Breaking News

ರಾಜಕೀಯ

ಚೆಲುವಿನ ಚಿತ್ತಾರ’ ತರದ್ದೇ ಸುದ್ದಿ.. ಪ್ರೀತಿಸಿ ಮದ್ವೆಯಾಗಿದ್ದ ಮಗಳಿಗೆ ಸರ್ಪ್ರೈಸ್‌ ಅಂತಾ ಕರೆಸಿ ಮಾಡಿದ್ದೇನು ಗೊತ್ತಾ?

ಕಲಬುರಗಿ: ನೀವು ಚೆಲುವಿನ ಚಿತ್ತಾರ ಸಿನಿಮಾ ನೋಡಿದ್ದೀರಲ್ವಾ? ಈ ಸಿನಿಮಾ ನೋಡದೇ ಇರೋರು ಯಾರು ಇದಾರೆ ಹೇಳಿ? ಇಬ್ಬರು ಪ್ರೇಮಿಗಳು ಮನೆ ಬಿಟ್ಟು ಬರ್ತಾರೆ, ಸಂಧಾನಕ್ಕೆ ಅಂತಾ ಕರೆಸಿಕೊಂಡ ಮನೆಯವ್ರು ಇಬ್ಬರನ್ನು ದೂರ ದೂರ ಮಾಡ್ತಾರೆ. ಇಲ್ಲೂ ಸೇಮ್‌ ಟು ಸೇಮ್‌ ಅಂತದ್ದೇ ದುರಂತ ನಡೆದಿದೆ. ಇನ್ನೂ ಮುಂದುವರೆದು ಮಗಳು ಮನೆಯವ್ರಿಗೆ ಸರ್ಪ್ರೈಸ್‌ ಕೋಡೋಣ ಅನ್ನುವಷ್ಟರಲ್ಲಿ, ಮನೆಯವ್ರೇ ಮಗಳಿಗೆ ಸಾವಿನ ಸರ್ಪ್ರೈಸ್‌ ಕೊಟ್ಟಿದ್ದಾರೆ. ಚಿಗುರಿದ ಪ್ರೀತಿ.. ಕಮರಿದ ಕನಸು ಈಕೆ …

Read More »

ಗ್ರಾಮ ಪಂಚಾಯಿತಿಗೊಂದು ಗ್ರಾಮಒನ್: ರಾಜ್ಯಾದ್ಯಂತ ವಿಸ್ತರಿಸಲು ಸಂಪುಟ ಒಪ್ಪಿಗೆ

ಬೆಂಗಳೂರು: ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಅಲೆದಾಟ ತಪ್ಪಿಸಲು ಹಂತಹಂತವಾಗಿ ಅನುಷ್ಠಾನ ಮಾಡುತ್ತಿರುವ ಗ್ರಾಮ ಒನ್ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಯಿಂದ ಅನುಷ್ಠಾನವಾಗುತ್ತಿರುವ ಯೋಜನೆಯನ್ನು ಎಲ್ಲ ಗ್ರಾಮಗಳಿಗೂ ವಿಸ್ತರಿಸಬೇಕೆಂದು ತೀರ್ವನಿಸಲಾಯಿತು.   ನಮ್ಮ ಸರ್ಕಾರ ಗ್ರಾಮೀಣ ಜನರಿಗೆ ಪಂಚಾಯಿತಿ ಹಂತದಲ್ಲಿಯೇ ನಾಗರಿಕ ಸೇವೆಗಳನ್ನು ಒದಗಿಸುವ ಗ್ರಾಮ ಒನ್ ಯೋಜನೆಯನ್ನು ಜಾರಿಗೊಳಿಸಿದೆ. ತಂತ್ರಜ್ಞಾನ …

Read More »

