Breaking News

ರಾಜಕೀಯ

ಬೆಂಗಳೂರಿಗೆ ಬರ್ಬೇಕು ಅಂತ ನಟ ದರ್ಶನ್‌ ಹಠ ಹಿಡಿದಿರೋದು ಏಕೆ?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ ಅವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಲೇ ಇದೆ. ಇದರ ನಡುವೆ ದರ್ಶನ್‌ ಹೇಗಾದರೂ ಮಾಡಿ ಬೆಂಗಳೂರಿಗೆ ವಾಪಸ್‌ ಬರಲೇಬೇಕು ಎಂದು ಹಠ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ದರ್ಶನ್‌ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನಲಾಗಿದ್ದು, ಇದೇ ಕಾರಣ ಮುಂದಿಟ್ಟುಕೊಂಡು ಬಳ್ಳಾರಿಯಿಂದ ಬೆಂಗಳೂರಿಗೆ ಮತ್ತೆ ಶಿಫ್ಟ್‌ ಆಗಲು ದರ್ಶನ್‌ ಮುಂದಾಗಿದ್ದಾರೆ. ಮೊದಲಿಗೆ ಈ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌ ಆದ ಬಳಿಕ ಬೆಂಗಳೂರಿನ …

Read More »

ಸರ್ಕಾರ ಬಿದ್ದರೆ ಬೀಳಲಿ..’ ಎಂದ ಕಾಂಗ್ರೆಸ್‌ ಪ್ರಭಾವಿ ನಾಯಕ

ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಬೇಕು ಎಂದು ಬಿಜೆಪಿ-ಜೆಡಿಎಸ್‌ ತೊಡೆ ತಟ್ಟಿವೆ. ಮತ್ತೊಂದೆಡೆ ಮುಡಾ ಕೇಸ್‌ನಿಂದಾಗಿ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡುತ್ತಿದೆ. ಈಗ ಸ್ವಪಕ್ಷದಿಂದಲೇ ಸರ್ಕಾರ ಬೀಳುವ ಬಗ್ಗೆ ಮಾತುಕೇಳಿಬಂದಿದೆ. ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.   ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್‌ ಸದಸ್ಯರಾದ ಬಿ.ಕೆ.ಹರಿಪ್ರಸಾದ್‌ ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಅವರು ಸರ್ಕಾರ ಬಿದ್ದರೆ ಬೀಳಲಿ, …

Read More »

ಸಿಎಂ ಕುರ್ಚಿಯಲ್ಲಿ ‘ಟಗರು’ ಗಟ್ಟಿಯಾಗಿ ಕುಳಿತಿದೆ: ಯಾರೂ ಕೆಳಗಿಳಿಸಲು ಸಾಧ್ಯವಿಲ್ಲ ಎಂದ ಸಚಿವ ಜಮೀರ್ ಅಹ್ಮದ್

ಬೆಂಗಳೂರು: ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ವಸತಿ ಸಚಿವ ಜಮೀರ್ ಅಹ್ಮದ್, ಸದ್ಯ ಸಿಎಂ ಕುರ್ಚಿ ಖಾಲಿಯಿಲ್ಲ. 5 ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್, ಸಿಎಂ ಆಗಬೇಕು ಅಂತಾ ಎಲ್ಲಾ ಜಾತಿಯವರಿಗೂ ಆಸೆ ಇರುತ್ತೆ. ದಲಿತರಿಗೆ, ಮುಸ್ಲಿಮರಿಗೆ, ಒಕ್ಕಲಿಗರಿಗೆ ಎಲ್ಲರಿಗೂ ಸಿಎಂ ಆಗಬೇಕೆಂಬ ಆಸೆ ಇದೆ. ಆದರೆ ಈ ಐದು ವರ್ಷದ ಅವಧಿ ಸಿಎಂ ಹುದ್ದೆ ಖಾಲಿಯಿಲ್ಲ. ಸಿದ್ದರಾಮಯ್ಯ 5 …

Read More »

ದಸರಾ’ ಹಿನ್ನೆಲೆ ‘KSRTC’ಯಿಂದ 2000ಕ್ಕೂ ಹೆಚ್ಚು ವಿಶೇಷ ಬಸ್ ಗಳ ವ್ಯವಸ್ಥೆ!

ಬೆಂಗಳೂರು : ದಸರಾ ಮಹೋತ್ಸವದ ಹಿನ್ನೆಲೆ ಕೆಎಸ್‌ಆರ್‌ಟಿಸಿ 2000ಕ್ಕೂ ಅಧಿಕ ವಿಶೇಷ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ. ಅಕ್ಟೋಬರ್‌ 9ರಿಂದ 12ರ ವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಪ್ರದೇಶಗಳಿಗೆ ಹಾಗೂ ಅ.13 ಮತ್ತು 14ರಂದು ವಿವಿಧ ಪ್ರದೇಶಗಳಿಂದ ಬೆಂಗಳೂರಿಗೆ ಈ ವಿಶೇಷ ಬಸ್‌ಗಳ ಸಂಚಾರ ಇರಲಿದೆ.   ಕರ್ನಾಟಕ ಸಾರಿಗೆ (ವೇಗದೂತ), ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್) ಇ.ವಿ ಪವರ್ ಪ್ಲಸ್, ಅಂಬಾರಿ ಕ್ಲಬ್ ಕ್ಲಾಸ್, …

