ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2020 ಮಾರ್ಚ್1ರ ವರೆಗೆ 8.72 ಲಕ್ಷ ಹುದ್ದೆಗಳು ಖಾಲಿ ಇದ್ದವು ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ), ಕೇಂದ್ರ ಲೋಕ ಸೇವಾ ಆಯೋಗ(ಯುಪಿಎಸ್‌ಸಿ) ಮತ್ತು ರೈಲ್ವೆ ನೇಮಕಾತಿ ಮಂಡಳಿಗಳು (ಆರ್‌ಆರ್‌ಬಿ) 2018-19 ಮತ್ತು 2020-21ರ ಅವಧಿಯಲ್ಲಿ 2.65 ಲಕ್ಷ ನೇಮಕಾತಿಗಳನ್ನು ನಡೆಸಿವೆ ಎಂದೂ ಲಿಖಿತ ಉತ್ತರದಲ್ಲಿ …
Read More »ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಮತ್ತೊಂದು ಸಿಹಿಸುದ್ದಿ
ಬೆಂಗಳೂರು : ರಾಜ್ಯ ಸರ್ಕಾರವು ನೋಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಕಾರ್ಮಿಕರಿಗೆ ಸ್ವ ಉದ್ಯೋಗ ಮಾಡುವ ದೃಷ್ಟಿಯಿಂದ ಮುಂಬರುವ ಬಜೆಟ್ ನಲ್ಲಿ ಹೊಲಿಗೆಯಂತ್ರ ನೀಡುವ ಯೋಜನೆ ಘೋಷಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸಚಿವ ಶಿವರಾಮ ಹೆಬ್ಬಾರ್, ಕಾರ್ಮಿಕರಿಗೆ ಹೊಲಿಗೆ ಯಂತ್ರ ಯೋಜನೆ ಜಾರಿಗೆ 15 ಕೋಟಿ ರೂ. ಮೀಸಲಿಡಲಾಗಿದೆ. …
Read More »ಮಳೆ ಬಡಿದು ಸೊಸೆಯಾಗಿ ಬಿಜೆಪಿಗೆ ಬಂದ ನಾವು, ಮನೆ ಮಗಳಾಗಿದ್ದೇವೆ: ಬಿ ಸಿ ಪಾಟೀಲ
ಗದಗ: ನಾವು ಬಿಜೆಪಿ ಬಿಡುವ ಚಾನ್ಸೇ ಇಲ್ಲ. ಮಳೆ ಬಡಿದು ಸೊಸೆಯಾಗಿ ಬಿಜೆಪಿಗೆ ಬಂದ ನಾವು ಮನೆ ಮಗಳಾಗಿದ್ದೇವೆ ಅಂತ ಜಿಲ್ಲಾ ಉಸ್ತುವಾರಿ ಸಚಿವ ಬಿ. ಸಿ ಪಾಟೀಲ್ ಹೇಳಿದರು.ಗದಗನಲ್ಲಿ ನಿರ್ಮಾಣವಾಗುತ್ತಿರುವ ಬಿಜೆಪಿ ಕಚೇರಿ ನೂತನ ಕಟ್ಟಡ ಕಾಮಗಾರಿ ವೀಕ್ಷಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 5 ಬೆರಳು ಒಂದೇ ಸಮನಾಗಿ ಇರುವುದಿಲ್ಲ. ಇನ್ನೂ ಐದು ಸಚಿವ ಸ್ಥಾನಗಳು ಖಾಲಿ ಇರುವುದರಿಂದ ಸಚಿವರಾಗಬೇಕೆಂಬ ಆಸೆ ಎಲ್ಲರಿಗೂ ಇರುವುದು ಸಹಜ. ಹೀಗಾಗಿ, …
Read More »ಬೆಳಗಾವಿ ಎಪಿಎಂಸಿ ಕಾರ್ಯದರ್ಶಿಗೆ ಮುತ್ತಿಗೆ: ಮಳಿಗೆ ವಾಪಸ್ ಪಡೆದು ಹಣ ಮರಳಿಸುವಂತೆ ವ್ಯಾಪಾರಿಗಳ ಒತ್ತಾಯ
