Breaking News

ರಾಜ್ಯ

ಸತತವಾಗಿ ಬೀಳುತ್ತಿರುವ ಅಕಾಲಿಕ ಮಳೆ ಇಂದೂ ಕೂಡ ಮುಂದುವರೆಯಲಿದೆ.

ಬೆಂಗಳೂರು, ನ.22- ಕಳೆದ ಎರಡು ವಾರಗಳಿಂದಲೂ ಸತತವಾಗಿ ಬೀಳುತ್ತಿರುವ ಅಕಾಲಿಕ ಮಳೆ ಇಂದೂ ಕೂಡ ಮುಂದುವರೆಯಲಿದೆ.ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮದಿಂದ ಸತತವಾಗಿ ರಾಜ್ಯದ ಒಳನಾಡಿನಲ್ಲಿ ಮಳೆಯಾಗುತ್ತಿದೆ. ನಿನ್ನೆ ಸಂಜೆ ಹಾಗೂ ರಾತ್ರಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು, ರಾಮನಗರ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಹಾಗೂ ಭಾರೀ ಪ್ರಮಾಣದ ಮಳೆಯಾಗಿದೆ. ರಾಮನಗರದ ಮೆಳ್ಳೇಹಳ್ಳಿ ಸೇತುವೆ ತೊರೆ ನೀರಿನಲ್ಲಿ ಕೊಚ್ಚಿ ಹೋಗಿದೆ. ನ.1ರಿಂದ ಈತನಕ ರಾಜ್ಯದಲ್ಲಿ ವಾಡಿಕೆಗಿಂತ ಶೇ.270ಕ್ಕೂ ಹೆಚ್ಚು ಮಳೆಯಾಗಿದೆ. …

Read More »

ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದ ತಂದೆಯನ್ನು ಮಗಳು ತನ್ನ ಪ್ರಿಯಕರನಿಂದಲೇ ಕೊಲೆ ಮಾಡಿಸಿದ್ದಾಳೆ.

ಬೆಂಗಳೂರು: ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದ ತಂದೆಯನ್ನು ಮಗಳು ತನ್ನ ಪ್ರಿಯಕರನಿಂದಲೇ ಕೊಲ್ಲಿಸಿದ ಪ್ರಕರಣವೊಂದು ನಡೆದಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿರುವ ಪುತ್ರಿ ತನ್ನ ಪ್ರಿಯಕರ ಹಾಗೂ ಆತನ ಸ್ನೇಹಿತರ ಮೂಲಕ ಕೊಲೆ ಮಾಡಿಸಿದ್ದಾಳೆ. ಯಲಹಂಕ ನ್ಯೂ ಟೌನ್‌ನ ಅಟ್ಟೂರು ಬಡಾವಣೆ ನಿವಾಸಿ ದೀಪಕ್ ಕುಮಾರ್ ಸಿಂಗ್ (46) ಕೊಲೆಯಾದ ವ್ಯಕ್ತಿ. ಬಿಹಾರ ಮೂಲದ ಇವರು ಜಿಕೆವಿಕೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಮಗಳ ಸುರಕ್ಷತೆಗಾಗಿ ಬುದ್ಧಿವಾದ ಹೇಳಲು ಹೋಗಿ 17 …

Read More »

ಗುದನಾಳದಲ್ಲಿಟ್ಟು 1.52 ಕೋಟಿ ಮೌಲ್ಯದ ಚಿನ್ನವನ್ನ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 10 ಜನ ಪ್ರಯಾಣಿಕರನ್ನ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ

ಬೆಂಗಳೂರು: ಗುದನಾಳದಲ್ಲಿಟ್ಟು 1.52 ಕೋಟಿ ಮೌಲ್ಯದ ಚಿನ್ನವನ್ನ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 10 ಜನ ಪ್ರಯಾಣಿಕರನ್ನ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನವೆಂಬರ್ 20 ರಂದು ಕೊಲಂಬೊದಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರನ್ನು ತಪಾಸಣೆ ಮಾಡುತ್ತಿದ್ದ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಈ ವೇಳೆ 10 ಪ್ರಯಾಣಿಕರು ತಮ್ಮ ಗುದನಾಳದಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನವನ್ನ ಮರೆಮಾಚಿ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

