Breaking News

ರಾಜಕೀಯ

ಆಸೀಸ್​ನ ‘ಜೋಶ್’​ ​ಬ್ಯಾಟಿಂಗ್​​, ಟೀಮ್​ ಇಂಡಿಯಾಗೆ 209 ರನ್​ಗಳ ಗುರಿ

ವಿಶಾಖಪಟ್ಟಣ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಟಿ20 ಸರಣಿಯ ಮೊದಲ ಪಂದ್ಯದ ಫಸ್ಟ್​ ಇನ್ನಿಂಗ್ಸ್​ ಮುಕ್ತಾಯಗೊಂಡಿದ್ದು, ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಆಸೀಸ್ ಜೋಶ್​ ಇಂಗ್ಲಿಸ್​ ಅವರ ಶತಕದ ನೆರವಿನಿಂದ​ ನಿಗದಿತ ಓವರ್​ಗಳ ಅಂತ್ಯಕೆ 3 ವಿಕೆಟ್ ನಷ್ಟಕ್ಕೆ 208 ರನ್​ಗಳ ಕಲೆ ಹಾಕಿದ್ದು, ಭಾರತಕ್ಕೆ 209 ​ರನ್​ ಗುರಿ ನೀಡಿದೆ.   ವಿಶಾಖಪಟ್ಟಣದ ಡಾ. ವೈ.ಎಸ್. ರಾಜಶೇಖರ್ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ …

Read More »

ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ಇಡಿ ಸಮನ್ಸ್

ಚೆನ್ನೈ (ತಮಿಳುನಾಡು): ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ. ತಮಿಳುನಾಡಿನ ತಿರುಚಿರಾಪಳ್ಳಿ ಮೂಲದ ಆಭರಣ ಸಮೂಹವೊಂದರ ವಿರುದ್ಧ 100 ಕೋಟಿ ರೂಪಾಯಿ ಪೋಂಜಿ ಮತ್ತು ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪ್ರಕಾಶ್ ರಾಜ್ ಅವರಿಗೆ ಸಮನ್ಸ್ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ತಿರುಚಿರಾಪಳ್ಳಿ ಮೂಲದ ಪಾಲುದಾರಿಕೆ ಸಂಸ್ಥೆಯಾದ ಪ್ರಣವ್ ಜ್ಯುವೆಲ್ಲರ್ಸ್ ವಿರುದ್ಧ ಇಡಿ ತನಿಖೆ ನಡೆಸುತ್ತಿದೆ. ನವೆಂಬರ್ …

Read More »

ದೇಶದಲ್ಲಿ ನರೇಂದ್ರ ಮೋದಿ, ಕರ್ನಾಟಕದಲ್ಲಿ ಸಿದ್ದರಾಮಯ್ಯ- ಅರವಿಂದ​ ಲಿಂಬಾವಳಿ

ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ಇಂದು ಬೆಳಗ್ಗೆ 11.30ಕ್ಕೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಅವರು ಬಾಗಲಕೋಟೆ ಜಿಲ್ಲೆ ಪ್ರವಾಸ ಮಾಡಲಿದ್ದಾರೆ. ಇನ್ನೊಂದೆಡೆ, ಬರ ಬರಿಹಾರ ವಿಚಾರವಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಇಂದು ದೆಹಲಿಗೆ ತೆರಳಿ ಕೇಂದ್ರದ ನಾಯಕರನ್ನು ಭೇಟಿಯಾಗಲಿದ್ದಾರೆ. ಇದರೊಂದಿಗೆ ರಾಜ್ಯದ ಪ್ರಮುಖ ಸುದ್ದಿಗಳ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್​​ ಲೈವ್ ಫಾಲೋ ಮಾಡಿ.Karnataka News Live : ನಿಗಮ ಮಂಡಳಿಗೆ ನೇಮಕಾತಿ ಪ್ರಕ್ರಿಯೆ ಸಂಬಂಧ …

