ಬೆಂಗಳೂರು: ಇತ್ತೀಚೆಗಿನ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದ ನಾಲ್ವರು ಜೆಡಿಎಸ್ ಕಾರ್ಪೊರೇಟರ್ಗಳು ಆಪರೇಷನ್ ಕಮಲದ ಭೀತಿಯಿಂದ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ ಎನ್ನಲಾಗಿದೆ. ಯಾರಿಗೆ ಬೆಂಬಲ ನೀಡಬೇಕು ಎಂದು ಸೆಪ್ಟೆಂಬರ್ 7ನೇ ತಾರೀಕಿನಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿದ ಪಾಲಿಕೆ ಸದದ್ಯರು ಇನ್ನೂ ನಗರದ ಈಗಲ್ ಟನ್ ರೆಸಾರ್ಟ್ನಲ್ಲೇ ಉಳಿದುಕೊಂಡಿದ್ದಾರೆ. ಕಳೆದ ನಾಲ್ಕ ದಿನಗಳಿಂದ ಈಗಲ್ ಟನ್ …
Read More »ಅಡುಗೆ ಮನೆಗೆ ಭೇಟಿ ಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು: ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಳ ಕುರಿತಂತೆ ಕೇಂದ್ರ ಸರ್ಕಾರ ವಿರುದ್ಧ ಅಭಿಯಾನವನ್ನು ಆರಂಭ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೇ ಏರಿರುವ ಕುರಿತಂತೆ ಮಾತನಾಡಿ ಕಿಡಿಕಾರಿದ್ದಾರೆ. ಪ್ರಿಯ ಸ್ನೇಹಿತರೇ, ವಿಶೇಷವಾಗಿ ತಾಯಂದ್ರೇ, ಅಕ್ಕ-ತಂಗಿಯರೇ ಈ ವಾರ ಗಂಭೀರವಾದ ಪ್ರಶ್ನೆಯೊಂದನ್ನ ನಿಮ್ ಮುಂದೆ ಇಡ್ತಿದ್ದೀನಿ ಎಂದು ಆಡುಗೆ ಮನೆಯಲ್ಲಿ ಟೀ ಕುಡಿಯುತ್ತಾ ಮಾತನಾಡಿರುವ ಡಿಕೆಎಸ್, ಎಲ್‌ಪಿಜಿ ಗ್ಯಾಸ್ ಬೆಲೆ ಇಳಿಕೆಯಾಗಬೇಕಾ? ಬೇಡವಾ? …
Read More »ಸಾಲ ಬಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತ
ಕಲಬುರಗಿ: ಸಾಲ ಬಾದೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ. ಮಹಾಂತಪ್ಪ ( 45 ) ಆತ್ಮಹತ್ಯೆ ಮಾಡಿಕೊಂಡ ರೈತ. ಅಫಾಜಲ್ಪುರ್ ತಾಲ್ಲೂಕಿನ ದಿಕ್ಸಂಗಾ ಗ್ರಾಮದಲ್ಲಿ ತನ್ನ ಸ್ವಂತ ಹೊಲದಲ್ಲೇ ಕ್ರಿಮಿನಾಷಕ ಔಷಧ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕ್ರಿಮಿನಾಷಕ ಔಷಧ ಸೇವನೆ ಮಾಡಿದ ಕೂಡಲೇ ರೈತನನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿದೆ. ಈಗ ಚಿಕಿತ್ಸೆ ಫಲಕಾರಿಯಾಗದೆ ರೈತ ಸಾವನ್ನಪ್ಪಿದ್ದಾರೆ. ರೈತ ಬ್ಯಾಂಕ್ ಮಾತ್ರವಲ್ಲದೇ ಲಕ್ಷಾಂತರ ರೂಪಾಯಿ ಕೈ …
Read More »ಗಣೇಶ ವಿಸರ್ಜನೆ ವೇಳೆ ಪೊಲೀಸರನ್ನೇ ತಳ್ಳಾಡಿದ ಯುವಕರು
ಹಾಸನ: ಗಣೇಶ ವಿಸರ್ಜನೆ ವೇಳೆ ಯುವಕರ ಗುಂಪೊಂದು ಪೊಲೀಸರನ್ನೇ ತಳ್ಳಾಡಿದ ಘಟನೆ ಹಾಸನದಲ್ಲಿ ನಡೆದಿದೆ. ಡಿಜೆ ಡ್ಯಾನ್ಸ್ ತಡೆಯಲು ಮುಂದಾದ ಪೊಲೀಸ್ ಅಧಿಕಾರಿಯ ಮೇಲೆ ದುಂಡಾ ವರ್ತನೆ ತೋರಿದ್ದಾರೆ. ಸಕಲೇಶಪುರ ಪಟ್ಟಣದಲ್ಲಿ ಘಟನೆ ನಡೆದಿದೆ. ಯುವಕರು ಡಿಜೆ ಸೌಂಡಿಗೆ ಡ್ಯಾನ್ಸ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಡಿಜೆ ಡ್ಯಾನ್ಸ್ ತಡೆಯಲು ಹೋದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಸವರಾಜು ಚಿಂಚೋಳಿ ಮತ್ತು ಯುವಕರ ನಡುವೆ ಮಾತಿಗೆ ಮಾತು ಬೆಳೆದಿದೆ. ಇನ್ನು, ಗಲಾಟೆಗೆ ಜೋರಾಗಿಯೇ ನಡೆದಿದ್ದು …
Read More »ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ..!
