Breaking News

ರಾಜಕೀಯ

ಬಿಜೆಪಿ ಸರ್ಕಾರದಲ್ಲಿ ವಿಧಾನಸೌಧದ ನೌಕರರಿಂದಲೂ ಡೀಲ್ : ಕಾಂಗ್ರೆಸ್

ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಎಷ್ಟಿದೆ ಎಂದರೆ ವಿಧಾನಸೌಧದ ನೌಕರರು ಕೆಲಸ ಕೊಡಿಸುವ ಡೀಲಿಗಿಳಿಯುತ್ತಾರೆ ಎಂದು ಕಾಂಗ್ರೆಸ್ ಆರೋಪಿಸಿದೆ, ಭ್ರಷ್ಟಜನತಾಪಾರ್ಟಿ ಎಂಬ ಹ್ಯಾಷ್ ಟ್ಯಾಗ್ ನಡಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬಿ ಎಸ್ ಯಡಿಯೂರಪ್ಪ ಅವರ ಆಪ್ತ ಸಹಾಯಕನ ಮೇಲಾದ ಐಟಿ ದಾಳಿಯೇ ಎಲ್ಲವನ್ನೂ ಹೇಳುತ್ತಿದೆ. ಸಾರಿಗೆ ನೌಕರನಾಗಿದ್ದವನು ಯಡಿಯೂರಪ್ಪ ಸಹಾಯಕನಾದ ಮಾತ್ರಕ್ಕೆ 2000 ಕೋಟಿ ಆಸ್ತಿಯ ಒಡೆಯ ಎಂದಾದರೆ, ರೈಸ್ ಮಿಲ್‌ನಲ್ಲಿ ಲೆಕ್ಕ ಬರೆಯುತ್ತಿದ್ದವರು ಇನ್ನೆಷ್ಟು ಕೋಟಿ …

Read More »

ಹಾನಗಲ್ ಉಪಚುನಾವಣೆ: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ

ಹಾವೇರಿ: ಜಿಲ್ಲೆಯ ಹಾನಗಲ್ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು. ಶಿವರಾಜ ಸಜ್ಜನರ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಹಾನಗಲ್ ಪಟ್ಟಣದ ಕುಮಾರೇಶ್ವರ ಮಠದಿಂದ ಮೆರವಣಿಗೆ ಆರಂಭವಾಗಿತ್ತು. ಸಚಿವರಾದ ಮುರುಗೇಶ ನಿರಾಣಿ, ಶಿವರಾಮ ಹೆಬ್ಬಾರ, ಬಿ.ಸಿ.ಪಾಟೀಲ, ರಾಜುಗೌಡ, ಸಂಸದ ಶಿವಕುಮಾರ ಉದಾಸಿ ಸೇರಿದಂತೆ ಅನೇಕರು ಬಿಜೆಪಿ ಮುಖಂಡರು ಭಾಗಿಯಾಗಿದ್ದರು.

Read More »

ಮೋದಿ ರಾಜಕೀಯ ಸೇವೆಗೆ ಧನ್ಯವಾದ ಅರ್ಪಿಸಲು ಕಮಲ ಕಾರ್ಯಕರ್ತರಿಂದ ಪಂಜಿನ ಮೆರವಣಿಗೆ

ತುಮಕೂರು: ತುಮಕೂರು ಜಿಲ್ಲಾ ಬಿಜೆಪಿ ವತಿಯಿಂದ ಇಂದು ಪಂಜಿನ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಂಜಿನ ಮೆರವಣಿಗೆ ಮೂಲಕ ಪ್ರಧಾನಿ ಮೋದಿಯವರ ರಾಜಕೀಯ ಸೇವೆಗೆ ಬಿಜೆಪಿ ಕಾರ್ಯಕರ್ತರು ಧನ್ಯವಾದ ಅರ್ಪಿಸಿದ್ದಾರೆ.   ಸೇವಾ ಮತ್ತು ಸಮರ್ಪಣಾ ಅಭಿಯಾನ ಹೆಸರಿನಲ್ಲಿ ಪಂಜಿನ ಮೆರವಣಿಗೆ ನಡೆಯಿತು, ಹನುಮಂತಪುರದ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ಪಂಜು ಹಿಡಿದು ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ವೇಳೆ 20 ವರ್ಷ ಸಾರ್ಥಕ ರಾಜಕೀಯ ಸೇವೆ …

