ಬೆಂಗಳೂರು: ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಸ್ತಿ ತೆರಿಗೆ ಪಾವತಿಗಾಗಿ ಈ ಮೊದಲು ಬಾಪೂಜಿ ಸೇವಾ ಕೇಂದ್ರಗಳಿಗೆ ತೆರಳಿ ಕ್ಯೂ ನಿಂತು ಪೇ ಮಾಡಬೇಕಿತ್ತು. ಆದರೇ ಈಗ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿ ಮತ್ತಷ್ಟು ಸರಳವಾಗಿದೆ. ನೀವು ಕುಳಿತಲ್ಲೇ ಆನ್ ಲೈನ್ ಮೂಲಕ ಪಾವತಿಸಬಹುದಾಗಿದೆ. ಹೌದು.. ಸಾರ್ವಜನಿಕರು ಇನ್ಮುಂದೆ ತಮ್ಮ ಮೊಬೈಲ್ ನಲ್ಲೇ ಪೋನ್ ಪೇ, ಗೂಗಲ್ ಪೇ, ಬೀಮ್ ಅಪ್ಲಿಕೇಷನ್, ಪೇಟಿಎಂ ಸೇರಿದಂತೆ ಇತರೆ ಮೊಬೈಲ್ ಅಪ್ಲಿಕೇಷನ್ …
Read More »ಗಣೇಶ ತರಲು ಹೊರಟ ಇಬ್ಬರು ಮಸಣ ಸೇರಿದರು, ನಾಲ್ವರಿಗೆ ಬೆಳಕಾದರು
ಇಂದು ಗಣೇಶ ಚತುರ್ಥಿಯ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದರೆ, ಕೆಲವರ ಮನೆಗಳಲ್ಲಿ ಕರಾಳತೆ ಆವರಿಸಿದೆ. ಹಬ್ಬದ ದಿನವೇ ನಡೆದ ದುರಂತಗಳಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದಲ್ಲಿ ಯುವಕರು ಜೀವ ಬಿಟ್ಟು ಮನೆಯಲ್ಲಿ ಕಗ್ಗತ್ತಲಿಗೆ ದೂಡಿರುವುದು ಒಂದೆಡೆಯಾದರೆ, ಇವರು ಮಾಡಿರುವ ನೇತ್ರದಾನದಿಂದ ನಾಲ್ವರ ಬದುಕು ಬೆಳಕು ಬಂದಂತಾಗಿದೆ. ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಈ ಘಟನೆ ನಡೆದಿರುವುದು ಚಿಕ್ಕಮಗಳೂರು ಜಿಲ್ಲೆಯಲ್ಲಿ. ಹೌದು, ಎಲ್ಲ ಯುವಕರಂತೆ ಗಣೇಶ ಚತುರ್ಥಿಗೆ ಗಣಪನನ್ನು ಕರೆತರಲು ಉತ್ಸಾಹದಿಂದ ಹೊರಟವರು …
Read More »ಬಳ್ಳಾರಿ ಜೈಲಿಗೆ ಬಂದ ಗಣೇಶ: ‘ದರ್ಶನ್’ಗೆ ಭಾಗ್ಯ ಇಲ್ಲ
ಬಳ್ಳಾರಿ ಜೈಲಿಗೆ ಬಂದ ಗಣೇಶ: ‘ದರ್ಶನ್’ಗೆ ಭಾಗ್ಯ ಇಲ್ಲ ದೇಶದೆಲ್ಲೆಡೆ ಇಂದು ಗಣೇಶ ಚತುರ್ಥಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಆದರೆ ಈ ಬಾರಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ಗಣೇಶನನ್ನು ಪೂಜಿಸುವ ಭಾಗ್ಯ ಇಲ್ಲ. ಇದರಿಂದ ದರ್ಶನ್ ಬೇಸರಗೊಂಡಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ. ಪ್ರತೀ ವರ್ಷ ಗಣೇಶ ಚತುರ್ಥಿಯಲ್ಲಿ ಭಾಗಿಯಾಗುತ್ತಿದ್ದ ದರ್ಶನ್ ಈ ಬಾರಿ ಅದನ್ನು ಮಿಸ್ ಮಾಡಿಕೊಂಡಿದ್ದಾರೆ. ಹೌದು…. ಬಳ್ಳಾರಿ ಜೈಲಿನಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಇದಕ್ಕೆ ಜೈಲನ್ನು …
Read More »ಟೆಸ್ಟ್ ಕ್ರಿಕೆಟ್‌ನಲ್ಲಿ ಅಬ್ಬರಿಸುವ ಸೂಚನೆ ಕೊಟ್ಟ ರಿಷಬ್ ಪಂತ್
