Breaking News

ರಾಜಕೀಯ

ಸಿದ್ದರಾಮಯ್ಯ ಮಾತುಗಳಿಗೆ ಕವಡೆ ಕಾಸಿನ ಬೆಲೆ ಇಲ್ಲ : ಬಿ.ಎಸ್. ಯಡಿಯೂರಪ್ಪ

ದಾವಣಗೆರೆ : ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿರುವ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಮಾತುಗಳಿಗೆ ಕವಡೆ ಕಾಸಿನ ಬೆಲೆ ಇಲ್ಲ ಎಂದು ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದರು. ನಗರದ ಜಿಎಂಐಟಿ ಅತಿಥಿ ಗೃಹಕ್ಕೆ ಅನಿರೀಕ್ಷಿತವಾಗಿ ಭಾನುವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿಂಧಗಿ, ಹಾನಗಲ್ ಉಪ ಚುನಾವಣೆಯಲ್ಲಿ ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ಫಲಿತಾಂಶ ಬಂದ ಮೇಲೆ ನಿಮಗೇ ಗೊತ್ತಾಗುತ್ತದೆ’ ಎಂದರು. ಎರಡೂ ಕ್ಷೇತ್ರಗಳಲ್ಲೂ ನಾವು ದೊಡ್ಡ ಅಂತರದಿಂದಲೇ …

Read More »

ಅಪರಿಚಿತರನ್ನು ಪೋಸ್ಕೋ ಬೆಗ್ಗರ್ ಕೇರ್ ಗೆ ಕಳುಹಿಸಿದ ಎಎಸ್’ಐ ಶಾಂತರಾಜು; ಹೃದಯಸ್ಪರ್ಶಿ ಕಾರ್ಯಕ್ಕೆ ಪ್ರಶಂಸೆ

ಬೆಂಗಳೂರು : ಅಪರಿಚಿತರಿಬ್ಬರು ನಿಸ್ಸಾಹಯಕ ಸ್ಥಿತಿಯಲ್ಲಿದ್ದವರನ್ನು ಗಮನಿಸಿದ ಚಿಕ್ಕಪೇಟೆ ಸಂಚಾರ ಠಾಣಾ ಅಧಿಕಾರಿ ಆರೈಕೆಗಾಗಿ ಪೋಸ್ಕೊ ಬೆಗ್ಗರ್ ಕೇರ್ ಗೆ ಕಳುಹಿಸಿರುತ್ತಾರೆ. ಚಿಕ್ಕಪೇಟೆ ಸಂಚಾರ ಠಾಣೆಯ ಅಧಿಕಾರಿ ಶಾಂತರಾಜು ಪಿ. ಎಎಸ್ ಐ ರವರು ಮತ್ತು ಅವರ ತಂಡದಿಂದ ಸಿಟಿ ರೈಲ್ವೆ ಸ್ಟೇಷನ್ ಮುಂಭಾಗ ಇವರ ಅಪರಿಚಿರ ಬಗ್ಗೆ ಮಾನವೀಯತೆ ತೋರಿದ್ದಾರೆ. ಈ ಹಿನ್ನೆಲೆ ಈ ಹೃದಯಸ್ಪರ್ಶಿ ಕಾರ್ಯಕ್ಕೆ ಇಲಾಖಾ ವತಿಯಿಂದಲೂ ಪ್ರಶಂಸೆ ನೀಡಲಾಗಿದೆ. ಈ ವೇಳೆ ಮಾತನಾಡಿದ ಪಿಎಎಸ್ ಐ ಶಾಂತರಾಜು …

Read More »

