Breaking News

ರಾಜಕೀಯ

ವಿಶ್ವದಾಧ್ಯಂತ ಭೀತಿ ಮೂಡಿಸಿರುವ ಒಮಿಕ್ರಾನ್‍ಗೆಮೊದಲ ಬಲಿ:

ವಿಶ್ವದಾಧ್ಯಂತ ಭೀತಿ ಮೂಡಿಸಿರುವ ಒಮಿಕ್ರಾನ್‍ಗೆ ಇಂಗ್ಲೆಂಡ್‍ನಲ್ಲಿ ಮೊದಲ ರೋಗಿ ಸಾವನ್ನಪ್ಪಿದ್ದಾರೆ. ಇಂಗ್ಲೆಂಡ್‍ನಲ್ಲಿ ಕೊವಿಡ್ ಲಸಿಕಾ ಅಭಿಯಾನ ತೀವ್ರಗತಿಯಲ್ಲಿ ನಡೆಯುತ್ತಿದ್ದರೂ ಒಮಿಕ್ರಾನ್‍ನಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮಾಹಿತಿ ನೀಡಿದ್ದಾರೆ. ಕಳೆದ ವರ್ಷದ ಆರಂಭದಿಂದ ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾವೈರಸ್ ಇದೀಗ ರೂಪಾಂತರಿ ವೈರಸ್‍ಗಳ ರೂಪ ತಾಳಿ ಮತ್ತೆ ವಿಶ್ವವನ್ನು ಕಂಗೆಡಿಸುತ್ತಿದೆ. ಹೊಸದಾಗಿ ಪತ್ತೆಯಾಗಿರುವ ಕೊವಿಡ್ ರೂಪಾಂತರಿಯಾದ ಒಮಿಕ್ರಾನ್‍ನಿಂದ ಮತ್ತೆ ಲಾಕ್‍ಡೌನ್ ಉಂಟಾಗಬಹುದು ಎಂಬ ಭೀತಿ …

Read More »

ಸಿಟಿ ಸರ್ವೆ ಆಫೀಸ್‍ಲ್ಲಿ ಅಕ್ರಮ, ಲ್ಯಾಂಡ್ ಮಾಫಿಯಾ ?ಅಭಯ್ ಪಾಟೀಲ್

ಸಿಟಿ ಸರ್ವೇ ಆಫೀಸಲ್ಲಿ ಕಳೆದ 10 ವರ್ಷಗಳಲ್ಲಿ ನಡೆದ ಪ್ರಕರಣಗಳನ್ನು ಕುರಿತಂತೆ ತನಿಖೆ ಮಾಡಲು ತನಿಖಾಧಿಕಾರಿಗಳನ್ನು ನೇಮಿಸಿ ತನಿಖೆ ನಡೆಸಿ ಸೂಕ್ರ ಕ್ರಮ ಜರುಗಿಸುವ ನಿಟ್ಟಿನಲ್ಲಿ ಸರಿಯಾದ ಉತ್ತರವನ್ನು ಕಂದಾಯ ಸಚಿವರು ಒದಗಿಸಿಲ್ಲ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಗಮನ ಸೆಳೆಯುವ ಪ್ರಶ್ನೆ ಕೇಳಿದರು. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆಗಳನ್ನು ಕುರಿತಂತೆ ಚಚೆ ಮಾಡಲಾಗುತ್ತಿದೆ. ಈ ವೇಳೆ ಬೆಳಗಾವಿ ದಕ್ಷಿಣ ಶಾಸಕ …

Read More »

ಲಾಕ್ ಡೌನ್ ಸಂಧರ್ಭದಲ್ಲಿ ಕೂಡ ಸರ್ಕಾರ ಮೇದಾರ ಸಮಾಜಕ್ಕೆ ಯಾವುದೇ ಆರ್ಥಿಕ ಸಹಾಯ ನೀಡಿಲ್ಲ.

