Breaking News

ರಾಜಕೀಯ

ಪಾಪದ ಕೊಡ ನಮ್ಮದಾ ನಿಮ್ಮದಾ? ಎಂದ ಸಿದ್ದರಾಮಯ್ಯ

ನವದೆಹಲಿ: ಪಾಪದ ಕೊಡ ನಮ್ಮದಾ ನಿಮ್ಮದಾ? ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಸಚಿವ ಆರ್.ಅಶೋಕ್ ಅವರಿಗೆ ತಿರುಗೇಟು ಕೊಟ್ಟರು. ವಿಧಾನ ಪರಿಷತ್ ಮತ್ತು ರಾಜ್ಯಸಭೆಗೆ ಟಿಕೆಟ್ ಹಂಚಿಕೆ ವಿಚಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಉಸ್ತುವಾರಿ ಸಚಿವ ರಣದೀಪ್ ಸುರ್ಜೆವಾಲ ಜೊತೆಗೆ ಸಭೆ ಮಾಡಿದ್ದಾರೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಇದ್ದರು. ಆದರೆ ಕಾಂಗ್ರೆಸ್ ನಾಯಕರು ಸೋನಿಯಾಗಾಂಧಿ ಅವರನ್ನು ಈ ವೇಳೆ ಭೇಟಿ ಮಾಡಿಲ್ಲ. ಈ …

Read More »

ಮೋಸಗಾರಿಕೆ ಮಾಡಿಕೊಂಡು ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿ ಖಾಲಿಯಾಗಿದೆ: ಕಾರಜೋಳ

ಬೆಳಗಾವಿ: ಮೋಸಗಾರಿಕೆ ಮಾಡಿಕೊಂಡು ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿ ಖಾಲಿಯಾಗಿದೆ ಎಂದು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಮೋಸಗಾರಿಕೆ ಮಾಡಿಕೊಂಡು ದೇಶದಲ್ಲಿ ಆಡಳಿತ ಮಾಡಿದೆ. ಜನರಿಗೆ ಬೇಕಾಗಿರುವುದು ಅಕ್ಕಿ ಅಲ್ಲ. ಸ್ವಾಭಿಮಾನದ ಬದುಕು. ಅದಕ್ಕೆ ಬೇಕಾದ ಉದ್ಯೋಗವನ್ನು ಕೊಡುವ ಕೆಲಸವನ್ನು ಮಾಡಬೇಕು. ಅದನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದರು.  ಬಿಜೆಪಿ ಭ್ರಷ್ಟಾಚಾರದ …

Read More »

ದಿಗ್ಗಜ ನಟರ ವಿರುದ್ಧ ದೂರು ದಾಖಲು

ಸಮಾಜಕ್ಕೆ ಹಾನಿ ಮಾಡುವಂತಹ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟ, ನಟಿಯರು ಹಾಗೂ ಸಿಲೆಬ್ರಿಟಿಗಳ ಬಗ್ಗೆ ಅಲ್ಲಲ್ಲಿ ವಿರೋಧಗಳು ವ್ಯಕ್ತವಾಗುತ್ತಿವೆ. ಕನ್ನಡ ಸಿನಿಮಾ ರಂಗದಲ್ಲಿ ಹಣಕ್ಕಾಗಿ ಆನ್‌ಲೈನ್ ಆಟಗಳಿಗೆ ರೂಪದರ್ಶಿಯಾಗಿ ಕೆಲಸ ಮಾಡುತ್ತಿದ್ದ ಕಲಾವಿದರ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಈಗಲೂ ಅದು ಮುಂದುವರಿದಿದೆ.  ಹಾಗೆಯೇ ಈ ವಿರೋಧದ ಅಲೆಯು ಬಾಲಿವುಡ್‌ನಲ್ಲೂ ಮುಂದುವರಿದಿದೆ. ಆನ್‌ಲೈನ್ ಜೂಜು, ತಂಬಾಕು ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟರ ಮೇಲೆ ಮುಂಬೈನಲ್ಲಿ ದೂರು ಕೊಟ್ಟಿದ್ದು, …

