Breaking News

ರಾಜಕೀಯ

ಅಕ್ಟೋಬರ್ 28ರಂದು ‘ಪುಷ್ಪ’ ಸಿನಿಮಾದ ಮೂರನೇ ಹಾಡು ರಿಲೀಸ್

ಸುಕುಮಾರ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ‘ಪುಷ್ಪ’ ಸಿನಿಮಾದ ಮೂರನೇ ಹಾಡನ್ನು ಅಕ್ಟೋಬರ್ 28ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದಾರೆ ‘ಸಾಮಿ ಸಾಮಿ’ ಎಂಬ ಈ ಹಾಡಿನ ಪ್ರೋಮೋ ಈಗಾಗಲೇ ಆದಿತ್ಯ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ. ! ಡಿಸೆಂಬರ್ 17ರಂದು ಈ ಚಿತ್ರ ತೆರೆಮೇಲೆ ಬರಲಿದ್ದು ಅಲ್ಲು ಅರ್ಜುನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ …

Read More »

ತಂಗಿಯನ್ನೇ ಕೊಂದ, ಖಡ್ಗ ಹಿಡಿದು ರಸ್ತೆಯಲ್ಲೇ ರಾಜಾರೋಷವಾಗಿ ನಡೆದ, ಹಾಗೇ ಪೊಲೀಸ್ ಠಾಣೆಗೂ ಹೋದ..!

ಧಾರವಾಡ: ತಂಗಿಯ ಮೇಲೆ ಮೆಣಸಿನ ಪುಡಿ ಎರಚಿ ಕೊಲೆ ಮಾಡಿ ಪರಾರಿಯಾಗಿದ್ದ ಅಣ್ಣ ಪತ್ತೆಯಾಗಿದ್ದಾನೆ. ಮಾತ್ರವಲ್ಲ ತಂಗಿಯನ್ನು ಕೊಂದ ಬಳಿಕ ಖಡ್ಗ ಹಿಡಿದು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡಿ, ಪೊಲೀಸ್ ಠಾಣೆಗೂ ತಲುಪಿದ್ದಾನೆ. ಧಾರವಾಡದ ನವಲಗುಂದ ಪಟ್ಟಣದ ಕಲ್ಮೇಶ್ವರ ಗುಡಿ ಬಳಿ ಮಹಾಂತೇಶ ಶರಣಪ್ಪನವರ ತನ್ನ ತಂಗಿ ಶಶಿಕಲಾ ಸುಣಗಾರ ಎಂಬಾಕೆಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡು ಬಳಿಕ ಮೆಣಸಿನ ಪುಡಿ ಎರಚಿದ್ದಲ್ಲದೆ ಖಡ್ಗದಿಂದ ಕೊಲೆಗೈದು ಪರಾರಿಯಾಗಿದ್ದ. ನಂತರ ಆತ ಖಡ್ಗ ಹಿಡಿದುಕೊಂಡು ರಸ್ತೆಯಲ್ಲಿ …

Read More »

ಸಿಂಧನೂರಿನಲ್ಲಿ ಸಂತೋಷ್ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದ ವತಿಯಿಂದ ವೃದ್ಧಾ ಶ್ರಮದಲ್ಲಿ ಸರಳ ಹುಟ್ಟುಹಬ್ಬ ಆಚರಣೆ

ಸಿಂಧನೂರು :ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀ ಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂಧ್ಯ ಆಶ್ರಮದಲ್ಲಿ ರಾಯಚೂರು ಜಿಲ್ಲಾ ಜಾರಕಿಹೊಳಿ ಅಭಿಮಾನ ಬಳಗದ ವತಿಯಿಂದ ಕರುನಾಡಿನ ಕಾರುಣ್ಯ ಕಣ್ಮಣಿಗಳು ಕಾರುಣ್ಯ ಕುಟುಂಬದ ನಿರಂತರ ಮಾರ್ಗದರ್ಶಕರು ಕಾರುಣ್ಯ ಕರುಣಾಮಯಿಗಳು ಕಾರುಣ್ಯ ಕುಟುಂಬದ ಯಜಮಾನರಾದಂತಹ ಕರುನಾಡಿನ ಕಾರುಣ್ಯ ಕುಟುಂಬದ ಅಧಿಕಾರಿಗಳಾದ ಸನ್ಮಾನ್ಯ ಶ್ರೀ ರಮೇಶ ಜಾರಕಿಹೊಳಿ ಮಾಜಿ ಸಚಿವರು ಹಾಗೂ ಜನಪ್ರಿಯ ಶಾಸಕರು ಗೋಕಾಕ ವಿಧಾನಸಭಾ ಕ್ಷೇತ್ರ …

Read More »

ಮಾಜಿ ಸಿಎಂ ಯಡಿಯೂರಪ್ಪರಿಂದ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಕೋಟ್ಯಂತರ ಹಣ?

