ಸಿಂಧನೂರು: ‘ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ನಗರದಿಂದ ಎರಡು ಕಿ.ಮೀ ದೂರದಲ್ಲಿ ಇರುವುದರಿಂದ ಕಾಲೇಜಿಗೆ ಹೋಗಲು ಬಸ್ ಸೌಕರ್ಯ, ರಕ್ಷಣೆಯ ಹಿನ್ನೆಲೆಯಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಮತ್ತು ಸೆಕ್ಯೂರಿಟಿ ಗಾರ್ಡ್ ಸೌಕರ್ಯ ಕಲ್ಪಿಸಲಾಗುವುದು’ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದರು. ಇಲ್ಲಿನ ಹೊರವಲಯದ ಶಿವಜ್ಯೋತಿ ನಗರದಲ್ಲಿ ನಿರ್ಮಿಸಿರುವ ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ …
Read More »ಸಮುದಾಯ ಭವನಕ್ಕೆ ಸಿಂಹಪಾಲು: ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ
ಚನ್ನಮ್ಮನ ಕಿತ್ತೂರು: ಕಿತ್ತೂರು ಕ್ಷೇತ್ರದ ಬಿಜೆಪಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 2018ರಿಂದ ಇಲ್ಲಿಯವರೆಗೆ ಶೇ 70ರಷ್ಟು ಪಾಲನ್ನು ಸಮುದಾಯ ಭವನ ನಿರ್ಮಾಣಕ್ಕೆ ನೀಡಿದ್ದಾರೆ. 2018ರಲ್ಲಿ ವಿವಿಧ ಸಮಾಜದವರ ಅಥವಾ ದೇವಸ್ಥಾನಗಳ ಭವನಗಳ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 2019 ಮತ್ತು 2020ರಲ್ಲಿ ನೀಡಿದ ಹಣದಲ್ಲಿ ಭವನಗಳ ಕಾಮಗಾರಿ ಕೆಲವೆಡೆ ಮುಗಿದಿವೆ. ಕೆಲವೆಡೆ ಪ್ರಗತಿಯಲ್ಲಿದೆ. ಶಾಲೆಗಳ ಮೂಲ ಸೌಲಭ್ಯಗಳ ಕೊರತೆ ನೀಗಿಸಲು ಕೂಡ …
Read More »ಗ್ರಾಮಗಳ ಅಭ್ಯುದ್ಯಯಕ್ಕೆ ಶ್ರಮಿಸಿ: ಸಚಿವ ಕೆ.ಎಸ್.ಈಶ್ವರಪ್
ಗದಗ: ‘ಗ್ರಾಮ ಪಂಚಾಯ್ತಿಗಳ ಚುನಾಯಿತ ಜನಪ್ರತಿನಿಧಿಗಳು ಗ್ರಾಮಗಳ ಅಭ್ಯುದಯಕ್ಕೆ ಶ್ರಮಿಸಬೇಕು. ಈ ಮೂಲಕ ಮತದಾರರ ಋಣ ತೀರಿಸಬೇಕು’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದರು. ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಆಯ್ಕೆಯಾಗುವುದು ಅತ್ಯಂತ ಸವಾಲಿನ ಸಂಗತಿ. ಗ್ರಾಮಗಳ ಸಮಗ್ರ ಅಭಿವೃದ್ಧಿಯ ಗುರುತರ ಜವಾಬ್ದಾರಿ ಚುನಾಯಿತ …
Read More »40 ಕೆಜಿ ಇದ್ದ ಅಕ್ಕ 15 ಕೆಜಿಗೆ ಇಳಿದ್ರು, ಆಮೇಲೆ ತೀರೋದ್ರು; ಭಾವುಕರಾದ ಧರ್ಮಣ್ಣ
ಧರ್ಮಣ್ಣ ಅವರಿಗೆ ಅಕ್ಕ ಇದ್ದರು. ದೊಡ್ಡಪ್ಪನ ಮಗಳು. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಆದರೆ, ಅವರ ಅಕ್ಕ ಮೃತಪಟ್ಟಿದ್ದರು. ನಲವತ್ತರಿಂದ ಐವತ್ತು ಕೇಜಿ ಇದ್ದ ಅವರ ಅಕ್ಕ 15 ಕೆಜಿಗೆ ಇಳಿದು ಹೋಗಿದ್ದರು. ನಟ ಧರ್ಮಣ್ಣ ಸ್ಯಾಂಡಲ್ವುಡ್ನಲ್ಲಿ ಪೋಷಕ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಅವರು ಮಾಡುವ ಕಾಮಿಡಿ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಈಗ ಧರ್ಮಣ್ಣ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಅವರ ಕುಟುಂಬದ ವಿಚಾರ ಕೇಳಿ …
Read More »ಬಾಗಲಕೋಟೆ ದೋಣಿ ದುರಂತ; ಮೂವರ ಸಾವಿಗೆ ಹೊಣೆ ಯಾರು?