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಿಂದಗಿ: ದೇವೇಗೌಡರು ಹಾಗೂ ಕುಮಾರಸ್ವಾಮಿ ನನ್ನ ಮೇಲೆ ಬಾಣಗಳ ಮೇಲೆ ಬಾಣ ಬಿಡುತ್ತಾರೆ. ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ಗೆ ನಾನೇ ಟಾರ್ಗೆಟ್‌. ಅವರು ಸಿದ್ದರಾಮಯ್ಯರನ್ನು ಮುಗಿಸಿ ಬಿಟ್ರೆ ಕಾಂಗ್ರೆಸ್‌ ಮುಗಿಸಿ ದಂತೆಯೇ ಎಂಬ ಭ್ರಮೆ ಯಲ್ಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರವಿವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್‌ಗೆ ಏನೂ ವ್ಯತ್ಯಾಸವಿಲ್ಲ. ಹೆಸರು ಮಾತ್ರ ಬೇರೆ ಬೇರೆ. ಜೆಡಿಎಸ್‌ ಪಕ್ಷ ಈಗ ಉಳಿದಿಲ್ಲ. …

Read More »

ಕುಮಾರಸ್ವಾಮಿ ಬಸವ ಕಲ್ಯಾಣದಲ್ಲಿ ಕುಮಾರಸ್ವಾಮಿ ಸೂಟ್ ಕೇಸ್ ತೆಗೆದುಕೊಂಡು ಅಭ್ಯರ್ಥಿ ಹಾಕಿದ್ದಾರೆ.

ಕುಮಾರಸ್ವಾಮಿ ಸಾಕಿದ್ದೇ ನಾನು ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ಬಸವ ಕಲ್ಯಾಣದಲ್ಲಿ ಕುಮಾರಸ್ವಾಮಿ ಸೂಟ್ ಕೇಸ್ ತೆಗೆದುಕೊಂಡು ಅಭ್ಯರ್ಥಿ ಹಾಕಿದ್ದಾರೆ. ರೂ. 10 ಕೋಟಿ ಪಡೆದು ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದಾರೆ. ಅದು ಸೂಟ್ ಕೇಸ್ ರಾಜಕಾರಣ ಮಾಡುತ್ತಿದೆ. 2005 ರಲ್ಲಿ ನನ್ನ ಸೋಲಿಸಲು ಕೈ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿರಲಿಲ್ಲ. ದೇವೇಗೌಡರ ಋಣ ನನ್ನ ಮೇಲಿದೆ. ದೇವೇಗೌಡರರಿಂದ ಶಾಸಕನಾಗಿದ್ದೇನೆಯೇ ಹೊರತು ಕುಮಾರಸ್ವಾಮಿಯಿಂದಲ್ಲ ಎಂದು ಹೇಳಿದ್ದಾರೆ. ನಾನು ಬಸ್ ಮಾಲೀಕನಾಗಿದ್ದೆ. ನನ್ನ ತಾತನ …

Read More »

ಸೋಮವಾರ ಶಾಲೆ ಆರಂಭವಾದರೆ ಕೆಸರು ತುಂಬಿದ ಈ ರಸ್ತೆಯಲ್ಲಿ ನಾವು ಹೋಗುವುದಾದರೂ ಹೇಗೆ ಎಂಬ ಚಿಂತೆ ಈ ಪುಟಾಣಿಗಳಿಗೆ.

ಬೆಳ್ಳಾರೆ: ಸೋಮವಾರ ಶಾಲೆ ಆರಂಭವಾದರೆ ಕೆಸರು ತುಂಬಿದ ಈ ರಸ್ತೆಯಲ್ಲಿ ನಾವು ಹೋಗುವುದಾದರೂ ಹೇಗೆ ಎಂಬ ಚಿಂತೆ ಈ ಪುಟಾಣಿಗಳಿಗೆ. ಆದರೆ ಅವರಿವರ ಬಳಿ ಹೇಳಿ ಪ್ರಯೋಜನ ಇಲ್ಲ; ನಮ್ಮ ರಸ್ತೆಯನ್ನು ನಾವೇ ಸರಿಪಡಿಸಿಕೊಳ್ಳುತ್ತೇವೆ ಎಂದುಕೊಂಡು ಬೆಳ್ಳಾರೆ ಗ್ರಾಮದ ಮೂಡಾಯಿ ತೋಟ ಬೆಳ್ಳಾರೆ ರಸ್ತೆಯ ಮಂಡೇಪು ಎಂಬಲ್ಲಿ ಮಣ್ಣಿನ ರಸ್ತೆಯು ಕೆಸರುಮಯವಾಗಿದ್ದು, ನಡೆದುಕೊಂಡು ಹೋಗಲೂ ಅಸಾಧ್ಯವಾಗಿದೆ. ಇದೀಗ ಪ್ರಾಥಮಿಕ ಶಾಲೆ ಆರಂಭಕ್ಕೆ ಸರಕಾರ ದಿನ ನಿಗದಿಪಡಿಸಿದ್ದು ಈ ರಸ್ತೆಯಲ್ಲಿ ನಡೆದುಕೊಂಡು ತಮ್ಮ …