Read More »

ಐಟಿ ದಾಳಿ ಬೆನ್ನಲ್ಲೇ ಬಿಎಸ್​ವೈ ಆಪ್ತನಿಗೆ CM ಸಿಎಂ ಕಚೇರಿಯಿಂದ ಗೇಟ್​ಪಾಸ್..!

ಬೆಂಗಳೂರು: ಆದಾಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಬೆನ್ನಲ್ಲೇ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪರ ಆಪ್ತ ಉಮೇಶ್​ ಅವರಿಗೆ ಸಿಎಂ ಕಚೇರಿ ಡ್ಯೂಟಿಯಿಂದ ಗೇಟ್ ​ಪಾಸ್ ನೀಡಲಾಗಿದೆ. ಓಓಡಿ ಆದೇಶವನ್ನ ರಾಜ್ಯ ಸರ್ಕಾರ ರದ್ದುಗೊಳಿಸಿ, ಉಮೇಶ್​ ಅವರಿಗೆ ಶಾಕ್ ನೀಡಿದೆ. ಅದರಂತೆ ಉಮೇಶ್​ ಅವರ ಅನ್ಯ ಸೇವೆ ನಿಯೋಜನೆಯನ್ನು ಬಿಎಂಟಿಸಿ ವಾಪಸ್ ಪಡೆದಿದೆ. ಸರ್ಕಾರದ ಆದೇಶದಿಂದ ಇನ್ಮುಂದೆ ಉಮೇಶ್​ ಅವರು ಸಿಎಂ ಸಚಿವಾಲಯದಲ್ಲಿ ಅನ್ಯಸೇವೆ ಆಧಾರದ ಮೇಲೆ ಕರ್ತವ್ಯ …

Read More »

‘ಮಾತುಕೊಟ್ಟ ಬಿಎಸ್​​ವೈ ಮಾತಿಗೆ ತಪ್ಪಿ ಮನೆಯಲ್ಲಿ ಕುಳ್ತಿದ್ದಾರೆ’ -ಗುಡುಗಿದ ಪ್ರಸನ್ನಾನಂದಪುರಿ ಸ್ವಾಮೀಜಿ

ಬೆಳಗಾವಿ: ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಶೇಕಡಾ 7.5 ಮೀಸಲಾತಿಯನ್ನ ನೀಡಬೇಕು ಎಂಬ ಎಸ್​​ಟಿ ಸಮುದಾಯದ ಬಹುವರ್ಷಗಳ ಬೇಡಿಕೆ ಈಡೇರುಸುವಂತೆ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಈಗಾಗಲೇ ಅಕ್ಟೋಬರ್​ 20ಕ್ಕೆ ಗಡುವು ನೀಡಿದ್ದಾರೆ. ಈ ನಡುವೆ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು, ‘ಜನ ಜಾಗೃತಿಗಾಗಿ ಜನ ಸ್ಪಂದನ’ ಕಾರ್ಯಕ್ರಮ ನಡೆಸಿ ಸಮುದಾಯದ ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ಸ್ವಾಮೀಜಿ ಮಾಡುತ್ತಿದ್ದಾರೆ. ಇಂದು ಜಿಲ್ಲೆಯ ಸವದತ್ತಿ ತಾಲೂಕಿನ …

Read More »