Read More »

ಸತ್ತೇ ಹೋದ ಅಂದವನು 7 ಗಂಟೆ ಬಳಿಕ ಎದ್ದು ಕೂತಿದ್ದ: ಇಲ್ಲಿದೆ ಎದೆ ಝಲ್ ಎನಿಸುವ ವಿಡಿಯೋ

ಕೆಲವೊಮ್ಮೆ ತುಂಬಾ ಅಪರೂಪವಾಗಿ ಸತ್ತಂತಹ ವ್ಯಕ್ತಿಗಳು(Dead Person) ಮತ್ತೆ ಜೀವಂತ(Alive)ವಾಗಿರುವ ಘಟನೆಗಳನ್ನು ನಾವು ಟಿವಿ(TV)ಯಲ್ಲಿ ನೋಡಿರುತ್ತೇವೆ ಅಥವಾ ದಿನಪತ್ರಿಕೆ(News Paper)ಗಳಲ್ಲಿ ರುತ್ತೇವೆ. ಕೆಲವೊಂದು ಸಮಯದಲ್ಲಿ ಮೃತ ವ್ಯಕ್ತಿಯ ದೇಹವನ್ನು ಅಂತಿಮ ಸಂಸ್ಕಾರ(Last Rituals)ಕ್ಕೆಂದು ತೆಗೆದುಕೊಂಡು ಹೋದಾಗ ಅಲ್ಲಿ ಕೆಲವರಿಗೆ ಜೀವ ಮರಳಿ ಬಂದಿರುವಂತಹ ಘಟನೆಗಳು ನಡೆದಿವೆ. ಇಂತಹ ಘಟನೆಗಳು ಅಲ್ಲಿ ನೆರದ್ದಿದ್ದವರನ್ನು ಭಯಭೀತರನ್ನಾಗಿಸುವುದಲ್ಲದೆ, ಸತ್ತಂತಹ ವ್ಯಕ್ತಿ ಹೇಗೆ ಮತ್ತೆ ಜೀವಂತವಾಗಿದ್ದಾನೆ ಎಂದು ಆಶ್ಚರ್ಯವನ್ನು ಸಹ ಉಂಟು ಮಾಡಿರುತ್ತದೆ. ಇಲ್ಲಿಯೂ ಇಂತಹದ್ದೇ …

Read More »

ಮೂರನೇ ಮದುವೆಗೆ ಆಮಿರ್ ಖಾನ್ ರೆಡಿ, ಹುಡುಗಿ ಯಾರ್ ಗೊತ್ತಾ?

ಬಾಲಿವುಡ್​(Bollywood)ನಲ್ಲಿ ಖಾನ್(Khan)​ಗಳದ್ದೇ ಅಬ್ಬರ. ಅದು ಆಗಿನಿಂದಲೂ. ಶಾರುಖ್​ ಖಾನ್(Shah Rukh Khan)​, ಸಲ್ಮಾನ್​ ಖಾನ್(Salman Khan)​, ಆಮಿರ್​ ಖಾನ್(Aamir Khan)​ ಈ ಮೂರು ಖಾನ್​ಗಳೇ ಬಾಲಿವುಡ್(Bollywood)​ನ ಪಿಲ್ಲರ್(Pillar)​. ಇವರಲ್ಲಿ ಸಲ್ಮಾನ್​ ಖಾನ್​ ಇನ್ನೂ ಬ್ಯಾಚುಲರ್​​.ಮದುವೆ ಸಹವಾಸವೇ ಬೇಡ ಅಂತ ಸುಮ್ಮನಿದ್ದಾರೆ. ಶಾರುಖ್​ ಖಾನ್​ ಮದುವೆಯಾಗಿ ಅನೋನ್ಯವಾಗಿದ್ದಾರೆ. ಇನ್ನೂ ಇತ್ರೀಚೆಗೆ ಆಮಿರ್​​ ಖಾನ್​ ತಮ್ಮ 2ನೇ ಪತ್ನಿಗೆ ವಿಚ್ಛೇದನ ನೀಡಿದ್ದರು. ಆಮಿರ್​ ಖಾನ ತಮ್ಮ ಸಿನಿಮಾ(Movie)ದಿಂದ ಎಷ್ಟು ಸುದ್ದಿಯಲ್ಲಿ ಇರುತ್ತಾರೋ, ಅಷ್ಟೇ …