ಬೆಂಗಳೂರು, ಅ. 26: ಬಹಿರಂಗ ಪ್ರಚಾರಕ್ಕೆ ಇನ್ನೆರಡು ದಿನಗಳಿರುವಾಗ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರುತ್ತಿವೆ. ಜೊತೆಗೆ ಹಲವು ರಹಸ್ಯಗಳೂ ಚುನಾವಣೆ ಸಂದರ್ಭದಲ್ಲಿ ಬಯಲಾಗುತ್ತಿವೆ. ಮತ್ತೊಂದು ಸೂಟ್‌ಕೇಸ್ ರಹಸ್ಯವನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ವಿಜಯಪುರದಲ್ಲಿ ಬಹಿರಂಗಗೊಳಿಸಿದ್ದಾರೆ. ಉಪ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕಣಕ್ಕಿಳಿಸಿದ್ದಾರೆ. ಆದರೆ ಅವರಿಬ್ಬರೂ ಸಿಂದಗಿ ಉಪ ಚುನಾವಣೆಗೆ ಮಾತ್ರ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಅದಕ್ಕೆ ಕಾರಣ …

Read More »

ವರುಣನ ಆರ್ಭಟ ಹೆಚ್ಚಳ: ರಾಜ್ಯದಲ್ಲಿ ನಾಳೆಯೂ ಮಳೆ ಅಬ್ಬರ

ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅ.27ರಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶಿವಮೊಗ್ಗ,ಹಾಸನ,ಕೊಡಗು,ಮಂಡ್ಯ,ಮೈಸೂರು, ರಾಮನಗರ,ಚಿಕ್ಕಮಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಹೆಚ್ಚು ಮಳೆಯಾಗಲಿದೆ. ಅರಬ್ಬಿ ಸಮುದ್ರದ ಲಕ್ಷದ್ವೀಪ ಭಾಗದಲ್ಲಿನ ಮೇಲ್ಮೈ ಸುಳಿಗಾಳಿ ಮತ್ತು ಮುಂಗಾರು ಮಾರುತದ ಹಿನ್ನೆಲೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.

Read More »

ಚರ್ಚ್‌ಗಳ ಸಮೀಕ್ಷೆ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ರಾಜ್ಯದಲ್ಲಿರುವ ಚರ್ಚ್‌ಗಳ ಸಮೀಕ್ಷೆ ನಡೆಸಲು ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಶೀಲಿಸಿದ ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಕರ್ನಾಟಕದ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತು ರಾಜ್ ಅವಸ್ತಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ‘ಚರ್ಚ್‌ಗಳು ಇರುವ ವಿಳಾಸ, ಪ್ರಾರ್ಥನಾ ಮಂದಿರ ಇರುವ ಸರ್ವೆ ನಂಬರ್, ಖಾತೆ ಸಂಖ್ಯೆ, ಅಲ್ಲಿರುವ ಪಾದ್ರಿ ಸೇರಿ …

Read More »

ವಿಮಾನ ನಿಲ್ದಾಣದಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ಶಾಹಿದ್​ ಕಪೂರ್​ ಪತ್ನಿ

ಶಾಹಿದ್​ ಕಪೂರ್ ಮತ್ತು ಮೀರಾ ರಜಪೂತ್​ ಅವರು ಮಾಲ್ಡೀವ್ಸ್​ ಪ್ರವಾಸಕ್ಕೆ ಹೋಗಿದ್ದರು. ವಾಪಸ್​ ಬರುವಾಗ ಮುಂಬೈ ಏರ್​ಪೋರ್ಟ್​ನಲ್ಲಿ ಮೀರಾ ಧರಿಸಿದ್ದ ಡ್ರೆಸ್​ ಎಲ್ಲರ ಕಣ್ಣು ಕುಕ್ಕಿದೆ. ಅದು ಟ್ರೋಲ್​ಗೆ ಕಾರಣ ಆಗಿದೆ.​ ಬಾಲಿವುಡ್​ನ ಖ್ಯಾತ ನಟ ಶಾಹಿದ್​ ಕಪೂರ್​ ಅವರ ಪತ್ನಿ ಮೀರಾ ರಜಪೂತ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದ್ದಾರೆ. ಅದಕ್ಕೆಲ್ಲ ಕಾರಣ ಅವರು ಧರಿಸಿರುವ ಬಟ್ಟೆ. ಯಾವ ರೀತಿಯ ಬಟ್ಟೆ ಧರಿಸಬೇಕು ಎಂಬುದು ಅವರವರ ವೈಯಕ್ತಿಕ ವಿಚಾರ. …

Read More »