ಬಾಗಲಕೋಟೆ: ಓರ್ವ ವೃದ್ದನ ಸಾವು ಮೂವರ ಪ್ರಾಣ ಬಲಿ ಪಡೆದ ದುರ್ಘಟನೆ ಬಾಗಲಕೋಟೆ ಮತ್ತು ವಿಜಯನಗರ ಜಿಲ್ಲೆಗಳ ಜನರ ಮನಕಲುಕಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಧನ್ನೂರು ಗ್ರಾಮದ ಬಳಿ ನಾರಾಯಣಪುರ ಜಲಾಶಯ ಹಿನ್ನೀರಲ್ಲಿ ನಡೆದ ದುರಂತ ಎರಡು ಜಿಲ್ಲೆಗಳ ಜನರ ಮನಕಲುಕಿಸಿದೆ. ವಿಜಯಪುರ ಜಿಲ್ಲೆ ತಾಳಿಕೋಟಿ ತಾಲ್ಲೂಕಿನ ಹರನಾಳ ಗ್ರಾಮದ ಶಿವಪ್ಪ ಅಮಲೂರ ಅಕ್ಟೋಬರ್ 7 ರಂದು ಧನ್ನೂರ ಬಳಿ ನಾರಾಯಣಪುರ ಜಲಾಶಯದ ಹಿನ್ನೀರಲ್ಲಿ ಸಾವನ್ನಪ್ಪಿದ್ದ. ಆತನ ಶವ …
Read More »ಆಟವಾಡುತ್ತಾ ಕಾಲುವೆಗೆ ಬಿದ್ದ 4 ಮಕ್ಕಳು.. ಇಬ್ಬರು ಕಂದಮ್ಮಗಳ ದಾರುಣ ಸಾವು
ಚಿಕ್ಕೋಡಿ: ಆಟ ಆಡುತ್ತ ಹೋಗಿ ಕರಿಮಸೂತಿ ಏತ ನೀರಾವರಿಯ ಕಾಲುವೆಗೆ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ನಡೆದಿದೆ. ಆಟ ಆಡುತ್ತ ಸಂಜೆ ಕೆನಾಲ್ ಬಳಿ ಹೋಗಿದ್ದ ನಾಲ್ವರು ಮಕ್ಕಳ ಪೈಕಿ ಇಬ್ಬರು ಮಕ್ಕಳು ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಸಪ್ನಾ ವಿನಾಯಕ್ ಪುಂಡಿಪಲ್ಲೆ(11) ಮತ್ತು ಪ್ರಥಮ ವಿನಾಯಕ ಪುಂಡಿಪಲ್ಲೆ (7) ಮೃತ ಮಕ್ಕಳು. ಮಕ್ಕಳು ಕಾಲುವೆಗೆ ಬಿದ್ದ ತಕ್ಷಣ …
Read More »ಚಲಿಸುತ್ತಿದ್ದ ರೈಲಿನಲ್ಲಿ ಪತಿಯ ಎದುರೇ ಮಹಿಳೆಯ ಗ್ಯಾಂಗ್ ರೇಪ್
ಮುಂಬಯಿ : ಲಕ್ನೋ -ಮುಂಬೈ ಪುಷ್ಪಕ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪತಿಯ ಎದುರೇ 20 ವರ್ಷದ ಮಹಿಳೆಯೊಬ್ಬಳ ಮೇಲೆ ಶುಕ್ರವಾರ ತಡ ರಾತ್ರಿ ಡಕಾಯಿತರು ಗ್ಯಾಂಗ್ ರೇಪ್ ಎಸಗಿದ ಕಳವಳಕಾರಿ ಘಟನೆ ವರದಿಯಾಗಿದೆ. ಸುಮಾರು 8 ಮಂದಿ ಡಕಾಯಿತರ ತಂಡ ಪ್ರಯಾಣಿಕರಿಗೆ ಬೆದರಿಕೆ ಹಾಕಿ ಸುಲಿಗೆ ಮಾಡಿದೆ. ಬಳಿಕ ಮಹಿಳೆಯನ್ನು ಎಳೆದಾಡಿ ಗ್ಯಾಂಗ್ ರೇಪ್ ಎಸಗಿದೆ. ಸಹ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿರುವುದಾಗಿ ರೈಲ್ವೆ ಪೊಲೀಸರು ತಿಳಿಸಿದ್ದಾರೆ …
Read More »ಕನ್ನಡದ ಹಿರಿಯ ನಟ ಸತ್ಯಜಿತ್ ಇನ್ನಿಲ್ಲ!
