ರಾಮನಗರ: ಚನ್ನಪಟ್ಟಣದಲ್ಲಿ ಕುಡಿವ ನೀರಿನ ಓವರ್ಹೆಡ್ ಟ್ಯಾಂಕ್ನ ಕೊಳವೆಯಲ್ಲಿ ಮಹಿಳೆಯ ಕೊಳೆತ ಕಾಲು ಪತ್ತೆಯಾದ ಪ್ರಕರಣದ ಜಾಡು ಹಿಡಿಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಕೆಲವು ದಿನಗಳ ಹಿಂದೆ ಚನ್ನಪಟ್ಟಣದ ನ್ಯಾಯಾಲಯಗಳ ಸಂಕೀರ್ಣದ ಸಮೀಪವೇ ಇರುವ ಟ್ಯಾಂಕ್ನ ಕೊಳವೆಯಲ್ಲಿ ಮನುಷ್ಯನ ಕಾಲು ಪತ್ತೆ ಆಗಿತ್ತು. ಈ ಪ್ರಕರಣ ಚನ್ನಪಟ್ಟಣದ ಜನತೆಯಲ್ಲಿ ಆತಂಕ ಉಂಟು ಮಾಡಿದ್ದು ಮಾತ್ರವಲ್ಲದೆ, ಪೊಲೀಸ್ ಇಲಾಖೆಗೆ ಸವಾಲಾಗಿದೆ. ಆದರೆ, ಇದರ ಜಾಡು ಹಿಡಿಯುವುದು ಸವಾಲಿನ ಕೆಲಸವಾಗಿದೆ. ಯುವತಿ ಕಾಲಿರಬಹುದೆಂಬ ಶಂಕೆ?: …
Read More »ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾದ ‘ಕಿತ್ತೂರು ಕರ್ನಾಟಕ ‘ಘೊಷಣೆ ಕುರಿತು ಸಂಪುಟದಲ್ಲಿ ರ್ಚಚಿಸಿ ನಿರ್ಧಾರ : ಬೊಮ್ಮಾಯಿ ಭರವಸೆ
ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾದ ‘ಕಿತ್ತೂರು ಕರ್ನಾಟಕ ‘ಘೊಷಣೆ ಕುರಿತು ಸಂಪುಟದಲ್ಲಿ ರ್ಚಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಬಾದ್-ಕರ್ನಾಟಕ ಭಾಗವನ್ನು ‘ಕಲ್ಯಾಣ ಕರ್ನಾಟಕ’ ಎಂದು ಘೊಷಣೆ ಮಾಡಿರುವಂತೆ ಬೆಳಗಾವಿ ಭಾಗವನ್ನು ‘ಕಿತ್ತೂರು ಕರ್ನಾಟಕ’ ಎಂದು ಘೊಷಿಸುವ ಕುರಿತು ಸಚಿವ ಸಂಪುಟದಲ್ಲಿ ರ್ಚಚಿಸಲಾಗುವುದು. ಆ ಬಳಿಕ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು. ಅ.23ರಿಂದ …
Read More »ಮಹರ್ಷಿ ವಾಲ್ಮೀಕಿ ಜಯಂತಿ ವೇಳೆ ಝಳಪಳಿಸಿದ ತಲ್ವಾರ್, ಮಚ್ಚು ಲಾಂಗ್..!
ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಗೌಡಗೇರಾ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಪ್ರಯುಕ್ತ ತಲ್ವಾರ್, ಮಚ್ಚು ಕೈಯಲ್ಲಿ ಹಿಡಿದು ಯುವಕರು ಕುಣಿದು ಕುಪ್ಪಳಿಸಿದ್ದಾರೆ. ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಡಿಜೆ ಮೆರವಣಿಗೆ ಆಯೋಜನೆ ಮಾಡಿರುವುದಲ್ಲದೆ ಶಸ್ತ್ರಾಸ್ತ್ರ ಬಳಕೆ ಪ್ರದರ್ಶನ ನಿಷೇಧ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಮೆರವಣಿಗೆಯುದ್ದಕ್ಕೂ ತಲ್ವಾರ್ ಹಿಡಿದು ಯುವಕರು ಸ್ಟೆಪ್ ಹಾಕಿದ್ದಾರೆ. ಪೊಲೀಸ್ ಇಲಾಖೆಯ ಆದೇಶಕ್ಕಿಲ್ಲ ಕವಡೆಕಾಸಿನ ಕಿಮ್ನತ್ತು ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಕೆಂಬಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ …
Read More »70ನೇ ವಯಸ್ಸಲ್ಲಿ ಮಗುವನ್ನು ಹೆತ್ತಳಾ ಈ ತಾಯಿ! ಮುದ್ದು ಕಂದನ ಕಂಡು ಕುಣಿದುಕುಪ್ಪಳಿಸಿದ ದಂಪತಿ
