Breaking News

ರಾಜಕೀಯ

ಕೌಟುಂಬಿಕ ಕಲಹದಿಂದ ಬೇಸತ್ತು ಪತ್ನಿ ಮನೆ ಮುಂದೆ ಪತಿ ಆತ್ಮಹತ್ಯೆ

ಬೆಂಗಳೂರು: ಕೌಟುಂಬಿಕ ಕಲಹದಿಂದ ಬೇಸತ್ತು ಪತ್ನಿ ಮನೆ ಮುಂದೆ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಮಂಜುನಾಥ್​​ (39) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಎನ್​ಜಿಇಎಫ್​​ ಬಡಾವಣೆಯಲ್ಲಿ ವಾಸವಾಗಿದ್ದ ಪತ್ನಿ ನಯನರಾಜ್ ಮನೆ ಮುಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ. ಮೃತನ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತುಮಕೂರು ಮೂಲದ ಮಂಜುನಾಥ್ ಕ್ಯಾಬ್ …

Read More »

ಆಟೋ ಚಾಲಕರೊಬ್ಬರ ಮನೆಗೆ ಕಳ್ಳರು ಕನ್ನ ಹಾಕಿ, 5.60 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ನಡೆದಿದೆ.

ಗಂಗಾವತಿ (ಕೊಪ್ಪಳ): ಆಟೋ ಚಾಲಕರೊಬ್ಬರು ತನ್ನ ಮಗಳ ಮದುವೆಗೆಂದು ಕೂಡಿಟ್ಟಿದ್ದ ಚಿನ್ನಾಭರಣ ಮತ್ತು ನಗದು ಹಣವನ್ನು ಹಾಡಹಗಲೇ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಗಂಗಾವತಿ ತಾಲೂಕಿನ ವೆಂಕಟಗಿರಿ ಹೋಬಳಿಯ ಆರ್ಹಾಳ್ ಗ್ರಾಮದಲ್ಲಿ ನಡೆದಿದೆ. ಹಣ, ಚಿನ್ನಾಭರಣ ಕಳೆದುಕೊಂಡ ಕುಟುಂಬ ಗೋಳಾಡುತ್ತಿದೆ. ಆಟೋ ಚಾಲಕ ವೃತ್ತಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ವಿರೇಶ ಅಡಿವೆಪ್ಪ ಪಟ್ಟಣಶೆಟ್ಟಿ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ವಿರೇಶ ಅವರ ಮನೆಯಲ್ಲಿದ್ದ ಹತ್ತುವರೆ ತೊಲೆ ಚಿನ್ನಾಭರಣ ಮತ್ತು …

Read More »

ಮೈಕ್ರೋ ಫೈನಾನ್ಸ್​​​ ಕಿರುಕುಳಕ್ಕೆ ಮಾಂಗಲ್ಯವನ್ನೇ ಸಿಎಂಗೆ ಪೋಸ್ಟ್ ಮಾಡುತ್ತಿರುವ ಮಹಿಳೆಯರು

ಹಾವೇರಿ/ಬೆಂಗಳೂರು: ರಾಜ್ಯದ ವಿವಿಧೆಡೆ ಮೈಕ್ರೋ ಫೈನಾನ್ಸ್​ಗಳ ಸಾಲ ವಸೂಲಾತಿ ಕಾಟಕ್ಕೆ ಜನರು ಬೇಸತ್ತಿದ್ದು, ಕೆಲವು ಕಡೆ ಗ್ರಾಮವನ್ನೇ ತೊರೆದು ಬೇರೆಡೆ ದುಡಿಯಲು ಹೋಗಿದ್ದಾರೆ. ರಾಣೆಬೆನ್ನೂರಿನ ಮಹಿಳೆಯರು ಮೈಕ್ರೋ ಫೈನಾನ್ಸ್​​​ ವಿರುದ್ಧ ವಿಭಿನ್ನ ರೀತಿಯ ಅಭಿಯಾನಕ್ಕೆ ಮುಂದಾಗಿದ್ದಾರೆ.  ಮೈಕ್ರೋ ಫೈನಾನ್ಸ್​​ನಿಂದ ತಮ್ಮ ಮಾಂಗಲ್ಯಕ್ಕೆ ಕುತ್ತು ಬಂದಿದ್ದು, ಮಾಂಗಲ್ಯ ಸರವನ್ನು ಉಳಿಸಿ ಎಂದು ಮಹಿಳೆಯರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಹಾವೇರಿ ಪ್ರಧಾನ ಅಂಚೆ ಕಚೇರಿಗೆ ಆಗಮಿಸಿದ ನೂರಾರು ಮಹಿಳೆಯರು, ಅಂಚೆ ಮೂಲಕ ಮಾಂಗಲ್ಯ ಮತ್ತು ಪತ್ರವನ್ನು …

