Breaking News

ರಾಜಕೀಯ

‘ಮಾ’ ಚುನಾವಣೆಯಲ್ಲಿ ಸೋಲು ಕಂಡ ನಟ ಪ್ರಕಾಶ್ ರಾಜ್

ಹೈದರಾಬಾದ್: ಭಾನುವಾರ ನಡೆದ ‘ತೆಲುಗು ಮೂವೀಸ್‌ ಆರ್ಟಿಸ್ಟ್ಸ್ ಅಸೋಶಿಯೇಷನ್’ (MAA) ಚುನಾವಣೆಯಲ್ಲಿ ನಟ ಪ್ರಕಾಶ್ ರಾಜ್ ಅವರಿಗೆ ಸೋಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅವರು, ನಟ ಹಾಗೂ ನಿರ್ಮಾಪಕ ಮೋಹನ್‌ ಬಾಬು ಅವರ ಮಗ ಮಂಚು ವಿಷ್ಣು ವಿರುದ್ಧ ಸುಮಾರು 400 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. 900 ಮತಗಳು ಚಲಾವಣೆಗೊಂಡಿದ್ದು, ಮತ ಎಣಿಕೆ ತಡರಾತ್ರಿವರೆಗೂ ನಡೆದು ಫಲಿತಾಂಶ ಪ್ರಕಟಗೊಂಡಿದೆ. ಪ್ರಕಾಶ್ ರಾಜ್ ಪ್ಯಾನೆಲ್‌ನ ನಟ ಶ್ರೀಕಾಂತ್ ಅವರು ಉಪಾಧ್ಯಕ್ಷ …

Read More »

ಗಗನಕ್ಕೇರಿದ ತೈಲಬೆಲೆ: ಶಾಸಕರ ಕಾರು ದುರ್ಬಳಕೆ ತಪ್ಪಿಸಲು ರಾಜ್ಯ ಸರ್ಕಾರದಿಂದ ಮಾಸ್ಟರ್​ ಪ್ಲಾನ್​

ದೇಶದಲ್ಲಿ ತೈಲೋತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಷ್ಟು ದಿನ ಪೆಟ್ರೋಲ್​ ದರ ಮಾತ್ರ ಶತಕ ದಾಟಿತ್ತು. ಇದೀಗ ಡೀಸೆಲ್​ ದರ ಕೂಡ ಶತಕ ಬಾರಿಸಿದೆ. ಪೆಟ್ರೋಲ್​ ಹಾಗೂ ಡೀಸೆಲ್​ ದರ ಏರಿಕೆಯು ಕೇವಲ ಜನಸಾಮಾನ್ಯನಿಗೆ ಮಾತ್ರವಲ್ಲದೇ ಸರ್ಕಾರದ ಪಾಲಿಗೂ ಚಿಂತಾಜನಕ ವಿಷಯವಾಗಿ ಬದಲಾಗಿದೆ. ತೈಲೋತ್ಪನ್ನಗಳ ದರ ಏರಿಕೆಯ ಹಿನ್ನೆಲೆಯಲ್ಲಿ ಶಾಸಕರ ಕಾರುಗಳು ದುರ್ಬಳಕೆಯಾಗದಂತೆ ತಡೆಯಲು ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್​ ರೂಪಿಸಿದೆ. ಮಿತವ್ಯಯ ಮಾಡಲು ನಿರ್ಧರಿಸಿರುವ ಆರ್ಥಿಕ …

Read More »

