ನ್ಯೂಯಾರ್ಕ್ (ಅಮೆರಿಕ): ನ್ಯೂ ಜೆರ್ಸಿಯಲ್ಲಿ ಭಾರತದ ಉತ್ತರ ಪ್ರದೇಶ ಮೂಲದ ದಂಪತಿ ಹಾಗೂ ಅವರ ಇಬ್ಬರು ಮಕ್ಕಳ ಮೃತದೇಹ ದೊರೆತಿದೆ. ಇವರ ವಾಸದ ಮನೆಯಲ್ಲೇ ನಾಲ್ವರ ಶವಗಳಿದ್ದವು. ಕೊಲೆ ಹಾಗೂ ಆತ್ಮಹತ್ಯೆ ಶಂಕೆಯ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತೇಜ್ ಪ್ರತಾಪ್ ಸಿಂಗ್ (43), ಸೋನಾಲ್ ಪರಿಹಾರ್ (42), 10 ವರ್ಷದ ಮಗ ಹಾಗೂ 6 ವರ್ಷದ ಮಗಳು ಮೃತರೆಂದು ಗುರುತಿಸಲಾಗಿದೆ. ಬುಧವಾರ ಸಂಜೆ 4:30ರ ಸುಮಾರಿಗೆ ಇಲ್ಲಿನ ಪ್ಲಾನ್ಸ್‌ಬರೋ ಮನೆಯಲ್ಲಿ …
Read More »ಪ್ರತಿ ಗ್ರಾಮ ಪಂಚಾಯಿತಿಗೊಂದು ಪಬ್ಲಿಕ್ ಶಾಲೆ ನಿರ್ಮಾಣ: ಡಿಸಿಎಂ ಡಿ.ಕೆ.ಶಿ.
ರಾಮನಗರ: ರಾಜ್ಯದಲ್ಲಿ 2,000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನಿರ್ಮಾಣ ಮಾಡುವ ಶಿಕ್ಷಣ ಕ್ರಾಂತಿಗೆ ಮಾಗಡಿಯಿಂದ ಚಾಲನೆ ದೊರೆತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ನಗರ ಪ್ರದೇಶಗಳಿಗೆ ಜನರು ಶಿಕ್ಷಣಕ್ಕಾಗಿ ವಲಸೆ ಹೋಗುವುದು ತಪ್ಪಬೇಕು. ಪ್ರತಿ ಗ್ರಾ.ಪಂ.ಪಂಚಾಯಿತಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಕಟ್ಟಬೇಕು ಎಂಬುದು ನನ್ನ ಕನಸು. ಆದಷ್ಟು ಬೇಗ ಯೋಜನೆಯನ್ನು ಕಾರ್ಯಗತಗೊಳಿಸುತ್ತೇವೆ ಎಂದು ಅವರು ತಿಳಿಸಿದರು. ಕುದೂರಿನಲ್ಲಿ ಸುಮಾರು 6 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಶಾಲೆ ನಿರ್ಮಿಸಲು …
Read More »ಮೈಸೂರು ದಸರಾ: 135 ಕಿ.ಮೀ ವಿದ್ಯುತ್ ದೀಪಾಲಂಕಾರದಲ್ಲಿ ಮಿನುಗಲಿದೆ ಸಾಂಸ್ಕೃತಿಕ ನಗರಿ
ಮೈಸೂರು : ಈ ಬಾರಿ ನಾಡಹಬ್ಬ ದಸರಾವನ್ನು ಸಾಂಪ್ರದಾಯಕವಾಗಿ ಆಚರಿಸಲು ನಿರ್ಧಾರಿಸಲಾಗಿದೆ. ಜೊತೆಗೆ ದಸರಾ ಸಂದರ್ಭದಲ್ಲಿ ನಗರದ 135 ಕಿ. ಮೀ ವ್ಯಾಪ್ತಿಯ ಪ್ರಮುಖ ವೃತ್ತಗಳು, ರಸ್ತೆಗಳು ಹಾಗೂ ಸರ್ಕಾರಿ ಪಾರಂಪರಿಕ ಕಟ್ಟಡಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ. ಈ ವೇಳೆ ಪ್ರತಿ ವೃತ್ತದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು, ಸೋಮನಾಥೇಶ್ವರ ದೇವಾಲಯ ಹಾಗೂ ಚಂದ್ರಯಾನ 3 ಮಾದರಿಗಳು ದೀಪಾಲಂಕಾರದಲ್ಲಿ ಮಿಂಚಲಿವೆ. ಈ ಬಾರಿಯ ದಸರಾ ದೀಪಾಲಂಕಾರ ಎಲ್ಲೆಲ್ಲಿ ಇರಲಿದೆ, ಎಷ್ಟು ಖರ್ಚಾಗಲಿದೆ ಎಂಬ ಮಾಹಿತಿ …
