Breaking News

ರಾಜಕೀಯ

ನನಗೆ ಗೃಹ ಖಾತೆ ಕೊಟ್ಟು ನೋಡಿ, ಒಬ್ಬನೂ ಕಮಕ್ ಕಿಮಕ್ ಎನ್ನದಂತೆ ಮಾಡುತ್ತೇನೆ: ಯತ್ನಾಳ್

ವಿಜಯಪುರ: ರಾಜ್ಯದಲ್ಲಿ ಕೋಮು ಗಲಭೆಗೆ ಸಂಪೂರ್ಣ ಕಡಿವಾಣ ಹಾಕಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನಗೆ ಗೃಹ ಖಾತೆ ಕೊಟ್ಟು ನೋಡಲಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಂಭಾವಿತ ವ್ಯಕ್ತಿ. ಅವರಿಗೆ ಕಂದಾಯ, ಅರಣ್ಯ ಖಾತೆಗಳು ಸೂಕ್ತ ಎಂದರು. ರಾಜ್ಯದಲ್ಲಿ ಪದೇ ಪದೇ ಕೋಮು ಸೌಹಾರ್ಧಕ್ಕೆ ಧಕ್ಕೆ ಉಂಟಾಗುತ್ತಿವೆ. ಮತೀಯ …

Read More »

ನಾಲಿಗೆ ಹರಿಬಿಟ್ಟ ಮಹಾ ಸಚಿವ; ಶಿವಸೇನೆಯಿಂದ ಕರ್ನಾಟಕಕ್ಕೆ ತಕ್ಕ ಪಾಠ ಎಂದು ಬೆದರಿಕೆ

ಮುಂಬೈ: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ, ಶಿವಸೇನೆ ಉದ್ಧಟತನದ ಬೆನ್ನಲ್ಲೇ ಇದೀಗ ಮಹಾರಾಷ್ಟ್ರ ಸಚಿವರೊಬ್ಬರು ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ. ಕರ್ನಾಟಕಕ್ಕೆ ಶಿವಸೈನಿಕರು ತಕ್ಕ ಪಾಠ ಕಲಿಸಲಿದ್ದಾರೆ. ಶಿವಸೇನೆ ಕಾನೂನು ಕೈಗೆತ್ತಿಕೊಂಡರೆ ಅದಕ್ಕೆ ಕರ್ನಾಟಕ ಸರ್ಕಾರವೇ ನೇರ ಹೊಣೆಯಾಗಲಿದೆ. ನಮ್ಮ ಕಾರ್ಯಕರ್ತರು ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ಏಕನಾಥ ಶಿಂಧೆ ತಿಳಿಸಿದ್ದಾರೆ. ಬೆಳಗಾವಿ ಹಿಂಸಾಚಾರ ಪ್ರಕರಣದ ಬೆನ್ನಲ್ಲೇ ಮಾತನಾಡಿದ್ದ ಸಿಎಂ ಬಸವರಾಜ್ …

Read More »

ಗ್ರಾಮಪಂಚಾಯಿತಿಗಳಿಗೆ ಮಂಜೂರಾಗಿದ್ದ 1.19 ಲಕ್ಷ ಮನೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.

ಬೆಂಗಳೂರು : ವಸತಿ ರಹಿತರಿಗೆ ರಾಜ್ಯ ಸರ್ಕಾರವು (State Government) ಬಿಗ್ ಶಾಕ್ ನೀಡಿದ್ದು, ಗ್ರಾಮಪಂಚಾಯಿತಿಗಳಿಗೆ ಮಂಜೂರಾಗಿದ್ದ 1.19 ಲಕ್ಷ ಮನೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.   ರಾಜ್ಯದ ಪ್ರತಿ ಗ್ರಾಮಪಂಚಾಯಿತಿಗೆ 20 ಮನೆಗಳನ್ನು ಮಂಜೂರು ಮಾಡಿ 2018-19 ನೇ ಸಾಲಿನಲ್ಲಿ ಮೈತ್ರಿ ಸರ್ಕಾರ ಘೋಷಣೆ ಹೊರಡಿಸಿತ್ತು. ಆದರೆ ಇದೀಗ ರಾಜ್ಯ ಬಿಜೆಪಿ ಸರ್ಕಾರ ಯೋಜನೆಯನ್ನೇ ರದ್ದು ಮಾಡಿದೆ ಈ ಮೂಲಕ ಮನೆ ನಿರೀಕ್ಷೆಯಲ್ಲಿದ್ದ ವಸತಿ ರಹಿತರಿಗೆ ಬಿಗ್ …

Read More »

ಡಿ. 24 ರಿಂದ ಜ. 1 ರವರೆಗೆ ಚಳಿಗಾಲದ ರಜೆ ಘೋಷಣೆ: ಹೈಕೋರ್ಟ್ ಪ್ರಧಾನ ಪೀಠ, ಧಾರವಾಡ, ಕಲಬುರಗಿ ಪೀಠಗಳಿಗೆ ರಜೆ