SSLC ಮರು ಪರೀಕ್ಷೆ ಫಲಿತಾಂಶ ಪ್ರಕಟ; 53,155 ವಿದ್ಯಾರ್ಥಿಗಳಲ್ಲಿ 29,522 ಮಂದಿ ಪಾಸ್

ಬೆಂಗಳೂರು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಎಸ್​​ಎಸ್​​ಎಲ್​ಸಿ ಮರು ಪರೀಕ್ಷೆಯ ಫಲಿತಾಂಶವನ್ನ ಪ್ರಕಟಿಸಿದ್ದಾರೆ. ಈ ವೇಳೆ ಪರೀಕ್ಷೆಯ ಫಲಿತಾಂಶದ ಬಗ್ಗೆ ಮಾತನಾಡಿರುವ ಶಿಕ್ಷಣ ಸಚಿವರು 27.9.2021 ರಿಂದ 29.09.2021 ಪರೀಕ್ಷೆ ನಡೆಸಲಾಯ್ತು. 352 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಯಿತು. 53155 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ರು. 29522 ಉತ್ತೀರ್ಣರಾಗಿ ಶೇ. 55.54 ಫಲಿತಾಂಶ ತಂದು ಕೊಟ್ಟಿದ್ದಾರೆ ಎಂದರು. ಹೊಸಬರು 18,417 ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ರು, ಅವರಲ್ಲಿ 9182 ಉತ್ತೀರ್ಣರಾಗಿದ್ದಾರೆ. ರಿಪೀಟರ್ಸ್ 23334 ನೋಂದಾಯಿಸಿಕೊಂಡಿದ್ರು. …

Read More »

ಅಸಮಾಧಾನ ಶಮನ; ನಾಮಪತ್ರ ಹಿಂತೆಗೆಸಲು ಕಸರತ್ತು

ಹಾವೇರಿ: ದಿ.ಸಿ.ಎಂ.ಉದಾಸಿ ಅವರ ನಿಧನದಿಂದ ತೆರವಾಗಿರುವ ಹಾನಗಲ್ಲ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಕೊನೆಗೊಂಡಿದ್ದು, ಈಗ ಪ್ರಚಾರ ಕಾರ್ಯ ಜೋರಾಗಿ ನಡೆದಿದೆ. ನಾಮಪತ್ರ ಸಲ್ಲಿಕೆಗೂ ಮುನ್ನ ಟಿಕೆಟ್‌ಗಾಗಿ ಕಾಂಗ್ರೆಸ್‌, ಬಿಜೆಪಿಯಲ್ಲಿದ್ದ ಅಸಮಾಧಾನ ಶಮನಗೊಂಡಿದ್ದು, ಮಗ್ಗಲು ಮುಳ್ಳಾಗಿರುವ ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ಹಿಂತೆಗೆಸಲು ಕಸರತ್ತು ಶುರುವಾಗಿದೆ. ಅ.11ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಅ.13 ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾಗಿದ್ದರಿಂದ ಅಂತಿಮವಾಗಿ ಎಷ್ಟು ಅಭ್ಯರ್ಥಿಗಳು ಕಣದಲ್ಲಿ ಉಳಿಯಲಿದ್ದಾರೆಂಬುದು ಕೂತೂಹಲ ಮೂಡಿಸಿದೆ. …

Read More »

ಜಮೀರ್‌ ಅಹಮದ್‌ಗೆ ಉತ್ತರಪ್ರದೇಶ ಚುನಾವಣೆ ಪ್ರಚಾರದ ಉಸ್ತುವಾರಿ?

ಬೆಂಗಳೂರು: ಮಾಜಿ ಸಚಿವ ಜಮೀರ್‌ ಅಹಮದ್‌ ಅವರು ದಿಲ್ಲಿಯಲ್ಲೇ ಬೀಡು ಬಿಟ್ಟಿದ್ದು, ಸೋಮವಾರ ಪ್ರಿಯಾಂಕಾ ಗಾಂಧಿಯವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಪ್ರಿಯಾಂಕಾ ಗಾಂಧಿಯವರ ಕಚೇರಿಯಿಂದ ಜಮೀರ್‌ಗೆ ಕರೆ ಮಾಡಿ ಭೇಟಿಗೆ ಸಮಯ ನೀಡಲಾಗಿದೆ. ಉತ್ತರಪ್ರದೇಶದ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪ್ರಭಾವವಿರುವ ಕ್ಷೇತ್ರಗಳಲ್ಲಿ ಜಮೀರ್‌ ಆಹಮದ್‌ಗೆ ಪ್ರಚಾರದ ಹೊಣೆ ನೀಡುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಮತಬ್ಯಾಂಕ್‌ಗೆ ಒವೈಸಿ ಲಗ್ಗೆ ಇಡಲು ಕಾರ್ಯತಂತ್ರ ರೂಪಿಸಿದ್ದು, ಅದಕ್ಕೆ ಪ್ರತಿಯಾಗಿ ಜಮೀರ್‌ …