Read More »5 ಗ್ಯಾರಂಟಿ ಸೇರಿ ಯಾವುದೇ ಅಭಿವೃದ್ಧಿ ಕಾಮಗಾರಿಗೆ ಹಣದ ಕೊರತೆ ಇಲ್ಲ: ಸಿಎಂ ಸಿದ್ದರಾಮಯ್ಯ
ಚಿತ್ರದುರ್ಗ: “ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ಸೇರಿದಂತೆ ಯಾವುದೇ ನಿಯಮಿತ ಅಭಿವೃದ್ಧಿ ಕಾಮಗಾರಿ ಹಾಗೂ ಕಾರ್ಯಕ್ರಮಕ್ಕೆ ಹಣದ ಕೊರತೆ ಇಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗ್ಯಾರಂಟಿಗಳಿಗಾಗಿ ರಾಜ್ಯದ ಅಭಿವೃದ್ಧಿಗಳು ಕುಂಠಿತಗೊಂಡಿವೆ ಅನ್ನೋದು ಸುಳ್ಳು. ಬಿಜೆಪಿ ನಾಯಕರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳು ಮಾಡಿದ್ದೇ ಅವರು. ನಾವು ಈ ಹಿಂದೆ ಆಡಳಿತ ನಡೆಸಿದ್ದೆವು. ಯಾವತ್ತೂ ಇಷ್ಟು ಪ್ರಮಾಣದ …
Read More »ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಸಂಪೂರ್ಣ ಅದಾನಿ ತೆಕ್ಕೆಗೆ
ಮಂಗಳೂರು (ದಕ್ಷಿಣ ಕನ್ನಡ): ಮೂರು ವರ್ಷದ ಬಳಿಕ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೂರ್ಣ ಆಡಳಿತ ಮತ್ತು ನಿರ್ವಹಣೆ ಅಕ್ಟೋಬರ್ 31ರಿಂದ ದೇಶದ ಪ್ರತಿಷ್ಠಿತ ಉದ್ದಿಮೆ ಕಂಪನಿ ಅದಾನಿ ಗ್ರೂಪ್ ತೆಕ್ಕೆಗೆ ಸೇರಲಿದೆ. ಇನ್ನು ಮುಂದೆ ಈ ಏರ್ಪೋರ್ಟ್ನ ಆಗುಹೋಗುಗಳು ಅದಾನಿ ಸಮೂಹದಿಂದಲೇ ನಡೆಯಲಿದೆ. 2020ರ ಅಕ್ಟೋಬರ್ 31ರಂದು ಮಂಗಳೂರು ಸೇರಿದಂತೆ ಅಹಮದಾಬಾದ್, ಲಕ್ನೋ, ಜೈಪುರ, ಗುವಾಹಟಿ ಹಾಗೂ ತ್ರಿವೆಂಡ್ರಂ ವಿಮಾನ ನಿಲ್ದಾಣಗಳ ಆಡಳಿತವನ್ನು ಅದಾನಿ ಗ್ರೂಪ್ ತನ್ನ ವಶಕ್ಕೆ ಪಡೆದುಕೊಂಡಿತ್ತು. …
Read More »ಆರ್ಟಿಐ ಅರ್ಜಿದಾರರ ಮಾಹಿತಿ ಒದಗಿಸುವಂತೆ ಕೋರಿದ್ದ ಸುತ್ತೋಲೆ ಹಿಂಪಡೆದ ಸರ್ಕಾರ
ಬೆಂಗಳೂರು: ಮಾಹಿತಿ ಹಕ್ಕಿನ ಅಡಿಯಲ್ಲಿ ಹೆಚ್ಚು ಬಾರಿ ಅರ್ಜಿ ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿಯನ್ನು ಒದಗಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಜೂನ್ 6 ರಂದು ಹೊರಡಿಸಿದ್ದ ನಿರ್ದೇಶನವನ್ನು ಇದೀಗ ಹಿಂಪಡೆದುಕೊಂಡಿದೆ. ಜೂನ್ 6ರಂದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಮಾಹಿತಿ ಹಕ್ಕಿನ ಅಡಿ ಹೆಚ್ಚು ಬಾರಿ ಅರ್ಜಿಸಲ ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿಯನ್ನು ಒದಗಿಸುವಂತೆ ಸೂಚನೆ ನೀಡಿತ್ತು. ಆ ಮೂಲಕ ಮಾಹಿತಿ ಹಕ್ಕು ಅಧಿನಿಯಮದಡಿ ಸಾರ್ವಜನಿಕರ ಅಧಿಕಾರವನ್ನು …
Read More »*ತಿಂಗಳೊಳಗೆ ವೆಂಕಟಾಪೂರ ಮುಖ್ಯ ಕಾಲುವೆಯ ತುದಿ ಭಾಗದ ರೈತರ ಜಮೀನುಗಳಿಗೆ ನೀರು ಪೂರೈಕೆ : ಶಾಸಕ ಬಾಲಚಂದ್ರ ಜಾರಕಿಹೊಳಿ
ರಾಮೇಶ್ವರ ಏತ ನೀರಾವರಿ ಯೋಜನೆಯ ವೆಂಕಟಾಪೂರ ಮುಖ್ಯ ಕಾಲುವೆಯನ್ನು ಪರಿಶೀಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ : ರಾಮೇಶ್ವರ ಏತ ನೀರಾವರಿ ಯೋಜನೆಯಡಿ ಇದುವರೆಗೂ ವೆಂಕಟಾಪೂರ ಮುಖ್ಯ ಕಾಲುವೆಯ ತುದಿ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಭಾಗದ ರೈತರಿಗೆ ತಮ್ಮ ಜಮೀನುಗಳಿಗೆ ನೀರು ಪೂರೈಸಲು ಹೊಸ ಚೇಂಬರ್ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಶುಕ್ರವಾರದಂದು …
Read More »ಹಸಿರು, ಬರದ ಬಗ್ಗೆ ವಿಶೇಷ ಗಮನ ಹರಿಸಿ, ರೈತರ ಹಿತ ಕಾಪಾಡಿ: ಕೇಂದ್ರ ಬರ ಅಧ್ಯಯನ ತಂಡಕ್ಕೆ ಸಿಎಂ ಮನವಿ
ಬೆಂಗಳೂರು: ಕೇಂದ್ರ ಬರ ಅಧ್ಯಯನ ತಂಡದ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿ, ಹಸಿರು ಹಾಗೂ ಬರದ ಬಗ್ಗೆ ಆಳವಾದ ಅಧ್ಯಯನ ನಡೆಸುವಂತೆ ಮನವಿ ಮಾಡಿದ್ದಾರೆ. ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರದ ಮೂರು ತಂಡಗಳು ರಾಜ್ಯಕ್ಕೆ ಅಗಮಿಸಿದ್ದು, ನಾಲ್ಕು ದಿನಗಳ ಕಾಲ ವಿವಿಧ ಜಿಲ್ಲಾ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸಲಿವೆ. ಕೇಂದ್ರ ತಂಡ ಹತ್ತು ಸದಸ್ಯರನ್ನೊಳಗೊಂಡಿದ್ದು, ರಾಜ್ಯದ ಸ್ಥಳೀಯ ಅಧಿಕಾರಿಗಳೊಂದಿಗೆ ಕೃಷಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ. ಕೇಂದ್ರ ಬರ …
Read More »ವಿಶ್ವಕಪ್ ಆಯೋಜನೆಯಿಂದ ದೇಶದ ಆರ್ಥಿಕತೆಗೆ 18 ರಿಂದ 22 ಸಾವಿರ ಕೋಟಿ ರೂಪಾಯಿ ಹರಿದು ಬರುವ ಸಾಧ್ಯತೆಯಿದೆ.
ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ ದೇಶದ ಜಿಡಿಪಿಗೆ ಹೆಚ್ಚುವರಿಯಾಗಿ ಸುಮಾರು 18,000-22,000 ಕೋಟಿ ರೂ.ಗಳ ಕೊಡುಗೆ ನೀಡಲಿದೆ ಮತ್ತು ಪಂದ್ಯಾವಳಿಯು ದೇಶದ ಜಿಡಿಪಿಗೆ ಸುಮಾರು 7,000-8,000 ಕೋಟಿ ರೂ. ಗಳಷ್ಟು ಮೌಲ್ಯವರ್ಧನೆ ಮಾಡಲಿದೆ ಎಂದು ಬ್ಯಾಂಕ್ ಆಫ್ ಬರೋಡಾದ ಇಬ್ಬರು ಅರ್ಥಶಾಸ್ತ್ರಜ್ಞರ ವರದಿ ತಿಳಿಸಿದೆ. ವಿಶ್ವಕಪ್ನಿಂದ ಹಣದುಬ್ಬರದ ಮೇಲಾಗುವ ಪರಿಣಾಮ ತೀರಾ ಅತ್ಯಲ್ಪ ಎಂದು ವರದಿ ತಿಳಿಸಿದೆ. ಜಿಡಿಪಿಯ ಮೇಲಾಗುವ ಪರಿಣಾಮದ ದೃಷ್ಟಿಯಿಂದ ನೋಡಿದರೆ ವಿಶ್ವಕಪ್ನಿಂದ ಅಂದಾಜು 18,000-22,000 ಕೋಟಿ …
Read More »ಕೆ.ಭಕ್ತವತ್ಸಲ ಆಯೋಗದ ಮೂರು ಶಿಫಾರಸಿಗೆ ಸಂಪುಟ ಸಭೆ ಅಸ್ತು: ಸಚಿವ ಹೆಚ್.ಕೆ.ಪಾಟೀಲ್
ಬೆಂಗಳೂರು : ಹಿಂದುಳಿದ ವರ್ಗಗಳಿಗೆ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ಜಸ್ಟೀಸ್ ಡಾ.ಕೆ.ಭಕ್ತವತ್ಸಲ ಆಯೋಗವನ್ನು ರಚಿಸಲಾಗಿತ್ತು. ಈ ಆಯೋಗ ಸಲ್ಲಿಸಿರುವ ವರದಿಯಲ್ಲಿನ ಐದು ಶಿಫಾರಸುಗಳ ಪೈಕಿ ಮೂರು ಶಿಫಾರಸುಗಳನ್ನು ಸಚಿವ ಸಂಪುಟ ಸಭೆ ಅಂಗೀಕಾರ ಮಾಡಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡುತ್ತಾ, ಮುಂಬರುವ ಸ್ಥಳೀಯ ನಗರ ಮತ್ತು ಗ್ರಾಮೀಣ ಸಂಸ್ಥೆಗಳಲ್ಲಿ …
Read More »
Laxmi News 24×7