ಬೆಳಗಾವಿ: ಎಪಿಎಂಸಿ ಇದ್ದರೂ ಜೈ ಕಿಸಾನ್ ಹೋಲ್ಸೆಲ್ ತರಕಾರಿ ಮಾರುಕಟ್ಟೆ ಸ್ಥಾಪನೆಗೆ ಲೈಸೆನ್ಸ್ ನೀಡಿದ್ದಕ್ಕೆ ಇಲ್ಲಿನ ಎಪಿಎಂಸಿ ಕಾರ್ಯದರ್ಶಿಗೆ ವ್ಯಾಪಾರಸ್ಥರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಎಪಿಎಂಸಿ ಹೋಲ್ ಸೇಲ್ ತರಕಾರಿ ಮಾರುಕಟ್ಟೆಗೆ ಸೆಡ್ಡು ಹೊಡೆದು ಖಾಸಗಿ ತರಕಾರಿ ಮಾರುಕಟ್ಟೆ ಕಾರ್ಯಾರಂಭ ಮಾಡಿದೆ. ಇದರಿಂದ ಇಲ್ಲಿನ ಎಪಿಎಂಸಿ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಚರ್ಚಿಸಲು ಬೆಳಗಾವಿ ಎಪಿಎಂಸಿ ಅಧ್ಯಕ್ಷ ಯುವರಾಜ್ ಕದಂ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕಾರ್ಯದರ್ಶಿ ವಿರುದ್ಧ ಆಕ್ರೋಶ …
Read More »ಅನ್ನಭಾಗ್ಯದ ಅಕ್ಕಿ ಕಡಿತಗೊಳಿಸಿದ್ದಷ್ಟೇ ಇವರ ಸಾಧನೆ’ :ಕಾಂಗ್ರೆಸ್
ಬೆಂಗಳೂರು: ‘ಬಡವರು ‘ಇಂತಿಷ್ಟೇ ತಿನ್ನಬೇಕು’ ಎಂದು ಹಸಿವನ್ನು ನಿಯಂತ್ರಿಸಲು ಹೊರಟ ಜಗತ್ತಿನ ಮೊಟ್ಟ ಮೊದಲ ಸಚಿವರು ಎಂಬ ಹೆಗ್ಗಳಿಕೆ ಉಮೇಶ್ ಕತ್ತಿ ಅವರದ್ದು!’ ಎಂದು ಕಾಂಗ್ರೆಸ್ ಆರೋಪಿಸಿದೆ. ‘ಒಬ್ಬರಿಗೆ ತಿಂಗಳಿಗೆ 5 ಕೆ.ಜಿ ಅಕ್ಕಿ ಸಾಕು’ ಎಂಬ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಅವರ ಹೇಳಿಕೆ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸಮಾಜದ ಹಾಗೂ ಬಡವರ ಕಷ್ಟನಷ್ಟಗಳ ಬಗ್ಗೆ ಕಿಂಚಿತ್ತೂ ಅರಿವಿರದ ಆಹಾರ ಸಚಿವರಿಗೆ ತಿಳಿದಿರುವುದು ಉಡಾಫೆ …
Read More »ಮಾನವೀಯತೆ ಮೆರೆದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ
ಭದ್ರಾವತಿ: ಕಾರಿನಲ್ಲಿ ಬರುತ್ತಿದ್ದ ಶಾಸಕರು ದ್ವಿಚಕ್ರ ವಾಹನದಿಂದ ಕೆಳಬಿದ್ದಿದ್ದ ದಂಪತಿಯನ್ನು ಉಪಚರಿಸಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಶಾಸಕ ಬಿ.ಕೆ.ಸಂಗಮೇಶ್ವರ ಅರಳಿಹಳ್ಳಿ ಗ್ರಾಮದಿಂದ ಹಿಂತಿರುಗುತ್ತಿದ್ದ ವೇಳೆ ರೆಡ್ಡಿ ಕ್ಯಾಂಪ್ ವಾಸಿಗಳಾದ ಯತಿರಾಜಲುನಾಯ್ಡು ಮತ್ತು ವಿಜಯಮ್ಮ ದಂಪತಿ ದ್ವಿಚಕ್ರ ವಾಹನದಿಂದ ಬಿದ್ದರು. ಕೂಡಲೇ ಕಾರು ನಿಲ್ಲಿಸಿ ಅವರನ್ನು ಉಪಚರಿಸಿದ ಶಾಸಕರು, ಕೂರಿಸಿ ಮಾತನಾಡಿಸಿದರು. ತಲೆ ಸುತ್ತು ಬಂದು ಬಿದ್ದಿರುವುದಾಗಿ ತಿಳಿಸಿದರು.