Read More »

ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ಭೂ ಕಂಪನ: ಆತಂಕದಲ್ಲಿ ಜನತೆ

ಕಲಬುರಗಿ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 3.4ರಷ್ಟು ತೀವ್ರತೆ ದಾಖಲಾಗಿದೆ. ಸುಮಾರು 10 ಕಿಲೋಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಕೆಲವು ದಿನಗಳ ಹಿಂದೆಯಷ್ಟೇ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಮತ್ತು ತೇಗಲತಿಪ್ಪಿ ಗ್ರಾಮದಲ್ಲಿ ಲಘು ಭೂಕಂಪನವಾಗಿತ್ತು. ಗಡಿಕೇಶ್ವರ ಗ್ರಾಮದಲ್ಲಿ ಅನೇಕ ತಿಂಗಳಿಂದ ಭೂಮಿಯಿಂದ …

Read More »

ಭಾರಿ ಮಳೆಗೆ ಮುಳುಗಿದ ಸೇತುವೆ

ಭಾರತೀನಗರ: ಭಾರಿ ಮಳೆಯಿಂದಾಗಿ ಹನುಮಂತನಗರ ಸಮೀಪವಿರುವ ಹೆಬ್ಬಾಳ ಚನ್ನಯ್ಯನಾಲೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಭಾನುವಾರ ಸುರಿದ ಭಾರಿ ಮಳೆಗೆ ಹನುಮಂತನಗರ ಸಮೀಪದ ಹೆಬ್ಬಾಳ ಚನ್ನಯ್ಯ ನಾಲೆ ಸೇತುವೆ ಮೇಲೆ ಮಳೆಯ ನೀರು ನಿಂತಿದ್ದರಿಂದ ಸಾರ್ವಜನಿಕರು ವಾಹನಗಳಲ್ಲಿ ಸಂಚರಿಸಲು ಭಯಪಡುವಂತಾಗಿದೆ. ಶತತ 2 ಗಂಟೆಗಳ ಸುರಿದ ಭಾರಿ ಮಳೆಗೆ ಭಾರತೀನಗರ-ಮಂಡ್ಯ ರಸ್ತೆ ಮಾರ್ಗವಾಗಿ ಬರುವ ಹನುಮಂತನಗರ ರಸ್ತೆ ಸಮೀಪದಲ್ಲಿರುವ ಹೆಬ್ಬಾಳ ಚನ್ನಯ್ಯನಾಲೆ ಸೇತುವೆ ಮೇಲೆ ಮಳೆ ನೀರು …

Read More »

ಜೆಡಿಎಸ್ ಬಗ್ಗೆ ಮಾತನಾಡುವುದೇ ಇಲ್ಲ , ಆದ್ರೂ ಕುಮಾರಸ್ವಾಮಿ ಕಾಲು ಕೆರೆದುಕೊಂಡು ಬರುತ್ತಾರೆ: ಸಿದ್ದರಾಮಯ್ಯ