ಕಲಬುರಗಿ: ಕೊಟ್ಟ ಸಾಲ ವಾಪಾಸ್ ಕೇಳಲು ಹೋದವನ ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ನಗರದ ಕ್ಕೆ ಚೌಕ್ ಬಳಿ ಘಟನೆ ನಡೆದಿದ್ದು, ರವಿಕುಮಾರ್ ಎಂಬಾತ ಮೇಲೆ ತೀವ್ರ ಹಲ್ಲೆ ಮಾಡಲಾಗಿದೆ..ಗಣಪತಿ ಎಂಬಾತನಿಗೆ ರವಿ 2 ಲಕ್ಷ ಸಾಲ ನೀಡಿದ್ದ. ಆದ್ರೆ ಮೂರು ವರ್ಷ ಕಳೆದ್ರೂ ಕೊಟ್ಟ ಹಣ ವಾಪಾಸ್ ಬಂದಿರಲಿಲ್ಲ.. ಹೀಗಾಗಿ ಹಣ ಕೇಳಲೆಂದು ಮನೆಗೇ ಹೋದಾಗ ಗಣಪತಿ ಹಲ್ಲೆ ಮಾಡಿದ್ದಾನೆ..ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಕೇಸ್ …
Read More »ಟ್ರಕ್ ನಿಂದ ಆಯತಪ್ಪಿ ಬಿದ್ದ ಚಾಲಕ : ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ
ದಾಂಡೇಲಿ : ಸರಕು ತುಂಬಿಕೊಂಡು ಬಂದಿದ್ದ ಟ್ರಕ್ಕನ್ನು ನಿಲ್ಲಿಸಿ, ಸರಕು ಕೆಳಗಿಳಿಸಲು ಕಟ್ಟಲಾದ ಹಗ್ಗವನ್ನು ತೆಗೆಯಲು ಟ್ರಕ್ಕಿನ ಮೇಲೆ ಹತ್ತಿದ್ದ ಚಾಲಕ ಮೇಲಿನಿಂದ ಆಯತಪ್ಪಿ ಬಿದ್ದು ಗಾಯಗೊಂಡ ಘಟನೆ ನಗರದ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಟಿಂಬರ್ ವಾರ್ಡಿನಲ್ಲಿ ಗುರುವಾರ ರಾತ್ರಿ ನಡೆದಿದೆ. ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಟಿಂಬರ್ ವಾರ್ಡಿಗೆ ಪೋಲ್ಸ್ ತುಂಬಿಕೊಂಡು ಬಂದಿದ್ದ ಟ್ರಕ್ಕಿನಲ್ಲಿ ಸರಕಿಗೆ ಕಟ್ಟಲಾಗಿದ್ದ ಹಗ್ಗವನ್ನು ಬಿಚ್ಚಲು ಹೋದ ಟ್ರಕ್ಕಿನ ಚಾಲಕ, ಶಿವಮೊಗ್ಗ ಜಿಲ್ಲೆಯ …
Read More »ಬನಹಟ್ಟಿ : ಚಿಮ್ಮಡ ಬಳಿ ರಸ್ತೆ ಅಪಘಾತ ಯುವಕ ಸಾವು
ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪೂರ ರಬಕವಿ ರಸ್ತೆಯ ಚಿಮ್ಮಡ ಹದ್ದಿಯ ಮುಘಳಖೋಡ ಬಳಿ ನಡೆದ ರಸ್ತೆ ಅಪಘಾತದಲ್ಲಿ ಯುವನೋರ್ವ ಸಾವನ್ನಪಿದ ಘಟನೆ ಬನಹಟ್ಟಿ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಲ್ಲಿ ಬನಹಟ್ಟಿಯ ಸೋಮವಾರ ಪೇಟೆಯ ನಿವಾಸಿ ಬಾಳಯ್ಯ ಕಾಡಯ್ಯ ಕತ್ತಿ(27) ಮೃತ ದುರ್ದೈವಿ. ಬಾಳಯ್ಯ ಅವರು ಗುರುವಾರ ರಾತ್ರಿ ತನ್ನ ಬೈಕನ್ನು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ನಿಯಂತ್ರಣ ಕಳೆದುಕೊಂಡು ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ …
Read More »ಟೆಂಪೊದಲ್ಲಿ ಮಹಿಳೆ ಅತ್ಯಾಚಾರ; ಖಾಸಗಿ ಭಾಗಕ್ಕೆ ರಾಡ್ ತುರುಕಿ ಚಿತ್ರಹಿಂಸೆ!
