ಹಾವೇರಿ: ಜಿಲ್ಲೆಯಲ್ಲಿ ಅತಿವೃಷ್ಟಿಯ ಪರಿಣಾಮ ಜನಸಾಮಾನ್ಯರ ಮೇಲೆ ಮಾತ್ರವಲ್ಲದೇ ಪ್ರಾಣಿಗಳ ಮೇಲೂ ಬೀರಿದೆ. ಪ್ರವಾಹದಲ್ಲಿ ಸಿಲುಕಿದ ವಾನರ ಸೈನ್ಯ ಆಹಾರಕ್ಕಾಗಿ ಮೊರೆಯಿಡುತ್ತಾ ಮರದಲ್ಲೇ ಕೂತು ಚೀರಾಡುತ್ತಿರುವ ಘಟನೆ ತಾಲೂಕಿನ ಹಂದಿಗನೂರು ಗ್ರಾಮದಲ್ಲಿ ನಡೆದಿದೆ. ಸುಮಾರು 20 ಕ್ಕೂ ಹೆಚ್ಚು ಮಂಗಗಳು ಪ್ರವಾಹದಲ್ಲಿ ಸಿಲುಕಿದ್ದು ಮಾವಿನ ಮರದಲ್ಲಿ ಕುಳಿತು ಆಹಾರವಿಲ್ಲದೇ ಪರದಾಡುತ್ತಿವೆ. ಕಳೆದ ನಾಲ್ಕೈದು ದಿನಗಳಿಂದ ಮರದಲ್ಲೇ ಕೂತು ಆಹಾರಕ್ಕಾಗಿ ಪರದಾಡುತ್ತಿರುವ ವಾನರ ಸೇನೆಯ ರೋದನೆಯನ್ನ ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ …
Read More »ಮೆಟ್ರೋ ನಿಲ್ದಾಣದಿಂದ ಹಾರಿ ಆತ್ಮಹತ್ಯೆಗೆ ಯತ್ನ?
ನವದೆಹಲಿ: ಫರಿದಾಬಾದ್ ಮೆಟ್ರೋ ನಿಲ್ದಾಣದಿಂದ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದ ಯುವತಿಯೋರ್ವಳನ್ನು ಪೊಲೀಸ್ ಸಿಬ್ಬಂದಿ ರಕ್ಷಿಸಿದ್ದಾರೆ. ಕೆಲಸದ ಒತ್ತಡದಿಂದ ತೀವ್ರ ಕೋಪಗೊಂಡ ಯುವತಿ ಸೆಕ್ಟರ್ 28ರ ಮೆಟ್ರೋ ನಿಲ್ದಾಣದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ವೇಳೆ ಕೂಡಲೇ ಎಚ್ಚೆತ್ತ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯುವತಿ ಜೀವ ಉಳಿಸಿದ್ದಾರೆ. ಇನ್ನು, ಪೊಲೀಸರು ಯುವತಿ ಜೀವವನ್ನು ಉಳಿಸುತ್ತಿರುವ ವಿಡಿಯೋ ಮೊಬೈಲಿನಲ್ಲಿ ಸೆರೆಯಾಗಿದೆ. ಯುವತಿ ರಕ್ಷಣೆ ವೇಳೆ ಮೆಟ್ರೋ ನಿಲ್ದಾಣದ ಬಳಿ ಅಪಾರ ಪ್ರಮಾಣದಲ್ಲಿ …
Read More »ಪಿ.ವಿ. ಸಿಂಧು ಟೋಕಿಯೊದಲ್ಲಿ ಶುಭಾರಂಭ
ಟೋಕಿಯೊ: ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಟೋಕಿಯೊದಲ್ಲಿ ಶುಭಾರಂಭ ಮಾಡಿದ್ದಾರೆ. ರವಿವಾರ ನಡೆದ “ಜೆ’ ಗ್ರೂಪ್ ಪಂದ್ಯದಲ್ಲಿ ಇಸ್ರೇಲ್‌ನ ಕ್ಸೆನಿಯಾ ಪೊಲಿಕಾರ್ಪೋವಾ ಅವರನ್ನು 21-7, 21-10 ನೇರ ಗೇಮ್‌ಗಳಿಂದ ಸುಲಭದಲ್ಲಿ ಮಣಿಸಿದರು. ವಿಶ್ವದ 7ನೇ ರ್‍ಯಾಂಕಿಂಗ್ ಆಟಗಾರ್ತಿಯಾಗಿರುವ ಸಿಂಧು ಮುಂದಿನ ಸುತ್ತಿನಲ್ಲಿ ಹಾಂಕಾಂಗ್‌ನ ಚೆಯುಂಗ್ ಎನ್‌ಗಾಯ್ ಯೀ ಅವರನ್ನು ಎದುರಿಸಲಿದ್ದಾರೆ. ಯೀ ವಿಶ್ವ ರ್‍ಯಾಂಕಿಂಗ್‌ನಲ್ಲಿ ಸಿಂಧುಗಿಂತ ಬಹಳ ಕೆಳ ರ್‍ಯಾಂಕಿಂಗ್‌ನಲ್ಲಿರುವುದರಿಂದ (34) …