Read More »

ವಾಲ್ಮೀಕಿ ನಿಗಮದ ಹಗರಣ: ತನಿಖಾ ವರದಿ ಸಲ್ಲಿಸುವಂತೆ ಸಿಬಿಐಗೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಸಂಪೂರ್ಣ ಸ್ಥಿತಿಗತಿ ವರದಿ ಸಲ್ಲಿಸಿದಲ್ಲಿ ಎಲ್ಲ ಅಂಶಗಳು ಬೆಳಕಿಗೆ ಬರಲಿವೆ ಎಂದು ಮೌಖಿಕವಾಗಿ ತಿಳಿಸಿರುವ ಹೈಕೋರ್ಟ್​ ನ್ಯಾಯಪೀಠ, ಮುಂದಿನ ವಿಚಾರಣೆ ವೇಳೆ ತನಿಖಾ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ಕೆಎಂವಿಎಸ್ಟಿಡಿಸಿಎಲ್ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕೆಲವು ಅಧಿಕಾರಿಗಳ ವಿರುದ್ಧ ಕೇಂದ್ರೀಯ ತನಿಖಾ ದಳವು (ಸಿಬಿಐ) ದಾಖಲಿಸಿರುವ ಎಫ್‌ಐಆರ್ …

Read More »

ಅಣ್ಣಮ್ಮ ದೇವಿ ಕೂರಿಸುವ ವಿಚಾರದಲ್ಲಿ ಸ್ಥಳೀಯರು, ಬಿಗ್‌ಬಾಸ್ -11ರ ಸ್ಪರ್ಧಿ- ಜಗದೀಶ್ ನಡುವೆ ಗಲಾಟೆ ; ದೂರು – ಪ್ರತಿದೂರು ದಾಖಲು

ಬೆಂಗಳೂರು : ಅಣ್ಣಮ್ಮ ದೇವಿ ಕೂರಿಸುವ ವಿಚಾರದಲ್ಲಿ ಸ್ಥಳೀಯರು ಹಾಗೂ ಬಿಗ್‌ಬಾಸ್ -11ರ ಸ್ಪರ್ಧಿ ಹಾಗೂ ವಕೀಲ ಜಗದೀಶ್ ನಡುವೆ ಗಲಾಟೆಯಾಗಿದ್ದು, ಈ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ದೂರು – ಪ್ರತಿದೂರು ದಾಖಲಾಗಿದೆ. ಕೊಡಿಗೇಹಳ್ಳಿಯ ವಿರೂಪಾಕ್ಷನಗರದಲ್ಲಿ ಲಾಯರ್ ಜಗದೀಶ್‌ಗೆ ಸೇರಿರುವ ಕಾಂಪ್ಲೆೆಕ್ಸ್ ಇದ್ದು, ಅದೇ ರಸ್ತೆಯಲ್ಲಿ ಸ್ಥಳೀಯರು ಅಣ್ಣಮ್ಮ ದೇವಿ ಕೂರಿಸಲು ಪೆಂಡಾಲ್ ಹಾಕಿದ್ದಾರೆ. ಅದಕ್ಕೆ ಆಕ್ಷೇಪಿಸಿದ ಜಗದೀಶ್, ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗುತ್ತದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. …

Read More »

ತುಂಗಭದ್ರಾ ನೀರು ಹಸಿರು ಬಣ್ಣಕ್ಕೆ ತಿರುಗಿದ್ಯಾಕೆ?