Read More »

ಗುಪ್ತಚರ ಏಜೆನ್ಸಿಗಳು ವಿಫಲವಾಗಿವೆ: ಗೃಹ ಸಚಿವ

ಗುಪ್ತಚರ ಏಜೆನ್ಸಿಗಳು ವಿಫಲವಾಗಿವೆ: ಗೃಹ ಸಚಿವ ಹುಬ್ಬಳ್ಳಿ: ‘ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯದಿಂದ ಪಾಕಿಸ್ತಾನದವರು ಸುಲಭವಾಗಿ ಬೆಂಗಳೂರಿಗೆ ಬರುತ್ತಿದ್ದಾರೆ. ರಾಜ್ಯ ಪೊಲೀಸರಿಗೆ ಮಾಹಿತಿ ದೊರೆತ ತಕ್ಷಣ ಕೆಲವರನ್ನು ಬಂಧಿಸಲಾಗಿದೆ’ ಎಂದು ಗೃಹ ಸಚಿವ ‌ಜಿ. ಪರಮೇಶ್ವರ್‌ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಬಳಿ ರಾ (ಆರ್‌ಎಡಬ್ಲು), ಕೇಂದ್ರ ಗುಪ್ತಚರ, ಸಿಬಿಐ ಅಂಥ ಏಜೆನ್ಸಿಗಳು ಇದ್ದಾಗಲೂ ರಾಜ್ಯಕ್ಕೆ ನುಸುಳುಕೋರರು ಬಂದು ಪಾಸ್‌ಪೋರ್ಟ್‌ ಮಾಡಿಸಿಕೊಳ್ಳುತ್ತಿದ್ದಾರೆ …

Read More »

ಶಬರಿ ಕೊಳ್ಳ ಪ್ರವಾಸಿ ತಾಣ ಮಾಡಲು ಕ್ರಮ: ಸಂಸದ ಜಗದೀಶ ಶೆಟ್ಟರ್‌

ರಾಮದುರ್ಗ: ‘ತಾಲ್ಲೂಕಿನ ಸುರೇಬಾನ ಸಮೀಪದ ಶಬರಿ ಕೊಳ್ಳದ ದೇವಸ್ಥಾನವನ್ನು ಪ್ರವಾಸಿ ತಾಣ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು. ತಾಲ್ಲೂಕಿನ ಶಬರಿ ಕೊಳ್ಳದ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ದೇವಿ ದರ್ಶನದ ನಂತರ ಮಾತನಾಡಿದ ಅವರು, ತಾಲ್ಲೂಕಿನಲ್ಲಿರುವ ಐತಿಹಾಸಿಕ ಶಬರಿಕೊಳ್ಳದಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ದೊರಕಿಸಿ ಅಭಿವೃದ್ಧಿ ಪಡಿಸುವಂತೆ ಕೇಂದ್ರ ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ತಿಳಿಸಿದರು. ರಾಮದುರ್ಗ ಮಂಡಲ ಅಧ್ಯಕ್ಷ ಡಾ. ಕೆ.ವಿ …

Read More »

ಅ. 8ಕ್ಕೆ ಚನ್ನಮ್ಮನ ಕಿತ್ತೂರಿಗೆ ಸಚಿವ ಕೃಷ್ಣ ಬೈರೇಗೌಡ ಭೇಟಿ: ಶಾಸಕ ಬಾಬಾಸಾಹೇಬ

ಕಿತ್ತೂರು: ‘ಇಲ್ಲಿಯ ಕೋಟೆ ಆವರಣಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅ. 8ಕ್ಕೆ ಭೇಟಿ ನೀಡಿ, ಮಹತ್ವಾಕಾಂಕ್ಷೆಯ ಯೋಜನೆ ಆಗಿರುವ ‘ಥೀಮ್ ಪಾರ್ಕ್’ ಸೇರಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ತಿಳಿಸಿದರು. ಕೋಟೆ ಆವರಣದೊಳಗೆ ನಡೆದಿರುವ ಸ್ವಚ್ಛತೆ ಮತ್ತು ಇತರ ಸಿದ್ಧತಾ ಕಾರ್ಯ ವೀಕ್ಷಣೆಗೆ ಅಧಿಕಾರಿಗಳ ಜತೆ ಶನಿವಾರ ಆಗಮಿಸಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.   ಅ. 23 ರಿಂದ 25 ರವರೆಗೆ ನಡೆಯಲಿರುವ ‘ಚನ್ನಮ್ಮನ …

Read More »

ಹರಿಯಾಣ & ಜಮ್ಮು ಕಾಶ್ಮೀರ ಚುನಾವಣೆಯಲ್ಲಿ ಬಿಜೆಪಿಗೆ ಆಘಾತ?

