ಬೆಂಗಳೂರು: ಮೂರು ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡಿ ಎಸ್ಕೇಪ್ ಆಗ್ತಾ ಇದ್ದ ಖತರ್ನಾಕ್ ಬೈಕ್ ಕಳ್ಳನನ್ನು, ಬೆಂಗಳೂರು ಹೊರವಲಯ ನೆಲಮಂಗಲ ಟೌನ್ ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿಯ ನಿವಾಸಿ ಡಿ.ಎಸ್.ಸುನೀಲ್ ಬಂಧಿತ ಆರೋಪಿ. ಬೆಂಗಳೂರು, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ. ಬಂಧಿತ ಆರೋಪಿಯಿಂದ 11 ಬೈಕ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ನೆಲಮಂಗಲ ಟೌನ್ ಪೊಲೀಸ್ ಇನ್ಸ್‌ಪೆಕ್ಟರ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕಳ್ಳನನ್ನು ಬಂಧಿಸಿದ್ದು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.
Read More »ನನ್ನ ತಮ್ಮನಿಗೆ ಬಹಳಷ್ಟು ಕನಸುಗಳಿದ್ದವು: ನವೀನ್ ಸಹೋದರ
ಹಾವೇರಿ: ನನ್ನ ತಮ್ಮನಿಗೆ ಬಹಳಷ್ಟು ಕನಸುಗಳಿದ್ದವು. ಆತನ ಜೊತೆಗೆ ಹೋದವರು ಎಲ್ಲರೂ ವಾಪಸ್ ಜೀವಂತವಾಗಿ ಬರುತ್ತಿದ್ದಾರೆ. ಆದರೆ ನನ್ನ ತಮ್ಮ ಬರಲೇ ಇಲ್ಲ ಎಮದು ಮೃತ ನವೀನ್ ಸಹೋದರ ಹರ್ಷ ಭಾವುಕರಾದರು. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಒಂದು ಕಡೆ ಅಪ್ಪ ಅಮ್ಮನನ್ನು ಸಮಾಧಾನ ಮಾಡಬೇಕು. ಮನೆಯಲ್ಲಿ ನಾನೇ ಹಿರಿಯ ಮಗ ಅವರ ಮುಂದೆ ನಾನು ಅತ್ತರೆ ನನಗೆ ನೋವು ತಡೆಯಲು ಆಗುತ್ತಿಲ್ಲ ಎಂದು ಗದ್ಗದಿತರಾದರು. ರಷ್ಯಾ-ಉಕ್ರೇನ್ ನಡುವಿನ ಯುದ್ಧದ …
Read More »ಭಾರತೀಯ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ: ಸತೀಶ್ ಜಾರಕಿಹೊಳಿ
ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ಗೋಕಾಕ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮಾಧ್ಯಮಕ್ಕೆ ಹೇಳಿಕೆಗಳನ್ನು ನೀಡಲು ಅಷ್ಟೇ ಆದ್ಯತೆ ನೀಡುತ್ತಿದೆ. ಅಲ್ಲಿ ನಮ್ಮ ಭಾರತೀಯ ವಿದ್ಯಾರ್ಥಿಗಳು ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಷಯದಲ್ಲಿ ಪ್ರಚಾರ ಪಡೆಯುವುದು ಸರಿಯಲ್ಲ ಎಂದರು. ಕೇಂದ್ರ ಸರ್ಕಾರದ ವಿಳಂಬ ನೀತಿಯಿಂದ ಹಾವೇರಿ ಜಿಲ್ಲೆಯ …
Read More »ಎಳೇಬೈಲ್‍ನಲ್ಲಿ ದೇವಸ್ಥಾನ ಜೀರ್ಣೋದ್ಧಾರಕ್ಕೆ 5 ಲಕ್ಷ ರೂ. ಶಾಸಕರ ನಿಧಿ
ಜೀರ್ಣೋದ್ಧಾರದ ಸಲುವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಶಾಸಕರ ನಿಧಿಯ ವತಿಯಿಂದ 5 ಲಕ್ಷ ರೂ. ನೀಡಲಾಗಿದೆ. ಮೊದಲ ಕಂತಿನಲ್ಲಿ 2.77 ಲಕ್ಷ ರೂ,ಗಳ ಚೆಕ್ ನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ದೇವಸ್ಥಾನದ ಕಮೀಟಿಯವರಿಗೆ ಮಂಗಳವಾರ ಹಸ್ತಾಂತರಿಸಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನದ ಕಮೀಟಿಯವರು, ಮನೋಹರ್ ಬೆಳಗಾಂವ್ಕರ್, ಮೃಣಾಲ ಹೆಬ್ಬಾಳಕರ್, ಮಹೇಶ ಪಾಟೀಲ, ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಉಪಸ್ಥಿತರಿದ್ದರು.