ಶವ ಹುಡುಕಲು ಹೋದವರು ಶಾರ್ಟ್ ಸರ್ಕ್ಯೂಟ್‌ಗೆ ಬಲಿ : ಕೃಷ್ಣಾ ನದಿಯಲ್ಲಿ ನಾಲ್ವರ ದುರ್ಮರಣ

ಮುದ್ದೇಬಿಹಾಳ : ಜಿಲ್ಲೆಯ ಕೃಷ್ಣಾ ನದಿಯಲ್ಲಿ ಈಜಲು ಹೋಗಿ, ನೀರು ಪಾಲಾದ ವ್ಯಕ್ತಿಯ ಶವ ಹುಡುಕಲು ಹೋಗಿದ್ದ ಮೂವರು ವಿದ್ಯುತ್ ಶಾರ್ಟ್ ಸಕ್ಯೂರ್ಟ್‌ಗೆ ಬಲಿಯಾಗಿ, ಒಟ್ಟು ನಾಲ್ವರು ಮೃತಪಟ್ಟ ಧಾರುಣ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರ ಹತ್ತಿರದ ಕೃಷ್ಣಾ ನದಿಯಲ್ಲಿ ಗುರುವಾರ ಸಂಜೆ ಸಂಭವಿಸಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹರನಾಳದ ಶಿವಪ್ಪ ಸಿದ್ದಪ್ಪ ಅಬಳೂರ (78) ಎಂಬಾತ ಕೃಷ್ಣಾ ನದಿಯಲ್ಲಿ ಈಜಲು ಹೋದಾಗ ಮೃತಪಟ್ಟಿದ್ದರು. ಈ ವೃದ್ಧನ …

Read More »

ಊಟ ಮಾಡಿ ಕುಳಿತ್ತಿದ್ದ ಸಹೋದರರ ಮೇಲೆ ಏಕಾಏಕಿ ಬಿದ್ದ ಗೋಡೆ : ಓರ್ವ ಸಾವು, ಇನ್ನೋರ್ವನಿಗೆ ಗಾಯ

ದಾವಣಗೆರೆ: ಮನೆ ಗೋಡೆ ಕುಸಿದು ಬಿದ್ದ ಪರಿಣಾಮ ತೀವ್ರ ಗಾಯಗೊಂಡಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿ, ಇನ್ನೊಬ್ಬರು ಗಾಯಗೊಂಡಿರುವ ಘಟನೆ ಗುರುವಾರ ದಾವಣಗೆರೆ ತಾಲೂಕಿನ ನರಗನಹಳ್ಳಿಯಲ್ಲಿ ಸಂಭವಿಸಿದೆ. ನರಗನಹಳ್ಳಿ ಗ್ರಾಮದ ಮಂಜುನಾಥ್(48) ಮೃತಪಟ್ಟವರು. ಮೃತ ಮಂಜುನಾಥ್ ಸಹೋದರ ಪರಶುರಾಮ್ (42)ಎಂಬುವರು ಗಾಯಗೊಂಡಿದ್ದಾರೆ. ಮಧ್ಯಾಹ್ನ ಊಟ ಮಾಡಿದ ನಂತರ ಸಹೋದರರಿಬ್ಬರು ಮಾತನಾಡಿಕೊಂಡು ಕೂತಿದ್ದ ಸಂದರ್ಭದಲ್ಲಿ ಏಕಾಏಕಿ ಗೋಡೆ ಕುಸಿದು ಬಿದ್ದಿದೆ. ತೀವ್ರ ಗಾಯಗೊಂಡ ಮಂಜುನಾಥ್‌ನನ್ನು ಆಸ್ಪತ್ರೆಗೆ ಕರೆ ತರುವ ವೇಳೆ ದಾರಿ ಮಧ್ಯೆದಲ್ಲಿ ಮೃತಪಟ್ಟಿದ್ದಾರೆ. …

Read More »

ಮೈಸೂರು: ಮಾಜಿ ಶಾಸಕ ದಿ. ವೇದಾಂತ ಹೆಮ್ಮಿಗೆ ಮನೆ ಮುಂದೆ ಕಾರಿನ ಮೇಲೆ ಉರುಳಿ ಬಿದ್ದ ಮರ!