ಬೆಂಗಳೂರು: ರಾಜ್ಯ ಹೈಕೋರ್ಟ್ ಗೆ ಡಿಸೆಂಬರ್ 24 ರಿಂದ ಜನವರಿ 1 ರ ವರೆಗೆ ಚಳಿಗಾಲದ ರಜೆ ಘೋಷಣೆ ಮಾಡಲಾಗಿದೆ. ಮುಖ್ಯ ನ್ಯಾಯಮೂರ್ತಿಗಳ ಆದೇಶದ ಅನುಸಾರ ನ್ಯಾಯಾಂಗ ರಿಜಿಸ್ಟ್ರಾರ್ ಕೆ.ಎಸ್. ಭರತ್ ಕುಮಾರ್ ನೋಟಿಫಿಕೇಶನ್ ಹೊರಡಿಸಿದ್ದಾರೆ. ಡಿಸೆಂಬರ್ 24 ರಿಂದ ಜನವರಿ 1 ರ ವರೆಗೆ ಹೈಕೋರ್ಟ್ ನ ಬೆಂಗಳೂರು ಪ್ರಧಾನ ಪೀಠ, ಕಲಬುರ್ಗಿ ಮತ್ತು ಧಾರವಾಡ ಪೀಠಗಳಿಗೆ ಚಳಿಗಾಲದ ರಜೆ ಇರುತ್ತದೆ. ರಜೆ ಅವಧಿಯಲ್ಲಿ ದೈನಂದಿನ ಕಲಾಪಗಳು ನಡೆಯುವುದಿಲ್ಲ. …

Read More »

ತರಕಾರಿ ಮಾರುಕಟ್ಟೆಗಳಲ್ಲಿ ಟೊಮೆಟೊ ದರ ಇಳಿಕೆ

ಯಾದಗಿರಿ: ತರಕಾರಿ ಮಾರುಕಟ್ಟೆಗಳಲ್ಲಿ ಟೊಮೆಟೊ ದರ ಇಳಿಕೆಯಾಗಿದ್ದರೆ, ಬದನೆಕಾಯಿ ಬೆಲೆ ಏರಿಕೆಯಾಗಿದೆ. ಸೊಪ್ಪುಗಳ ದರ ಕಳೆದ ವಾರದಂತೆ ಯಥಾಸ್ಥಿತಿ ಇದ್ದರೆ, ತರಕಾರಿ ದರ ಮಾತ್ರ ತುಸು ಏರಿಕೆಯಾಗಿದೆ. ಟೊಮೆಟೊ ದರ ಕೆಜಿಗೆ ಸಗಟುನಲ್ಲಿ ₹30 ಇದ್ದರೆ ಚಿಲ್ಲರೆ ದರ ₹40 ಇದೆ. ಕಳೆದ ವಾರಕ್ಕಿಂತ ₹10 ಇಳಿಕೆಯಾಗಿದೆ. ಆದರೆ, ಬದನೆಕಾಯಿ ದರ ಕಳೆದ ವಾರಕ್ಕಿಂತ ₹30 ಏರಿಕೆಯಾಗಿ ಕೆಜಿಗೆ ₹120 ಚಿಲ್ಲರೆ ದರ ಇದೆ. ಬೆಂಡೆ, ದೊಣ್ಣೆಮೆಣಸಿನಕಾಯಿ, ಎಲೆಕೋಸು, ಹೂಕೋಸು, …

Read More »

ಅಭಯ್ ಪಾಟೀಲ್‍ರನ್ನು ಹಾಡಿ ಹೊಗಳಿದ ಲಕ್ಷ್ಮೀ ಹೆಬ್ಬಾಳ್ಕರ್

ಸ್ಮಾರ್ಟ ಬೆಳಗಾವಿಯನ್ನು ಇನ್ನಷ್ಟು ಸ್ಮಾರ್ಟ ಮಾಡಿದ ಹಿರಿಯರು, ನನ್ನ ಮಾರ್ಗದರ್ಶಕರು, ನನಗೆ ಯಾವತ್ತೂ ಅಭಯ ಅಣ್ಣ ಪಾಟೀಲ್ ಅವರು ಆದರ್ಶ ಎನ್ನುವ ಮೂಲಕ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಭಯ್ ಪಾಟೀಲ್‍ರನ್ನು ಹಾಡಿ ಹೊಗಳಿದರು. ಬೆಳಗಾವಿಯ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೊಸಿಯೇಷನ್ ಬೆಳ್ಳಿ ಹಬ್ಬ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಈ ದೇಶ, ರಾಜ್ಯ, ಜಿಲ್ಲೆ ಕಟ್ಟಬೇಕು ಎಂದರೆ ಮೊದಲ ಹೆಜ್ಜೆ ಇಟ್ಟವರು ಯಾರಾದ್ರೂ ಇದ್ದರೆ …

Read More »