Read More »

ನಮ್ಮ ಊರಿನಲ್ಲಿ ಪಾನಿಪುರಿ ,. ಪಾನ್ ಮಸಾಲಾ ಮಾರುವವವರು ಗುಜರಾತ್ ‌ನವರೇ: ಸಿಎಂ ಇಬ್ರಾಹಿಂ

ರಾಯಚೂರು: ನಮ್ಮ ಊರಿನಲ್ಲಿ ಪಾನಿಪುರಿ ಮಾರುವರೇ ಗುಜರಾತ್ ನವರು. ಪಾನ್ ಮಸಾಲಾ ಮಾರುವವವರು ಗುಜರಾತ್ ‌ನವರೇ. ಕರ್ನಾಟಕದವರು ಗುಜರಾತ್ ಗೆ ಪಾನಿಪುರಿ, ಜೋಳದ ರೊಟ್ಟಿ ಮಾರಲು ಹೋಗಿದ್ದಾರಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.   ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಕಳೆದ 36 ವರ್ಷದಿಂದಿದೆ. ಜನರಿಗೆ ಜೆಡಿಎಸ್ ಪರಿಚಯ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಕನ್ನಡಿಗರು ಪ್ರಧಾನಿಯಾಗಿದ್ದ ಪಕ್ಷ ನಮ್ಮದು. ಹತ್ತಾರು ನೀರಾವರಿ ಯೋಜನೆಗಳನ್ನು ‌ನಮ್ಮ …

Read More »

ಈಗ ಹೆಲ್ಮೆಟ್​​ ಜತೆಗೆ ಐಎಸ್​​ಐ ಮಾರ್ಕ್​​ ಹೊಂದಿರುವುದು ಕೂಡ ಕಡ್ಡಾಯ: ಇಲ್ಲದಿದ್ದರೆ ಕಟ್ಟಬೇಕಾಗುತ್ತೆ 2000 ರೂ.ದಂಡ!

ನವದೆಹಲಿ: ದ್ವಿಚಕ್ರವಾಹನ ಸವಾರರು ಹೆಲ್ಮೆಟ್​​ ಧರಿಸದಿದ್ದರೆ ದಂಡ ಪಾವತಿಸಬೇಕಿತ್ತು. ಈಗ ಇನ್ನೊಂದು ಹೊಸ ನಿಯಮ ಜಾರಿಗೆ ಬಂದಿದ್ದು, ಸರ್ಕಾರ ಹೇಳಿರುವ ಮಾರ್ಕ್​​ ಇರುವ ಹೆಲ್ಮೆಟ್ಟನ್ನೇ ಧರಿಸಬೇಕೆಂಬ ನಿಯಮವನ್ನು ಜಾರಿಗೆ ತಂದಿದೆ. ಈವೆರಗೂ ಹೆಲ್ಮೆಟ್​ ಧರಿಸದವರಿಗೆ ದಂಡ ವಿಧಿಸಲಾಗುತ್ತಿತ್ತು. ಈಗ ಹೆಲ್ಮೆಟ್​ ಧರಿಸಿದ್ದರೂ ದಂಡ ಪಾವತಿಸಬೇಕಾಗುತ್ತದೆ. ಅರೆ… ಏನಿದು ಹೆಲ್ಮೆಟ್​ ಧರಿಸದರೂ ಯಾಕೆ ದಂಡ ಪಾವತಿಸಬೇಕು ಎನ್ನುವವರಿಗೆ ಇಲ್ಲಿದೆ ಉತ್ತರ. ಹೌದು…. ಮೋಟಾರ್​ ವೆಹಿಕಲ್​ ಕಾಯಿದೆ ಅನ್ವಯ ದ್ವಿ-ಚಕ್ರ ವಾಹನ ಚಲಾಯಿಸುವವರು ಕಡ್ಡಾಯವಾಗಿ …

Read More »

ಆಂಧ್ರ ಮಾದರಿಯಲ್ಲಿ ಸದ್ಯವೇ ಕನ್ನಡಿಗರಿಗೂ ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಯಾಗಲಿದೆಯೇ?

