Breaking News

ರಾಜಕೀಯ

ಧಾನಪರಿಷತ್ ಚುನಾವಣೆ ಸಂಬಂಧ ಸಲ್ಲಿಕೆಯಾಗಿದ್ದ ನಾಪಪತ್ರಗಳಲ್ಲಿ ಒಟ್ಟು 20 ಮಂದಿ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಆ ಮೂಲಕ 91 ಅಭ್ಯರ್ಥಿಗಳು ಮೇಲ್ಮನೆ ಚುನಾವಣಾ ಕಣದಲ್ಲಿ ಸ್ಪರ್ಧಿಸಲಿದ್ದಾರೆ.

ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಸಲ್ಲಿಕೆಯಾದ ನಾಮಪತ್ರ ವಾಪಸು ಪಡೆಯಲು ಇಂದು ಕೊನೆಯ ದಿನವಾಗಿದ್ದು, ಒಟ್ಟು 20 ಮಂದಿ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಆ ಮೂಲಕ 91 ಅಭ್ಯರ್ಥಿಗಳು ಮೇಲ್ಮನೆ ಚುನಾವಣಾ ಕಣದಲ್ಲಿ ಸ್ಪರ್ಧಿಸಲಿದ್ದಾರೆ. ವಿಧಾನಪರಿಷತ್‌ನ 20 ಕ್ಷೇತ್ರಗಳಿಂದ ಒಟ್ಟು 121 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು. ಒಟ್ಟು 121 ಅಭ್ಯರ್ಥಿಗಳಿಂದ 215 ನಾಮಪತ್ರ ಸ್ವೀಕಾರ ಮಾಡಲಾಗಿತ್ತು. ಈ ಪೈಕಿ 119 ಪುರುಷರು ಹಾಗೂ ಇಬ್ಬರು ಮಹಿಳೆಯರು ನಾಮಪತ್ರ ಸಲ್ಲಿಕೆ ಮಾಡಿದ್ದರು. …

Read More »

ಬುದ್ದಿ ಹೇಳಿದ್ದಕ್ಕೆ ನೇಣಿಗೆ ಶರಣಾದ ತಮ್ಮ: ಮನನೊಂದು ಆತ್ಮಹತ್ಯೆ ಮಾಡಿಕೊಂಡ ಅಕ್ಕ

ಹಾವೇರಿ: ಜಿಲ್ಲೆಯ ಬ್ಯಾಡಗಿಯ ವಿನಾಯಕ ನಗರದಲ್ಲಿ ಅಕ್ಕ- ತಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 16 ವರ್ಷದ ನಾಗರಾಜ ಚಲವಾದಿಗೆ ಅಕ್ಕ ಭಾಗ್ಯಶ್ರೀ ಚೆನ್ನಾಗಿ ಓದು ಶಾಲೆಗೆ ಹೋಗು ಎಂದು ಬುದ್ದಿ ಹೇಳಿದ್ದಾಳೆ. ಇದರಿಂದ ಮನನೊಂದ ನಾಗರಾಜ ಮನೆಯ ಮೇಲಿನ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ. ತಮ್ಮನ ಸಾವಿನ ಸುದ್ದಿ ತಿಳಿದು ಮನೆಗೆ ಬಂದ ಅಕ್ಕ 18 ವರ್ಷದ ಭಾಗ್ಯಶ್ರಿ ಮನನೊಂದು ನೇಣಿಗೆ ಶರಣಾಗಿದ್ದಾಳೆ. ಬ್ಯಾಡಗಿ ಪಟ್ಟಣದ ವಿನಾಯಕ ನಗರದಲ್ಲಿ ನಡೆದ ಘಟನೆ ತಡವಾಗಿ …

Read More »