Read More »

ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರು ಶಕ್ತಿಪ್ರದರ್ಶನ ತೋರಿಸಲು ಸಿದ್ಧ,5 ಸಾವಿರಕ್ಕೂ ಹೆಚ್ಚು ಗ್ರಾಮ‌ ಪಂಚಾಯತ್ ಸದಸ್ಯರು ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭ್ಯ

ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಎರತೊಡಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರು ಶಕ್ತಿಪ್ರದರ್ಶನ ತೋರಿಸಲು ಸಿದ್ಧತೆ ನಡೆಸಿದ್ದಾರೆ. ಮಂಗಳವಾರ 23ರಂದು ಅಪಾರ ಸಂಖ್ಯೆಯಲ್ಲಿ ಗೋಕಾಕಿನ ಕಿಂಗ್ ಮೇಕರ್ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ಗೋಕಾಕ, ಅರಭಾಂವಿ, ಅಥಣಿ, ಬೆಳಗಾವಿ ಗ್ರಾಮೀಣ, ಕಾಗವಾಡ, ಚಿಕ್ಕೋಡಿ, ಖಾನಾಪುರ, ಯಮಕನಮರಡಿ, ಬೈಲಹೊಂಗಲ, ರಾಮದುರ್ಗ ಕ್ಷೇತ್ರ ಸೇರಿ ಎಲ್ಲ ಕಡೆಗಳಿಂದಲೂ ಸಾಹುಕಾರ ಬೆಂಬಲಿಗರು ನಾಮಪತ್ರ ಸಲ್ಲಿಸಲು …

Read More »

ಪರಿಷತ್ ಚುನಾವಣೆಗೆ ಜಿಲ್ಲಾಡಳಿತ ಸನ್ನದ್ಧ-ಜಿಲ್ಲಾಧಿಕಾರಿ ಆರ್ ವೆಂಕಟೇಶ್‍ಕುಮಾರ್

ಜಿಲ್ಲೆಯಲ್ಲಿ ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್ ವೆಂಕಟೇಶಕುಮಾರ್ ತಿಳಿಸಿದ್ದಾರೆ. ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪರಿಷತ್ ಚುನಾವಣೆಗೆ ಈಗಾಗಲೇ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 8875 ಮರದಾರರು ಅಂತಿಮ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಇನ್ನು ಚುನಾವಣೆಗೆ 511 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದ್ದು ಪ್ರತಿ ಗ್ರಾಮ ಪಂಚಾಯತ ಹಾಗೂ ನಗರ ಸ್ಥಳೀಯ ಆಡಳಿತ …

Read More »

ಬಾವನ ಜೊತೆಯೇ ಲವ್ವಿ ಡವ್ವಿ: ಗಂಡನಿಗೆ ಪ್ರಸಾದ ಎಂದು ನಿದ್ದೆ ಮಾತ್ರೆ! ಕತ್ತು ಹಿಸುಕುವಾಗ ಎದ್ದ ಗಂಡ, ಮುಂದೆ ಆಗಿದ್ದೇನು?

ಯಾದಗಿರಿ(ನ.21): ನಿದ್ದೆ ಮಾತ್ರೆ ನೀಡಿ ಹೆಂಡತಿಯೇ ಗಂಡನನ್ನು ಕೊಲೆ ಮಾಡಲು ಯತ್ನಿಸಿದ ಪ್ರಕರಣ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೊವಿನಹಳ್ಳಿಯಲ್ಲಿ ನಡೆದಿದೆ. ಪಾಪಿ ಪತ್ನಿ ತನ್ನ ಅಕ್ರಮ ಸಂಬಂಧ ಮುಚ್ಚಿ ಹಾಕಲು ಪತಿಯನ್ನು ಕೊಲೆ ಮಾಡಲು ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ.   ಚಂದ್ರಕಲಾ ತನ್ನ ಪ್ರಿಯತಮ ಬಸನಗೌಡನ ಜೊತೆ ಸೇರಿ ತನ್ನ ಪತಿ ವಿಶ್ವನಾಥರಡಿಯನ್ನು ಕೊಲೆ ಮಾಡಲು ಯತ್ನಿಸಿದ ಆರೋಪಿ. ಚಂದ್ರಕಲಾ ತನ್ನ ಸಹೋದರಿಯ ಪತಿಯೊಂದಿಗೆ ಅನೈತಿಕ ಸಂಬಂಧ …