Read More »

3 ದಿನದ ಹಿಂದೆ ರಿಲೀಸ್​ ಆಗಿದ್ದ ರೌಡಿಶೀಟರ್​ನ ಬರ್ಬರ ಹತ್ಯೆ.. ಬೆಚ್ಚಿಬಿದ್ದ ಬೆಂಗಳೂರು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೂರು ದಿನಗಳ ಹಿಂದೆ ರಿಲೀಸ್​ ಆಗಿದ್ದ ರೌಡಿಶೀಟರ್​ನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನೆಲಗದರನಹಳ್ಳಿಯ ಶಿವಪುರ ಬಳಿ ನಡೆದಿದೆ. ಜೆ.ಸಿ ಆನಂದ್ (36) ಕೊಲೆಯಾದ ರೌಡಿಶೀಟರ್. ಇಂದು ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು ಪೀಣ್ಯ ಠಾಣೆಯ ರೌಡಿಶೀಟರ್ ಆಗಿದ್ದ ಮೃತ ಆನಂದ್ ಕಳೆದ ಮೂರು ದಿನಗಳಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಐದಾರು ಜನ ಬೈಕ್ ನಲ್ಲಿ ಬಂದು …

Read More »

ಕನ್ನಡಕ್ಕಾಗಿ ನಾವು’ ವಿಶೇಷ ಅಭಿಯಾನ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಒಂದು ವಾರ ಹಮ್ಮಿಕೊಂಡಿರುವ ‘ಕನ್ನಡಕ್ಕಾಗಿ ನಾವು’ ವಿಶೇಷ ಅಭಿಯಾನದ ಭಾಗವಾಗಿ ನಗರದ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ‘ಮಾತಾಡ್ ಮಾತಾಡ್ ಕನ್ನಡ’ ಘೋಷವಾಕ್ಯದಡಿ ಕಾರ್ಯಕ್ರಮಗಳು ನಡೆಯಲಿವೆ. ಮೈಸೂರು, ಶಿವಮೊಗ್ಗ, ಕಲಬುರಗಿ ಹಾಗೂ ದಾವಣಗೆರೆ ರಂಗಾಯಣ, ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿವೆ. ಅ.24ರಂದು (ಭಾನುವಾರ) ಬೆಳಿಗ್ಗೆ 10ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ‘ಪರ್ವ’ ನಾಟಕ …

Read More »

ಕಲ್ಲಿದ್ದಲು ಆಮದು ನಿಲ್ಲಿಸಲು ತೀರ್ಮಾನ: ಸಚಿವ ಪ್ರಲ್ಹಾದ ಜೋಶಿ

ಬೆಳಗಾವಿ: ‘ದೇಶದಲ್ಲಿ ಕಲ್ಲಿದ್ದಲು ಕೊರತೆ ಆಗಿದ್ದು ನಿಜ. ಇದನ್ನು ನಾವು ಅವಕಾಶವಾಗಿ ಬಳಸಿಕೊಂಡಿದ್ದೇವೆ. ದೇಶದಲ್ಲಿ ಲಭ್ಯವಿರುವ ಕಲ್ಲಿದ್ದಲನ್ನೇ ಅಪಾರ ಪ್ರಮಾಣದಲ್ಲಿ ಪೂರೈಸಲಾಗುತ್ತಿದೆ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದರು. ಕಿತ್ತೂರಿನಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ತೀವ್ರ ಮಳೆ ಹಾಗೂ ಕಲ್ಲಿದ್ದಲಿನ ಆಮದು ದರ ಹೆಚ್ಚಾಗಿದ್ದಕ್ಕೆ ದೇಶದಲ್ಲಿ ಕಲ್ಲಿದ್ದಲು ಕೊರತೆ ಆಗಿತ್ತು. ಸ್ವದೇಶಿ ಕಲ್ಲಿದ್ದಲನ್ನೆ ಅಪಾರ ಪ್ರಮಾಣದಲ್ಲಿ ಒದಗಿಸಲಾಗುತ್ತಿದೆ. ಇದರಿಂದಾಗಿ ಕಲ್ಲಿದ್ದಲು ಆಮದನ್ನು …