ರಾಜ್ಯ ಸರ್ಕಾರದಿಂದ ಶಾಲಾ ಮಕ್ಕಳಿಗೆ ಡಿಸೆಂಬರ್ ನಿಂದ ಮೊಟ್ಟೆ, ಬಾಳೆಹಣ್ಣು ವಿತರಣೆ

ಬೆಂಗಳೂರು : ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಡಿಸೆಂಬರ್ ತಿಂಗಳಿನಿಂದ ಬಾಳೆಹಣ್ಣು, ಮೊಟ್ಟೆ ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರದ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ 7 ಜಿಲ್ಲೆಗಳಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಯಾದಗಿರಿ, ಕೊಪ್ಪಳ, ರಾಯಚೂರು, ಬೀದರ್ , ಕಲಬುರಗಿ, ವಿಜಯಪುರ, ಬಳ್ಳಾರಿ ಜಿಲ್ಲೆಯಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಏಳು ಜಿಲ್ಲೆಗಳ 14 ಲಕ್ಷಕ್ಕೂ ಹೆಚ್ಚು ಮಕ್ಕಳು ರಕ್ತಹೀನತೆಯಿಂದಲೂ ಬಳಲುತ್ತಿರುವ ಬಗ್ಗೆ ತಿಳಿದುಬಂದಿದೆ ಈ ಹಿನ್ನೆಲೆ …

Read More »

ಪ್ರಧಾನಮಂತ್ರಿ ಗರಿಬ್ ಕಲ್ಯಾಣ ಯೋಜನೆ: 5 ಕೆಜಿ ಉಚಿತ ರೇಷನ್ ಇನ್ನೂ 4 ತಿಂಗಳು ಮುಂದುವರಿಕೆ

ನವದೆಹಲಿ: ಕೊರೋನಾ ಸಂಕಷ್ಟದ ಕಾರಣದಿಂದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ 5 ಕೆಜಿ ಉಚಿತ ಪಡಿತರ ವಿತರಿಸುವ ಯೋಜನೆಯನ್ನು ಮುಂದಿನ ವರ್ಷದ ಮಾರ್ಚ್ ವರೆಗೆ ವಿಸ್ತರಿಸಲಾಗಿದೆ. ಗರಿಬ್ ಕಲ್ಯಾಣ ಯೋಜನೆಯಡಿ 80 ಕೋಟಿ ಪಡಿತರ ಫಲಾನುಭವಿಗಳಿಗೆ ಉಚಿತ ಪಡಿತರ ನೀಡಲಾಗುತ್ತದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕಾಗಿ 53,344 ಕೋಟಿ ರೂ. ವೆಚ್ಚ ಮಾಡಲಾಗುವುದು. ಇದರೊಂದಿಗೆ ಉಚಿತ ಪಡಿತರ ವಿತರಣೆ ಮಾಡಲು …

Read More »

ಇಂದು ಸಿಎಂ ಬಸವರಾಜ ಬೊಮ್ಮಾಯಿ ದಾವಣಗೆರೆ ಪ್ರವಾಸ : ಸಂವಿಧಾನ ದಿವಸ ಆಚರಣೆಯಲ್ಲಿ ಭಾಗಿ

ದಾವಣಗೆರೆ : ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾವಣಗೆರೆಗೆ ಭೇಟಿ ನೀಡಲಿದ್ದಾರೆ.ಬೆಳಗ್ಗೆ 11 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂವಿಧಾನ ದಿವಸ ಆಚರಣೆ ಅಂಗವಾಗಿ ಭಾರತ ಸಂವಿಧಾನದ ಪ್ರಸ್ತಾವನೆ ಓದುವ ಕಾರ್ಯಕ್ರಮದಲ್ಲಿ ಭಾಗವಹಿಸುವರು.   ಮುಖ್ಯಮಂತ್ರಿಗಳು ನ.26 ರ ಬೆಳಿಗ್ಗೆ ಬೆಂಗಳೂರಿನಿಂದ ಹೊರಟು ತುಮಕೂರು-ಚಿತ್ರದುರ್ಗ ಮಾರ್ಗವಾಗಿ ಬೆಳಿಗ್ಗೆ 10.30 ಕ್ಕೆ ದಾವಣಗೆರೆಗೆ ಆಗಮಿಸಲಿದ್ದಾರೆ. ಬೆಳಿಗ್ಗೆ 11.30 ಕ್ಕೆ ನಗರದ ಹದಡಿ ರಸ್ತೆಯಲ್ಲಿರುವ ಎಸ್.ಎಸ್.ಕಲ್ಯಾಣ ಮಂಟಪದಲ್ಲಿ ಪಕ್ಷದ ವತಿಯಿಂದ ಆಯೋಜಿಸಿರುವ ಶಾಸಕರಾದ …