ಖತಲ್‌ ರಾತ್ರಿ ಮಾಡುವವರೇ ಕಾಂಗ್ರೆಸ್ಸಿಗರು: ಬಸವರಾಜ ಬೊಮ್ಮಾಯಿ

ವಿಜಯಪುರ : ‘ಖತಲ್‌ ರಾತ್ರಿ’ ಮಾಡುವವರೇ ಕಾಂಗ್ರೆಸ್ ಪಕ್ಷದವರು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಸಿಂದಗಿ ಮತಕ್ಷೇತ್ರದ ಕನ್ನೂಳ್ಳಿ ಗ್ರಾಮದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದ ಅಂಗವಾಗಿ ನಡೆದ ರೋಡ್ ಶೋ ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ವಾರ್ಥ ರಾಜಕಾರಣ ಮಾಡಿ, ಗಳಿಸಿದ್ದ ಹಣವನ್ನು ಹಂಚುತ್ತಾರೆ ಎಂದು ದೂರಿದರು. ‘ಡಿಕೆಶಿ ವಿವಿಧ ಉಪ ಚುನಾವಣೆಗಳಲ್ಲಿ ಗೋಣಿ ಚೀಲದಲ್ಲಿ ಹಣ ಹಂಚಿದ್ದಾರೆ. ಅವರ ಅನುಭವವನ್ನು ಹೇಳುವ …

Read More »

ಹಾನಗಲ್ ಜನರ ಪುರುಷಾರ್ಥಕ್ಕೆ ಪ್ರಣಾಳಿಕೆ ಮಾಡಿದ್ದೇವೆ : ಸಿಎಂ ತಿರುಗೇಟು

ಹಾವೇರಿ : ”ಹಾನಗಲ್ಲ ಜನರ ಪುರುಷಾರ್ಥಕ್ಕೆ ಪ್ರಣಾಳಿಕೆ ಮಾಡಿದ್ದೇವೆ.ಯಾವಾಗಲೂ ನಾವು ಅಭಿವೃದ್ಧಿ ಪರವಾಗಿ ಕೆಲಸ ಮಾಡಿದ್ದೇವೆ” ಎಂದು ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ, ”ಯಾವ ಪುರುಷಾರ್ಥಕ್ಕೆ ಹಾನಗಲ್ ಚುನಾವಣಾ ಪ್ರಣಾಳಿಕೆ ಮಾಡಿದ್ದಿರಿ” ಎಂಬ ಡಿ. ಕೆ. ಶಿವಕುಮಾರ್ ಅವರ ಹೇಳಿಕೆಗೆ ಈ ತಿರುಗೇಟು ನೀಡಿದ್ದಾರೆ. ”ಕಾಂಗ್ರೆಸ್ ನವರಿಗೆ ಇಂತಹ ಚಿಂತನೆ ಬರುವುದಿಲ್ಲ. ಅದಕ್ಕಾಗಿ ಅವರು ಆರೋಪ ಮಾಡುತ್ತಿದ್ದಾರೆ” ಎಂದರು. ”ಹಾನಗಲ್ಲ ಕ್ಷೇತ್ರದಲ್ಲಿ ಎಂದೆಂದೂ …

Read More »

ಏಕಾಏಕಿ ರನ್ ವೇ ಬದಲಿಸಿ ಬೇರೆ ರನ್ ವೇನಲ್ಲಿ ವಿಮಾನ ಲ್ಯಾಂಡಿಂಗ್ ದುರಂತವೊಂದು ಕ್ಷಣಾರ್ಧದಲ್ಲಿ ತಪ್ಪಿದೆ.

ಬೆಳಗಾವಿ: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಂಭವಿಸಲಿದ್ದ ವಿಮಾನ ದುರಂತವೊಂದು ಕ್ಷಣಾರ್ಧದಲ್ಲಿ ತಪ್ಪಿದೆ. ಸ್ಪೈಸ್ ಜೆಟ್ ವಿಮಾನವೊಂದು ರಾಂಗ್ ರನ್ ವೆನಲ್ಲಿ ನುಗ್ಗಿದೆ ಎಂದು ತಿಳಿದುಬಂದಿದೆ. 26ನೇ ರನ್ ವೇ ನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನವು 8ನೇ ರನ್ ವೇ ನಲಿ ಲ್ಯಾಂಡಿಂಗ್ ಆಗಿದೆ. ಸದ್ಯ 8ನೇ ರನ್ ವೇ ನಲ್ಲಿ ಯಾವುದೇ ವಿಮಾನ ಇರಲಿಲ್ಲ ಹಾಗಾಗಿ ಯಾವುದೇ ಅನಾಹುತ ಸಂಭಿಸಿಲ್ಲ ಎಂದು ತಿಳಿದುಬದಿದೆ. ಏಕಾಏಕಿ ರನ್ ವೇ ಬದಲಿಸಿ ಬೇರೆ …

Read More »