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲಾ ಮೇದಾರ ಸಮಾಜ ಒಕ್ಕೂಟ ವತಿಯಿಂದ ಸುವರ್ಣ ಗಾರ್ಡನ್ ನಲ್ಲಿ ಮನವಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಜಿಲ್ಲೆಯ ಸಮಸ್ತ ಮೇದಾರ ಸಮಾಜದ ಕುಲಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಾಜದ ಮುಖಂಡರು ಮನವಿ ಮಾಡಿಕೊಂಡರು. ಸೋಮವಾರ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮೇದಾರ ಸಮಾಜದ ಮುಖಂಡರಾದ ಮಲ್ಲೇಶಿ ಕೊರಡೆ ಅವರು ಮೇದಾರ ಸಮಾಜ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ,ಹಾಗೂ ರಾಜಕೀಯವಾಗಿ ಹಿಂದುಳಿದಿದೆ.ಆದ್ದರಿಂದ ಸಮಾಜದ ಶ್ರೇಯೋಭಿವೃದ್ದಿಗಾಗಿ ಪ್ರತ್ಯೇಕ …

Read More »

ಜೈಲಿಗಲ್ಲ ನೇಣಿಗೆ ಹಾಕಿದರೂ #MES ವಿರುದ್ಧ ನಮ್ಮ ಹೋರಾಟ ನಿಲ್ಲದು.  ಸಂಪತಕುಮಾರ್ ದೇಸಾಯಿ ಮತ್ತು ಪದಾಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲ..

ಬೆಳಗಾವಿ – ನಾಡದ್ರೋಹಿ ಎಮ್‌ಇಎಸ್‌ ಮುಖಂಡ ದೀಪಕ್ ದಳವಿ ಮತ್ತಿತರರ ಮುಖಕ್ಕೆ ಮಸಿ ಬಳಿದ ಪ್ರಕರಣದಲ್ಲಿ ಬಂಧಿಸಿರುವ ಕರ್ನಾಟಕ ನವನಿರ್ಮಾಣ ಸೇನೆ ಬೆಳಗಾವಿ ಜಿಲ್ಲಾ ಯುವ ಘಟಕ ಅಧ್ಯಕ್ಷ ಸಂಪತಕುಮಾರ್ ದೇಸಾಯಿ ಮತ್ತು ಪದಾಧಿಕಾರಿಗಳ ಮೇಲೆ ಕೊಲೆ ಯತ್ನ (ಸೆಕ್ಷನ್ 307) ಪ್ರಕರಣ ದಾಖಲಿಸಲಾಗಿದೆ! ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿರುವ ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾ ಶಂಕರ ಪಾಟೀಲ ,  ಕರ್ನಾಟಕ ನವನಿರ್ಮಾಣ ಸೇನೆ ಬೆಳಗಾವಿ …

Read More »

ಗೃಹ ಸಚಿವ ಆರಗ ಜ್ಞಾನೇಂದ್ರ ಪೂರ್ವಭಾವಿಯಾಗಿ, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ

ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂದಲ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಪೂರ್ವಭಾವಿಯಾಗಿ, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಇಂದು ಬೆಳಗ್ಗೆ ಸಭೆ ನಡೆಸಿದರು. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ, ಅಧಿವೇಶನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ, ಅವಕಾಶವಿಲ್ಲದಂತೆ, ಸುಲಲಿತವಾಗಿ ನಡೆಯಲು, ತೆಗೆದುಕೊಂಡಿರುವ ರಕ್ಷಣಾ ಕ್ರಮಗಳ ಬಗ್ಗೆ, ಸಚಿವರು ಪರಿಚಯ ಪಡೆದುಕೊಂಡರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಒಳಾಡಳಿತ, ರಜನೀಶ್ ಗೋಯಲ್, ಎಡಿಜಿಪಿ ಕಾನೂನು ಮತ್ತು ಸುವ್ಯವಸ್ಥೆ, ಪ್ರತಾಪ್ ರೆಡ್ಡಿ, ಸತೀಶ್ …

