ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಜನ ಆರೋಪಿಗಳನ್ನ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಮಹಾನಿಂಗ ನಂದಗಾವಿ ಹೇಳಿದರು. ಇಲ್ಲಿನ ಹಳೇಹುಬ್ಬಳ್ಳಿ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ನಗರದಲ್ಲಿ ಮಾರುತಿ ನಾರಾಯಣಪುರ ಎಂಬಾತನ ಮೇಲೆ ಯುವಕರ ಗುಂಪೊಂದು ಅಟ್ಟಾಡಿಸಿ ಚಾಕುವಿನಿಂದ ಬೆನ್ನಿಗೆ ಇರಿದಿದ್ದರು. ಪರಿಣಾಮ ಗಂಭೀರವಾಗಿ ಗಾಯಗೊಂಡ ಮಾರುತಿಯನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ …
Read More »ಸ್ಮಾರ್ಟ್ ಸಿಟಿ ಅಭಿಯಾನದ ಅಡಿ ರಾಜ್ಯದ 6 ಸ್ಮಾರ್ಟ್ ಸಿಟಿ (ಬೆಂಗಳೂರು ಹೊರತುಪಡಿಸಿ) ಯೋಜನೆಗಳಲ್ಲಿ ನಡೆದಿರುವ ಕಾಮಗಾರಿಗಳನ್ನು ಸಂಪೂರ್ಣ ತನಿಖೆಗೆ ನಡೆಸಿ, ವರದಿ ನೀಡುವಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಸೂಚಿಸಿದ್ದಾರೆ.
ಬೆಂಗಳೂರು: ಸ್ಮಾರ್ಟ್ ಸಿಟಿ ಅಭಿಯಾನದ ಅಡಿ ರಾಜ್ಯದ 6 ಸ್ಮಾರ್ಟ್ ಸಿಟಿ (ಬೆಂಗಳೂರು ಹೊರತುಪಡಿಸಿ) ಯೋಜನೆಗಳಲ್ಲಿ ನಡೆದಿರುವ ಕಾಮಗಾರಿಗಳನ್ನು ಸಂಪೂರ್ಣ ತನಿಖೆಗೆ ನಡೆಸಿ, ವರದಿ ನೀಡುವಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಸೂಚಿಸಿದ್ದಾರೆ. ಸ್ಮಾರ್ಟ್ ಸಿಟಿ ಅಭಿಯಾನದಡಿ ರಾಜ್ಯ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ – ಧಾರವಾಡ, ಮಂಗಳೂರು, ಶಿವಮೊಗ್ಗ ಹಾಗೂ ತುಮಕೂರು ನಗರಗಳಲ್ಲಿ ನಡೆದಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ಸಚಿವ ಬೈರತಿ ಸುರೇಶ್ ಅವರು ಇಂದು …
Read More »ಗಂಡನ ದೇಹವನ್ನು ಎರಡು ತುಂಡಾಗಿ ಕತ್ತರಿಸಿ ಕೊಲೆ
ಚಿಕ್ಕೋಡಿ (ಬೆಳಗಾವಿ) : ಮದ್ಯಪಾನ ಸೇವನೆಗೆ ಹೆಂಡತಿಗೆ ಆಗಾಗ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ ಗಂಡನನ್ನು ಪತ್ನಿಯೇ ಎರಡು ತುಂಡಾಗಿ ಕತ್ತರಿಸಿ ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಶ್ರೀಮಂತ ಇಟ್ನಾಳೆ (50) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ. ಕಳೆದ ಡಿಸೆಂಬರ್ 10 ರಂದು ಈ ಘಟನೆ ನಡೆದಿದೆ. ಆರೋಪಿಯಾದ ಸಾವಿತ್ರಿ ಇಟ್ನಾಳೆ(30)ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು …
Read More »ಟಿಕೆಟ್ ದರವನ್ನು 15%ರಷ್ಟು ಹೆಚ್ಚಿಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ
ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ಬಸ್ ಪ್ರಯಾಣಿಕರಿಗೆ ಸರ್ಕಾರ ದರ ಹೆಚ್ಚಳದ ಬರೆ ಹಾಕಿದೆ. ಟಿಕೆಟ್ ದರವನ್ನು 15%ರಷ್ಟು ಹೆಚ್ಚಿಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ಪ್ರಯಾಣ ದರ ಪರಿಷ್ಕರಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಶೇ.15ರಷ್ಟು …
Read More »ಬೆಳಗಾವಿ ಖಾದಿ ಉತ್ಸವ: ಜನಮನ ಸೆಳೆದ ಚರಕದಲ್ಲಿ ನೂಲುತ್ತಿರುವ ಅಜ್ಜಿ
ಬೆಳಗಾವಿ: “ಯಪ್ಪಾ ಗಾಂಧಿ ಅಜ್ಜನ ಆಶೀರ್ವಾದದಿಂದ ಒಂದು ತುತ್ತು ಅನ್ನಾ ಉನ್ನಾತೇವು. ಅವರ ತತ್ವ ಬಿಡಬಾರದು ಅಂತಾ ನಾನು ನೂಲುವುದು ಬಿಟ್ಟಿಲ್ಲ. ಅದ ನಮಗ ಉಸಿರ ಮತ್ತು ಆಸರ ಆಗೈತಿ. ಆದರೆ, ನಮ್ಮ ಕಡೆ ಸರ್ಕಾರ ಗಮನ ಕೊಟ್ಟು ಪೆನ್ಷನ್ ಶುರು ಮಾಡಿದರ ಬಹಳ ಉಪಕಾರ ಆಗ್ತೈತಿ.” ಬೆಳಗಾವಿ ಸರ್ದಾರ್ಸ್ ಮೈದಾನದಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ನಿಮಿತ್ತ ಆಯೋಜಿಸಿರುವ ಸರಸ್ ಮೇಳ, ಖಾದಿ ಉತ್ಸವ ಮತ್ತು ಮಾರಾಟ ಮೇಳದಲ್ಲಿ ಚರಕದಲ್ಲಿ ನೂಲುತ್ತಿದ್ದ …
Read More »ನವಲಗುಂದಕ್ಕೆ ನೂತನ ಹೈಟೆಕ್ ಬೈಪಾಸ್
ಧಾರವಾಡ : ರೈತ ಬಂಡಾಯದ ನಾಡು ನವಲಗುಂದ ಪಟ್ಟಣ ಸದಾ ಜನದಟ್ಟಣೆಯಿಂದ ಕೂಡಿರುತ್ತದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಮಾಡಬೇಕು ಎಂಬ ಕೂಗಿಗೆ ಕೊನೆಗೂ ಕಾಲ ಕೂಡಿ ಬಂದಿದೆ. ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಬರುವ ಪ್ರಮುಖ ಪ್ರದೇಶ ನವಲಗುಂದ. ಹೀಗಾಗಿ ಈ ಪಟ್ಟಣ ಬೆಳೆದರೂ ಇಲ್ಲಿರುವ ಹೆದ್ದಾರಿ ಪಟ್ಟಣದೊಳಗೆ ಹಾದು ಹೋಗುವಂತಿದೆ. ಹೀಗಾಗಿ, ನವಲಗುಂದ ಪಟ್ಟಣಕ್ಕೆ ಬೈಪಾಸ್ ಮಾಡಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ಅದು ಈಗ ಈಡೇರಲಿದೆ. ಧಾರವಾಡ …
Read More »ಗೋಕಾಕ ತಾಲೂಕಿನ ಅನಕ್ಷರಸ್ಥ ಮಹಿಳೆಯರ ಹೆಸರಿನ ಮೇಲೆ ಫೈನಾನ್ಸನವರು ಮೋಸ ಮಾಡಿದ್ದು, ಕಿರುಕುಳ ನೀಡುತ್ತಿದ್ದಾರೆ
ಗೋಕಾಕ ತಾಲೂಕಿನ ಅನಕ್ಷರಸ್ಥ ಮಹಿಳೆಯರ ಹೆಸರಿನ ಮೇಲೆ ಫೈನಾನ್ಸನವರು ಮೋಸ ಮಾಡಿದ್ದು, ಕಿರುಕುಳ ನೀಡುತ್ತಿದ್ದಾರೆ. ಇಂತಹ ಫೈನಾನ್ಸಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಇಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಇಂದು ಬೆಳಗಾವಿ ಜಿಲ್ಲಾದಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿದ ಗೋಕಾಕ ತಾಲೂಕಿನ ಅನಕ್ಷರಸ್ಥ ಮಹಿಳೆಯರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಕರ್ನಾಟಕ ರಾಜ್ಯ …
Read More »ಚಿಂಚಣಿ, ಶಿರಗಾಂವ, ಇಂಗಳಿ ಪಿಕೆಪಿಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ ಎಂಎಲ್ಸಿ ಪ್ರಕಾಶ ಹುಕ್ಕೇರಿಯವರಿಂದ ಸನ್ಮಾನ