ಅಪಘಾತದ ಬಳಿಕ ಸುದೀರ್ಘ ವಿಶ್ರಾಂತಿ ಪಡೆದಿದ್ದ ರಿಷಬ್ ಪಂತ್ ಮತ್ತೆ ಕ್ರಿಕೆಟ್ ಗೆ ಮರಳಿದ್ದಾರೆ. ಐಪಿಎಲ್‌ನಲ್ಲಿ ಅಷ್ಟೇನೂ ಮಿಂಚದೇ ಇದ್ದರೂ, ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಹಳೆಯ ಆಟದ ಝಲಕ್ ತೋರಿಸಿದ್ದಾರೆ. ದುಲೀಪ್ ಟ್ರೋಫಿ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಆಡಲು ನಾನು ಮತ್ತೆ ರೆಡಿ ಎನ್ನುವ ಸೂಚನೆ ಕೊಟ್ಟಿದ್ದಾರೆ. 2020 ರಿಂದ 2022 ರವರೆಗೆ ಭಾರತದ ಅತ್ಯುತ್ತಮ ಟೆಸ್ಟ್ ಬ್ಯಾಟರ್ ಆಗಿದ್ದ ರಿಷಬ್ ಪಂತ್, …
Read More »ಇಂದು ಗಣೇಶನ ಹಬ್ಬ: ಇದನ್ನು ಆರಂಭಿಸಿದ ‘ಬಾಲ ಗಂಗಾಧರ ತಿಲಕ್’ ಬಗ್ಗೆ ನಿಮಗೆ ತಿಳಿದಿರ ವಿಷಯ ಇಲ್ಲಿದೆ
ಬೆಂಗಳೂರು: ಇಂದು ಗಣೇಶ ಚತುರ್ಥಿ ಹಬ್ಬ. ಕರ್ನಾಟಕ, ಭಾರತದೆಲ್ಲೆಡೆ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಇಂತಹ ಹಬ್ಬವನ್ನು ಆರಂಭಿಸಿದ್ದೇ ಬಾಲ ಗಂಗಾಧರ ತಿಲಕ್ ಅವರು. ಅವರ ನಿಮಗೆ ತಿಳಿದಿರ ವಿಷಯವನ್ನು ಹಿರಿಯ ಪತ್ರಕರ್ತ ದಿನೇಶ್ ಅಮೀನಮಟ್ಟು ಈ ಕೆಳಗಿನಂತೆ ಹಂಚಿಕೊಂಡಿದ್ದಾರೆ ಓದಿ. ಇಂದು ಗಣೇಶನ ಹಬ್ಬ. ಭಾರತದ ರಾಜಕೀಯ ಕ್ಷೇತ್ರದಲ್ಲಿ ಧರ್ಮದ ಪ್ರವೇಶಕ್ಕೆ ಕಾರಣವಾದ ಸಾರ್ವಜನಿಕ ಗಣೇಶೋತ್ಸವದ ರೂವಾರಿ ಬಾಲ ಗಂಗಾಧರ ತಿಲಕ್. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ರಾಜಕೀಯ ಕ್ಷೇತ್ರ ಪ್ರವೇಶಿಸಿದ …
Read More »ಕೊಪ್ಪಳ ಏತ ನೀರಾವರಿಗೆ ಮತ್ತೊಂದು ‘ವಿಘ್ನ’
ಕುಷ್ಟಗಿ: ಕೃಷ್ಣಾ ನದಿ ತುಂಬಿ ಹರಿದರೆ ಈ ಭಾಗದ ಜನರಲ್ಲಿ ಸಂತಸ ಮನೆಮಾಡುತ್ತದೆ. ಕಾರಣವೆಂದರೆ ಕೃಷ್ಣಾ ಭಾಗ್ಯ ಜಲನಿಗಮ ಕೈಗೆತ್ತಿಕೊಂಡಿರುವ ಕೊಪ್ಪಳ ಏತ ನೀರಾರಿ ಯೋಜನೆಯಲ್ಲಿನ ಕೆರೆ ತುಂಬಿಸುವ ಉಪ ಯೋಜನೆಯಲ್ಲಿ ತಮ್ಮೂರಿನ ಕೆರೆಗಳೂ ಭರ್ತಿಯಾಗುತ್ತವೆ ಎಂಬ ಆಶಯ. ಆದರೆ ಯೋಜನೆಗೆ ಸಮಸ್ಯೆಗಳು ಸಾಲುಸಾಲಾಗಿ ಎದುರಾಗುತ್ತಿದ್ದು, ಯೋಜನೆ ಪೂರ್ಣಗೊಂಡಿಲ್ಲ. ಜುಲೈನಲ್ಲಿ ಕೃಷ್ಣಾ ನದಿ ಉಕ್ಕಿ ಹರಿದು ಆಲಮಟ್ಟಿ ಜಲಾಶಯ ಭರ್ತಿಯಾಗಿ ಸಾಕಷ್ಟು ನೀರು ನದಿಗೆ ಹರಿದುಹೋಯಿತು. ಜುಲೈ 15ರಂದು ಕುಷ್ಟಗಿ ಮತ್ತು …
Read More »ಬೆಂಗಳೂರು: ವಿದ್ಯಾರ್ಥಿನಿಗೆ ಕಪಾಳಮೋಕ್ಷ ಮಾಡಿದ ‘ಓಲಾ ಚಾಲಕನಿಗೆ’ 4 ದಿನ ಜೈಲು ಶಿಕ್ಷೆ,30 ಸಾವಿರ ರೂ.ದಂಡ