Read More »

21 ವರ್ಷಗಳ ಬಳಿಕ ಭಾರತದ ಬೆಡಗಿಗೆ ವಿಶ್ವಸುಂದರಿ ಪಟ್ಟ

ನವದೆಹಲಿ: 21 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ಯೂನಿವರ್ಸ್ ಪಟ್ಟ. ಭಾರತದ ಹರ್ನಾಜ್ ಸಂಧು 2021 ರ ವಿಶ್ವ ಸುಂದರಿ ಪಟ್ಟ ದೊರಕಿದ್ದು . 21 ವರ್ಷಗಳ ನಂತರ ಕಿರೀಟ ತಂದಿದ್ದಾರೆ. ಚಂಡೀಗಢದ ಹರ್ನಾಜ್ ಸಂಧು 2021 ರ ವಿಶ್ವ ಸುಂದರಿ ಆಗಿದ್ದಾರೆ.ಅವರು ಮಿಸ್ ಯೂನಿವರ್ಸ್ 2020 ರ ಕಿರೀಟವನ್ನು ಮೆಕ್ಸಿಕೋದ ಆಂಡ್ರಿಯಾ ಮೆಜಾ ಅವರಿಂದ ಪಡೆದರು.   ಹರ್ನಾಜ್ ಸಂಧು ಅವರಿಗಿಂತ ಮೊದಲು, ಲಾರಾ ದತ್ತಾ 2000 ರಲ್ಲಿ ವಿಶ್ವ …

Read More »

ಮಕ್ಕಳಿಗೆ ಬಾಳೆಹಣ್ಣು ಅಥವಾ ಕೆಎಂಎಫ್‌ನ ಕಡ್ಲೆ ಮಿಠಾಯಿ ಸಾಧ್ಯತೆ

ಬೆಳಗಾವಿ: ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ 1ರಿಂದ 8ನೇ ತರಗತಿವರೆಗಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 14 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ನೀಡುತ್ತಿರುವ ಕೋಳಿಮೊಟ್ಟೆ/ ಬಾಳೆಹಣ್ಣು ವಿತರಣೆ ಮಾಡಲಾಗುತ್ತಿದೆ.ಅನುದಾನ ಲಭ್ಯತೆ ಆಧಾರದ ಮೇಲೆ ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆ ಹಣ್ಣು ಹಾಗೂ ಕಡ್ಲೆ ಮಿಠಾಯಿ ಎರಡೂ ನೀಡಲು ಸಹ ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಿದೆ ಇನ್ನು ಯೋಜನೆಯಲ್ಲಿ ಸದ್ಯದಲ್ಲೇ ಹೊಸ ಆಯ್ಕೆಯಾಗಿ ಕೆಎಂಎಫ್‌ನ ಕಡ್ಲೆ ಮಿಠಾಯಿ …

Read More »