Read More »

ಭಯಾನಕ ಮಳೆಯಲ್ಲಿ ಪುನೀತ್‌ ಬ್ಯಾನರ್‌ ಎದುರು ಕೈಮುಗಿದು ಕುಳಿತ ಅಭಿಮಾನಿ- ವಿಡಿಯೋ ವೈರಲ್‌

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಎಲ್ಲರನ್ನೂ ಅಗಲಿ ತಿಂಗಳಾಗುತ್ತ ಬಂದರೂ ಅವರ ಸಾವಿನ ಬಗ್ಗೆ ಇದುವರೆಗೂ ಹಲವು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಅಂಥ ಬೆಲೆ ಕಟ್ಟಲಾಗದ ಅಭಿಮಾನ ಅವರ ಮೇಲಿದೆ. ಇದಾಗಲೇ ಸಿನಿಕ್ಷೇತ್ರದವರು, ಕುಟುಂಬಸ್ಥರು ಸೇರಿದಂತೆ ಸಾಮಾನ್ಯ ಜನರು ಕೂಡ ಅಪ್ಪುವಿನ ಜತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಳ್ಳುತ್ತಿರುವ ಬೆನ್ನಲ್ಲೇ ಪುನೀತ್‌ ಅವರ ಸಮಾಧಿಯ ಮುಂದೆ ಬಂದು ರೋಧಿಸುತ್ತಿರುವವರೂ ಹಲವರು.   ಇದೀಗ ಅಭಿಮಾನಿಯೊಬ್ಬ ಸುರಿಯುವ ಮಳೆಯನ್ನೂ ಲೆಕ್ಕಿಸದೇ ಪುನೀತ್​ ಅವರ …

Read More »

ನಿಜಕ್ಕೂ ನಿಮಗೆ ತಾಕತ್ತಿದ್ರೆ, ಪ್ರತಾಪ ಸಿಂಹಗೆ ಹೊಡೀರಿ: ಶ್ರೀ ಸಿದ್ದಲಿಂಗ ಸ್ವಾಮೀಜಿ

ಕಲಬುರಗಿ: ರಾಜಕೀಯ ನಾಯಕರಿಬ್ಬರ ವಿಚಾರದಲ್ಲಿ ಸ್ವಾಮೀಜಿಗಳಿಬ್ಬರ ನಡುವೆ ವಾಕ್ಸಮರ ಏರ್ಪಟ್ಟಿದೆ. ಬಿಟ್​ಕಾಯಿನ್ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಮತ್ತು ಪ್ರಿಯಾಂಕ್ ಖರ್ಗೆ ನಡುವೆ ನಡೆದ ಮಾತಿನ ಜಟಾಪಟಿ ಈಗ ಕಲಬುರಗಿಯ ಸುಲಫಲ ಮಠದ ಶ್ರೀ ಮಹಾಂತ ಸ್ವಾಮೀಜಿ ಮತ್ತು ಆಂದೋಲಾ ಮಠದ ಸಿದ್ದಲಿಂಗ ಸ್ವಾಮಿಗಳ ನಡುವೆ ನಡೆದಿದೆ.   ಪ್ರಿಯಾಂಕ್ ಖರ್ಗೆ ಗಂಡಸೋ, ಹೆಂಗಸೋ ಎಂದಿರುವ ಪ್ರತಾಪ ಸಿಂಹಗೆ ಮೈಸೂರಿಗೆ ತೆರಳಿ ಚಡ್ಡಿ ಬಿಚ್ಚಿ ಹೊಡಿತೀವಿ ಎಂದು ಸುಲಫಲ ಮಠದ ಶ್ರೀ …

Read More »