ಮಧ್ಯವಯಸ್ಕ ಮಹಿಳೆಯೊಬ್ಬರನ್ನು ರಸ್ತೆ ಬದಿಯಲ್ಲಿದ್ದ ಟೆಂಪೊದೊಳಗೆ ಅತ್ಯಾಚಾರ ನಡೆಸಿ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್ ತುರುಕಿ ಚಿತ್ರಹಿಂಸೆ ನೀಡಿದ ಆಘಾತಕಾರಿ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆ ಸ‍್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮೋಹನ್ ಚೌಹಾಣ್ (45) ನನ್ನು ಬಂಧಿಸಲಾಗಿದೆ. ಕೈರಾನಿ ರಸ್ತೆಯಲ್ಲಿ ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬ ಹಲ್ಲೆ ನಡೆಸುತ್ತಿದ್ದಾರೆ ಎಂದು ದೂರವಾಣಿ ಕರೆ ಸ್ವೀಕರಿಸಿದ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ. …
Read More »ಮಗುವಿಗೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ
ಮೈಸೂರು: ಮೂರೂವರೆ ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾಗಿದ್ದು, 45 ವರ್ಷದ ಜಗದೀಶ್ ಎಂಬಾತನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಮೈಸೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ಈ ಆದೇಶ ನೀಡಿದೆ. ನ್ಯಾಯಾಧೀಶೆ ಶ್ಯಾಮಾಕಂರೋಸ್ ತೀರ್ಪು ನೀಡಿದ್ದಾರೆ. 2019ರಲ್ಲಿ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ಪ್ರಕರಣ ನಡೆದಿತ್ತು. ಆಟವಾಡುತ್ತಿದ್ದ ಮಗುವಿನ …
Read More »ವಿವಿಧ ವಸತಿ ಯೋಜನೆಗಳಡಿ 4 ಲಕ್ಷ ಮನೆಗಳಿಗೆ ಅರ್ಹ ಫಲಾನುಭವಿಗಳ ಆಯ್ಕೆ: ಬಸವರಾಜ ಬೊಮ್ಮಾಯಿ
ಬೆಂಗಳೂರು: ವಿವಿಧ ವಸತಿ ಯೋಜನೆಗಳಡಿ 4 ಲಕ್ಷ ಮನೆಗಳಿಗೆ ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದ್ದಾರೆ. ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗಿದ್ದು, ಕೇಂದ್ರ ಸರ್ಕಾರದಿಂದ 4 ಲಕ್ಷ ಹೊಸ ಮನೆಗಳ ಗುರಿಗೆ ಅನುಮೋದನೆ ದೊರೆಯದಿದ್ದಲ್ಲಿ ಅಥವಾ ಅದಕ್ಕಿಂತ ಕಡಿಮೆ ಮನೆಗಳಿಗೆ ಅನುಮೋದನೆ ದೊರೆತಲ್ಲಿ ಉಳಿದ ಮನೆಗಳನ್ನು ರಾಜ್ಯದ ವಸತಿ ಯೋಜನೆಗಳಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿತ್ತು. ಅದರಂತೆ ರಾಜ್ಯದಾದ್ಯಂತ ನಗರ …
Read More »
Laxmi News 24×7