ಗಾಂಧಿನಗರ (ಗುಜರಾತ್): ಕೆಲ ತಿಂಗಳ ಹಿಂದಷ್ಟೇ ಪಂಜಾಬ್‌ನ 70 ವರ್ಷದ ಆಸುಪಾಸಿನ ಮಹಿಳೆಯೊಬ್ಬರು ಮಗುವನ್ನು ಹೆತ್ತು ಭಾರಿ ಸುದ್ದಿಮಾಡಿದ್ದರು. ಇದೀಗ ಅದೇ ವಯಸ್ಸಿನ ಇನ್ನೋರ್ವ ಮಹಿಳೆ ಮೊದಲ ಕಂದನನ್ನು ಪಡೆದಿದ್ದಾರೆ. ಮುದ್ದು ಕಂದನನ್ನು ನೋಡಿ ಈ ದಂಪತಿ ಕುಣಿದು ಕುಪ್ಪಳಿಸಿದ್ದಾರೆ. ಗುಜರಾತ್‍ನ ಕಛ್‍ನ ಜೀವುಬೆನ್ ವಾಲಾಭಾಯಿ ರಬರಿ ಅವರು ಮಗುವನ್ನು ಹೆತ್ತವರು. ರಾಪರ್ ತಾಲ್ಲೂಕಿನ ಮೋರಾ ಗ್ರಾಮದ ನಿವಾಸಿಯಾಗಿರುವ ಈ ದಂಪತಿಗೆ ಮದುವೆಯಾಗಿ 45ನೇ ವಯಸ್ಸಿಗೆ ಈ ಮಗು ಜನಿಸಿದೆ. …
Read More »ಬೆಳೆ ವಿಮೆ ಸೌಲಭ್ಯ : ರೈತ ಸಮುದಾಯಕ್ಕೆ ಇಲ್ಲಿದೆ ಬಹುಮುಖ್ಯ ಮಾಹಿತಿ
ದಾವಣಗೆರೆ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆ ಜಾರಿಗೊಳಿಸಿದ್ದು, ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಬೆಳೆ ಸಾಲ ಪಡೆದ ಮತ್ತು ಪಡೆಯದ ರೈತರು ನೋಂದಾಯಿಸಿಕೊಳ್ಳಬಹುದು ಎಂದು ಜಂಟಿಕೃಷಿ ನಿರ್ದೇಶಕರು ಸೂಚನೆ ನೀಡಿದ್ದಾರೆ. ಬೆಳೆಸಾಲ ಪಡೆದ ರೈತರಿಗೆ ಬೆಳೆಸಾಲ ಮಂಜೂರು ಮಾಡುವಾಗ, ಕಡ್ಡಾಯವಾಗಿ ಬೆಳೆವಿಮೆಗೆ ಒಳಪಡಿಸಲಾಗುವುದು, ಬೆಳೆ ಸಾಲ ಪಡೆಯದ ಇಚ್ಚೆಯುಳ್ಳ ರೈತರು ಅರ್ಜಿಯೊಂದಿಗೆ ಭೂಮಿ …
Read More »ದೆಹಲಿ ಸರ್ಕಾರ ರೈತರಿಗೆ ಪ್ರತಿ ಹೆಕ್ಟೇರ್‌ಗೆ 50 ಸಾವಿರ ಪರಿಹಾರ ನೀಡಿದ-ಅರವಿಂದ ಕೇಜ್ರಿವಾಲ್
ಹೊಸದಿಲ್ಲಿ: ಅಕಾಲಿಕ ಮಳೆಗೆ ಬೆಳೆ ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟೇರ್‌ಗೆ 50,000 ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ಘೋಷಿಸಿದ್ದಾರೆ. ಪರಿಹಾರದ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ದೆಹಲಿ ಸಿಎಂ ಹೇಳಿದರು. ಬೆಳೆ ಕಳೆದುಕೊಂಡ ರೈತರಿಗೆ ಪ್ರತಿ ಹೆಕ್ಟೇರ್‌ಗೆ 50 ಸಾವಿರ ಪರಿಹಾರ ನೀಡುವುದಾಗಿ ನಾನು ಆದೇಶ ಹೊರಡಿಸಿದ್ದೇನೆ ಎಂದು ಅವರು ಹೇಳಿದರು. ಕಂದಾಯ ಅಧಿಕಾರಿಗಳು ನಡೆಸಿದ ಸಮೀಕ್ಷೆಯ …
Read More »2ನೇ ಮದುವೆ ಕಾರಣಕ್ಕೆ ವಿಚ್ಛೇದಿತ ಪತ್ನಿಗೆ ಜೀವನಾಂಶ ತಪ್ಪಿಸುವಂತಿಲ್ಲ: ಹೈಕೋರ್ಟ್
ಬೆಂಗಳೂರು: “ಇಸ್ಲಾಮಿನಲ್ಲಿ ಮದುವೆ ಎಂಬುದು ಒಂದು ಕರಾರು ಆಗಿದೆ. ಹಾಗಂತ, ಎರಡನೇ ಪತ್ನಿ ಹಾಗೂ ಆಕೆಯಿಂದ ಹುಟ್ಟಿದ ಮಕ್ಕಳ ನಿರ್ವಹಣೆ ಮಾಡಬೇಕಿರುವ ಹಿನ್ನಲೆಯಲ್ಲಿ ವಿಚ್ಛೇದನ ನೀಡಿದ ಮೊದಲ ಪತ್ನಿಗೆ ಜೀವನಾಂಶ ನೀಡುವ ಹೊಣೆಗಾರಿಕೆಯಿಂದ ಪತಿ ತಪ್ಪಿಸಿಕೊಳ್ಳುವಂತಿಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡುವಂತೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಭುವನೇಶ್ವರಿ ನಗರದ ಎಜಾಜುರ್ ರೆಹ್ಮಾನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ| ಕೃಷ್ಣ ಎಸ್. …
Read More »ಅನ್ಯ ಭಾಷೆ ಬಳಸದೆ ನಾಲ್ಕು ನಿಮಿಷ ಕನ್ನಡದಲ್ಲಿ ಮಾತಾಡಿದ್ರೆ ಸಿಗುತ್ತೆ ನಗದು ಬಹುಮಾನ.!