ಅವಧಿ ಮೀರಿದ 7 ಲಕ್ಷರೂ . ಮೌಲ್ಯದ ಮದ್ಯ ನಾಶ

ಅವಧಿ ಮೀರಿದ ಹಾಗೂ ಕೆಎಸ್‌ಬಿಸಿಎಲ್ ಡಿಪೋದಲ್ಲಿ ಬಹಳ ವರ್ಷಗಳಿಂದ ಮಾರಾಟವಾಗದೆ ಉಳಿದಿರುವ ಅಂದಾಜು 7 ಲಕ್ಷ ರೂ . ಮೌಲ್ಯದ ಮದ್ಯವನ್ನು ಇಲ್ಲಿನ ಭೈರಿದೇವರಕೊಪ್ಪದ ಕರ್ನಾಟಕ ರಾಜ್ಯ ಪಾನೀಯ ನಿಗಮದ ಡಿಪೋ ಆವರಣದ ಹೊರಭಾಗದ ಇಂಗು ಗುಂಡಿಯಲ್ಲಿ ಶುಕ್ರವಾರ ನಾಶಪಡಿಸಲಾಯಿತು .  ಅವಧಿ ಮೀರಿದ ಅಂದಾಜು 7.01 ಲಕ್ಷ ರೂ . ಮೌಲ್ಯದ 47 ಪೆಟ್ಟಿಗೆ ಹಾಗೂ 67 ಮದ್ಯದ ಬಾಟಲಿಗಳನ್ನು ನಾಶಪಡಿಸಲಾಯಿತು . ಈ ಸಂದರ್ಭದಲ್ಲಿ ಅಬಕಾರಿ ವಿಭಾಗದ …

Read More »

ಬೈಕ್ ಮೇಲಿಂದ ಸ್ಕೀಡ್ ಆಗಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.

ನಗರದ ಗಬ್ಬೂರು ಬೈಪಾಸ್ ಬಳಿಯಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಪೊಲೀಸ್ ಕಾನ್ಸ್ ಟೇಬಲ್ ಬೈಕ್ ಮೇಲಿಂದ ಸ್ಕೀಡ್ ಆಗಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ದಾಖಲಾಗಿದ್ದರೂ, ಚಿಕಿತ್ಸೆ ಫಲಿಸದೇ ಇಂದು ಬೆಳಗಿನ ಜಾವ ಸಾವಿಗೀಡಾಗಿದ್ದಾರೆ. ಹುಬ್ಬಳ್ಳಿಯ CAR ಹೆಡ್ ಕ್ವಾಟರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಿರಣ ಪಾಟೀಲ ಎಂಬ ಪೊಲೀಸ್, ಅದರಗುಂಚಿಯಿಂದ ಹುಬ್ಬಳ್ಳಿಗೆ ಕರ್ತವ್ಯಕ್ಕೆ ಹಾಜರಾಗುವ ವೇಳೆಯಲ್ಲಿ ಬೈಕ್ ಸ್ಕೀಡ್ ಆಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ …

Read More »

ಎಂಇಎಸ್ ಗೂಂಡಾಗಳು ಡಿಕೆಶಿ ಸ್ನೇಹಿತರು: ಈಶ್ವರಪ್ಪ

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೇಲೆ ದಾಳಿ ಮಾಡಿ, ತೊಂದರೆ ಕೊಡಲು ಪ್ರಯತ್ನಿಸಿದ್ದರೋ ಅಂತಹ 25ರಿಂದ 30 ಜನರನ್ನು ಸರ್ಕಾರ ಬಂಧನ ಮಾಡಿದೆ. ಯಾವ ಕಾರಣಕ್ಕೂ ಇಂತವರನ್ನು ಬಿಡಲು ಸಾಧ್ಯವಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ಶನಿವಾರ ಗದಗನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಈಶ್ವರಪ್ಪ ಕನ್ನಡ ಧ್ವಜ ಸುಟ್ಟಿರುವ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಜೊತೆಗೆ ಮಾತುಕತೆ ನಡೆಸಿ ಪುಂಡರ ಬಗ್ಗೆ ಕ್ರಮ ಕೈಗೊಳ್ಳುವಂತೆ ಹೇಳಿದ್ದೇವೆ. ಯಾವುದೇ ಕಾರಣಕ್ಕೂ …

Read More »

ಎಂಇಎಸ್ ಪುಂಡರ ವಿರುದ್ಧ ಸಿಡಿದೆದ್ದ ಕನ್ನಡಿಗರು

ಬೆಳಗಾವಿ: ಎಂಇಎಸ್ ಪುಂಡರ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಆನಗೋಳ ಚಲೋ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದ್ದಾರೆ. ಬೆಳಗಾವಿಯಲ್ಲಿ ನಿಷೇಧಾಜ್ಞೆ ನಡುವೆಯೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಸುತ್ತಿದ್ದು, ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಎಂಇಎಸ್ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬೀದಿಗಿಳಿದು ಹೋರಾಟ ನಡೆಸಿದ್ದಾರೆ.

Read More »