ಬೆಂಗಳೂರು: ಆಂಧ್ರ ಮಾದರಿಯಲ್ಲಿ ಸದ್ಯವೇ ಕನ್ನಡಿಗರಿಗೂ ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಯಾಗಲಿದೆಯೇ? ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಕಾಯ್ದೆ ಜಾರಿಗೆ ತರಲು ಸರಕಾರದ ಮಟ್ಟದಲ್ಲಿ ಪರಿಶೀಲನೆ ನಡೆಯುತ್ತಿದೆ.   ರಾಜ್ಯದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋ ಗಾವಕಾಶ ಕಲ್ಪಿಸಿಕೊಡಲು “ದಿ ಕರ್ನಾಟಕ ಎಂಪ್ಲಾಯ್‌ಮೆಂಟ್‌ ಆಫ್ ನೇಟಿವ್‌ ಕ್ಯಾಂಡಿ ಡೇಟ್‌ ಇನ್‌ ಪ್ರೈವೇಟ್‌ ಸೆಕ್ಟರ್‌ ಆಯಕ್ಟ್-2020′ ಅನುಷ್ಠಾನ ಮಾಡಲು ಪರಿಶೀಲಿಸಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆ ಹೇಳಿದೆ. ಇದು ಜಾರಿಗೊಂಡರೆ ಸಾಕಷ್ಟು …

Read More »

ಭ್ರಷ್ಟಾಚಾರದ ರಾಜಧಾನಿಯಾಗಿದೆ. ಕರ್ನಾಟಕ. ಶೇ. 40 ಕಮಿಷನ್‌ ಜಗಜ್ಜಾಹೀರು: ಸಲೀಂ ಅಹ್ಮದ್‌

ಮಂಗಳೂರು: ರಾಜ್ಯದಲ್ಲಿ ತಾ.ಪಂ., ಜಿ.ಪಂ.ನ ಆಡಳಿತ ಅವಧಿ ಮುಗಿದು ವರ್ಷ ಕಳೆದಿದ್ದು ಸರಕಾರ ಕೂಡಲೇ ಚುನಾವಣೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಆರಂಭಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.   ಭ್ರಷ್ಟಾಚಾರದ ರಾಜಧಾನಿಯಾಗಿದೆ. ಕರ್ನಾಟಕ. ಶೇ. 40 ಕಮಿಷನ್‌ ಜಗಜ್ಜಾಹೀರು ಆಗಿದ್ದು ರಾಜ್ಯದ ಜನ ತಲೆತಗ್ಗಿಸುವಂತಾಗಿದೆ ಎಂದರು. ಸರಕಾರದ ಜನವಿರೋಧಿ ನೀತಿಗಳನ್ನು ಜನರಿಗೆ ತಿಳಿಸುವ ಹಾಗೂ ಇದರ ವಿರುದ್ಧ ಹೋರಾಟದ ಕಾರ್ಯವನ್ನು ಕಾಂಗ್ರೆಸ್‌ ಮಾಡಲಿದೆ. ಜನತೆ ಬದಲಾವಣೆ ಬಯಸಿದ್ದು, ಮುಂದಿನ …

Read More »

ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಸದಾನಂದ ಹಸೆಮಣೆ ಏರಿದ್ದಾರೆ.