2 ಡೋಸ್ ಲಸಿಕೆ ಪಡೆದಿದ್ದವರಿಗೆ ಮಾತ್ರ ಸುವರ್ಣ ಸೌಧಕ್ಕೆ ಪ್ರವೇಶ

ಬೆಳಗಾವಿ: ಇಂದಿನಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ವಿಧಾನ ಮಂಡಲದ ಅಧಿವೇಶನ ಆರಂಭಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಸುವರ್ಣ ಸೌಧದ ನಾಲ್ಕು ದ್ವಾರಗಳಲ್ಲಿ ಕಟ್ಟು ನಿಟ್ಟಿನ ತಪಾಸಣೆ ನಡೆಸುತ್ತಿದ್ದು, ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರವೇ ಸುವರ್ಣ ಸೌಧ ಪ್ರವೇಶಕ್ಕೆ ಅನುಮತಿಸಾಗುತ್ತಿದೆ.ಸುವರ್ಣ ಸೌಧ ಪ್ರವೇಶಿಸೋ ಪ್ರತಿಯೊಬ್ಬರನ್ನ ತಪಾಸಣೆಗೆ ಒಳಪಡಿಸುತ್ತಿದ್ದಾರೆ.   ಈ ಸಂಬಂಧ ತಪಾಸಣೆ ಬಿಗಿಗೊಳಿಸಿರುವಂತ ಪೊಲೀಸರು, ಜತೆಗೆ ಕೊರೋನಾ 2 ಡೋಸ್ ಲಸಿಕೆ ಇಲ್ಲವೇ ನೆಗೆಟಿವ್ ವರದಿಯನ್ನು ತೋರಿಸಿದರೆ ಮಾತ್ರವೇ …

Read More »

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹಲವು ನಿಣರ್ಯ ತೆಗೆದುಕೊಳ್ಳುತ್ತೇವೆ : ಸಿಎಂ

ಬೆಳಗಾವಿ:ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪ್ರಸಕ್ತ ವಿಧಾನಮಂಡಲದ ಅಧಿವೇಶನದಲ್ಲಿ ಕೆಲವು ನಿಣರ್ಯಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.ಅಧಿವೇಶನದಲ್ಲಿ ಸರ್ಕಾರ ಕೆಲವು ವಿಧೇಯಕಗಳನ್ನು ಮಂಡಿಸಲಿದೆ. ಹಾಗೆಯೇ ಉತ್ತರ ಕರ್ನಾಟಕದ ಅಭಿವೃದ್ದಿ ಕುರಿತ ಯೋಜನೆಗಳ ಬಗ್ಗೆಯೂ ಚರ್ಚೆ ಮಾಡಲು ಸಿದ್ದವಿದೆ ಎಂದು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಸಿದ್ದವಿದ್ದು, ಹಲವು ಯೋಜನೆಗಳನ್ನು ಜಾರಿಗೆ ತರಲು ಕ್ರಮ ಕೈಗೊಳ್ಳುತ್ತೇನೆ. ಸದನದ ಮೂಲಕ ಈ ಭಾಗದ ಜನರು ನಿರೀಕ್ಷೆ …

Read More »

ಯಾರಿಗೇ ಆಗಲಿ ಬಲವಂತವಾಗಿ ಮತಾಂತರ ಮಾಡಿದ್ರೆ ಅದು ಕಾನೂನು ಮತ್ತು ವೈಯಕ್ತಿಕವಾಗಿ ವಿರೋಧ ಇದೆ ಎಂದ ಎಂ. ಎಲ್. ಸಿ ತಾರಾ

ಯಾರಿಗೇ ಆಗಲಿ ಬಲವಂತವಾಗಿ ಮತಾಂತರ ಮಾಡಿದ್ರೆ ಅದು ಕಾನೂನು ಮತ್ತು ವೈಯಕ್ತಿಕವಾಗಿ ವಿರೋಧ ಇದೆ ಎಂದು ಎಂ. ಎಲ್. ಸಿ ತಾರಾ ಹೇಳಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ಮತಾಂತರ ಅನ್ನೋದು ನಾವು ಹುಟ್ಟಿನಿಂದ ಬಂದ ಧರ್ಮವೇ ನಮ್ಮ ಧರ್ಮ ಆಗಿರುತ್ತದೆ ಆದ್ರೆ ಯಾರದೋ ಬಲವಂತಕ್ಕಾಗಿ, ಅಥವಾ ಎಮೋಷನಲ್ ಬ್ಲಾಕ್ ಮೇಲ್ ಆಗಲಿ ಬೇರೆ ಬೇರೆ ಅನುಕೂಲ ಮಾಡೋದಾಗಿ ಆಸೆ ಆಮಿಷ ಒಡ್ಡಿ ಮತಾಂತರ ಮಾಡೋದು ಕಾನೂನು ವಿರುದ್ಧ …

Read More »