Read More »

150 ರೂ. ಗಡಿ ದಾಟಿದ ಟೊಮೆಟೋ ದರ!

ದಕ್ಷಿಣ ಭಾರತದಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಚೆನ್ನೈನಲ್ಲಿ ಪ್ರತಿ ಕೆಜಿ ಟೊಮೊಟೋ ದರವನ್ನು 150 ರೂ..ಗೆ ಮುಟ್ಟಿದೆ. ಇತ್ತ ಕರ್ನಾಟಕದಲ್ಲಿ ಟೊಮೆಟೋ ಆಗಮನ ಸ್ಥಗಿತವಾಗಿರುವುದು, ಕೃಷ್ಣಗಿರಿಯಲ್ಲಿ ಮಳೆಯಿಂದಾಗಿ ಬೆಳೆ ನಷ್ಟವಾದ ಕಾರಣ, ಬೇಡಿಕೆಗೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ.   ಮಳೆ ಆರಂಭಕ್ಕಿಂತ ಮೊದಲು ಪ್ರತೀ ಕೆಜಿ ಟೊಮ್ಯಾಟೊಗೆ ೨೦ ರು. ನಂತೆ ಮಾರಾಟ ಮಾಡಲಾಗುತಿತ್ತು. ಏಕಾಏಕಿ ಆರಂಭವಾದ ಮಳೆ ತರಕಾರಿ ಬೆಲೆಗಳನ್ನು ಗಗನಕ್ಕೆ ಏರುವಂತೆ ಮಾಡಿತ್ತು. ಇದರಿಂದ …

Read More »

ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಶಬ್ಧಕೇಳಿಬಂದಿದ್ದು, ಹಲವೆಡೆ ಭೂಮಿ ಕಂಪಿಸಿದ ಅನುಭವ.

ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಶಬ್ಧವೊಂದು ಕೇಳಿಬಂದಿದ್ದು, ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಆರ್.ಆರ್.ನಗರ, ಮಾಗಡಿ, ಹೆಮ್ಮಿಗೆಪುರ, ಕಗ್ಗಲಿಪುರ, ಕೆಂಗೇರಿ, ಬಿಡದಿ ಭಾಗಗಳಲ್ಲಿ ಹಲವೆಡೆ ಭೂಗರ್ಭದೊಳಗಿಂದ ಭಾರಿ ಶಬ್ಧ ಕೇಳಿಬಂದಿದ್ದು, ಕೆಲಕಾಲ ಭೂಮಿ ಕಂಪಿಸಿದೆ ಎಂದು ಹೇಳಲಾಗುತ್ತಿದೆ.   ಇದರಿಂದ ಜನರು ಆತಂಕಕ್ಕೀಡಾಗಿ ಮನೆಯಿಂದ ಹೊರಗೋಡಿ ಬಂದ ಘಟನೆ ನಡೆದಿದೆ. ಮಧ್ಯಾಹ್ನ 12.15ರ ಸುಮಾರಿಗೆ ಭಾರಿ ಶಬ್ಧದೊಂದಿಗೆ ಭೂಮಿ ಕಂಪಿಸಿದೆ. ಬೆಂಗಳೂರಿನ ಹಲವೆಡೆ ಹಾಗೂ ರಾಮನಗರದಲ್ಲಿ ಭೂಕಂಪನದ ಅನುಭವವಾಗಿದೆ. ಆದರೆ ರಿಕ್ಟರ್ …

Read More »