ರಾಜ್ಯದ ರೈತರಿಗೆ ಮತ್ತೊಂದು ಸಿಹಿ ಸುದ್ದಿ; ಕೃಷಿ ಪಂಪ್ಸೆಟ್ ಗೆ ಸೌರ ವಿದ್ಯುತ್

ಬೆಂಗಳೂರು: ಕೃಷಿ ಪಂಪ್ಸೆಟ್ ಗಳಿಗೆ ಸೌರವಿದ್ಯುತ್ ಕಲ್ಪಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ರೈತರ ಜಮೀನಿನಲ್ಲಿ ಸೌರ ಪ್ಯಾನೆಲ್ ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡಲಿದ್ದು, ಬೇರೆ ವಿದ್ಯುತ್ ಸಂಪರ್ಕವಿಲ್ಲದೆ ಪಂಪ್ ಸೆಟ್ ಬಳಕೆ ಸಾಧ್ಯವಾಗಲಿದೆ.   ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಮುಕ್ತ ಸೌರ ಪಂಪ್ ಸೆಟ್ ಯೋಜನೆ ಜಾರಿಗೊಳಿಸುವ ಸಂಬಂಧ ಪ್ರಧಾನಮಂತ್ರಿ ಕುಸುಮ್ ಬಿ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ರಾಜ್ಯದಲ್ಲಿ ಸುಮಾರು 10,000 …

Read More »

ನಿಮ್ಮ ಕ್ಷೇತ್ರಗಳಲ್ಲಿ ಸಮಯ ಕಳೆಯಿರಿ, ಅಹಂಕಾರ ಬೇಡ’: ಹೊಸ ಶಾಸಕರಿಗೆ ಭಗವಂತ್ ಮನ್​ ಸೂಚನೆ

ಮೊಹಾಲಿ(ಪಂಜಾಬ್​​): ಪಂಜಾಬ್​​ನಲ್ಲಿ ಕಾಂಗ್ರೆಸ್​ ಸೇರಿದಂತೆ ಇತರೆ ಪಕ್ಷಗಳ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡುವಲ್ಲಿ ಯಶಸ್ವಿಯಾಗಿರುವ ಆಮ್​ ಆದ್ಮಿ ಪಕ್ಷ ಮಾರ್ಚ್​ 16ರಂದು ಸರ್ಕಾರ ರಚನೆ ಮಾಡಲಿದೆ. ಆಪ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಭಗವಂತ್ ಮನ್​, ನೂತನ ಶಾಸಕರಿಗೆ ಮಹತ್ವದ ಸಲಹೆ ನೀಡಿದ್ದಾರೆ. ಮೊಹಾಲಿಯಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಅಹಂಕಾರಕ್ಕೊಳಗಾಗಬೇಡಿ, ನಮಗೆ ಮತ ನೀಡದವರನ್ನೂ ನಾವು ಗೌರವಿಸಬೇಕು. ಚಂಡೀಗಢದಲ್ಲಿ ಕಾಲ ಕಳೆಯುವ ಬದಲಿಗೆ ನಿಮ್ಮ …

Read More »

ಬಜೆಟ್ ಅಧಿವೇಶನದಲ್ಲಿಯೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಘೋಷಿಸಬೇಕು: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು : ರಾಜ್ಯ ಸರ್ಕಾರ ನೀಡಿರುವ ಮಾತಿನಂತೆ ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿಯೇ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ಘೋಷಿಸಬೇಕು ಎಂದು ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು. ಮೀಸಲಾತಿ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರ ಭರವಸೆ ನೀಡಿ ಮಾರ್ಚ್ 15ಕ್ಕೆ ಒಂದು ವರ್ಷವಾಗುತ್ತಿದೆ. ಆದರೂ ಸರ್ಕಾರ ಭರವಸೆ ಈಡೇರಿಸಿಲ್ಲ. ಆದ್ದರಿಂದ ಪ್ರಸಕ್ತ ಬಜೆಟ್ ಅಧಿವೇಶನದಲ್ಲಿಯೇ ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಈ ಕುರಿತು ಶುಕ್ರವಾರ …

Read More »

ಗೋವಾದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 96.80 ರೂ. ಹಾಗೂ ಡೀಸೆಲ್ ದರ 87.43 ರಷ್ಟಿದ್ದು, ಇದೀಗ ಏಕಾಏಕಿ 22 ರೂ. ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ..