ಗದಗ, : ಆರು ಜಿಲ್ಲೆಯ ಜೀವನದಿ ತುಂಗಭದ್ರಾ (Tungabhadra) ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಆದರೆ ನದಿಯ ಬಣ್ಣ ಮೂರು ಜಿಲ್ಲೆಯ ಜನರನ್ನು ಕಂಗಾಲಾಗಿಸಿದೆ. ಈ ವಿಷಯ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ನದಿ ಹಸಿರು ಬಣ್ಣಕ್ಕೆ ತಿರುಗಲು ವಿಜಯನಗರ ಶುಗರ್ ಫ್ಯಾಕ್ಟರಿಯೇ ಕಾರಣವೆಂಬ ಬಲವಾದ ಅನುಮಾನ ಕಾಡಿದೆ. ಹೀಗಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಖಾರ್ಕಾನೆಗೆ ನೋಟಿಸ್ ಕೊಟ್ಟಿದೆ. ಹೀಗಾಗಿ ಕದ್ದುಮುಚ್ಚಿ ತ್ಯಾಜ್ಯ ಬೇಕಾಬಿಟ್ಟಿ ಹರಿಬಿಟ್ಟ ಕಾರ್ಖಾನೆ ಆಡಳಿತ ಮಂಡಳಿಗೆ ಢವಢವ ಶುರುವಾಗಿದೆ. …

Read More »

ರಾಯಚೂರು: ಬಸ್ ಹಾಗೂ ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ; ಕೂಲಿ ಕಾರ್ಮಿಕ ಮಹಿಳೆ ಸಾವು, 18 ಮಂದಿಗೆ ಗಾಯ

ರಾಯಚೂರು: ಸಾರಿಗೆ ಬಸ್ ಹಾಗೂ ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಕೂಲಿ ಕಾರ್ಮಿಕ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು 18 ಕೂಲಿಕಾರ್ಮಿಕರು ಗಾಯಗೊಂಡಿರುವ ಘಟನೆ ರಾಯಚೂರಿನ ಮುದಗಲ್ ಪಟ್ಟಣದಲ್ಲಿರುವ ಸಮೀಪದಲ್ಲಿ ಇಂದು ಜರುಗಿದೆ. ನಸುಕಿನ ಜಾವ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಬಳಿ ಬನ್ನಿಗೋಳದ ಗ್ರಾಮದ ಹೊರವಲಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಟ್ರ್ಯಾಕ್ಟರ್​​ನಲ್ಲಿದ್ದ ಶ್ರೀದೇವಿ (19) ಮೃತ ಮಹಿಳೆಯೆಂದು ಗುರುತಿಸಲಾಗಿದೆ. ಇತ್ತೀಚಿಗಷ್ಟೇ ಶ್ರೀದೇವಿ ಅವರ ಮದುವೆ ಆಗಿತ್ತು ಎಂದು ತಿಳಿದುಬಂದಿದೆ. …

Read More »

ನಾವು ಸಾಯುವ ಮುನ್ನ ಮನೆಯಿಲ್ಲದ್ದಿದರೂ ಸರಿ ಜೋಪಡಿಯನ್ನಾದ್ರೂ ನಿರ್ಮಿಸಿ ಕೊಡಿ…

ನಾವು ಸಾಯುವ ಮುನ್ನ ಮನೆಯಿಲ್ಲದ್ದಿದರೂ ಸರಿ ಜೋಪಡಿಯನ್ನಾದ್ರೂ ನಿರ್ಮಿಸಿ ಕೊಡಿ… 12 ವರ್ಷದಿಂದ ಪಿಎಂ ಆವಾಸ್ ಯೋಜನೆಗೆ 1 ಲಕ್ಷ ಹಣ ತುಂಬಿ ಕಾಯುತ್ತಿರುವ ಜನರಿಂದ ಆಕ್ರೋಶ …ಮಹಾನಗರ ಪಾಲಿಕೆಗೆ ಮನವಿ ನಾವು ಸಾಯುವ ಮುನ್ನ ಮನೆಯಿಲ್ಲದ್ದಿದರೂ ಸರಿ ಜೋಪಡಿಯನ್ನಾದ್ರೂ ನಿರ್ಮಿಸಿ… 12 ವರ್ಷದಿಂದ ಪಿಎಂ ಆವಾಸ್ ಯೋಜನೆಗಾಗಿ ಕಾಯುತ್ತಿರುವ ಜನ 1 ಲಕ್ಷ ಹಣ ತುಂಬಿದರೂ ಸಿಗದ ಸ್ಪಂದನೆ ಮಹಾನಗರ ಪಾಲಿಕೆಯ ವಿರುದ್ಧ ಅಸಮಾಧಾನ ವ್ಯಕ್ತ ಪ್ರಧಾನಮಂತ್ರಿ ಆವಾಸ …