ಮೋದಿ ಸರ್ಕಾರಕ್ಕೆ ಜ.26ರವರೆಗೆ ಗಡುವು: MSPಗಾಗಿ ಒತ್ತಾಯ

ನವದೆಹಲಿ ನವೆಂಬರ್ 26: ದೆಹಲಿ ಗಡಿ ಭಾಗದಲ್ಲಿ ರೈತರ ಪ್ರತಿಭಟನೆ ಮುಂದುವರೆದಿದ್ದು, ಬೇಡಿಕೆ ಈಡೇರಿಕೆಗಾಗಿ ಕೇಂದ್ರ ಸರ್ಕಾರಕ್ಕೆ ರೈತರು ಗಡುವು ಕೊಟ್ಟಿದ್ದಾರೆ. ಸಂಸತ್ತಿನ ಅಧಿವೇಶನ ನಡೆಯುವವರೆಗೂ ಸರ್ಕಾರಕ್ಕೆ ಯೋಚಿಸಲು ಮತ್ತು ಅರ್ಥಮಾಡಿಕೊಳ್ಳಲು ಸಮಯವಿದೆ. ಕೇಂದ್ರ ಸರ್ಕಾರಕ್ಕೆ ಜನವರಿ 26 ರವರೆಗೆ ಬೇಡಿಕೆ ಈಡೇರಿಕೆಗೆ ಸಮಯ ನೀಡಿದ್ದೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗುವ …

Read More »

ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ ವಿಪ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ

ಬೆಳಗಾವಿ : ಡಿ. 10 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಮತ್ತು ಕಾಂಗ್ರೇಸ್ ಅಭ್ಯರ್ಥಿಯ ಸೋಲಿಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಗುರುವಾರ ರಾತ್ರಿ ಸಭೆ ನಡೆಸಲಾಯಿತು. ನಗರದ ಖಾಸಗಿ ಹೊಟೇಲ್‍ನಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಅವರುಗಳು ಪಾಲ್ಗೊಂಡು …

Read More »

ಕಬ್ಬು ಪೂರೈಸಿದ ಬಾಕಿ ಹಣ ನೀಡುವಂತೆ ಆಗ್ರಹಿಸಿ ರಾಮದುರ್ಗ ಶಾಸಕ ಮಹದೇವಪ್ಪ ಯಾದವಾಡ ಮನೆ ಎದುರು ರೈತರು ಪ್ರತಿಭಟನೆ

ಬೆಳಗಾವಿ: ಕಬ್ಬು ಪೂರೈಸಿದ ಬಾಕಿ ಹಣ ನೀಡುವಂತೆ ಆಗ್ರಹಿಸಿ ರಾಮದುರ್ಗ ಶಾಸಕ ಮಹದೇವಪ್ಪ ಯಾದವಾಡ ಮನೆ ಎದುರು ರೈತರು ಪ್ರತಿಭಟನೆ ನಡೆಸಿದರು. ಉದಪುಡಿ ಗ್ರಾಮದ ಬಳಿಯಿರುವ ಶಿವಸಾಗರ ಸಹಕಾರಿ ಸಕ್ಕರೆ ಕಾರ್ಖಾನೆಗೆ ರೈತರು ಪೂರೈಸಿದ್ದ ಕಬ್ಬಿಗೆ ಈವರೆಗೆ ಹಣ ನೀಡಿಲ್ಲ. ಕಾರ್ಖಾನೆ ಅಧ್ಯಕ್ಷರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ ರೈತರು, ಬಾಕಿ ಹಣ ನೀಡುವವರೆಗೂ ಕಾರ್ಖಾನೆ ಮುಚ್ಚುವಂತೆ ಆಗ್ರಹಿಸಿದರು. ಸಕ್ಕರೆ ಸಚಿವರಿಂದ ಸೂಕ್ತ ಭರವಸೆ ಸಿಗುವವರೆಗೂ ಮನೆಗಳಿಗೆ ತೆರಳುವುದಿಲ್ಲ ಎಂದು ಧರಣಿ …

Read More »