Breaking News

ರಾಜಕೀಯ

ಅವೆಂಜರ್ ಬೈಕನ್ನು ಎಲೆಕ್ಟ್ರಿಕ್ ಬೈಕ್ ಆಗಿ ಕನ್ವರ್ಟ್ ಮಾಡಿ

ನವದೆಹಲಿ: ಎಲೆಕ್ಟ್ರಿಕ್ ವಾಹನಗಳು (ಇವಿಗಳು) ಪ್ರತಿ ದಿನವೂ ಹೆಚ್ಚುತ್ತಿವೆ. ಸರ್ಕಾರದ ಸಬ್ಸಿಡಿಗಳು ಮತ್ತು ಹೆಚ್ಚಿನ ಇಂಧನ ಬೆಲೆಗಳ ಪರಿಣಾಮವಾಗಿ, ಇವಿಗಳು ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿವೆ. ಆದಾಗ್ಯೂ, ಗ್ರಾಹಕರ ಹೆಚ್ಚಿನ ಬೇಡಿಕೆ ಮತ್ತು ಅರೆವಾಹಕಗಳ ಕೊರತೆಯಿಂದಾಗಿ, ವಾಹನಗಳ ತಯಾರಕರು ಹೆಣಗಾಡುತ್ತಿದ್ದಾರೆ. ತಮ್ಮ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಕ್ಕಾಗಿ ತಿಂಗಳುಗಟ್ಟಲೆ ಕಾಯಲು ಬಯಸದ ಖರೀದಿದಾರರಿಗೆ gogoa1 ಪರ್ಯಾಯವಾಗಿ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್‍ಗಳನ್ನು ನೀಡುತ್ತಿದೆ. ಕಳೆದ ಬಾರಿ, gogoa1ನ ಕಂಪನಿಯು ಹೀರೋ ಸ್ಪ್ಲೆಂಡರ್ ಬೈಕ್‍ವೊಂದನ್ನು ತಮ್ಮ …

Read More »

ಹತ್ಯೆ ಹಿಟ್ ಲಿಸ್ಟ್‌ನಲ್ಲಿ ಹಿಂದೂ ಮುಖಂಡರು: ಬೆಂಗಳೂರಿನ ತೇಜಸ್ ಗೌಡಗೆ ಭದ್ರತೆ

ಬೆಂಗಳೂರು, ಫೆ. 22: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಇತರೆ ಹನ್ನೆರಡು ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇದರ ಬೆನ್ನಲ್ಲೇ ಹತ್ಯೆ ಹಿಟ್ ಲಿಸ್ಟ್‌ನಲ್ಲಿರುವ ಹಿಂದೂ ಮುಖಂಡರಿಗೆ ಬೆಂಗಳೂರು ಪೊಲೀಸರು ಭದ್ರತೆ ಕಲ್ಪಿಸಿದ್ದಾರೆ.   ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಪ್ರಕರಣಕ್ಕೂ ಹಾಗೂ ಬೆಂಗಳೂರಿಗೂ ಲಿಂಕ್ ಇರುವ ಸ್ಫೋಟಕ ವಿಚಾರ ಹೊರ ಬಿದ್ದಿದೆ. ಇದರ ಜಾಡು ಹಿಡಿದು ಹರ್ಷ ಕೊಲೆಗೆ ಬಳಸಿರುವ ಕಾರು ಎಲ್ಲಿಂದ …

Read More »

ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ: ಅತ್ಯುತ್ತಮ ಸಿನಿಮಾ ಪುಷ್ಪ-ದಿ ರೈಸ್, ಅತ್ಯುತ್ತಮ ನಟ ರಣವೀರ್ ಸಿಂಗ್!