Read More »

ಮಂಜೂರಾದ ಮನೆಯ ಜಿಪಿಎಸ್ ಮಾಡಿಸಿ ಕೊಡಲು ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯತ್​ ಸದಸ್ಯನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಹಾವೇರಿ: ಮಂಜೂರಾದ ಮನೆಯ ಜಿಪಿಎಸ್ ಮಾಡಿಸಿ ಕೊಡಲು ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯತ್​ ಸದಸ್ಯನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಸವಣೂರು ತಾಲೂಕಿನ ಕಾರಡಗಿ ಗ್ರಾಮದ ಗ್ರಾಮ ಪಂಚಾಯತ್​ ಸದಸ್ಯ ಮಹಮ್ಮದ್ ಜಾಪರ್​ ಸಂಶಿ ಬಂಧಿತ ಆರೋಪಿ. ದಾದಾಪೀರ್​ ಲೋಹರ್​ ಎಂಬವರಿಗೆ ಸರ್ಕಾರದಿಂದ 5 ಲಕ್ಷ ರೂಪಾಯಿ ಮನೆ ಮಂಜೂರಾಗಿತ್ತು. ಈ ಮನೆಗೆ ಜಿಪಿಎಸ್ ಮಾಡಿಸಲು ಮಹಮ್ಮದ್ ಜಾಪರ್​ ಸಂಶಿ 40 ಸಾವಿರ ರೂಪಾಯಿ ಲಂಚ ಬೇಡಿಕೆಯಿಟ್ಟದ್ದ‌ರು. 20 ಸಾವಿರ ರೂಪಾಯಿ ಲಂಚ …

Read More »

ಪೊಲೀಸ್ ಇನ್​ಸ್ಪೆಕ್ಟರ್ ಬ್ಯಾಂಕ್‌​ ಖಾತೆಗೆ ಆನ್​ಲೈನ್ ವಂಚಕರ ಕನ್ನ: ₹8.25 ಲಕ್ಷ ವರ್ಗಾವಣೆ

ಹುಬ್ಬಳ್ಳಿ: ಪೊಲೀಸ್ ಇನ್​ಸ್ಪೆಕ್ಟರ್​ ಒಬ್ಬರ ಖಾತೆಗೆ ಆನ್​ಲೈನ್ ವಂಚಕರು ಕನ್ನ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಧಾರವಾಡ ಉಪನಗರ ಠಾಣೆ ಇನ್​ಸ್ಪೆಕ್ಟರ್ ದಯಾನಂದ ಶೇಗುಣಿಸಿ ಅವರ ಬ್ಯಾಂಕ್ ಖಾತೆಯಲ್ಲಿದ್ದ 8.25 ಲಕ್ಷ ಹಣವನ್ನು ಅಪರಿಚಿತರು ವರ್ಗಾವಣೆ ಮಾಡಿಕೊಂಡಿದ್ದು, ಈ ಕುರಿತಂತೆ ಅವರು ಹುಬ್ಬಳ್ಳಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಯಾನಂದ ಯಾರೊಂದಿಗೂ ಮಾಹಿತಿ ಹಂಚಿಕೊಂಡಿಲ್ಲ. ಆದರೂ ಅವರ ಹಣ ವರ್ಗಾವಣೆಯಾಗಿದೆ. ಬ್ಯಾಂಕಿನವರು ನೆಟ್ ಸೆಕ್ಯೂರಿಟಿ ಬಳಸದೆ ನಿಷ್ಕಾಳಜಿಯಿಂದಲೋ‌ ಅಥವಾ …

Read More »