ಬೆಂಗಳೂರು: ಒಂದೂ ಅನ್ಯ ಭಾಷೆಯ ಪದಗಳನ್ನು ಬಳಸದೇ ನಿರರ್ಗಳವಾಗಿ ಕನ್ನಡದಲ್ಲಿ ನಾಲ್ಕು ನಿಮಿಷಗಳ ಕಾಲ ಕನ್ನಡ ನಾಡು, ನುಡಿ, ಪರಂಪರೆಗೆ ಸಂಬಂಧಿಸಿದ ವಿಷಯಗಳ ಕುರಿತು ವಿಡಿಯೋ ಸೆಲ್ಸಿ ತಗೆದು ಕಳುಹಿಸಿದರೆ ನಗದು ಬಹುಮಾನ ನೀಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದಾದ್ಯಂತ 66ನೇ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಲಾಗಿದೆ. ಎಂದಿನಂತೆ ನವೆಂಬರ್ ಒಂದರಂದು ಮಾತ್ರ ರಾಜ್ಯೋತ್ಸವ ಆಚರಿಸದೇ, …
Read More »ಚುನಾವಣೆಯಲ್ಲಿ ನಾನು ಕಣಕ್ಕಿಳಿಯುತ್ತೇನೆ ಎಂದ ವಾಟಾಳ್ ನಾಗರಾಜ್
ಮೈಸೂರು: ಮುಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆ ಎಂದು ಕನ್ನಡಪರ ಹೋರಾಟಗಾರ, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು. ಮುಂಬರುವ ಪರಿಷತ್ ಚುನಾವಣೆಯಲ್ಲಿ ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದರು. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಲು ನಡೆಯುವ ಚುನಾವಣೆಯಲ್ಲಿ ನಾನು ಕಣಕ್ಕಿಳಿಯುತ್ತೇನೆ. ಈ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳೇ ಮತದಾರರಾಗಿರುತ್ತಾರೆ. ಎರಡು ಮತ ಚಲಾವಣೆಗೆ ಅವಕಾಶವಿದೆ. ನನಗೊಂದು ಮತ ಕೊಡಿ ಉಳಿದೊಂದು …
Read More »ರಾಜ್ಯ ಸರ್ಕಾರ 9 ಐಪಿಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ
ಬೆಂಗಳೂರು: ರಾಜ್ಯ ಸರ್ಕಾರ 9 ಐಪಿಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಧರ್ಮೇಂದ್ರ ಕುಮಾರ್ ಮೀನಾ, ಪಾಟೀಲ್ ವಿನಾಯಕ ವಸಂತರಾವ್ ಸೇರಿದಂತೆ ಒಟ್ಟು 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ದರ್ಮೇಂದ್ರ ಕುಮಾರ್ ಮೀನಾ-ಎಫ್ ಎಸ್ ಎಲ್ ನಿರ್ದೇಶಕ ಪಾಟೀಲ್ ವಿನಾಯಕ ವಸಂತರಾವ್ -ಬೆಂಗಳೂರು ಉತ್ತರ ವಿಭಾಗ ಎಸ್.ಸವಿತಾ – ಉತ್ತರ ವಿಭಾಗದ ಟ್ರಾಫಿಕ್ ಡಿಸಿಪಿ ನಿಕಮ್ ಪ್ರಕಾಶ್ ಅಮೃತ್ -ನಕ್ಸಲ್ ನಿಗ್ರಹ …
Read More »
Laxmi News 24×7