Read More »ಕುತೂಹಲ ಮೂಡಿಸಿದ ಉಕ್ರೇನ್‌ನ ಮನೆಗಳ ಮೇಲಿನ X ಮಾರ್ಕ್
ಉಕ್ರೇನ್ ಮೇಲೆ ದಾಳಿ ನಡೆಸಲು ರಷ್ಯಾ ನಿಜಕ್ಕೂ ಭಾರೀ ಪ್ಲಾನ್ ಮಾಡಿದೆ. ಇದು ಈಗ ಹೊರ ಬೀಳುತ್ತಿದೆ. ಉಕ್ರೇನ್‌ನ ಪ್ರಮುಖ ನಗರದ ಮನೆಗಳ ಮೇಲೆ ಎಕ್ಸ್ ಮಾರ್ಕ್ ಗಳು ಕಂಡು ಬಂದಿದ್ದು ಇದು ರಷ್ಯಾ ದೇಶದ ಯುದ್ಧದ ಪ್ಲಾನಿಂಗ್ ಅನ್ನೋದನ್ನ ಸಾರಿ ಸಾರಿ ಹೇಳುತ್ತಿವೆ. ಹೌದು! ರಷ್ಯಾ ದೇಶ ಇಡೀ ಉಕ್ರೇನ್ ದೇಶವನ್ನೇ ಸರ್ವನಾಶ ಮಾಡೋಕೆ ಹೊರಟು ಬಿಟ್ಟಿದೆ. ಇಲ್ಲಿಯ ಮನೆಗಳ ಮೇಲೆ ಎಕ್ಸ್ ಮಾರ್ಕ್ ಹಾಕಿದೆ. ಅದ್ಹೇಗೆ ಇಲ್ಲಿಯ …
Read More »ಇನ್ಮುಂದೆ ‘ಗ್ರಾಮ ಒನ್ ಕೇಂದ್ರ’ಗಳಲ್ಲಿ ಮಕ್ಕಳಿಗೂ ಸಿಗಲಿದೆ ‘ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್’
ಹಾವೇರಿ: ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ( ayusman arogya karnataka card ) ವಿತರಣೆ ಬಾಕಿ ಉಳಿದ ಮಕ್ಕಳಿಗೆ ಗ್ರಾಮ ಒನ್ ಕೇಂದ್ರಗಳಲ್ಲಿ ಎಬಿಎಆರ್‍ಕೆ ವಿತರಣೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಪೋಷಣ ಅಭಿಯಾನ, ಬೇಟಿ ಬಚಾವೋ ಬೇಟಿ ಪಡಾವೋ, ಬಾಲ್ಯವಿವಾಹ ನಿಷೇಧ ಹಾಗೂ ಪ್ರಧಾನ ಮಂತ್ರಿ ಮಾತೃವಂದನಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ …
Read More »ಭಾರತೀಯ ವಿದ್ಯಾರ್ಥಿಯ ಸಾವು ಹಿನ್ನೆಲೆ, ಸಮನ್ಸ್ ಜಾರಿಗೊಳಿಸಿದ ಭಾರತ ಸರ್ಕಾರ
ಉಕ್ರೇನ್ ಮೇಲಿನ ರಷ್ಯಾದ ದಾಳಿಯ ನೇರ ಪರಿಣಾಮ ಭಾರತದ ಮೇಲೂ ಕಾಣಿಸತೊಡಗಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ (Indian Student Death In Ukraine) ಸಾವನ್ನಪ್ಪಿದ್ದಾನೆ. ವಿದ್ಯಾರ್ಥಿಯನ್ನು ಕರ್ನಾಟಕದ (Karnataka Student) ನವೀನ್ (Naveen) ಎಂದು ಗುರುತಿಸಲಾಗಿದೆ. ಈ ಸಂಬಂಧ ಉಕ್ರೇನ್ ಮತ್ತು ರಷ್ಯಾ ರಾಯಭಾರಿಗಳಿಗೆ ಭಾರತ ಸರ್ಕಾರ ಸಮನ್ಸ್ ಜಾರಿ ಮಾಡಿದೆ. ರಷ್ಯಾ (Russia) ಮತ್ತು ಉಕ್ರೇನ್ (Ukraine) ರಾಯಭಾರಿಗಳಿಗೆ ಬುಲಾವ್ ಈ ಕುರಿತು ಟ್ವೀಟ್ ಮಾಡಿರುವ …
Read More »ಉಕ್ರೇನ್ ರಾಜಧಾನಿಗೆ ರಷ್ಯಾ ಸೇನೆ ಲಗ್ಗೆ: ಸ್ವದೇಶಕ್ಕೆ ಮರಳಲು ಭಾರತೀಯ ವಿದ್ಯಾರ್ಥಿಗಳ ತಹತಹ