ಮುಂಬೈ: 2022ನೇ ವರ್ಷದ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಸಮಾರಂಭ ಫೆಬ್ರವರಿ ೨೦ರಂದು ಮುಂಬೈನಲ್ಲಿ ನಡೆದಿದ್ದು, ಈ ಪ್ರತಿಷ್ಠಿತ ಪ್ರಶಸ್ತಿಗೆ ರಣಬೀರ್ ಸಿಂಗ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದರೆ, ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಪುಷ್ಪ-ದಿ ರೈಸ್ ಪಡೆದುಕೊಂಡಿದೆ.Ranveer Singh ರಣಬೀರ್ ಸಿಂಗ್ ಈ ಕ್ರಿಕೆಟ್ ಆಧಾರಿತ ಸಿನಿಮಾ 83 ಇದರಲ್ಲಿ ಅಮೋಘ ಅಭಿನಯಕ್ಕಾಗಿ ಅತ್ಯುತ್ತಮ ನಟ ಎಂಬ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅತ್ಯುತ್ತಮ ನಾಯಕಿ ಗೌರವಕ್ಕೆ ಕೀರ್ತಿ ಸನೂನ್ ಭಾಜನರಾಗಿದ್ದಾರೆ. ಈ ಬಗ್ಗೆ …

Read More »

ಲೈಂಗಿಕ ದೌರ್ಜನ್ಯ ಎಸಗಿದರೆಂದು ಸ್ವಾಮೀಜಿಯ ಮರ್ಮಾಂಗ ಕತ್ತರಿಸಿದಳು: ಆದರೆ ನಡೆದದ್ದೇ ಬೇರೆ.!

ತಿರುವನಂತಪುರ: ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಬಂದರು ಎಂದು ಹೇಳಿ ಕೇರಳದ ತಿರುವನಂತಪುರದ ಸ್ವಾಮಿ ಗಂಗೇಶಾನಂದರರ ಮರ್ಮಾಂಗ ಕತ್ತರಿಸಿದ್ದ ಕಾನೂನು ವಿದ್ಯಾರ್ಥಿನಿಯ ಕೇಸ್​ಗೆ ಇದೀಗ ಭಾರಿ ಟ್ವಿಸ್ಟ್​ ಸಿಕ್ಕಿದೆ. 2017ರಲ್ಲಿ ನಡೆದಿರುವ ಈ ಘಟನೆ, ಸುಮಾರು ನಾಲ್ಕೂವರೆ ವರ್ಷಗಳ ಬಳಿಕ ಬೇರೆಯದ್ದೇ ಕಥೆಯನ್ನು ಹೇಳುತ್ತಿದೆ.   2017ರಲ್ಲಿ ತಿರುವನಂತಪುರದ 23 ವರ್ಷದ ಕಾನೂನು ವಿದ್ಯಾರ್ಥಿ ಸ್ವಾಮಿ ಗಂಗೇಶಾನಂದರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದಳು. ಮೇ 19 ಮತ್ತು 20ರ …

Read More »

ಬೇಟೆಯಾಡಲು ಬಂದ‌ ಚಿರತೆಯನ್ನೇ ಬೆದರಿಸಿದ‌ ಶ್ವಾನ; ಬಂದ ದಾರಿಗೆ ಸುಂಕವಿಲ್ಲವೆಂದು ವಾಪಾಸ್ಸಾದ ಕಾಡುಮೃಗ

ಚಿರತೆ ಮತ್ತು ನಾಯಿ ಕಾಳಗವಾದರೆ ಯಾವುದು ಮೇಲುಗೈ ಸಾಧಿಸಬಹುದು ಅಥವಾ ವಾಸ್ತವವಾಗಿ ಹೇಳಬೇಕೆಂದರೆ ಯಾವ ಪ್ರಾಣಿ ಬದುಕುಳಿಯಬಹುದು.‌ ಈ ಪ್ರಶ್ನೆಗೆ ತಕ್ಷಣದ ಉತ್ತರ ಚಿರತೆ. ಆದರೆ ಇತ್ತೀಚಿಗೆ ರಾಜಸ್ಥಾನದ ವನ್ಯಜೀವಿ ಸಫಾರಿ ಪಾರ್ಕ್ ನಲ್ಲಿ ಇದರ ತದ್ವಿರುದ್ಧ ಘಟನೆ ನಡೆದಿದೆ. ಚಿರತೆಯೊಂದನ್ನು, ದಿಟ್ಟ ನಾಯಿ ದೈರ್ಯವಾಗಿ ಎದುರಿಸಿದೆ. ಸಧ್ಯ ಈ ದಿಟ್ಟ ನಾಯಿಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ನಡುರಸ್ತೆಯಲ್ಲಿಯೇ ನಾಯಿಯೊಂದು ಮಲಗಿರುವುದನ್ನು ನೀವು ಗಮನಿಸಬಹುದು. ಇದೇ ವೇಳೆ …