ಚಿಂಚಣಿ, ಶಿರಗಾಂವ, ಇಂಗಳಿ ಪಿಕೆಪಿಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ ಎಂಎಲ್ಸಿ ಪ್ರಕಾಶ ಹುಕ್ಕೇರಿಯವರಿಂದ ಸನ್ಮಾನ ಚಿಕ್ಕೋಡಿ:ಚಿಕ್ಕೋಡಿ ತಾಲ್ಲೂಕಿನ ಇಂಗಳಿ, ಶಿರಗಾಂವ, ಚಿಂಚಣಿ ಗ್ರಾಮದ ವಿವಿದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನು ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ 2 ಪ್ರಕಾಶ ಹುಕ್ಕೇರಿ ಸತ್ಕರಿಸಿ ,ಅಭಿನಂದಿಸಿದರು. ಚಿಕ್ಕೋಡಿ-ತಾಲ್ಲೂಕಿನ ಚಿಂಚಣಿ, ಶಿರಗಾಂವ ಹಾಗೂ ಇಂಗಳಿ ಗ್ರಾಮದ ವಿವಿದೋದ್ದೇಶಗಳ ಪ್ರಾಥಮಿಕ …
Read More »ಧಾರವಾಡದಲ್ಲಿ ವ್ಯವಸ್ಥಿತವಾಗಿ ಅಯ್ಯಪ್ಪನ ಮೂರ್ತಿ ಪ್ರತಿಷ್ಠಾಪನೆ…. ಸ್ಥಳದಲ್ಲಿ ಜಮಾಯಿಸಿದ ಮಾಲಾಧಾರಿಗಳು, ತೆರವಿಗೆ ಬಂದು ಸ್ಥಳೀಯರ ವಿರೋದಕ್ಕೆ ಮರಳಿದ ಜೆಸಿಬಿ….
ನಿನ್ನೆ ಹೊಸ ವರ್ಷಾಚರಣೆ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಅದರೆ ಧಾರವಾಡದಲ್ಲಿ ಯುವ ಸಮುದಾಯ ಹೊಸ ವರ್ಷ ಸಂಭ್ರಮ ಮುಗಿಸಿ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಧಾರವಾಡದಲ್ಲಿ ವಿಚಿತ್ರ ಘಟನೆವೊಂದು ನಡೆದು ಹೋಗಿದೆ. ಅರೇ ಅದೇನಪ್ಪಾ ಘಟನೆ ಅಂತೀರಾ ಅದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.. ಹೀಗೆ ಖುಲ್ಲಾ ಜಾಗದಲ್ಲಿ ವಿರಾಜಮಾನರಾಗಿರುವ ಅಯ್ಯಪ್ಪನ ಮೂರ್ತಿ. ಅದರ ಎದುರುಗಡೆಯೇ ನಾಗರ ಮೂರ್ತಿ. ಎರಡೂ ಮೂರ್ತಿಗಳಿಗೆ ಪೂಜೆ ಪುನಸ್ಕಾರ. ಮತ್ತೊಂದೆಡೆ ಅಯ್ಯಪ್ಪ ಮಾಲಾಧಾರಿಗಳ ಸಮಾಗಮ. …
Read More »ರಾಜ್ಯದಲ್ಲಿನ ಅಘೋಷಿತ ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧ; ಸಿ.ಟಿ. ರವಿ ನಮ್ಮ ಹಿರಿಯರು ಇದಕ್ಕಿಂತ ಕಠಿಣ ಪರಿಸ್ಥಿತಿ ಎದುರಿಸಿದ್ದಾರೆ
ರಾಜ್ಯದಲ್ಲಿನ ಅಘೋಷಿತ ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧ; ಸಿ.ಟಿ. ರವಿ ನಮ್ಮ ಹಿರಿಯರು ಇದಕ್ಕಿಂತ ಕಠಿಣ ಪರಿಸ್ಥಿತಿ ಎದುರಿಸಿದ್ದಾರೆ ರಾಜ್ಯದಲ್ಲಿನ ಅಘೋಷಿತ ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧ ಜನರು ಮತ್ತು ಕಾರ್ಯಕರ್ತರು ನಮ್ಮ ಜೊತೆಗಿದ್ದಾರೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿಕೆ ನಡೆದ ದೌರ್ಜನ್ಯವನ್ನು ರಾಜ್ಯಪಾಲರಿಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ನಮ್ಮ ಹಿರಿಯರು ಇದಕ್ಕಿಂತ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಈಗೀರುವ ಅಘೋಷಿತ ತುರ್ತು ಪರಿಸ್ಥಿತಿಯನ್ನು ಕೂಡ ನಾವು ಎದುರಿಸುತ್ತೇವೆ ಎಂದು …
Read More »
Laxmi News 24×7