ರಷ್ಯಾದ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ನಗರ ಪ್ರವೇಶಿಸುತ್ತಿವೆ. ಉಕ್ರೇನ್ಗೆ ಪೊಲೆಂಡ್ ಯುದ್ಧವಿಮಾನಗಳನ್ನು ಕಳಿಸಿಕೊಟ್ಟಿದ್ದರೆ ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳು ತುರ್ತು ಮಿಲಿಟರಿ ನೆರವು ಒದಗಿಸಲು ಮುಂದಾಗಿವೆ ಇಡೀ ದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತ ಮತ್ತು ಇತರ ದೇಶಗಳ ವಿದ್ಯಾರ್ಥಿಗಳ ಸ್ವದೇಶಗಳಿಗೆ ಮರಳಲು ತಹತಹಿಸುತ್ತಿದ್ದಾರೆ. Russia Attacks Ukraine: ಜಾಗತಿಕ ಸೂಪರ್ಪವರ್ ರಷ್ಯಾ (Russia) ತನ್ನ ನೆರೆಯ ಉಕ್ರೇನ್ (Ukraine) ವಿರುದ್ಧ ದಂಡೆತ್ತಿ ಹೋಗಿರುವುದು ವಿಶ್ವದೆಲ್ಲೆಡೆ …
Read More »ಉಕ್ರೇನ್‍ನಿಂದ ನವೀನ್ ಮೃತದೇಹ ತರಲು ಪ್ರಯತ್ನ: ಸಿಎಂ ಬೊಮ್ಮಾಯಿ
ರಷ್ಯಾ ಶೆಲ್ ದಾಳಿಯಲ್ಲಿ ನವೀನ್ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಮತ್ತಿಬ್ಬರು ಕನ್ನಡಿಗರಿಗೆ ಗಾಯವಾಗಿದೆ. ಹಾವೇರಿ ಜಿಲ್ಲೆಯ ಇಬ್ಬರಿಗೆ ಗಾಯವಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಉಕ್ರೇನ್‍ನ ಕಾರ್ಕಿವ್‍ನಲ್ಲಿ ರಷ್ಯಾ-ಉಕ್ರೇನ್‍ನ ಗುಂಡಿನ ಕಾಳಗದಲ್ಲಿ ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಶೇಖರಪ್ಪ ಜ್ಞಾನಗೌಡರ ಮೃತಪಟ್ಟಿರುವ ವಿಚಾರಕ್ಕೆ ಪ್ರತಿಕ್ರಯಿಸಿದ ಸಿಎಂ ಬೊಮ್ಮಾಯಿ ರಾಜ್ಯಕ್ಕೆ ನವೀನ್ ಮೃತದೇಹ ತರುವ ಕೆಲಸ ಮಾಡುತ್ತೇವೆ. ಎರಡ್ಮೂರು ದಿನದಲ್ಲಿ ಮೃತದೇಹ ತರಲು ಪ್ರಯತ್ನಿಸುತ್ತೇವೆ. ನವೀನ್ 4ನೇ …
Read More »ಉಕ್ರೇನ್‍ನಿಂದ ನವೀನ್ ಪಾರ್ಥಿವ ಶರೀರ ತರಿಸಲು ನೆರವು: ಕುಟುಂಬಕ್ಕೆ ಬಿಎಸ್ವೈ ಸಾಂತ್ವನ
ಬೆಂಗಳೂರು/ಹಾವೇರಿ: ಉಕ್ರೇನ್ ನಲ್ಲಿ ರಷ್ಯಾ ನಡೆಸಿದ ಬಾಂಬ್ ದಾಳಿಯಲ್ಲಿ ಮೃತಪಟ್ಟ ಕನ್ನಡಿಗ, ಹಾವೇರಿ ಜಿಲ್ಲೆ ಚಳಗೇರಿ ಗ್ರಾಮದ ನವೀನ್ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ತರಿಸಲು ಅಗತ್ಯ ನೆರವು ಕಲ್ಪಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನವೀನ್ ತಂದೆ ಶೇಖರಪ್ಪ ಅವರಿಗೆ ಭರವಸೆ ನೀಡಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಬಾಂಬ್ ದಾಳಿಗೆ ಬಲಿಯಾಗಿರುವ ಕರ್ನಾಟಕದ ನವೀನ್ ಕುಟುಂಬಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರೆ ಮಾಡಿ ನವೀನ್ ತಂದೆಗೆ ಸಾಂತ್ವನ ಹೇಳಿದರು. ನವೀನ್ …
Read More »
Laxmi News 24×7