ಕಿರುತೆರೆಯ ಸೂಪರ್ ಹಿಟ್ `ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದ ನಟ ಸದಾನಂದ ಹಸೆಮಣೆ ಏರಿದ್ದಾರೆ. ಇದೀಗನಟ ಸದಾನಂದ ಮದುವೆಯ ಫೋಟೋಗಳ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕು ಸುಲ್ತಾನ್‌ಪುರ ಗ್ರಾಮದ ಪ್ರತಿಭೆ ಸದಾನಂದ ದುರ್ಗಪ್ಪ ಕಾಳೆ ಅವರು ಖಾಸಗಿ ಚಾನೆಲ್‌ನ್ನ ಕಾಮಿಡಿ ಕಿಲಾಡಿಗಳು ಶೋ ಮೂಲಕ ಗುರುತಿಸಿಕೊಂಡಿದ್ದರು. ತಮ್ಮ ಅಮೋಘ ನಟನೆಯಿಂದ ಗಮನ ಸೆಳೆದಿದ್ದ ನಟ ಸದಾನಂದ ಇಂದು ಸರಳವಾಗಿ ವಿವಾಹವಾಗಿದ್ದಾರೆ. …

Read More »

10 ದಿನ ತನ್ನ ತಾಯಿಯ ಕೊಳೆತ ಶವದೊಂದಿಗೆ ಕಳೆದ‌ ಮಗಳು

26 ವರ್ಷದ ಮಹಿಳೆಯೊಬ್ಬರು ಸುಮಾರು 10 ದಿನಗಳ ಕಾಲ ತನ್ನ ತಾಯಿಯ ಕೊಳೆತ ಶವದೊಂದಿಗೆ ಕಳೆದ ಘಟನೆ ಲಕ್ನೋದಲ್ಲಿ ನಡೆದಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ ಆಕೆಯ ತಾಯಿ ಮೇ ಹತ್ತರಂದು ನಿಧನರಾದರು, ಆದರೆ ಆಕೆ ತಾಯಿಯ ಸಾವಿನ ಬಗ್ಗೆ ತನ್ನ ಸಂಬಂಧಿಕರು ಅಥವಾ ಸ್ನೇಹಿತರಿಗೆ ತಿಳಿಸಲಿಲ್ಲ. ಮನೆಯಿಂದ ದುರ್ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ತಿಳಿಸಿದ್ದರಿಂದ, ಪೊಲೀಸರು ಬಾಗಿಲು ಒಡೆದು ನೋಡಿದಾಗ ಕೊಳೆತ ಶವ ಪತ್ತೆಯಾಯಿತು. ಎಚ್‌ಎಎಲ್‌ನ ನಿವೃತ್ತ ಎಂಜಿನಿಯರ್ …

Read More »

ಅನ್ಯಜಾತಿಯ ಯುವತಿಯನ್ನು ಪ್ರೀತಿಸಿ ಮದ್ವೆಯಾದ 21 ವರ್ಷದ ಯುವಕನ ಬರ್ಬರ ಹತ್ಯೆ

ಹೈದರಾಬಾದ್​: ಅನ್ಯ ಜಾತಿಯ ಯುವತಿಯನ್ನು ಮದುವೆ ಆಗಿದ್ದಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್​ನ ಬೇಗುಂ ಬಜಾರ್​ನಲ್ಲಿ ನಡೆದಿದೆ. ಐದು ಮಂದಿಯ ಗ್ಯಾಂಗ್​ ಯುವನನ್ನು ನಡುರಸ್ತೆಯಲ್ಲೇ ಕುಟುಂಬದ ಎದುರಲ್ಲೇ ಮಾರಕಾಸ್ತ್ರಗಳಿಂದ ಇರಿದು ಕೊಂದಿದ್ದಾರೆ.   ಈ ಘಟನೆ ಶುಕ್ರವಾರ ರಾತ್ರಿ 7.30ರ ಸುಮಾರಿಗೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಶಾಹಿನಾಯತ್‌ಗುಂಜ್ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈವರೆಗೂ ಕೊಲೆಗಾರರ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ದೊರೆತಿಲ್ಲ. ಮಾಹಿತಿ ಕಲೆಹಾಕುವ …

Read More »