Read More »

ಸಚಿವ ಈಶ್ವರಪ್ಪಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ

ಬೆಂಗಳೂರು: ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.   ಸಧ್ಯ ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ, ಆನಂತರದ ಬೆಳವಣಿಗೆಗಳು ಬಿಜೆಪಿ ವರಿಷ್ಠರ ಗಮನಕ್ಕೂ ಬಂದಿದ್ದು, ಇಂಡಿಯಾ ಟುಡೆಗೆ ನೀಡಿದ ಸಂದರ್ಶನದ ವೇಳೆ ಸಚಿವ ಈಶ್ವರಪ್ಪ ಅವರಿಗೆ ತರಾಟೆಗೆ ತೆಗೆದುಕೊಂಡಿರುವುದಾಗಿ ಜೆ.ಪಿ. ನಡ್ಡಾ ತಿಳಿಸಿದ್ದಾರೆ.

Read More »

22/02/2022: ಇಂದಿನ ʻದಿನಾಂಕʼದ ವಿಶೇಷತೆ ಬಗ್ಗೆ ಇಲ್ಲಿದೆ ಪ್ರಮುಖ ಮಾಹಿತಿ!

ಇಂದಿನ ದಿನಾಂಕ(22/02/2022)ವು ಬಹಳ ಅಪರೂಪವಾಗಿದೆ. ಏಕೆಂದರೆ, ಇಂತಹ ದಿನಾಂಕಗಳು ಬರುವುದು ಬಹಳ ಅಪರೂಪವಾಗಿದೆ. ಇದು ಆರಂಭದಿಂದ ಮತ್ತು ಅಂತ್ಯದಿಂದ ಓದಿದಾಗ ಒಂದೇ ರೀತಿ ಇರುವ ದಿನಾಂಕ ಮಾತ್ರವಲ್ಲ, ನೀವು ಕೆಳ ಮುಖವಾಗಿ ಓದಿದರೂ ಅದೇ ದಿನಾಂಕ ಬರಲಿದೆ.   22/02/2022 ಅಪರೂಪದ ದಿನಾಂಕ ಮಂಗಳವಾರ(ಇಂದು) ಬಂದಿದೆ. ಜನರು ಇದನ್ನು ‘ಅಂಕಿ 2 ರ ದಿನ ‘ ಎಂದು ಕರೆಯುತ್ತಾರೆ. 22 ಫೆಬ್ರವರಿ 2022 ಅನ್ನು ಸಂಖ್ಯಾತ್ಮಕವಾಗಿ 22/02/2022 ಎಂದು ಬರೆಯಲಾಗಿದೆ. …

Read More »

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಶವ ಮೆರವಣಿಗೆ: ಅನುಮತಿ ಕೊಟ್ಟವರಾರು? ನಿವೃತ್ತ ಪೊಲೀಸ್ ಅಧಿಕಾರಿಗಳ ಪ್ರಶ್ನೆ

ಬೆಂಗಳೂರು: ಬಜರಂಗದಳ ಕಾರ್ಯಕರ್ತ 26 ವರ್ಷದ ಯುವಕ ಹರ್ಷ ಕೊಲೆಯಾದ ನಂತರ ನಿನ್ನೆ ಸೋಮವಾರ ಶಿವಮೊಗ್ಗ ನಗರದಲ್ಲಿ ಶವವನ್ನು ಹೊತ್ತು ಕಾರ್ಯಕರ್ತರು ಮೆರವಣಿಗೆ ಸಾಗಿರುವ ಬಗ್ಗೆ ಈಗ ಹಲವು ಪ್ರಶ್ನೆಗಳು ಎದ್ದಿವೆ. ಕೋಮುಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ಘಟನೆಯಾದ ಬಳಿಕ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು ಹಲವು ಮನೆಗಳಿಗೆ ಮತ್ತು ವಾಹನಗಳಿಗೆ ಉದ್ರಿಕ್ತರ ಗುಂಪು ಕಲ್ಲು ಎಸೆದ ಬಳಿಕ ಪರಿಸ್ಥಿತಿ ಇನ್ನಷ್ಟು ಗಂಭೀರವಾಯಿತು. ಹೀಗಿರುವಾಗ ಮೆರವಣಿಗೆ ಸಾಗಲು ಶಿವಮೊಗ್ಗ ಪೊಲೀಸರು ಅನುಮತಿ ಹೇಗೆ …