ಬೆಂಗಳೂರು: ಹಲವು ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ಹಿರಿಯ ನಟ ಸತ್ಯಜಿತ್ ಅವರು ತಡರಾತ್ರಿ ಎರಡು ಗಂಟೆ ಸಮಯದಲ್ಲಿ ನಿಧನರಾಗಿದ್ದಾರೆ. ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸತ್ಯಜಿತ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದ ಸತ್ಯಜಿತ್ ಆ ಮೂಲಕ ಚಿತ್ರರಂಗದಲ್ಲಿ ಹೆಸರು ಮಾಡಿದ್ದರು. ಚಂದನವನದ ಹಲವಾರು ಸ್ಟಾರ್ ಕಲಾವಿದರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತ್ತು. ಸತ್ಯಜಿತ್ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿ ಕಳೆದ ಸೋಮವಾರ …
Read More »ದ್ಯುತ್ ಉತ್ಪಾದನೆ ಘಟಕಗಳಲ್ಲಿ ಕಲ್ಲಿದ್ದಲು ಕೊರತೆಗೆ ಕಾರಣ ತೆರೆದಿಟ್ಟ ವಿದ್ಯುತ್ ಸಚಿವಾಲಯ
ಭಾರತದ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ ಬಿಕ್ಕಟ್ಟು ಉದ್ಭವಿಸಲು ಕಾರಣಗಳೇನು ಎಂಬ ಬಗ್ಗೆ ವಿದ್ಯುತ್ ಸಚಿವಾಲಯದಿಂದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆ ಬಗ್ಗೆ ವಿವರಗಳು ಇಲ್ಲಿವೆ. ಆರ್ಥಿಕತೆಯ ಚೇತರಿಕೆಯಿಂದಾಗಿ ವಿಪರೀತ ಹೆಚ್ಚಾದ ವಿದ್ಯುತ್ ಬೇಡಿಕೆ, ಸೆಪ್ಟೆಂಬರ್ ತಿಂಗಳಿನಲ್ಲಿ ಕಲ್ಲಿದ್ದಲು ಗಣಿ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಕಲ್ಲಿದ್ದಲು ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಅಲ್ಲದೆ, ಆಮದು ಮಾಡಿಕೊಂಡ ಕಲ್ಲಿದ್ದಲು ಬೆಲೆಯಲ್ಲಿನ ಹೆಚ್ಚಳವು ಸಹ ದೇಶೀಯ ಕಲ್ಲಿದ್ದಲಿನ ಮೇಲೆ ಅವಲಂಬಿತವಾಗಿದೆ, ವಿದ್ಯುತ್ …
Read More »ಗೋವಾದಲ್ಲಿ ಚಾರ್ಟರ್ ವಿಮಾನಗಳು ಆರಂಭ: ಉತ್ತಮ ಪ್ರವಾಸಿ ಋತು ನಿರೀಕ್ಷೆ
ಪಣಜಿ: ಗೋವಾಕ್ಕೆ ಚಾರ್ಟರ್ ವಿಮಾನಗಳು ಆರಂಭಗೊಳ್ಳುವ ಮೂಲಕ ಗೋವಾ ಪ್ರಸಕ್ತ ವರ್ಷ ಉತ್ತಮ ಪ್ರವಾಸಿ ಋತುವನ್ನು ಹೊಂದಲಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ. ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- ರಾಜ್ಯದಲ್ಲಿ ಎಲ್ಲಾ ಪ್ರವಾಸೋದ್ಯಮ ಸಂಬಂಧಿತ ವ್ಯವಹಾರಗಳ ಸುರಕ್ಷತೆಗಾಗಿ ಕೋವಿಡ್ ಸಂಬಂಧಿತ ಎಲ್ಲಾ ಪ್ರೊಟೊಕಾಲ್‍ಗಳನ್ನು ಅನುಸರಿಸಬೇಕು. ಬೀಚ್‍ಗಳಲ್ಲಿ ಬಾರ್ ಮತ್ತು ರೆಸ್ಟೊರೆಂಟ್ ಮಾಲೀಕರು ಸರಕಾರದ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸಬೇಕು ಮತ್ತು ಅವರು ತಮ್ಮ ವ್ಯಾಪಾರವನ್ನು ಪುನರಾರಂಭಿಸಬೇಕು ಎಂದು ಮುಖ್ಯಮಂತ್ರಿ ಸಾವಂತ್ …
Read More »
Laxmi News 24×7