ಲೋಕಸಭೆ ಚುನಾವಣೆ: ಎಲ್ಲರೂ ಕೂಡಿ ಕೆಲಸ ಮಾಡಲು ಒಪ್ಪಿದ್ದೇವೆ- ರಮೇಶ್ ಜಾರಕಿಹೊಳಿ

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಎಲ್ಲರೂ ಕೂಡಿ ಕೆಲಸ ಮಾಡಲು ಒಪ್ಪಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಭೇಟಿ ಬಳಿಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.   ಸದಾಶಿವನಗರ ತಮ್ಮ ನಿವಾಸದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮ್ಮ ನೋವು ಏನು ಅಂತ ಈಗ ಹೇಳೋದಕ್ಕೆ ಬರಲ್ಲ. ನಾವು ಇಬ್ಬರೂ ಸೇರಿ ಚರ್ಚೆ ಮಾಡಿದ್ದೇವೆ. ನಾಲ್ಕು ಗೋಡೆಗಳ ಮಧ್ಯೆ ಮಾಡಿದ ಚರ್ಚೆಯನ್ನು ಬಹಿರಂಗವಾಗಿ ಹೇಳಲ್ಲ. …

Read More »

ಈ ಜೋಡಿಗೆ ಮಾತು ಬರುವುದಿಲ್ಲ, ಕಿವಿಯೂ ಕೇಳಿಸದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಶೇಷಚೇತನ ನವಜೋಡಿ

ಹಾಸನ: ಈ ಜೋಡಿಗೆ ಮಾತು ಬರುವುದಿಲ್ಲ, ಕಿವಿಯೂ ಕೇಳಿಸದು. ಆದರೂ ತಮ್ಮ ತಮ್ಮ ನಡುವಿನ ಸನ್ನೆ ಮಾತುಗಳ ಮೂಲಕ, ನೀ ನನಗೆ ನಾ ನಿನಗೆ ಎಂಬಂತೆ ಹಸಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಶುರುವಿಟ್ಟಿದ್ದಾರೆ. ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯಲ್ಲಿ ಇಂತಹದ್ದೊಂದು ಅಪರೂಪದ ಮದುವೆ ನಡೆಯಿತು. ಬಾಳ್ಳುಪೇಟೆ ಗ್ರಾಮದ ಕೆಂಚಮ್ಮ- ಮಲ್ಲೇಗೌಡ ಸಮುದಾಯ ಭವನದಲ್ಲಿ ನಡೆದ ವಿಶೇಷ ಮದುವೆಯಲ್ಲಿ ಇವರು ಹೊಸ ಜೀವನಕ್ಕೆ ಕಾಲಿಟ್ಟರು. ಈ ಸನ್ನಿವೇಶಕ್ಕೆ ಎರಡೂ ಮನೆಯ ಕುಟುಂಬರಷ್ಟೇ ಅಲ್ಲದೇ, …

Read More »

ನಟನೆಯಲ್ಲಿ ಅಭಿ ಸಾಮರ್ಥ್ಯ ಬೇರೇನೇ ಇದೆ.

ಸೂರಿ ನಿರ್ದೇಶನದಲ್ಲಿ ಅಭಿಷೇಕ್‌ ಅಂಬರೀಶ್‌ ನಾಯಕರಾಗಿರುವ “ಬ್ಯಾಡ್‌ ಮ್ಯಾನರ್ಸ್‌’ ಚಿತ್ರ ನ.24ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಹಿಟ್‌ಲಿಸ್ಟ್‌ ಸೇರಿದೆ. ನಿರ್ದೇಶಕ ಸೂರಿ ಹೊಸ ಲೋಕವನ್ನು ಕಟ್ಟಿಕೊಟ್ಟಿರೋದು ಕಾಣುತ್ತಿದೆ. ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ನಿರ್ದೇಶಕ ಸೂರಿ “ಬ್ಯಾಡ್‌ ಮ್ಯಾನರ್ಸ್‌’ ಬಗ್ಗೆ ಮಾತನಾಡಿದ್ದಾರೆ. ಬ್ಯಾಡ್‌ ಮ್ಯಾನರ್ ಆರಂಭ ಹೇಗೆ? ಅಭಿ ಮಾಡಿರುವ “ಅಮರ್‌’ ಸಿನಿಮಾ ನಂಗೆ ಇಷ್ಟವಾಗಿತ್ತು. ನಾನು ಆ ಸಿನ್ಮಾನ ಅಭಿ ಪೋರ್ಟ್‌ಪೋಲಿಯೋ ಥರಾನೇ ನೋಡಿದ್ದೆ. ತಡಮಾಡದೇ ದರ್ಶನ್‌ ಸರ್‌ಗೆ …