ಕಾರವಾರ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಹೆಚ್ಚಳವಾಗುತ್ತಿದ್ದಂತೆ ದೇಶದಲ್ಲಿಯೂ ಪೆಟ್ರೋಲ್, ಡಿಸೇಲ್ ದರ ಹೆಚ್ಚಳವಾಗುವ ಆತಂಕ ಎದುರಾಗಿದೆ. ಹಾಗಾಗಿ, ನೆರೆಯ ಗೋವಾ ರಾಜ್ಯಕ್ಕೆ ಗಡಿ ಪ್ರದೇಶದ ಮಂದಿ ಮುಗಿಬಿದ್ದಿದ್ದಾರೆ. ಗೋವಾದಲ್ಲಿ ಇನ್ನೆರಡು ದಿನದಲ್ಲಿ ನಿರೀಕ್ಷಿತ ಪ್ರಮಾಣಕ್ಕಿಂತ ದುಪ್ಪಟ್ಟು ದರ ಹೆಚ್ಚಾಗಲಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಪೆಟ್ರೋಲ್ ತುಂಬಿಸಿಕೊಳ್ಳಲು ಸದಾಶಿವಗಡ, ಕಾರವಾರ ಭಾಗದ ಜನ ಗಡಿಭಾಗವಾದ ಗೋವಾದ ಪೋಳೆಮ್‌ನತ್ತ ದೌಡಾಯಿಸುತ್ತಿದ್ದಾರೆ. ಈಗಾಗಲೇ ಗೋವಾದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 96.80 ರೂ. ಹಾಗೂ …

Read More »

ಬಾಂಬ್ ಶೆಲ್ಟರ್‌ನಿಂದ ಲೈವ್ ಸ್ಟ್ರೀಮ್ ಮಾಡಿದ ಉಕ್ರೇನ್ ರಾಕ್ ಬ್ಯಾಂಡ್!

ಕೀವ್: ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್‌ಗಳನ್ನು ಎಲ್ಲರೂ ನೋಡಿಯೇ ಇರುತ್ತಾರೆ. ಜನರ ಗಮನ ಸೆಳೆಯಲು ಯೂಟ್ಯೂಬರ್ಸ್‌ಗಳು ಹೊಸ ಹೊಸ ರೀತಿಯಲ್ಲಿ ವ್ಲಾಗ್, ಲೈವ್ ಸ್ಟ್ರೀಮ್ ಮಾಡುತ್ತಲೇ ಇರುತ್ತಾರೆ. ಇಲ್ಲೊಂದು ಉಕ್ರೇನ್‌ನ ರಾಕ್ ಬ್ಯಾಂಡ್ ಭೀಕರ ಯುದ್ಧದ ನಡುವೆಯೂ ಬಾಂಬ್ ಶೆಲ್ಟರ್‌ನಿಂದ ಲೈವ್ ಸ್ಟ್ರೀಮ್ ಮಾಡಿ ಜನರ ಹುಬ್ಬೇರಿಸುವಂತೆ ಮಾಡಿದ್ದಾರೆ. ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿ ಇಂದಿಗೆ 16 ನೇ ದಿನ. ಇಂತಹ ಪರಿಸ್ಥಿತಿಯಲ್ಲಿ ಮನೆ, ನೆಲೆ ಕಳೆದುಕೊಂಡವರು ಸಾವಿರಾರು. ಉಕ್ರೇನ್‌ನ …

Read More »