Read More »

ಬಸವೇಶ್ವರ ಏತ ನೀರಾವರಿ ಶೀಘ್ರ ಪೂರ್ಣ,ಅಥಣಿ ಗಣಿಗಾರಿಕೆ ವಿರುದ್ಧ ಕ್ರಮಕ್ಕೆ ಸೂಚನೆ :ಸಚಿವ ಸತೀಶ್ ಜಾರಕಿಹೊಳಿ

ಬಸವೇಶ್ವರ ಏತ ನೀರಾವರಿ ಶೀಘ್ರ ಪೂರ್ಣ: “ಅನೇಕ ವರ್ಷಗಳಿಂದ ಆಮೆ ಗತಿಯಲ್ಲಿ ಸಾಗುತ್ತಿರುವ ಬಹು ನಿರೀಕ್ಷಿತ ಬಸವೇಶ್ವರ ಏತ ನೀರಾವರಿ ಯೋಜನೆಯು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು. ಈಗಾಗಲೇ ಶೇ 80ರಷ್ಟು ಅನುದಾನ ನೀಡಲಾಗಿದೆ. ಕೇವಲ ಶೇ 20 ರಷ್ಟು ಬಾಕಿಯಿದೆ. ಬೋರ್ಡ್ ಮೀಟಿಂಗ್ ನಡೆದ ಬಳಿಕ ಇನ್ನುಳಿದ ಅನುದಾನ ಒದಗಿಸಿ ತ್ವರಿತವಾಗಿ ಆ ಯೋಜನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದರು. “ಇದೇ ವಿಚಾರಕ್ಕೆ ಶಾಸಕ ರಾಜು ಕಾಗೆ ಕೂಡ …

Read More »

ಸಿಎಂ ಹುದ್ದೆಗಾಗಿ ಅಭಿಮಾನಿಗಳ ಪೂಜೆ ಹಳೆಯದಲ್ಲ‌ :ಸತೀಶ್ ಜಾರಕಿಹೊಳಿ

ಚಿಕ್ಕೋಡಿ(ಬೆಳಗಾವಿ): “ವರಿಷ್ಠರ ತೀರ್ಮಾನದ ಹಿನ್ನೆಲೆ ಪಕ್ಷದಲ್ಲಿ ಎಲ್ಲವೂ ಶಾಂತವಾಗಿದೆ, ಹೈಕಮಾಂಡ್​ ಆದೇಶದ ಮುಂದೆ ನಾನು ಕುಣಿದಾಡಲು ಸಾಧ್ಯವಿಲ್ಲ ಈಗ ಪಕ್ಷ ಸಂಘಟನೆಯಷ್ಟೇ ನನ್ನ ಗುರಿ” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಬುಧವಾರ ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, “ಈಗ ನಮ್ಮ ಎದುರು ಯಾವುದೇ ಹುದ್ದೆಯ ಬದಲಾವಣೆ ಪ್ರಸ್ತಾಪ ಇಲ್ಲ. ನಾನು ವರಿಷ್ಠರ ನಿರ್ಧಾರಕ್ಕೆ ಬದ್ಧನಾಗಿ ಕೆಲಸ ಮಾಡುತ್ತೇನೆ ಎಂದರು. 2028 ರಲ್ಲಿ ಕಾಂಗ್ರೆಸ್​ ಸರ್ಕಾರ ಮತ್ತೊಮ್ಮೆ …

Read More »