ಬೆಂಗಳೂರು: ನಗರದ ಓಲಾ ಆಟೋ ಚಾಲಕ ಮುತ್ತುರಾಜ್ ಎಂಬಾತನನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ ತನ್ನ ಸವಾರಿಯನ್ನು ರದ್ದುಗೊಳಿಸಿದ ಕಾಲೇಜು ವಿದ್ಯಾರ್ಥಿನಿಗೆ ಕಪಾಳಮೋಕ್ಷ ಮಾಡಿದ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ಮುತ್ತುರಾಜ್ ಅವರನ್ನು ಬಂಧಿಸಲಾಗಿದೆ. ಅವರು ಈಗ ವಾರಾಂತ್ಯವನ್ನು ಜೈಲಿನಲ್ಲಿ ಕಳೆಯುತ್ತಿದ್ದಾರೆ ಮತ್ತು ಜಾಮೀನು ಪಡೆಯಲು ಕನಿಷ್ಠ 30,000 ರೂ.ಗಳನ್ನು ಕಾನೂನು ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಈ ಘಟನೆಯನ್ನು ಮಂಗಳವಾರ ಸಂಜೆ ವಿದ್ಯಾರ್ಥಿಯ ಮೊಬೈಲ್ ಫೋನ್ನಲ್ಲಿ ಸೆರೆಹಿಡಿಯಲಾಗಿದ್ದು, ಶೀಘ್ರದಲ್ಲೇ ವೈರಲ್ …
Read More »ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!
ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಸವದತ್ತಿ ತಾಲ್ಲೂಕಿನ ಹಿಟಣಗ್ಗಿ ಗ್ರಾಮದ ಶ್ರೀ ಬಸವೇಶ್ವರ ದೇವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರಾದ ರಾದ ಸಂತೋಷ …
Read More »ರಾಜ್ಯದ ಜನತೆಗೆ ಗಣೇಶ ಚತುರ್ಥಿಯ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು : ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಗಣೇಶ ಚತುರ್ಥಿಯ ( Ganesha Chaturthi) ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ‘ನಾಡಬಂಧುಗಳಿಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ಸಂಕಷ್ಟಹರ ಗಣೇಶನು ಬದುಕಲ್ಲಿ ಎದುರಾಗುವ ಸಕಲ ವಿಘ್ನಗಳನ್ನು ಎದುರಿಸುವ ಆತ್ಮಬಲವನ್ನು ನಿಮ್ಮೆಲ್ಲರಲ್ಲೂ ತುಂಬಲಿ ಎಂದು ಹಾರೈಸುತ್ತೇನೆ. ಹಬ್ಬವನ್ನು ಸಡಗರ – ಸಂಭ್ರಮದಿಂದ ಆಚರಿಸೋಣ, ಇದರ ಜೊತೆಗೆ ಪರಿಸರ ಕಾಳಜಿಯನ್ನು ಮರೆಯದಿರೋಣ” ಎಂದು ಟ್ವೀಟ್ ಮಾಡಿದ್ದಾರೆ.
Read More »ದರ್ಶನ್ ವಿರುದ್ಧ ಪಟ್ಟಣಗೆರೆ ಶೆಡ್ ‘ಮಣ್ಣು’ ಸಹ ಸಾಕ್ಷಿ
ಬೆಂಗಳೂರು, ಸೆಪ್ಟಂಬರ್ 07: ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿರುವ ನಟ ದರ್ಶನ್ ವಿರುದ್ಧ ಒಂದೊಂದೇ ಸಾಕ್ಷ್ಯಗಳು ಬಯಲಾಗುತ್ತಿವೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇತ್ತೀಚೆಗೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಅದರಲ್ಲಿ ನಟ ದರ್ಶನ್ ವಿರುದ್ಧ ಯಾವೆಲ್ಲ ಸಾಕ್ಷ್ಯಗಳು ಸಿಕ್ಕಿವೆ ಎಂಬುದು ಬಹಿರಂಗವಾಗಿದೆ. ಈ ಪೈಕಿ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೇಡ್ ಮಣ್ಣು ಸಹ ಪ್ರಮುಖ ಸಾಕ್ಷಿಯಾಗಿದೆ. ಹೌದು, ಶೆಡ್‌ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಮೇಲೆ …
Read More »
Laxmi News 24×7