ಮೈಸೂರು: ಕುವೆಂಪುನಗರದ ವಿಜಯಾ ಬ್ಯಾಂಕ್‌ ವೃತ್ತ ಬಳಿಯ ಮಾಜಿ ಶಾಸಕ ದಿವಂಗತ ವೇದಾಂತ ಹೆಮ್ಮಿಗೆ ಅವರ ಮನೆ ಮುಂಭಾಗ ಮರವೊಂದು ಕಾರಿನ ಮೇಲೆ ಬಿದ್ದಿರುವ ಘಟನೆ ನಡೆದಿದೆ. ನಗರದಲ್ಲಿ ಸತತ ಎರಡು ದಿನಗಳಿಂದ ಸುರಿದ ಭಾರಿ ಮಳೆ ಸುರಿಯಿತು. ಪರಿಣಾಮವಾಗಿ ಮರ ಉರುಳಿಬಿದ್ದಿದೆ. ಮರ ಕಾರಿನ ಮೇಲೆ ಬಿದ್ದು, ಕಾರು ಜಖಂಗೊಂಡಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೈಸೂರು ಮಹಾನಗರ ಪಾಲಿಕೆಯ ಅಭಯ ತಂಡ ಮರ ತೆರವು ಕಾರ್ಯಾಚರಣೆ ನಡೆಸುತ್ತಿದೆ.

Read More »

ಚುನಾವಣಾ ಪ್ರಚಾರಕ್ಕೆ ನಿರ್ಬಂಧ

ಬೆಂಗಳೂರು: ರಾಜ್ಯದ ಸಿಂಧಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯ ಪ್ರಚಾರದ ಸಮಯವನ್ನು ಕೋವಿಡ್-19 ಕಾರಣದಿಂದ ಸಂಜೆ 7ರಿಂದ ಬೆಳಗ್ಗೆ 10:00 ಗಂಟೆಯವರೆಗೆ ನಿರ್ಬಂಧಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಉಪ ಚುನಾವಣೆ ಮತ ಎಣಿಕೆಯ ದಿನ ಮತ ಎಣಿಕೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಚುನಾವಣಾ ಅಧಿಕಾರಿ/ಸಿಬ್ಬಂಧಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕೊರೊನಾ ಲಸಿಕೆಯ ಎರಡು ಲಸಿಕೆಗಳನ್ನು ಕಡ್ಡಾಯವಾಗಿ ಪಡೆದಿರಬೇಕು ಅಥವಾ ಒಂದು ಲಸಿಕೆ‌ ಪಡೆದವರು ಮತ ಎಣಿಕೆ …

Read More »

ಕಂಬಾಳಪಲ್ಲಿಯಲ್ಲಿ ದಲಿತರನ್ನು ಸುಟ್ಟರಲ್ಲ ಅದಕ್ಕೇನು ಉತ್ತರ ಕೊಡ್ತಾರೆ?- ಸಿದ್ದುಗೆ ಕಾರಜೋಳ ತಿರುಗೇಟು

ಬೆಳಗಾವಿ: ಕಂಬಾಳಪಲ್ಲಿಯಲ್ಲಿ ದಲಿತರನ್ನು ಸುಟ್ಟರಲ್ಲ ಅದಕ್ಕೇನು ಉತ್ತರ ಕೊಡ್ತಾರೆ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯಗೆ ಜಲಸಂಪನ್ಮೂಲ ಸಚಿವ ಗೊವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಸಚಿವರ ಪುತ್ರ ಕಾರು ಹರಿಸಿದ ಪ್ರಕರಣ ಕುರಿತು ಸಿದ್ದರಾಮಯ್ಯ ಅವರು ಅಸತ್ಯ, ಹಿಂಸೆ ಮೇಲೆ ನಂಬಿಕೆ ಇಟ್ಟ ಬಿಜೆಪಿಗೆ ಅಧಿಕಾರ ಸಿಕ್ಕಿದ್ದು ದುರಾದೃಷ್ಟಕರ ಎಂದು ಪ್ರತಿಕ್ರಿಯಿಸಿದ್ದರು. ಈ ಹಿನ್ನೆಲೆ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷಕ್ಕೆ …

Read More »