಂಧ್ರದ …

Read More »

ದಯಾ ಮರಣ ಕೋರಿ ಅರ್ಜಿ

ಕುಷ್ಟಗಿ: ಗಂಡ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ದಯಾ ಮರಣಕ್ಕೆ ಅವಕಾಶ ನೀಡಬೇಕು ಎಂದು ತಾಲ್ಲೂಕಿನ ಕಂದಕೂರು ಗ್ರಾಮದ ಈರಮ್ಮ ನಿಂಗಪ್ಪ ಕುರ್ನಾಳ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲದೆ ಸುಮಾರು 61 ವರ್ಷದ ಅವರು ಶುಕ್ರವಾರ ಬೆಳಗಿನಿಂದ ಗ್ರಾಮದ ಹನುಮಂತ ದೇವರ ದೇವಸ್ಥಾನದಲ್ಲಿ ಉಳಿದುಕೊಂಡಿದ್ದಾರೆ. ಮಹಿಳೆ ಸ್ಥಿತಿ ಗಮನಿಸಿದ ನೆರೆಹೊರೆಯವರು ಅನ್ನ ನೀರು ಕೊಟ್ಟಿದ್ದಾರೆ. ಈ ಕುರಿತು ‘ಪ್ರಜಾವಾಣಿ’ಗೆ ದೂರವಾಣಿ …

Read More »

ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್ ಸೋದರನಿಂದ ಮತ್ತೆ ಗೂಂಡಾಗಿರಿ ಆರೋಪ

ವಿಜಯನಗರ: ಹೂವಿನ ಹಡಗಲಿ ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಸಹೋದರ ಮತ್ತು ಬಿಜೆಪಿ ಮುಖಂಡ ಪಿ.ಟಿ ಶಿವಾಜಿ ನಾಯ್ಕ್​​​ ನಡುವೆ ಮತ್ತೆಗೂಂಡಾಗಿರಿ ಮುಂದುವರಿದಿದೆ ಎನ್ನಲಾಗಿದೆ. ನನ್ನ ಮೇಲೆಯೇ ಕೇಸ್ ಮಾಡ್ತೀಯಾ? ಎಂದು ಶಿವಾಜಿ ನಾಯ್ಕ್​​ ತನ್ನ ವಿರುದ್ಧ ಎಫ್​ಐಆರ್​​ ದಾಖಲಿಸಿದ್ದ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರಂತೆ. ಇಂದು ಬೆಳಿಗ್ಗೆಯೇ ಜೈಲಿನಿಂದ ಬೇಲ್​ ಮೇಲೆ ಹೊರ ಬಂದ ಶಿವಾಜಿ ನಾಯ್ಕ್​​, ದೂರುದಾರರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹರಪನಹಳ್ಳಿ ತಾಲೂಕಿನ …

Read More »