Read More »

ಕುಮಾರಸ್ವಾಮಿ ಬ್ರದರ್, ಬ್ರದರ್ ಅಂತಾನೇ ಕತ್ತು ಕೊಯ್ಯುತ್ತಾರೆ, ನಮ್ಮ ನಾಯಕ ಸಿದ್ಧರಾಮಯ್ಯ ಹುಲಿ ಇದ್ದಂಗೆ – ಶಾಸಕ ಜಮೀರ್ ಅಹ್ಮಾದ್ ಕಿಡಿ

ಕಲಬುರ್ಗಿ: ಕುಮಾರಸ್ವಾಮಿ ( HD Kumaraswamy ) ಬ್ರದರ್, ಬ್ರದರ್ ಅಂತಾನೇ ಕತ್ತು ಕೊಯ್ಯುತ್ತಾರೆ. ಕುಮಾರಸ್ವಾಮಿ ಯಾವತ್ತೂ ಯಾವುದೇ ಲಾಭ ಇಲ್ಲದೇ ಯಾವುದೇ ಕೆಲಸವನ್ನು ಮಾಡೋದಿಲ್ಲ. ಕುಮಾರಸ್ವಾಮಿ ಹಣಧಾಹಕ್ಕಾಗಿ ಅಲ್ಪಸಂಖ್ಯಾತರನ್ನು ಬಲಿಕೊಡುತ್ತಿದ್ದಾರೆ. ಬಸವಕಲ್ಯಾಣದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದೆ 10 ಕೋಟಿ ಹಣ ಪಡೆದು ಎಂಬುದಾಗಿ ಶಾಸಕ ಜಮೀರ್ ಅಹ್ಮದ್ ಖಾನ್ ( MLA Zameer Ahmed ) ಹೊಸ ಬಾಂಬ್ ಸಿಡಿಸಿದ್ದಾರೆ. ಈ ಕುರಿತಂತೆ ಸಿಂದಗಿ ಪಟ್ಟಣದಲ್ಲಿ ಇಂದು ಸುದ್ದಿಗಾರರೊಂದಿಗೆ …

Read More »

ನನ್ನ ಅವಧಿಯಲ್ಲೇ ವಿವಿಧ ಸಮುದಾಯಗಳಿಗೆ ಮೀಸಲು ಸೌಲಭ್ಯ : ಬೊಮ್ಮಾಯಿ

ವಿಜಯಪುರ: ಜಾತಿ ಮೀಸಲು ಕಲ್ಪಿಸುವ ಕುರಿತು ಹಲವು ಸಮುದಾಯಗಳಿಂದ ಬೇಡಿಕೆಗಳು ಬಂದಿವೆ. ಈ ಬಗ್ಗೆ ವರದಿ ತರಿಸಿಕೊಂಡು ನನ್ನದೇ ಅವಧಿಯಲ್ಲಿ ಕಾನೂನು ಚೌಕಟ್ಟಿನಲ್ಲಿ ಮೀಸಲು ಸೌಲಭ್ಯ ಕಲ್ಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಭಾನುವಾರ ಸಿಂದಗಿ ವಿಧಾನಸಭೆ ಉಪ ಚುನಾವಣೆ ಪ್ರಚಾರಾರ್ಥ ಹಂದಿಗನೂರು ಗ್ರಾಮದಲ್ಲಿ ರೋಡ್ ಶೋನಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ರಮೇಶ ಭೂಸನೂರ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ಬಾರಿಯೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ …

Read More »