ಕಾರ್ ಪಾರ್ಕಿಂಗ್ ವಿಚಾರಕ್ಕೆ ೨ ಕುಟುಂಬಗಳ ನಡುವೆ ಮಾರಾಮಾರಿ

ಧಾರವಾಡ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪಾರ್ಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ೨ ಕುಟುಂಬಗಳು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಉಣಕಲ್ ಹತ್ತಿರ ನಡೆದಿದೆ. ಕಳೆದ ಸುಮಾರು ದಿನಗಳಿಂದ ಉಣಕಲ್ ಭಾಗದಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಜನರು ದಿನವೂ ಹೊಡೆದಾಡುವ ಪ್ರಸಂಗಗಳು ಗೋಚರಿಸುತ್ತವೆ. ಸಾರ್ವಜನಿಕರೊಬ್ಬರು ರಸ್ತೆ ಮುಂದಿನ ಮನೆಯ ಮುಂದೆ ಕಾರ್ ಪಾರ್ಕ್ ಮಾಡಿ ಹೋಟೆಲ್‌ಗೆ ಹೋಗಿದ್ದಾರೆ. ಈ ವೇಳೆ ಇದಕ್ಕೆ ಕೋಪಗೊಂಡ ಮನೆಯವರು ಕಾರಿನ …

Read More »

ವಿಧಾನಸಭೆ ಅಧಿವೇಶನದ ವೇಳೆ ಏಪ್ರಿಲ್ ಜ್ವರದ ಕುತೂಹಲ!

ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶವನ್ನು ಗಮನಿಸಿದ ಬಳಿಕ ರಾಜ್ಯ ರಾಜಕೀಯದಲ್ಲಿ ಹೊಸ ಅಲೆ ಶುರುವಾದಂತೆ ಭಾಸವಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ವಿಧಾನಸಭೆ ಮೊಗಸಾಲೆಯಲ್ಲಿ ಏಪ್ರಿಲ್ ರಾಜಕೀಯ ಜ್ವರ ಬಿಸಿಬಿಸಿ ಚರ್ಚೆಯಾಗಿದೆ. ಏನಿದು ಏಪ್ರಿಲ್ ಜ್ವರ: ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗಾರಿ ಬಾರಿಸಿದ ಪರಿಣಾಮ ಇದೀಗ ಕರ್ನಾಟಕದಲ್ಲಿ 2023ರ ಚುನಾವಣೆಗೂ ಮುನ್ನ ರಾಜಕೀಯವಾಗಿ ಭಾರೀ ಬದಲಾವಣೆಯ ಪರ್ವ ನಡೆಯಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅದರಲ್ಲೂ ಇದೀಗ ನಡೆಯುತ್ತಿರುವ ಬಜೆಟ್ ಅಧಿವೇಶನದ ವಿಧಾನಸಭೆ ಮೊಗಸಾಲೆಯಲ್ಲಿ …

Read More »

4 ರಾಜ್ಯಗಳಲ್ಲಿ ಬಿಜೆಪಿ ವಿಜಯ – ಗುಜರಾತ್‍ನಲ್ಲಿ ಮೋದಿ ಭರ್ಜರಿ ರೋಡ್ ಶೋ

ಗಾಂಧೀನಗರ: ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಬೆನ್ನೆಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಗುಜರಾತ್ ಚುನಾವಣೆಯತ್ತ ಗಮನ ಹರಿಸಿದ್ದು, ಅಹಮದಾಬಾದ್‍ನಲ್ಲಿ ಇಂದು ರೋಡ್ ಶೋ ನಡೆಸಿದರು. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಗಾಂಧಿನಗರದಲ್ಲಿರುವ ಬಿಜೆಪಿ ರಾಜ್ಯ ಕಚೇರಿವರೆಗೂ ಹೂವಿನಿಂದ ಅಲಂಕರಿಸಲ್ಪಟ್ಟ ತೆರೆದ ಕಾರಿನಲ್ಲಿ ಮೋದಿ ಅವರು ರೋಡ್ ನಡೆಸಿದರು. ಈ ನಡುವೆ ರಸ್ತೆಯ ಬದಿಗಳಲ್ಲಿ ಮೋದಿ ಅವರನ್ನು ನೋಡಲು ಮುಗಿಬಿದ್ದಿದ್ದ ಜನರತ್ತ …

Read More »