Read More »ಸಾಲ ತೀರಿಸದೆ ಕರಡಿಗುಡ್ಡ ಕುಟುಂಬ ಬೀದಿಗೆ
ಬೆಳಗಾವಿಯ ಕರಡಿಗುಡ್ಡ ಕುಟುಂಬವು ಸಾಲ ತೀರಿಸಿದೆ ಬಡ್ಡಿ ಹಾವಳಿಗೆ ಬೆಂದು ಸಾಲ ಮರುಪಾವತಿ ಮಾಡದಿದ್ದಕ್ಕೆ ಮನೆಯಲ್ಲಿರುವ ಸಾಮಾನುಗಳನ್ನು ಕುಟುಂಬ ಸಮೇತ ಹೊರಗೆ ಹಾಕಿದ ಕಿರಾತಕ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕರಡಿಗುಡ್ಡ ಕುಟುಂಬವು 2017 ರಲ್ಲಿ ಮೌಲಾ ಅಲ್ತಪ್ಪ ಸುರಕೋಡ ಎಂಬುವವರ ಹತ್ತಿರ 9 ಲಕ್ಷ ಸಾಲ ತೆಗೆದುಕೊಂಡಿದ್ದು. ಈಗ ಸಾಲ ತೀರಿಸಲು ಆಗದೇ ಇರುವ ಕಾರಣ ಕರಡಿಗುಡ್ಡ ಕುಟುಂಬವನ್ನು ಮನೆಯಿಂದ ಹೊರಗೆ ಹಾಕಿರುವ ಘಟಣೆ ನಡೆದಿದೆ. : ಮೌಲಾ …
Read More »ಬೆಂಗಳೂರಿನಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಗೆ ಬಿಬಿಎಂಪಿ ಮುಂದಾಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಗೆ ಬಿಬಿಎಂಪಿ ಮುಂದಾಗಿದೆ. ನಗರದ 85 ರಸ್ತೆಗಳಲ್ಲಿ ಪೇ ಆ್ಯಂಡ್ ಪಾರ್ಕ್ ವ್ಯವಸ್ಥೆಗೆ ಸಿದ್ಧತೆ ನಡೆದಿದ್ದು ಈಗಾಗಲೇ ನಗರದಲ್ಲಿ 10 ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮುಂದಿನ 1 ತಿಂಗಳಲ್ಲಿ 35 ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುವುದಾಗಿ ಟಿವಿ9ಗೆ ಬಿಬಿಎಂಪಿ ಟ್ರಾಫಿಕ್ ಇಂಜಿನಿಯರಿಂಗ್ ಸೆಲ್‌ನ ಮುಖ್ಯಸ್ಥ ಪ್ರವೀಣ್ ಲಿಂಗಯ್ಯ ತಿಳಿಸಿದ್ದಾರೆ. Smart Parking: ಬೆಂಗಳೂರಿನ ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಗೆ ಮುಂದಾದ ಬಿಬಿಎಂಪಿ ಕನ್ನಿಂಗ್ …
Read More »ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಫಡ್ನವಿಸ್ ಜೊತೆ ರಮೇಶ್ ಜಾರಕಿಹೊಳಿ ಚರ್ಚೆ;
ಬೆಳಗಾವಿ: ಗೋವಾದ ಪಣಜಿಯ ಖಾಸಗಿ ಹೋಟೆಲ್ನಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಫಡ್ನವಿಸ್ (Devendra Fadnavis) ಜೊತೆ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಅರ್ಧ ಗಂಟೆ ಚರ್ಚೆ ನಡೆಸಿದ್ದಾರೆ. ರಾಜಕೀಯವಾಗಿ ತಮ್ಮನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಸುಖಾಸುಮ್ಮನೆ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯ ಕೆಲ ನಾಯಕರ ನಡವಳಿಕೆ ಬೇಸರ ಮೂಡಿಸುತ್ತಿದೆ. ಪಕ್ಷಕ್ಕಾಗಿ ನಾನು ಮಾಡಿದ ತ್ಯಾಗವನ್ನು ಪರಿಗಣಿಸುತ್ತಿಲ್ಲ. ನಮ್ಮ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಅಂತ ರಮೇಶ್ ಜಾರಕಿಹೊಳಿ ಫಡ್ನವಿಸ್ …
Read More »ಸಂಪುಟ ಪುನಾರಚನೆಗೆ ಒತ್ತಡ: ಫೆ. 7ಕ್ಕೆ ಮುಖ್ಯಮಂತ್ರಿ ದೆಹಲಿಗೆ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ದೆಹಲಿಗೆ ಭೇಟಿ ನೀಡುವುದಾಗಿ ಪ್ರಕಟಿಸಿದ ಬೆನ್ನಲ್ಲೇ, ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾಗಿದ್ದು, ಸಚಿವಕಾಂಕ್ಷಿ ಶಾಸಕರೂ ದೆಹಲಿಗೆ ಹೋಗಲು ತಯಾರಿ ನಡೆಸಿದ್ದಾರೆ. ಸಚಿವ ಸಂಪುಟ ಪುನಾರಚನೆ ಮಾಡಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬ ಒತ್ತಡವೂ ಬಿಜೆಪಿಯಲ್ಲಿ ಪ್ರಬಲವಾಗಿ ಕೇಳಿ ಬಂದಿದೆ. ಸುದ್ದಿಗಾರರ ಜತೆ ಬುಧವಾರ ಬೆಳಿಗ್ಗೆ ಮಾತನಾಡಿದ ಬೊಮ್ಮಾಯಿ, ಗುರುವಾರವೇ ದೆಹಲಿಗೆ ತೀರ್ಮಾನಿಸಿರುವುದಾಗಿ ಹೇಳಿದ್ದರು. ಆದರೆ, ಮಧ್ಯಾಹ್ನ ಮಾತನಾಡಿದ ಅವರು, ‘ಗುರುವಾರ ಭೇಟಿ …
Read More »
Laxmi News 24×7