ಮಂಡ್ಯ: ನಾನು ಜೆಡಿಎಸ್ ಬಗ್ಗೆ ಮಾತನಾಡುವುದೇ ಇಲ್ಲ. ಆದರೆ ಎಚ್.ಡಿ.ಕುಮಾರಸ್ವಾಮಿ ಕಾಲು ಕೆರೆದುಕೊಂಡು ಬರುತ್ತಾರೆ. ನಾನು ಏನು ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಬಗ್ಗೆ ಮಾತನಾಡದಿದ್ದರೆ ಸಿದ್ದರಾಮಯ್ಯಗೆ ನಿದ್ರೆ ಬರಲ್ಲ ಎಂದು ಎಚ್‌ಡಿಕೆ ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ದೇವೇಗೌಡರ ಬಗ್ಗೆ ಮಾತನಾಡುವುದನ್ನು ಬಿಟ್ಟಿದ್ದೇನೆ. ಏಕೆಂದರೆ ನನ್ನ ಮಾತುಗಳನ್ನು ಕೋಮುವಾದಿ ಬಣ್ಣ ಕಟ್ಟಿ ತಿರುಚುತ್ತಾರೆ. ಟೀಕೆ ಮಾಡಿದರೆ …

Read More »

ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ಕಬ್ಬು ನುರಿಸಲೂ ಪ್ರಾರಂಭ

ಗೋಕಾಕ: ಕಬ್ಬಿನ ಒಂದು ಹಂಗಾಮಿ ಶುರು ಆಗುತ್ತಿದ್ದಂತೆ ಸುಮಾರು ಕಡೆ ಕಬ್ಬಿನ ಕಟಾವು, ಗಾಡಿ ಗಳ ಸದ್ದು , ರೈತರ ಮುಖದಲ್ಲಿ ಒಂದು ಆಶಾದಾಯಕ ಕಳೆ ಶುರು ಆಗುತ್ತೆ. ಮೊನ್ನೆ ಯಾಷ್ಟೆ ಬಾಯ್ಲರ್ ಪೂಜೆ ಮಾಡಿದ ಹಿರೆನಂದಿ ಯಲ್ಲಿರುವ ಶ್ರೀ ಸಂತೋಷ್ ಜಾರಕಿಹೊಳಿ ಅವರ ನೇತೃತ್ವ ದ ಸೌಭಾಗ್ಯ ಲಕ್ಷ್ಮಿ ಕಾರ್ಖಾನೆ ಕಬ್ಬನ್ನು ನುರಿಸುವುದಕ್ಕೆ ಮುಂದಾಗಿದೆ ಬಹುಶಃ ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಇದು ಪ್ರಥಮ್ ಕಾರ್ಖಾನೆ ಇರಬಹುದು ಕಬ್ಬನ್ನು ನುರಿಸಲು …

Read More »

ಕಾಮುಕ ಯುವಕನೋರ್ವ ಯುವಕನನ್ನು ರೇಪ್ ಮಾಡಿರುವ ವಿಲಕ್ಷಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡೆದಿದೆ.

ಚಿಕ್ಕೋಡಿ: ಇಲ್ಲೊಬ್ಬ ಕಾಮುಕ ಯುವಕನೋರ್ವ ಯುವಕನನ್ನು ರೇಪ್ ಮಾಡಿರುವ ವಿಲಕ್ಷಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡೆದಿದೆ. ಬಸ್ ಗಾಗಿ ಕಾಯುತ್ತಿದ್ದ ಯುವಕನನ್ನು ಬೈಕ್ ಮೇಲೆ ಹತ್ತಿಸಿಕೊಂಡು ಕರೆದೊಯ್ದು ನಿರ್ಜನ ಪ್ರದೇಶ ನೋಡಿ ಅನೈಸರ್ಗಿಕ ಸಂಭೋಗ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ನೊಂದ ಯುವಕ ಅಥಣಿ ಪೊಲೀಸರಿಗೆ ದೂರು ಸಲ್ಲಿಸಿದ್ದಾನೆ. ಈ ಬಗ್ಗೆ ನೊಂದ ಯುವಕನಿಂದ ದೂರು ದಾಖಲಿಸಿಕೊಂಡ ಅಥಣಿ ಪೊಲೀಸ್ ಠಾಣೆಯ ಪೊಲೀಸರು ಅತ್ಯಾಚಾರಿ ಆರೋಪಿ …

Read More »