Read More »ಬೆಳ್ಳಿ ಗೆದ್ದ ಮಿರಾಗೆ ಡೊಮಿನೋಸ್ ನಿಂದ ಜೀವಮಾನದುದ್ದಕ್ಕೂ ಉಚಿತ ಪಿಜಾ ಆಫರ್
ಟೋಕಿಯೊ: “ನನಗೆ ಪಿಜಾ, ಐಸ್‌ಕ್ರೀಮ್ ತಿನ್ನಬೇಕೆಂದು ಬಹಳ ಆಸೆಯಾಗುತ್ತಿದೆ. ಕಳೆದೊಂದು ತಿಂಗಳಿಂದ ನಾನಿದನ್ನು ತಿಂದಿಲ್ಲ…’ ಹೀಗೆಂದು ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಬಳಿಕ ಮೀರಾಬಾಯಿ ಚಾನು ತಮ್ಮ ಅಭಿಲಾಷೆಯನ್ನು ತೋಡಿಕೊಂಡಿದ್ದರು. ಅವರ ಈ ಮಾತನ್ನು ಆಲಿಸಿದ “ಡೊಮಿನೋಸ್ ಇಂಡಿಯಾ’ ದೊಡ್ಡದೊಂದು ಆಫರ್ ನೀಡಿದೆ. ಚಾನು ಅವರಿಗೆ ಜೀವಮಾನದುದ್ದಕ್ಕೂ ಉಚಿತವಾಗಿ ಪಿಜಾ ನೀಡುವುದಾಗಿ ಘೋಷಿಸಿದೆ. “ದೇಶಕ್ಕಾಗಿ ಪದಕ ಗೆದ್ದ ನಿಮಗೆ ಅಭಿನಂದನೆಗಳು. ಭಾರತದ ಕೋಟ್ಯಂತರ ಮಂದಿಯ ಕನಸನ್ನು ನೀವು ನನಸು ಮಾಡಿದ್ದೀರಿ. ನಿಮಗೆ …
Read More »ಬೆಳಗಾವಿ: ಪ್ರವಾಹ ಸಂತ್ರಸ್ತರಿಗೆ ಸೂಕ್ತ ಪರಿಹಾರ ವ್ಯವಸ್ಥೆ ಕಲ್ಪಿಸಲಾಗುವುದು : ಸಿಎಂ ಬಿಎಸ್‌ವೈ
ಬೆಳಗಾವಿ: ಮಳೆಯ ಪರಿಣಾಮ ಪ್ರವಾಹದಿಂದ ಭಾಧಿತಗೊಂಡಿರುವ ಹಿರಣ್ಯಕೇಶಿ ನದಿಪಾತ್ರದ ವಿವಿಧ ಸ್ಥಳಗಳಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಕಳೆದ ಒಂದು ವಾರದಿಂದ ಮಹಾರಾಷ್ಟ್ರ ರಾಜ್ಯ ಹಾಗೂ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು. ಜಿಲ್ಲೆಯ ಸಪ್ತ ನದಿಗಳಲ್ಲಿ ಹಾಗೂ ಬೆಳಗಾವಿ ಸಮೀಪದ ಬಳ್ಳಾರಿ ನಾಲಾಗಳಲ್ಲಿ ನೀರಿನ ಹರಿವು ಹೆಚ್ಚಾಗಿ ಅಕ್ಕಪಕ್ಕದ ಕೆಲವು ಗ್ರಾಮಗಳು ಜಲಾವೃತಗೊಂಡಿವೆ. ಈ ವೇಳೆ ಸಂತ್ರಸ್ತರ ಜೊತೆ ಮಾತನಾಡಿದ ಸಿಎಂ, “ಪ್ರತಿವರ್ಷ ಪ್ರವಾಹದಿಂದ ಸಂಕೇಶ್ವರ ಪಟ್ಟಣದಲ್ಲಿ …