Read More »

ಮಧ್ಯರಾತ್ರಿಯಲ್ಲಿ ರೆಸ್ಟಾರೆಂಟ್​ ಬಾಗಿಲು ಮುಚ್ಚಿಸುವ ಅಧಿಕಾರ ಪೊಲೀಸರಿಗಿಲ್ಲ’ -​ ಹೈಕೋರ್ಟ್​ ಮಹತ್ವದ ಆದೇಶ

ಕೆಫೆ ಹಾಗೂ ರೆಸ್ಟಾರೆಂಟ್​ಗಳನ್ನು ಬಂದ್​ ಮಾಡುವಂತೆ ಒತ್ತಾಯಿಸುವಂತಿಲ್ಲ ಹಾಗೂ ತಡರಾತ್ರಿಯಲ್ಲಿ ವ್ಯಾಪಾರ ಮಾಡದಂತೆ ನಿರ್ಬಂಧಿಸುವಂತಿಲ್ಲ ಎಂದು ಮದ್ರಾಸ್​ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ತಡರಾತ್ರಿಯಲ್ಲಿ ರೆಸ್ಟಾರೆಂಟ್​ಗಳನ್ನು ನಡೆಸುವುದಕ್ಕೆ ಕಿಲ್ವಾಕ್​ ಠಾಣೆ ಪೊಲೀಸರು ಅಡ್ಡಿಪಡಿಸುತ್ತಿರುವುದನ್ನು ವಿರೋಧಿಸಿ ಎನ್​ ಗುಣರಾಜ್​ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಕೃಷ್ಣನ್​ ರಾಮಸ್ವಾಮಿ ಈ ಮಹತ್ವದ ಆದೇಶವನ್ನು ನೀಡಿದ್ದಾರೆ.   ಸಂವಿಧಾನದ ಪರಿಚ್ಛೇದ 19(1)(ಜಿ) ಅಡಿಯಲ್ಲಿ ತಮ್ಮ ಹೋಟೆಲ್​ ಅಥವಾ ರೆಸ್ಟಾರೆಂಟ್​ಗಳಲ್ಲಿ ವ್ಯಾಪಾರ ನಡೆಸುವ ಹಕ್ಕನ್ನು …

Read More »

ಮಾತಿನ ಮಲ್ಲಿ ಆರ್ ಜೆ ರಚನಾ ಹೃದಯಾಘಾತದಿಂದ ನಿಧನ

ಬೆಂಗಳೂರು: ಮಾತಿನ ಮಲ್ಲಿಯಾಗಿ ಅಪಾರ ಕೇಳುಗರ ಪ್ರೀತಿ ಪ್ರೋತ್ಸಾಹವನ್ನು ಪಡೆದುಕೊಂಡಿದ್ದ ಆರ್ ಜೆ ರಚನಾ ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜೆ.ಪಿ ನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಾಗಿದ್ದ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ ಎನ್ನಲಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ನಿಧನರಾಗಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು. ರಕ್ಷಿತ್ ಶೆಟ್ಟಿಯವರ ‘ಸಿಂಪಲ್ಲಾಗಿ ಒಂದು ಲವ್ ಸ್ಟೋರಿ’ ಚಿತ್ರದಲ್ಲಿ ಸಹೋದರಿ ಪಾತ್ರದ ಮೂಲಕ ರಚನಾ ಖ್ಯಾತಿಯಾಗಿದ್ದರು. ಮೂರು ವರ್ಷಗಳಿಂದ ರೇಡಿಯೋ ಜಾಕಿ ಕೆಲಸ …

Read More »