ಬಿಜೆಪಿ ಬಲಿಷ್ಠವಾಗಿದೆ, ಬಿಜೆಪಿ ಪಕ್ಷವು ಎಂತಹ ಚುನಾವಣೆ ಇದ್ದರೂ ಯಾವುದೇ ಅಡೆತಡೆ ಇಲ್ಲದೆ ಗೆದ್ದು ಬೀಗಲಿದೆ, ಬಿಜೆಪಿ ಪಕ್ಷವನ್ನು ಸೋಲಿಸುವುದು ಕಷ್ಟ… ಹೀಗೆ ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಪಕ್ಷದ ಬಗ್ಗೆ ಕೆಲವು ಕಠಿಣವಾದ ನಂಬಿಕೆಗಳು ಹುಟ್ಟಿಕೊಂಡಿದ್ದವು. ಈ ನಂಬಿಕೆಗಳು ಚುನಾವಣೆಯಲ್ಲಿ ಕೈಹಿಡಿದು ನಡೆಸುವ ನಿರೀಕ್ಷೆ ಕೂಡ ಇತ್ತು. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ನಡೆದ ಘಟನೆಗಳು ಇದೀಗ ಬಿಜೆಪಿ ಪಕ್ಷವನ್ನು ಸೋಲಿನ ಸುಳಿಗೆ ತಳ್ಳಿದೆಯಾ? ಹರಿಯಾಣ & ಜಮ್ಮು …

Read More »

ಖೈದಿಗಳಿಗೆ 4 ದಿನ ಭರ್ಜರಿ ಮಾಂಸದೂಟ!

ಯಾವುದೋ ಒಂದು ದೊಡ್ಡ ತಪ್ಪಿನಿಂದ ಜೈಲುಪಾಲಾಗುವ ಖೈದಿಗಳು (Prisoners), ಒಂದು ಸಣ್ಣ ಬೆಳಕಿನಡಿ, ನಾಲ್ಕು ಗೋಡೆಗಳ ಮಧ್ಯೆ ಸೆರೆಮನೆ ವಾಸ ಅನುಭವಿಸಬೇಕಿರುತ್ತದೆ. ಇದು ಪ್ರತಿಯೊಂದು ಜೈಲಿನ ಮೂಲ ನಿಯಮ. ಇಲ್ಲಿ ಯಾವ ಐಷಾರಾಮಿ ಜೀವನ, ಭರ್ಜರಿ ಊಟ, ಉತ್ತಮ ಸೌಕರ್ಯ, ಸೌಲಭ್ಯಗಳು ಇರುವುದಿಲ್ಲ. ಜಗತ್ತಿನ ಮೂಲೆ ಮೂಲೆಯಲ್ಲಿ ಏನೆಲ್ಲಾ ಘಟನೆಗಳು ನಡೆಯುತ್ತಿವೆ ಎಂಬುದರ ಅರಿವಿರುವುದಿಲ್ಲ. ಖುಷಿ, ಆನಂದದ ಕ್ಷಣಕ್ಕೆ ಜಾಗವಿರುವುದಿಲ್ಲ. ಹೀಗಿರುವಾಗ ಈ ಒಂದು ಸರ್ಕಾರ ತಮ್ಮ ರಾಜ್ಯದಲ್ಲಿರುವ ಜೈಲಿನ …

Read More »

ರಾಜಧಾನಿಯಲ್ಲಿ ಸತತ 2 ದಿನವೂ ಗುಡುಗು ಸಹಿತ ಮಳೆ ಆರ್ಭಟ

ರಾಜಧಾನಿಯಲ್ಲಿ ಸತತ 2 ದಿನವೂ ಗುಡುಗು ಸಹಿತ ಮಳೆ ಆರ್ಭಟ ಬೆಂಗಳೂರು:ರಾಜಧಾನಿಯಲ್ಲಿ ಸತತ 2 ದಿನವೂ ಗುಡುಗು ಮಿಂಚು ಸಹಿತ ಮಳೆ ಮುಂದುವರಿದ್ದು, ಶುಕ್ರವಾರ ರಾತ್ರಿ ಹಾಗೂ ಶನಿವಾರ ಸುರಿದ ವರ್ಷಧಾರೆಯಿಂದ ನಗರದ ವಿವಿಧ ಕಡೆಗಳಲ್ಲಿ ಅವಾಂತರ ಸೃಷ್ಟಿಯಾಯಿತು. ತಡರಾತ್ರಿವರೆಗೂ ಮಳೆ ಸುರಿಯುತ್ತಿತ್ತು. ಸರ್ಜಾಪುರ ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದ ಪರಿಣಾಮ ಸವಾರರು ಪರದಾಡಿದರು. ಪ್ರತಿ ಬಾರಿ ಮಳೆ ಬಂದಾಗ ಇದೇ ಸಮಸ್ಯೆ ಪುನರಾವರ್ತನೆಯಾಗುತ್ತಿದ್ದರೂ ಬಿಬಿಎಂಪಿ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳಿಯರು ಆಕ್ರೋಶ …

Read More »