Read More »ಸವಾಲಿನ ಮಧ್ಯೆಯೂ ಮುಗಿದ ಯಶಸ್ವಿ 2ನೇ ವರ್ಷ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರೈಸಿದ್ದಾರೆ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಪ್ರವಾಹ ಅದರ ಬೆನ್ನಲ್ಲೇ ಕೊರೊನಾ ಎದುರಾಗಿ ಸವಾಲು ತಂದೊಡ್ಡಿತಾದರೂ ಪರಿಸ್ಥಿತಿ ನಿಭಾಯಿಸುವಲ್ಲಿ ಯಶಸ್ವಿಯಾದರು. ಎರಡನೇ ವರ್ಷದಲ್ಲೂ ಕೊರೊನಾ ಹಾಗೂ ಪ್ರವಾಹ ಬೆನ್ನು ಬಿಡಲಿಲ್ಲ. ಸತತ ಎರಡನೇ ವರ್ಷದ ಸವಾಲು ಸಾಕಷ್ಟು ಸಮಸ್ಯೆಗಳನ್ನೂ ತಂದೊಡ್ಡಿತು. ಇದರ ನಡುವೆಯೂ ಕೃಷಿ, ಕೈಗಾರಿಕೆ, ನೀರಾವರಿ, ಶಿಕ್ಷಣ, ಆರೋಗ್ಯ ನಮ್ಮ ಸರಕಾರದ ಆದ್ಯತೆ ಎಂದು ಘೋಷಿಸಿದ್ದ ಅವರು …
Read More »ಸಂಸತ್ ಅಧಿವೇಶನ ಮುಗಿಯುವವರೆಗೆ ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿ ನೇಮಕ ಇಲ್ಲ?
ಬೆಂಗಳೂರು, ಜು. 25: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ನಾಳೆ ಜುಲೈ 26ಕ್ಕೆ ಎರಡು ವರ್ಷ ತುಂಬುತ್ತಿದೆ. ಆದರೆ ರಾಜ್ಯ ಬಿಜೆಪಿ ಸರ್ಕಾರದ ಸಿಎಂ, ಸಚಿವರು ಅಥವಾ ಬಿಜೆಪಿ ಶಾಸಕರಲ್ಲಿ ಆ ಸಂತೋಷ ಕಾಣುತ್ತಿಲ್ಲ. ಜೊತೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಂದು ನಿರ್ಣಾಯಕ ದಿನ. ನಾಯಕತ್ವ ಬದಲಾವಣೆ ಕುರಿತು ಇಂದು ಬಿಜೆಪಿ ಹೈಕಮಾಂಡ್‌ನಿಂದ ಸೂಚನೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ವಲಯವಿದೆ. ಹೀಗಾಗಿ ನಾಳೆಯ ಎರಡು ವರ್ಷಗಳ …
Read More »ಬದಲಾವಣೆ ಡ್ರಾಮಾಗೆ ಟ್ವಿಸ್ಟ್: ಯಡಿಯೂರಪ್ಪ ಬೆಂಬಲಕ್ಕೆ ನಿಂತ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ
ಪಣಜಿ: ಕರ್ನಾಟಕ ಬಿಜೆಪಿಯ ನಾಯಕತ್ವ ಬದಲಾವಣೆ ಚರ್ಚೆಗೆ ದೊಡ್ಡ ತಿರುವು ದೊರೆತಿದೆ. ಗೋವಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಯಡಿಯೂರಪ್ಪರನ್ನು ಹಾಡಿಹೊಗಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜಕೀಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನಡ್ಡಾ, “ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಉತ್ತಮವಾಗಿ ನಡೆಯುತ್ತಿದೆ. ಉಳಿದಂತೆ, ಯಡಿಯೂರಪ್ಪನವರು ಕೂಡ ಎಲ್ಲ ವಿಷಯಗಳನ್ನೂ ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ” ಎಂದರು. ರಾಜಕೀಯ ಅಸ್ಥಿರತೆಯ ಬಗ್ಗೆ ಕೇಳಲಾದ ಪ್ರಶ್ನೆಗೆ, …
Read More »ಕೊಟ್ಟ ಕುದುರೆ ಏರಲಾಗದೆ ಬಿಜೆಪಿ ಮುಗ್ಗರಿಸಿದೆ: ಕಾಂಗ್ರೆಸ್ ಟೀಕೆ
ಬೆಂಗಳೂರು,ಜು.25: ಆಪರೇಷನ್ ಕಮಲದ ಅನೈತಿಕ ಕೂಸಾಗಿ ಹುಟ್ಟಿದ ಈ ಸರ್ಕಾರ ಎರಡು ವರ್ಷದಲ್ಲಿ ಒಂದೇ ಒಂದು ಜನಪರ ಯೋಜನೆ ಘೋಷಿಸಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಕುರತು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಡವರಿಗೆ ಆಸರೆಯಾಗಿದ್ದ ಇಂದಿರಾ ಕ್ಯಾಂಟೀನ್, ಅನ್ನಭಾಗ್ಯ ಯೋಜನೆಗಳಿಗೆ ಅನುದಾನ ಕಡಿತ ಮಾಡಿದ್ದೇ ರಾಜ್ಯ ಬಿಜೆಪಿಯ ಸಾಧನೆ. 2 ವರ್ಷಗಳ ಆಡಳಿತವನ್ನು ಲೂಟಿ, ಕಿತ್ತಾಟಲ್ಲಿಯೇ ಕಳೆದರು. ಈ ಸುಧೀರ್ಘಅವಧಿಯಲ್ಲಿ ಬಿಜೆಪಿ ಜನತೆಗೆ ನರಕದ ಹಾದಿ ತೋರಿಸಿದೆ, ಕೊಟ್ಟ ಕುದುರೆ …
Read More »ನಿಖಿಲ್ ಕುಮಾರಸ್ವಾಮಿ ನಟನೆಯ ‘ರೈಡರ್’ ಚಿತ್ರದ ಕೊನೆಯ ಹಂತದ ಶೂಟಿಂಗ್ ಫ್ರಾರಂಭ
ನಿಖಿಲ್ ಕುಮಾರಸ್ವಾಮಿ ಅಭಿನಯದ ಬಹುನಿರೀಕ್ಷೆಯ ‘ರೈಡರ್’ ಚಿತ್ರದ ಕೊನೆಯ ಹಂತದ ಚಿತ್ರೀಕರಣವನ್ನು ಇಂದಿನಿಂದ ಪ್ರಾರಂಭ ಮಾಡಲಾಗಿದೆ ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ ನಿರ್ದೇಶಿಸುತ್ತಿರುವ ಈ ಸಿನಿಮಾ ಈಗಾಗಲೇ ಟೀಸರ್ ಮೂಲಕ ಸಾಕಷ್ಟು ಸದ್ದು ಮಾಡಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಕಶ್ಮೀರಾ ಪರದೇಶಿ ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರೊಮ್ಯಾಂಟಿಕ್ ಆಕ್ಷನ್ ಎಂಟರ್ ಟೇನರ್ …
Read More »
Laxmi News 24×7