Read More »

ಕರ್ತವ್ಯ ನಿರ್ಲಕ್ಷ್ಯ ಆರೋಪ. ಸಿಪಿಐ ಸಾಗರ್ ಅಮಾನತು

ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮ ರೂವಾರಿ ಎನ್ನಲಾಗುತ್ತಿರುವ ಆರ್.ಡಿ. ಪಾಟೀಲ್, ವಾರ್ದ ಅಪಾರ್ಟ್ಮೆಂಟ್ ನಿಂದ ತಪ್ಪಿಸಿಕೊಳ್ಳುವಲ್ಲಿ ಉಂಟಾಗಿರುವ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸಿಪಿಐ ಸಾಗರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಈ ಆದೇಶವನ್ನು ಕಲ್ಬುರ್ಗಿ ಈಶಾನ್ಯ ವಲಯದ ಐಜಿಪಿ ಹೊರಡಿಸಿದ್ದಾರೆ ಕಲ್ಬುರ್ಗಿ ನಗರದ ವಾರ್ದಾ ಅಪಾರ್ಟ್ಮೆಂಟಿನಲ್ಲಿ ಆರ್ ಡಿ ಪಾಟೀಲ್ ಇರುವ ಮಾಹಿತಿ ಅಫ್ಜಲ್ಪುರ್ ಠಾಣೆಯ ಸಿಪಿಐ ಪಂಡಿತ್ ಸಾಗರ್ ಅವರಿಗೆ ತಲುಪಿತ್ತು. ಆದರೆ, ಅವರು ತಡವಾಗಿ ಅಪಾರ್ಟ್ಮೆಂಟ್ ಗೆ …

Read More »

1500 ಕ್ವಿಂಟಾಲ್ ಅನ್ನ ಭಾಗ್ಯ ಅಕ್ಕಿ ಗೋದಾಮಿನಲ್ಲೇ ಮಾಯ

ರಾಮನಗರ: ಚನ್ನಪಟ್ಟಣದಲ್ಲಿ 1500 ಕ್ವಿಂಟಾಲ್ ಅಕ್ಕಿ ಗೋಲ್ ಮಾಲ್ ಆಗಿರುವುದು ಬೆಳಕಿಗೆ ಬಂದಿದೆ. ಚನ್ನಪಟ್ಟಣ ತಾಲೂಕಿನ 65 ನ್ಯಾಯಬೆಲೆ ಅಂಗಡಿಗೆ ಸಗಟು ಪಡಿತರ ಧಾನ್ಯ ವಿತರಣೆ ಮಾಡುತ್ತಿದ್ದ ಟಿಎಪಿಸಿಎಂಎಸ್ ಗೋದಾಮಿನಲ್ಲಿ ಅಪಾರ ಪ್ರಮಾಣದ ಅಕ್ಕಿ ನಾಪತ್ತೆಯಾಗಿದೆ.   ಗೋದಾಮಿನ ಸಿಬ್ಬಂದಿಯಿಂದ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಗೋದಾಮು ನಿರ್ವಹಣೆ ಮಾಡುತ್ತಿದ್ದ ನೌಕರನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಸ್ಥಳಕ್ಕೆಅಹಾರ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. 50 ಲಕ್ಷ ರೂ.ಗೂ ಹೆಚ್ಚು …

Read More »